ಶರಣ ಸಂಗಾತಿ
“ಸ್ಥಾವರದೇವರಲ್ಲ, ಜಂಗಮಜಾತಿವಾಚಕವಲ್ಲ:
ಅದರ ಕಂದಾಚಾರವೇ ಧರ್ಮದ್ರೋಹ”-
ಡಾ. ಸತೀಶ ಕೆ. ಇಟಗಿ


“ಜಂಗಮ” ಎಂಬ ಪದವು ಸಂಸ್ಕೃತ ಮೂಲದಾಗಿದ್ದು, ಕನ್ನಡದಲ್ಲಿ ಚಲಿಸುವ, ನಡುಗುವ ರ್ಥದಲ್ಲಿ ಬಳಕೆಯಾಗುತ್ತದೆ. ಶಿವ ಅಥವಾ ಚಲಿಸುವ ಶಿವಸ್ವರೂಪ ಎಂಬ ರ್ಥದಲ್ಲಿ ಉಲ್ಲೇಖವಾಗುತ್ತದೆ. ಜಂಗಮರು ಎಂದರೆ ಶಿವಭಕ್ತರಾದ ಸಾಧುಗಳು ಅಥವಾ ಲಿಂಗಾಯತ ಪಂಥದ ಧರ್ಮಿಕ ಗುರುಗಳು, ಅವರು ತಾವು ಧರಿಸುವ ಇಷ್ಟಲಿಂಗದ ಮೂಲಕ ಶಿವನನ್ನು ಪ್ರತಿಪಾದಿಸುತ್ತಾರೆ. ಜಂಗಮನು ಸಜೀವ ಶಿವನ ಪ್ರತೀಕ. ಬಸವಾದಿ ಪ್ರಮಥರ ಪ್ರಕಾರ, “ಜಂಗಮ ಪದದ ವಿಶೇಷ ವ್ಯಾಖ್ಯಾನವು ಬಹುಮಾನ್ಯವಾಗಿದೆ. ಈ ವ್ಯಾಖ್ಯಾನವು ವಿಶೇಷವಾಗಿ ವಚನ ಸಾಹಿತ್ಯ ಮತ್ತು ಶರಣ ಪರಂಪರೆಯೊಂದಿಗೆ ಸಂಬಂಧ ಹೊಂದಿದೆ,”ಗಮ” ಎಂದರೆ ಹೋಗು, ಚಲನೆ. “ಜಂಗಮ” ಎಂದರೆ ಚಲಿಸುವ, ಅಲೆದಾಡುವ, ಸ್ಥಿರವಲ್ಲದ. ಅಲ್ಲಲ್ಲಿ ಅಲೆದಾಡುತ್ತಾ, ಇಷ್ಟಲಿಂಗವನ್ನು ಧರಿಸಿ, ಶಿವದರ್ಶನವನ್ನು ಪಸರಿಸುವ ಶ್ರೇಷ್ಠ ವ್ಯಕ್ತಿ. ಇನ್ನು ಕೆಲ ಕಡೆ “ಜಂಗಮ” ಎಂಬ ಶಬ್ದವನ್ನು ಶಿವನ ಚರ ರೂಪಕ್ಕೂ ಉಪಯೋಗಿಸುತ್ತಾರೆ.
ಮೂರು ಲಿಂಗಗಳು:
೧ಇಷ್ಟಲಿಂಗ: ವ್ಯಕ್ತಿಯ ಹೃದಯದಲ್ಲಿ ಧ್ಯಾನಿಸುವ ದೇವರೂಪ.
೨.ಪ್ರಾಣಲಿಂಗ: ಶ್ವಾಸ, ಜೀವನ ಶಕ್ತಿ.
೩.ಜಂಗಮಲಿಂಗ: ಭಕ್ತಿಗೆ ಪಾಠ ಮಾಡುವ ಜೀವಂತ ಜಂಗಮ.
ಜಂಗಮರು ಸಮಾಜದಲ್ಲಿ ಸನ್ಯಾಸಿಗಳಂತೆ ಭ್ರಮಣ ಮಾಡುತ್ತಿದ್ದರು. ತತ್ವ ಬೋಧನೆ, ಧರ್ಮ ಪ್ರಚಾರ, ದಾನ ಸ್ವೀಕಾರ ಮುಂತಾದ ಕರ್ಯಗಳಲ್ಲಿ ತೊಡಗಿದ್ದರು. ಇವರು ಆಚಾರ-ವಿಚಾರ, ಶುದ್ಧ ಜೀವನ, ಸಮಾನತೆಯ ತತ್ವಗಳಿಗೆ ಬದ್ಧರಾಗಿದ್ದರು. ಬಸವಣ್ಣ ಮತ್ತು ಇತರ ಶರಣರು “ಜಂಗಮ” ಎಂಬ ಪದಕ್ಕೆ ಆಧ್ಯಾತ್ಮಿಕ ಮತ್ತು ತಾತ್ವಿಕ ರ್ಥ ನೀಡುತ್ತಾರೆ. ಇದನ್ನು ಅವರು ದೈಹಿಕ ಚಲನೆಗಿಂತ ಹೆಚ್ಚಾಗಿ ಒಂದು ಧರ್ಮಿಕ ಹಾಗೂ ತತ್ತ್ವಜ್ಞಾನದ ದೃಷ್ಟಿಕೋನದಿಂದ ವಿವರಣೆ ಮಾಡುತ್ತಾರೆ. “ಜಂಗಮವು ಸ್ಥಾವರವಲ್ಲ, ಜಡವಲ್ಲ; ಜ್ಞಾನದಿಂದ ಜೀವನವಂತಾಗಿರುವ ಶಿವಸ್ವರೂಪ.”. ಇಷ್ಟಲಿಂಗವನ್ನು ಧರಿಸಿ, ತನ್ನ ಜೀವನವನ್ನು ಶಿವಭಕ್ತಿಗೆ ಮೀಸಲಿಟ್ಟ ವ್ಯಕ್ತಿ. ಜಂಗಮನು. ಅಹಂಕಾರವಿಲ್ಲದ, ವೈರಾಗ್ಯವಿರುವ, ಶುದ್ಧ ಚರಿತ್ರೆಯುಳ್ಳ, ಜನಸೇವೆಗೆ ತೊಡಗಿದ ಶರಣ. ಜಂಗಮ. ಸಮಾಜದಲ್ಲಿ ತಿರುಗಿ, ರ್ಮಬೋಧನೆ ಮಾಡುವ ಚಲಿಸುವ ದೇವರು. ಸ್ಥಾವರ ದೈವ ಅಲ್ಲ, ಜಂಗಮವೇ ದೈವ”, ಅಂದರೆ ಶಿವ ರ್ಭಗುಡಿ, ದೇವಸ್ಥಾನದಲ್ಲಿ ಇರದೆ, ಚಲಿಸುವ ವ್ಯಕ್ತಿಯಲ್ಲಿಯೇ ದೇವರ ತತ್ವವಿದೆ ಎಂಬ ಬಸವಣ್ಣನವರ ತತ್ತ್ವ.
“ಸ್ಥಾವರವು ದೈವವಲ್ಲ, ಜಂಗಮವೇ ದೈವ
ಸ್ಥಾವರ ಪೂಜಿಸಿ ಪಾಪ ಹರವುದೆ?
ಜಂಗಮ ಸೇವಿಸಿ ಪಾವನರಾಗುವುದೆ?
-ಕೂಡಲಸಂಗಮದೇವಾ”
ಈ ವಚನದಲ್ಲಿ ಬಸವಣ್ಣನು ಸ್ಥಾವರ (ಸ್ಥಿರವಾದ ವಸ್ತುಗಳು) ಮತ್ತು ಜಂಗಮ (ಚಲಿಸುವ, ಜೀವಂತ) ಎಂಬ ಎರಡು ತತ್ತ್ವಗಳನ್ನು ಹೋಲಿಸಿ, ಶರಣ ರ್ಮದ ಅಂತರಂಗ ತತ್ತ್ವವನ್ನು ನಿರೂಪಿಸುತ್ತಾನೆ. “ಸ್ಥಾವರಕ್ಕು ದೈವವಲ್ಲ”, ದೇವರನ್ನು ಕಲ್ಲಿನಲ್ಲಿ, ಮರ್ತಿಯಲ್ಲಿ, ದೇವಾಲಯದ ಗೋಡೆಗಳಲ್ಲಿ ಹುಡುಕುವುದು ನಿಷ್ಪ್ರಯೋಜಕ. ಅಲ್ಲಿ ಜಡತೆಯಿದೆ, ಚೇತನವಿಲ್ಲ. ತತ್ತ್ವಜ್ಞಾನ, ಸತ್ಪ್ರವೃತ್ತಿ, ಸತ್ಯಾಚರಣೆ, ಭಕ್ತಿಶ್ರದ್ಧೆ ಇಷ್ಟಲಿಂಗ ಧರಿಸಿದ ವ್ಯಕ್ತಿ ಆತನೆ ಸಜೀವ ದೇವರು. ಅಂತಹ ವ್ಯಕ್ತಿಯ ಸೇವೆ, ಸತ್ಸಂಗ, ಅವರ ಮರ್ಗರ್ಶನ ಇವೇ ನಿಜವಾದ ದೇವಪೂಜೆ. “ಸ್ಥಾವರ ಪೂಜಿಸಿ ಪಾಪ ಹರವುದೆ?” -ಕಲ್ಲಿನ ಮರ್ತಿಗೆ ಪೂಜೆ ಮಾಡುವುದು ಪಾಪ ಪರಿಹಾರಕ್ಕೆ ಕಾರಣವಾಗದು, ಯಾಕಂದರೆ ಅದು ಚೈತನ್ಯವಿಲ್ಲದ ಜಡ ವಸ್ತು. “ಜಂಗಮ ಸೇವಿಸಿ ಪಾವನರಾಗುದೆ?” – ಜಂಗಮನ ಸೇವೆ (ಅಥವಾ ಜ್ಞಾನಿಗಳ ಜೊತೆಗಿನ ಸತ್ಸಂಗ, ಶ್ರದ್ಧಾ) ನಮಗೆ ಪವಿತ್ರತೆಯನ್ನು ನೀಡುತ್ತದೆ. ಆತ್ಮಶುದ್ಧಿಗೆ ದಾರಿ ಒದಗಿಸುತ್ತದೆ.
ಜಂಗಮ ಜಾತಿ ವಾಚಕವೇ:
ಮೂಲತಃ ಜಂಗಮ ಎನ್ನುವುದು ಜಾತಿವಾಚಕ ಅಲ್ಲ. ಜಂಗಮ ಎಂಬ ಪದವು ಮೊದಲು ಆಧ್ಯಾತ್ಮಿಕ ಸ್ಥಿತಿಯನ್ನು ಸೂಚಿಸುವ ತಾತ್ವಿಕ ಶಬ್ದವಾಗಿತ್ತು, ಜಾತಿಯನ್ನಲ್ಲ. ಆದರೆ… ಇತಿಹಾಸದಲ್ಲಿ ಕೆಲ ವಂಶಗಳು, ಮಠಗಳಿಗೆ ಮತ್ತು ರ್ಮಸೇವೆಗೆ ನಿರಂತರವಾಗಿ ಸಲ್ಲಿಸಿದವರ ವಂಶಾವಳಿಗೆ “ಜಂಗಮ” ಎಂಬ ಪದವು ಪರಂಪರೆಯ ಗುರುತ್ವದವಾಗಿ ಬಳಕೆಯಾಗತೊಡಗಿತು. ಈ ಕಾರಣದಿಂದ ಕೆಲವರು ಜಂಗಮರನ್ನು ಜಾತಿ/ರ್ಗ ಎಂದು ಪರಿಗಣಿಸುತ್ತಾರೆ. ಇದು ಸಾಂಸ್ಕೃತಿಕ, ಸಾಮಾಜಿಕ ಬಳಕೆ, ರ್ಮ ತಾತ್ವಿಕ ರ್ಥವಲ್ಲ. ಶರಣರ ನುಡಿಗಳ ಪ್ರಕಾರ “ಜಾತಿ ಇಲ್ಲ, ಭೇದ ಇಲ್ಲ, ಶುದ್ಧ ಭಕ್ತಿಯ”
ಜಂಗಮ ಎಂದರೆ ಶಿವನ ದೂತ, ಎಲ್ಲರಿಗೂ ಸಮಾನ. ವಂಶಪಾರಂರ್ಯ ಜಂಗಮ, ಗುರು, ದೀಕ್ಷಿತ ವಂಶಪಾರಂರ್ಯ ಜಂಗಮ. ತಾವು ಆಧ್ಯಾತ್ಮಿಕ ಗುರುಕುಲದಿಂದ ಬಂದವರು ಎಂಬ ನಂಬಿಕೆಯುಳ್ಳ ಕುಟುಂಬಗಳು, ಜಂಗಮ ಜಾತಿವಾಚಕವಲ್ಲ. ಆದರೆ “ಜಂಗಮ” ಎಂಬುದು ವೈಯಕ್ತಿಕ ರ್ಹತೆ ಆಧಾರಿತ ಪದವಾಗಿದೆ. ಅಂದರೆ, ಜಂಗಮತ್ವವು ವ್ಯಕ್ತಿಯ ಔಪಚಾರಿಕ ಜಾತಿಯಿಂದ ಬರುವುದಿಲ್ಲ. ಅವನು ನರ್ಜಾತೀಯ, ಶುದ್ಧ ಚರಿತ್ರೆ, ಲಿಂಗಧಾರಿ, ಆತ್ಮಸಾಧನೆ ಮಾಡಿದವನೇ ಜಂಗಮ. “ಜಾತಿ ಬೇರೆ ಭಕ್ತಿ ಬೇರೆ ಎನಿಸಿದರೆ, ಅವನು ಶಿವನಲ್ಲ”, ಬಸವಣ್ಣ ಹೇಳುತ್ತಾರೆ, ಎಲ್ಲ ಶರಣರು ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳ ಮಾಚದೇವರು ವಿಭಿನ್ನ ಜಾತಿಗಳಿಂದ ಬಂದಿದ್ದರೂ, ಜಂಗಮತ್ವಕ್ಕೆ ರ್ಹರಾದರು. ಅವರಿಗೆ “ಜಂಗಮ” ಎಂಬ ಹುದ್ದೆ ಲಭಿಸಿದ್ದು, ಅವರ ಆತ್ಮಸಾಧನೆ, ಭಕ್ತಿ, ಲಿಂಗಪೂಜಾ ನಿಷ್ಠೆಯಿಂದ, ಜಾತಿಯಿಂದಲ್ಲ.
ಐತಿಹಾಸಿಕ ಹಿನ್ನೆಲೆ:
ಆಂಧ್ರಪ್ರದೇಶದಲ್ಲಿ ಮಲ್ಲಕಾರ್ಜುನ ಪಂಡಿತರಾಧ್ಯ ಎಂಬ ಶೈವ ಪಂಥದ ಪ್ರತಿಪಾದಕನಿದ್ದ. ಕಲ್ಯಾಣದ ವಚನ ಚಳುವಳಿ ಮತ್ತು ಶರಣ ತತ್ವದ ಬೆಳವಣಿಗೆ ಗಮನಿಸಿ, ಬೆರಗಾಗಿ ತನ್ನ ಶೈವ ತತ್ವ ಕೈಬಿಟ್ಟು, ಲಿಂಗಾಯತ ಜಂಗಮನಾದ. ಅದೇ ಸಂದರ್ಭದಲ್ಲಿ ಕಲ್ಯಾಣದಿಂದ ತೆಲುಗು ಭಾಷೆಯ ಪ್ರದೇಶದ ಕಡೆಗೆ ವಚನ ಪ್ರಚಾರ ಮತ್ತುಲಿಂಗಾಯತ ತತ್ವ ಪ್ರಸಾರಕ್ಕಾಗಿ ಸ್ವತಃ ಬಸವಣ್ಣನವರೆ ಕೆಲವು ಸಾದಕರನ್ನು ನೇಮಿಸಿದ್ದರು. ಅವರ ಕಾಲಿಗೆ ಜಂಗ್ (ಗೆಜ್ಜೆ) ಕಟ್ಟುತ್ತಿದ್ದರು. ಸದ್ದು ಮಾಡುತ್ತ ಮನೆಯಿಂದ ಮನೆಗೆ ಸಂಚರಿಸಿ ಭಕ್ತರು ಭಸ್ಮ ಧಾರಣೆ ಮತ್ತು ಲಿಂಗ ಧಾರಣೆ ಮಾಡಿದ್ದನ್ನು ಪರಿಕ್ಷೀಸುವುದು ಅವರ ಕಾಯಕವಾಗಿತ್ತು. ಅವರನ್ನೇ ಸಾರುವ ಐನಾರು, ಕಂಬಿ ಐನಾರು, ಜಂಗಿನ ಐನಾರು ಎಂದು ಕರೆಯಲಾಯ್ತು. ಕ್ರಮೇಣ ಅಂತಹ ಮನೆತನದವರನ್ನು ಓದುಸುಮಠ, ಭಿಕ್ಷÄಮಠ, ಸಾಲಿಮಠ, ಹಿರೇಮಠ ಎಂದೆಲ್ಲಾ ಪರಿವರ್ತಿಸಲಾಯಿತು. ಅವರುಗಳ ಮನೆಯಲ್ಲಿ ಬಸಯ್ಯ, ಮಡಿವಾಳಯ್ಯ, ಚನ್ನಯ್ಯ, ಶರಣಯ್ಯ, ಪ್ರಭಯ್ಯ, ಪ್ರಭುಸ್ವಾಮಿ, ಚನ್ನಬಸವಯ್ಯ, ಸಿದ್ದಯ್ಯ, ಸಿದ್ದಲಿಂಗಯ್ಯ, ಸಿದ್ರಾಮಯ್ಯ, ಮುಂತಾದ ಹೆಸರುಗಳ ನಾಮಕರಣ ಸಂಸ್ಕೃತಿ ಬೆಳೆಯಿತು. ಇಂದಿಗೂ ಬಹುತೇಕ ಜಂಗಮ ಕುಟುಂಬಗಳ ಮನೆ ದೇವರು (ಕುಲದೇವರು) ಉಳುವಿ, ಎಡೆಯೂರು, ಗುಡ್ಡಾಪುರ, ಸೊನ್ನಲಗಿ, ಮಲೈಮಹದೇಶ್ವರ ಎಂಬ ಪುಣ್ಯಕ್ಷೇತ್ರಗಳಾಗಿವೆ. ಅಂದರೆ ಕಲ್ಯಾಣ ಕ್ರಾಂತಿಯ ಬಳಿಕ ಬಹುತೇಕ ಜಂಗಮರು ಬಸವಾದಿ ಶರಣರನ್ನು ತಮ್ಮ ಕುಲದ ಗುರುಗಳನ್ನಾಗಿ ಸ್ವೀಕರಿಸಿ ಆರಾಧಿಸ ತೊಡಗಿದರು. ಅವರಲ್ಲಿ ಪ್ರಮುಖರೆಂದರೆ ಕಲ್ಬುರ್ಗಿ ಶರಣ ಬಸವೇಶ್ವರರು, ನಾಲತ್ವಾಡದ ವಿರೇಶ ಶರಣರು, ಅಥಣಿ ಶಿವಯೋಗಿಗಳು, ಧಾರವಾಡದ ಮೃತ್ಯಂಜಯ ಅಪ್ಪಗಳು, ಚಿತ್ತರಗಿ ವಿಜಯ ಮಹಾಂತೇಶ್ವರರು, ಕೊಲ್ಹಾಪುರದ ಕಾಡಸಿದ್ದೇಶ್ವರರು, ಗದಗ ತೋಂಟದಾರ್ಯರು, ಹುಬ್ಬಳ್ಳಿ ಮೂರುಸಾವಿರ ಮಠದ ಗುರು ಪರಂಪರೆ ಸೇರಿದಂತೆ ಬಹುತೇಕರು ಮೂಲತಃ ಜಂಗಮರಾಗಿದ್ದರೂ ಬಸವಾದಿ ಶರಣರ ತತ್ವವನ್ನು ಆರಾಧಿಸುವವರಾಗಿದ್ದಾರೆ.
“ಬರಿಯ ಬೋಳುಗಳೆಲ್ಲಾ ಜಂಗಮವೆ?
ಜಡಜೀವಿಗಳೆಲ್ಲಾ ಜಂಗಮವೆ?
ವೇಷಧಾರಿಗಳೆಲ್ಲಾ ಜಂಗಮವೆ?
ಇನ್ನಾವುದು ಜಂಗಮವೆದಡೆ;
ನಿಸ್ಸೀಮನೆ ಜಂಗಮ,
ನಿಜೈಕ್ಯನೆ ಜಂಗಮ,
ಇAಥ ಜಂಗಮದ ಸುಳುಹ ಕಾಣದೆ,
ಕೂಡಲ ಚನ್ನಸಂಗಮದೆವ ತಾನೆ ಜಂಗಮನಾದ”
-ಅವಿರಳಜ್ಞಾನಿ, ಚನ್ನಬಸವಣ್ಣ
ಜಂಗಮರು ಎಂಬವರು ಭಾರತೀಯ ಲಿಂಗಾಯತ ರ್ಮದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ತತ್ವ, ಜೀವನ ಶೈಲಿ, ಸಮಾಜ ಸೇವೆಯ ಮೂಲಕ ಅವರು ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ. ಜಂಗಮ ಪರಂಪರೆ ಲಕ್ಷಾಂತರ ರ್ಷಗಳ ಹಿಂದೆಯೇ ಆರಂಭವಾಯಿತು ಎಂಬ ನಂಬಿಕೆ ಇದೆ. ಲಿಂಗಾಯತ ರ್ಮದ ಪ್ರಕಾರ ಬಸವಣ್ಣ, ಅಕ್ಕ ಮಹಾದೇವಿ, ಚನ್ನಬಸವಣ್ಣ, ಇವರು ಜಂಗಮ ಪರಂಪರೆಯ ಮಹತ್ವವನ್ನು ಗಟ್ಟಿಯಾಗಿ ಸಾರಿದರು. ೧೨ನೇ ಶತಮಾನದಲ್ಲಿ ಬಸವಣ್ಣನೇ ಜಂಗಮ ಪರಂಪರೆಯ ಸಾರಥಿಯಾಗಿದ್ದು, ಜಂಗಮರ ಹೆಗ್ಗುರುತು ನೀಡಿದರು. ಅವರು ಜಂಗಮರನ್ನು ಶಿವನ ಜೀವಂತ ರೂಪವೆಂದು ಪರಿಗಣಿಸಿದರು. ದರ್ಬಲರಿಗೆ ರ್ಮೋಪದೇಶ ನೀಡುವ ಕರ್ಯ ಮಾಡಿದರು. ಸಮಾನತೆಯ ಸಂದೇಶ ಸಾರಿದರು. ಹಲವಾರು ಜಂಗಮ ಮಠಗಳು ರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಉತ್ತರ ಭಾರತದ ಭಾಗಗಳಲ್ಲಿ ಸ್ಥಾಪಿತವಾದವು. ಈ ಮಠಗಳು ಶಿಕ್ಷಣ, ಧರ್ಮಿಕ ಆಚರಣೆ ಮತ್ತು ಸಮಾಜ ಸೇವೆಯ ಕೇಂದ್ರಗಳಾಗಿದ್ದವು. ವಚನಕಾರರು ತಮ್ಮ ವಚನಗಳಲ್ಲಿ ಜಂಗಮರ ಮಹಿಮೆ, ಪಾತ್ರ, ಸಿದ್ಧಾಂತಗಳನ್ನು ಪ್ರಶಂಸಿಸಿದ್ದಾರೆ. ಜಂಗಮರನ್ನು ರ್ಶನ ಮಾಡಿದವನು ಶಿವನನ್ನು ಕಂಡವನಂತೆ ಎಂದು ಹಲವಾರು ವಚನಗಳು ನುಡಿದಿವೆ. ಜಂಗಮರು ಜಾತಿ ಭೇದ, ಲಿಂಗ ಭೇದ, ಶ್ರೇಣಿಭೇದಗಳ ವಿರೋಧ ಮಾಡಿ ಸಮಾನತೆಯ ಸಂದೇಶ ಸಾರಿದರು. ಅವರು ಯಾವುದೇ ಭಿನ್ನತೆ ಇಲ್ಲದೆ ಎಲ್ಲರ ಮನೆಗಳಿಗೆ ಹೋಗಿ ಶಿವತತ್ವ ಸಾರಿದವರು.
ಉತ್ತರ ಕರ್ನಾಟಕ ಮತ್ತು ಆಂಧ್ರದ ಕೆಲವು ಪ್ರದೇಶಗಳಲ್ಲಿ “ಬಸಳ ಜಂಗಮ”ಎಂಬ ಶಾಖೆ ಇದೆ. ಇವರು ಮಠ ಸೇವೆಗೆ ಮತ್ತು ಧರ್ಮಿಕ ಕರ್ಯಗಳಿಗೆ ಬದ್ಧರಾಗಿರುತ್ತಾರೆ. ಪಂಚಮಸಾಲಿ ಸಮುದಾಯದಲ್ಲಿ ಕೆಲವರೆಗೆ ಜಂಗಮ ಸೇವೆಯ ಪರಂಪರೆಯ ಹಿನ್ನಲೆ ಇದೆ. ಕೆಲ ಭಾಗಗಳಲ್ಲಿ “ಬಂಟನಾಡು ಜಂಗಮರು” ಎಂಬ ಪ್ರತ್ಯೇಕ ಗುರುಕುಲ ಪ್ರಚಾರದಲ್ಲಿದೆ. ತೆಲಂಗಾಣ, ಆಂಧ್ರಪ್ರದೇಶದಲ್ಲಿ “ವೀರಶೈವ ಜಂಗಮರು” ತಮ್ಮನ್ನು ಪ್ರತ್ಯೇಕ ಗುಂಪಾಗಿ ಗುರುತಿಸಿಕೊಂಡಿದ್ದಾರೆ. ಇವರು ಪೂಜಾ, ಪಾಠ, ಲಿಂಗ ಧಾರಣೆ, ಹಾಗೂ ಗ್ರಾಮೋಪದೇಶಕಾರರಾಗಿರುತ್ತಾರೆ. ಈ ವಂಶಗಳು ಜಂಗಮ ಗುರುಗಳಿಗೆ ಸೇವೆ ಮಾಡಿದವರು ಅಥವಾ ಅವರ ವಂಶಜರು ತಮ್ಮನ್ನು “ಜಂಗಮ” ಎಂದು ಗುರುತಿಸಿಕೊಂಡಿದ್ದಾರೆ: ಸೋಲಾಪುರ, ನಾಂದೇಡ್, ಲಾತೂರ್ ಮುಂತಾದ ಕಡೆಗಳಲ್ಲಿ ವೀರಶೈವ ಜಂಗಮ ಎಂಬ ಪ್ರತ್ಯೇಕ ಗುಂಪು ಕಂಡುಬರುತ್ತದೆ. ಈ ವಂಶಗಳು “ಜಂಗಮ” ಎಂಬ ಪದವನ್ನು ತಮ್ಮ ಗುರುತಾಗಿ ಬಳಸಿದರೂ, ಜಾತಿ ಅಥವಾ ವಂಶ ಬದಲಾಗಿಸಿಕೊಂಡಿದ್ದಾರೆ.
ಜಂಗಮ ಹೆಸರಿನಿಂದ ಕಂದಾಚಾರ:
ಅಲ್ಲಮಪ್ರಭು, ಬಸವಣ್ಣ, ಚನ್ನಬಸವಣ್ಣ ಮತ್ತು ಇತರ ಶರಣರು ನಕಲಿ ಜಂಗಮರ ವಿರುದ್ಧ ತೀವ್ರ ಎಚ್ಚರಿಕೆ ನೀಡಿದ್ದಾರೆ. ಬಸವಣ್ಣ ಹೇಳುತ್ತಾರೆ, “ಜಂಗಮವೆಂಬ ಪೈಲಾಸಕ್ಕೆ ಹೊದಿದ ಬಡವನು, ಜಾತಿಯನು ಮರೆಯದೆ, ಪಾಡಿನಲ್ಲಿ ಉರುಳಿದನು,ಅವನನ್ನು ಭಕ್ತನೆಂಬುದು ದೋಷ.” ಈ ವಚನದ ತಾತ್ರ್ಯ: ಕೆಲವರು ಹೊರಗೆ ಜಂಗಮದ ವೇಷ ಧರಿಸಿ, ಒಳಗೆ ಅಹಂಕಾರ, ಕಾಮ, ಲೋಭ ಇತ್ಯಾದಿ ತೊಟ್ಟುಕೊಂಡಿರುವರು. ಅಂತಹವರು ಕಂದಾಚಾರ (ಅರ್ಮಾಚರಣೆ) ಮಾಡುತ್ತಿದ್ದರೆ, ಅವರಿಗೆ ‘ಜಂಗಮ’ ಪದ ಹಕ್ಕಾಗಿಲ್ಲ. ಕಂದಾಚಾರದಲ್ಲಿ ತೊಡಗಿರುವ ಜಂಗಮರು ಭಾವವಿಲ್ಲದ ಲಿಂಗಪೂಜೆ, ಹಣಕ್ಕೆ ರ್ಮ ಮಾರಾಟ, ಲೈಂಗಿಕ ದರ್ಬಳಕೆ, ದುರಾಚಾರ ಇವೆಲ್ಲ ಶರಣ ರ್ಮದಲ್ಲಿ ತೀವ್ರ ಅಪರಾಧ. ಶರಣ ತತ್ತ್ವದ ವಿರುದ್ಧ. ಶರಣ ಪರಂಪರೆ ಅವರಿಗೆ ಮಾನ್ಯತೆ ನೀಡುವುದಿಲ್ಲ. ಅಂತಹವರಿಂದ ದೂರವಿರಬೇಕು. “ಜಂಗಮ” ಎಂಬ ಹೆಸರಿನಲ್ಲಿ ಹಣ, ಶೋಷಣೆ ಮಾಡುತ್ತಿರುವ ಸ್ಥಿತಿಗಳು ಕಂಡುಬರುತ್ತಿವೆ. ಇದು ರ್ಮ ದ್ರೋಹವೇ ಸರಿ. ಜಂಗಮ ಎಂಬ ಪದವನ್ನು ದುರುಪಯೋಗಪಡಿಸಿಕೊಂಡು, ಕಂದಾಚಾರದ ಅಪರಾಧಗಳಲ್ಲಿ ತೊಡಗಿರುವವರು ಶರಣ ರ್ಮದ, ಬಸವ ತತ್ತ್ವದ, ಲಿಂಗಾಯತ ಪರಂಪರೆಯ ಶತ್ರುಗಳೇ ಆಗಿದ್ದಾರೆ. ಜಂಗಮ ಎಂದು ಹೇಳಿಕೊಂಡು ಪಾದಪೂಜೆ, ಪಲ್ಲಕ್ಕಿ ಉತ್ಸವ, ಹಣ ವಸೂಲಿಗಳು ಶರಣ ರ್ಮದ ತತ್ತ್ವಕ್ಕೆ ವಿರುದ್ಧ. ಜಂಗಮನು ಕಪಟ ವಿರಹಿತ, ಲೋಭ ರಹಿತ, ಭಕ್ತರ ಸೇವಕ. ಜಂಗಮ ಪದವನ್ನು ಹೇಳಿಕೊಂಡು ಗೌರವ ಕೇಳಿಕೊಳ್ಳುವುದು ಸರಿಯಲ್ಲ. ನಿಜವಾದ ಜಂಗಮನು ಸ್ವಂತ ಏಳಿಗೆಗೆ ಅಲ್ಲ, ಭಕ್ತರ ಮರ್ಗರ್ಶನಕ್ಕಾಗಿರಬೇಕು. ಜಂಗಮನು ಭಕ್ತನ ಮನೆಗೆ ಬಂದು ಇಷ್ಟಲಿಂಗಕ್ಕೆ ಅನುಭವ ಬೋಧಿಸಬೇಕು. ಭಕ್ತನು ಹಣ ನೀಡಿದರೆ ಅದನ್ನು ಸ್ವೀಕರಿಸದಿರಬೇಕು. ಇಂದು ಜಂಗಮ ಎಂಬ ಪವಿತ್ರ ಪದವನ್ನು ವ್ಯಾಪಾರದಂತೆ ಬಳಸುತ್ತಿದ್ದಾರೆ. ಪಾದಪೂಜೆಗೆ ಪಾವತಿಸಬೇಕು, ಪಲ್ಲಕ್ಕಿಗೆ ಹಣ ನೀಡಬೇಕು. ಬಸವ ತತ್ತ್ವ, ಶರಣ ಸಂಪ್ರದಾಯ ಮತ್ತು ವಚನ ಸಾಹಿತ್ಯದಲ್ಲಿ ಜಾತಿವಾದ, ಬಾಹ್ಯಾಚಾರ, ಮರ್ತಿ ಪೂಜೆ, ಪಾದಪೂಜೆ ಎಲ್ಲವನ್ನೂ ತಿರಸ್ಕರಿಸಲಾಗಿದೆ.
—
.
-ಡಾ. ಸತೀಶ ಕೆ. ಇಟಗಿ
ಪತ್ರಿಕೋದ್ಯಮ ಉಪನ್ಯಾಸಕ
ಅಂಚೆ: ಕೋಳೂರು-೫೮೬೧೨೯
ತಾ: ಮುದ್ದೇಬಿಹಾಳ, ಜಿ: ವಿಜಯಪುರ (ಕರ್ನಾಟಕ ರಾಜ್ಯ)
ಮೊ: ೯೨೪೧೨೮೬೪೨೨
Email: satshitagi10@gmail.com,



