ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಲವು ನದಿಗಳು ನಿನ್ನೊಂದಿಗೆ ಬೆರೆತಿವೆ
ವೈವಿಧ್ಯಮಯ ಜೀವರಾಶಿ ಒಡಲೊಳಗೆ ಅಚ್ಚರಿಯ
ಜೀವ ರಾಶಿ ಅಡಗಿದೆ
ನೀನಲ್ಲವೇ ಸ್ನೇಹ ಕಡಲು ಒಲವಿನ ಒಡಲು //

ಮನುಷ್ಯನೊಂದಿಗೆ ಅವಿನಾಭಾವ ಸಂಬಂಧ
ನೀನಿಲ್ಲದೆ ಬದುಕಿಲ್ಲ ವೈವಿಧ್ಯಮಯ ಮೀನುಗಳು
ನಿನ್ನ ಉದರದಲ್ಲಿ ಅಡಗಿವೆ ನೀನೊಂದು ಅದ್ಭುತಅವಿಸ್ಮರಣೀಯತಾಣ!ಜನಮಾನಸದಲ್ಲಿ
ಉಳಿಯುವ ಸಂಭ್ರಮದ ಕ್ಷಣ…

ಬಣ್ಣ ಬಣ್ಣದ ಸುಂದರ ಮೀನುಗಳು, ಸಸ್ತನಿ
ಚಿಕ್ಕ- ದೊಡ್ಡ , ಉದ್ದಗಲ ಬೃಹಕಾರದ ಜಲಚರಗಳು
ಹವಳ ಮುತ್ತುಗಳರಾಶಿ ಸುರಿದಿದೆ ಅಂಗಳದಲ್ಲಿ ಆಡಿ
ನಲಿವ ಹೂ…

ಮೊಸಳೆ ತಿಮಿಂಗಿಲಗಲಿಗಿಲ್ಲ ಭಯ!
ನಿನ್ನ ಹೃದಯದಲ್ಲಿ ಆಡುವ ಅಪೂರ್ವ ಜೀವ
ರಾಶಿಗಳು ಆಳಕ್ಕೆ ಹೋದಂತೆಲ್ಲ ಕುತೂಹಲ ಅಗೋಚರ ಜಲಚರಗಳು ಅವುಗಳ ಅಡಿಯಲ್ಲಿ ಅನೇಕ ಬಗೆಯ ಸಸ್ತನಿಗಳು ಕಣ್ಮನ ಸೆಳೆಯುವ ಅಂದ
ಮಾನವ ಸ್ನೇಹಿ ಕಡಲು…

ನಿನ್ನ ಏರಿಳಿತ ಕುಣಿತ ನೋಡಲೇಷ್ಟು ಚಂದ ಸುಂದರ ಸಂಜೆ ಸಮಯ ನಿನ್ನ ಅಬ್ಬರ ಹೇಳತಿರದು, ಹುಣ್ಣಿಮೆಯ ದಿನವಂತೂ ನಿನ್ನ ನೋಡಲು ಸಾಗರೋಪಾದಿಯಲ್ಲಿ ಬರುವರು ಜನ
ಅನತಿ ದೂರದಿಂದ ಬರುವ ನಿನ್ನ ಅಲೆಗಳೊಂದಿಗೆ ಚೆಲ್ಲಾಟ…

ಆಡುವ ಮಕ್ಕಳು ಯುವ ಪ್ರೇಮಿಗಳು ವೃದ್ಧರು ಕೈ ಕಾಲು ಬಡಿಯುತ್ತಾ
ಬಡಿತದ ರಬಸಕ್ಕೆ ನೀರು ಮುತ್ತಿನಂತೆ ಮುತ್ತನ್ನು ಚೆಲ್ಲಿದಂತೆ ಸಾಗರಕ್ಕೆ ಬೀಳುವ ಆ ಮನೋಹರ ದೃಶ್ಯ ಕಣ್ಮನ ತುಂಬಲು ಹರುಷ ….

ಸೂರ್ಯೋದಯ, ಸೂರ್ಯಾಸ್ತದಿ ಕೆಂಪು ದೀಪ ಉರಿದಂತೆ ಬಂಗಾರದ ನೇಸರ ಹರಡಿದಂತೆ ಚೆಲುವಿನ ಚಿತ್ತಾರ ನಯನ ಮನೋಹರ ನೋಟ ಪ್ರೇಮಿಗಳ ಸ್ನೇಹ ಕಡಲು ನೀನು…

ಎತ್ತ ನೋಡಿದತ್ತ ನೀರೇ ನೀರು ಮುಗಿಲು ಭೂಮಿ ಕೂಡಿದಂತೆ ನೋಟ ಅಲ್ಲಲ್ಲಿ ಗಿಡಗಳಿಂದ ಆವರಿಸಿದ ದ್ವೀಪಗಳು ಹಡಗು ಬೊಟಿನಲ್ಲಿ ರಮ್ಯ ಸ್ಥಾನಗಳ ವೀಕ್ಷಿಸಲು ಪಯಣ…

ಕಡಲ ತಟದಿ ಎತ್ತರದ ತೆಂಗಿನ ಮರ, ವಿಲ್ಲಾಗಳು ಸುಂದರ ಸೊಬಗು
ಸಾಗರ ತಟದಲ್ಲಿ ಹರಡಿರುವ ಮರಳು ಅಲ್ಲಲ್ಲಿ ಶಂಖ ಚಿಪ್ಪುಗಳ ಬಣ್ಣ ಬಣ್ಣದ ಸುಂದರ ಕಲ್ಲುಗಳ ಮಧ್ಯೆ ಬರಿಗಾಲಿನದಿ ನಡೆದಾಡುವ ಹೆಜ್ಜೆಯ ಗುರುತು ಅಬ್ಬ ಎಂಥಹ ಸುಂದರ ನೋಟ …

ಮೀನುಗಾರರಿಗೆ ಅಲ್ಲಿಯ ನಿವಾಸಿಗಳಿಗೆ ನೀನು ಕೊಟ್ಟಿರುವ ಈ ಬದುಕು
ನೀನಿರದಿದ್ದರೆ ಅವರದು ಬವಣೆ ಊಹಿಸಲು ಅಸಾಧ್ಯ!
ಜೀವನಕ್ಕೆ ಜೀವ ಕೊಟ್ಟ ನಿಧಿ ನೀನು
ಸ್ನೇಹದ ಕಡಲು ನೀನು…

ನೀ ಮುನಿಯಲು ಸುನಾಮಿ ಸಂಕಟ ಮುಗಿಲೆತ್ತರಕ್ಕೆ ಆರ್ಭಟ ಊರಿಗೆ ಊರು ಜಲ ಸಮಾಧಿ ಅರ್ಭಟಿಸುವೆ
ಆರ್ಭಟಿಸಿ ಹುಟ್ಟಿಸದಿರು ದ್ವೇಷ ಕಳೆದು ಸ್ನೇಹ ಪ್ರೀತಿ ನೀಡು ಸಕಲ ಜೀವಕೆ ಜೀವಾತ್ಮ ನೀನೇ ಸ್ನೇಹದ ಕಡಲು…

ಬಸವಾದೀಶರಣರಂತೆ ಶಾಂತ ಸಾಗರ ಜಗದ ನೋವನ್ನುಂಡು ಪ್ರಶಾಂತ ಮೆರೆದ ಕಡಲು, ಒಡಲು ನೀ
ಏಕ ಚಿತ್ತದಿ, ಪ್ರಸನ್ನತೆಯಿಂದ ಕೂಡಿದ ಮಡಿಲು ನಿನ್ನದು
ನಿನ್ನಂತೆ ನಾನಾಗುವೆ ಸ್ನೇಹದ ಕಡಲು…

————-

About The Author

Leave a Reply

You cannot copy content of this page

Scroll to Top