ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಿಶ್ವಕುಟುಂಬ ವಿಶ್ವದಲ್ಲಿ ಎಲ್ಲಾ ಜಾತಿ ಜನಾಂಗಗಳ ನಿಜ ಸಂಸ್ಕೃತಿಯ ತಾಯಿ ಬೇರು ಅಂತಃಕರಣದಿಂದ ಕೂಡಿದ ಜೀವನ, ಪ್ರೀತಿ ಈ ಲೋಕ ಮಾನವ ಕೇಂದ್ರವಲ್ಲ, ಜೀವಕೇಂದ್ರಿತವಾದದ್ದು. ಸ್ವಾರ್ಥ ಪ್ರೇಮದಿಂದ ಕೂಡಿದ ಪ್ರಪಂಚವನ್ನು ಸೃಷ್ಟಿಸುವುದೇ ಬಸವಣ್ಣನವರ ಕನಸಾಗಿತ್ತು.
ಬಸವಣ್ಣನವರ ದೃಷ್ಟಿಯಲ್ಲಿ ಹೆಣ್ಣು ಮಕ್ಕಳು ಪ್ರತಿಭೆಯಲ್ಲಿ ಭೌಧಿಕತೆಯಲ್ಲಿ ಪುರುಷನಷ್ಟೇ ಸರಿ ಸಮಾನಳು ,ಜೀವನದ ಸಕಲ ವ್ಯವಹಾರದಲ್ಲಿ  ಅವಳಷ್ಟೇ ವಿಶಾಲಮತಿ ಬೇರೆ ಯಾರು ಇಲ್ಲ ಎಂದು ತಿಳಿದಿದ್ದರು.
ಬಸವಣ್ಣನವರು ಮಹಿಳೆಯರ ಅಂತಃಕರಣವನ್ನು ಓರೆಗೆ ಹಚ್ಚಿ ನೋಡಿದರು. ಹಾಗಾಗಿ ಗೌಪ್ಯ ವಚನಗಾರ್ತಿಯರು ವಚನ ಸಾಹಿತ್ಯ ರಚಿಸುವಲ್ಲಿ  ಸುಖಕರವಾಗಿ ವಚನಗಳನ್ನು ರಚಿಸಿದರು. ಅವರಲ್ಲಿ ಪ್ರಮುಖರಾದವರೆಂದರೆ ಅಮುಗೆ ರಾಯಮ್ಮ, ಅಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ, ಕೇತಲದೇವಿ ,ಕದಿರೆ ಕೆಮ್ಮುವೆ, ಕಾಳವ್ವೆ ,ಕಾಮವೆ, ಗಂಗಮ್ಮ ಬೋನ್ತಾದೇವಿ, ನೀಲಾಂಬಿಕೆ ,ಲಿಂಗಮ್ಮ ವೀರಮ್ಮ, ಲಕ್ಷ್ಮಮ್ಮ ,ರೇಖಮ್ಮ ,ಸತ್ಯಕ್ಕ ಮೊದಲಾದವರು ಇನ್ನೂ ಇವರು ಬಹುತೇಕ ವಚನಗಾರ್ತಿಯರ ಹೆಸರಿದ್ದರೂ ಅವರ ವಚನಗಳು ಸಿಕ್ಕಿಲ್ಲ ಉದಾಹರಣೆಗೆ : ಕಲ್ಯಾಣಮ್ ,ಕದಿರ ಕಾಳವ್ವೆ ಮುಂತಾದವರು ವಚನ ಸಾಹಿತ್ಯ ಕನ್ನಡ ದೇಸಿ ಪದ್ಯ ಜಾತಿ ವಚನಕಾರರು ಅಚ್ಚ ಕನ್ನಡ ಕೃಷಿಕರು ಆಗಿದ್ದಾರೆ.
ವಚನ ಸಾಹಿತ್ಯದಲ್ಲಿ ಬಸವ ಯುಗದ ವಚನಗಾರ್ತಿಯರಂತೆ ಕೊಡುಗೆಯುತ್ತವರನ್ನು ಬಹುಶಃ ಯಾವ ಶತಮಾನವು ಕಂಡಿರಲಿಲ್ಲ.
ಈ ಕಾಲಘಟ್ಟದಲ್ಲಿ ಹಲವಾರು ಶರಣರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿ ರುವುದನ್ನು ಯಾರು ಹೆಚ್ಚಾಗಿ ಪ್ರಚಾರಪಡಿಸದೆ ಇರುವುದು ಅಚ್ಚರಿಯನ್ನುಂಟುಮಾಡುತ್ತದೆ. ಇಂಥವರನ್ನು ವಚನಗಾರ್ತಿಯರು ಅಥವಾ ಗೌಪ್ಯ ವಚನಗಾರ್ತಿಯರು ಎಂದು ಕರೆಯಬಹುದಾಗಿದೆ.
ವಚನ ಯುಗವು ಮಹಿಳೆಯರ ಅಂತರ್ಯದಲ್ಲಿ ನವ ಜಾಗೃತಿ ನವ ಸಾಕ್ಷರತೆಯ ಅರಿವು ಮೂಡಿಸಿ ಎಲ್ಲಾ ವರ್ಗದ ಮಹಿಳೆಯರಿಗೂ ವಿದ್ಯಾಭ್ಯಾಸ ಕಲಿಸಿ 26 ಕ್ಕೂ ಹೆಚ್ಚುಜನ ಶರಣೆಯರು ವಚನ ರಚನೆ ಮಾಡುವ ಅವಕಾಶ ಕಲ್ಪಿಸಿ ಕೊಟ್ಟಿತು. ಅವರಲ್ಲಿ ಕೆಲವು ಶರಣೀಯರು ತಮ್ಮ ಗಂಡನ ಹೆಸರನ್ನೇ ವಚನದ ಅಂಕಿತ ನಾಮವನ್ನಾಗಿ ಇಟ್ಟುಕೊಂಡು, ಮತ್ತೆ ಕೆಲವರು ತಮ್ಮ ಇಷ್ಟ ದೈವವನ್ನು ವಚನದ ಅಂಕಿತ ನಾಮವಾಗಿಟ್ಟುಕೊಂಡಿದ್ದಾರೆ.
ವಚನಗಾರ್ತಿಯರ ಕೊಡುಗೆ
ತಮ್ಮ ವಚನಗಳ ಮೂಲಕ ಸ್ತ್ರೀ ಪುರುಷ ಸಮಾನತೆಯ ಕುಟುಂಬ ಪದ್ಧತಿಯನ್ನು ತರಲು ಪ್ರಯತ್ನಿಸಿದರು.
ಕಾಯಕ ನಿಷ್ಠೆ: ಕಾಯಕದ ಮಹತ್ವವನ್ನು ಸಾರಿದರು ಮತ್ತು ತಮ್ಮ ವೃತ್ತಿಗೆ ಸಂಬಂಧಿಸಿದ ಅಂಕಿತನಾಮವನ್ನು ಬಳಸಿದರು.
ವೈಚಾರಿಕ ಚಿಂತನೆ: ಸಮಕಾಲೀನ ಸಮಾಜ ವ್ಯವಸ್ಥೆ ಮತ್ತು ಸ್ಥಿತಿಗತಿಗಳ ಬಗ್ಗೆ ಟೀಕೆ ವಿಡಂಬನೆ ಮತ್ತು ಪ್ರತಿಭಟನೆಯನ್ನು ವ್ಯಕ್ತಪಡಿಸಿದರು.
ವಚನಗಾರ್ತಿಯರ ಕೊಡುಗೆ:
*ಸಾಮಾಜಿಕ ಸಮಾನತೆ: ತಮ್ಮ ವಚನಗಳ ಮೂಲಕ ಸ್ತ್ರೀ ಪುರುಷ ಸಮಾನತೆ ಮಹಿಳೆಯರನ್ನು ಶರಣು ಚಳುವಳಿಯಲ್ಲಿ ಪ್ರತಿಪಾದಿಕಿಯಾಗಿ ಗುರುತಿಸಲಾಗಿದೆ. ಅಮ್ಮುಗೆ ರಾಯಮ್ಮ, ಅಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ, ಕಾಯಕ ನಿಷ್ಠೆಗೆ ಹೆಸರಾದವರು. ಪತಿ ಆಯ್ದಕ್ಕಿ ಮಾರಯ್ಯನವರ ಕಾಯಕದ ಕುರಿತು ತೀಕ್ಷ್ಣವಾಗಿ ಪ್ರಶ್ನಿಸುತ್ತಿದ್ದ ಅತ್ಯಂತ ಪ್ರಭುದ್ಧ ಮಹಿಳೆ.
ಬೊಂಥಲಾದೇವಿ: ಮೋಳಿಗೆ ಮಹಾದೇವಿ, ಗಂಗಾದೇವಿ ಎಂದು ಕರೆಯುತ್ತಾರೆ.
ನೀಲಾಂಬಿಕೆ: ನೀಲಲೋಚನೆ ಎಂದು ಕರೆಯುತ್ತಾರೆ.
ಮಹಿಳಾ ವಚನಗಾರ್ತಿಯರು:
ವಚನ ಸಾಹಿತ್ಯದಲ್ಲಿ ಪ್ರಮುಖ ಪಾತ್ರ ವಹಿಸಿದವರು ಅಕ್ಕಮಹಾದೇವಿ ಎಂತಹ ವ್ಯಕ್ತಿಗಳಿಂದ ಹಿಡಿದು ಅಮುಗೆ ರಾಯಮ್ಮ, ಲಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ ಬೋಮ್ತಾದೇವಿ ಮತ್ತು ಮಸಣಮ್ಮ ನಂತಹ ಅನೇಕರು ಸೇರಿದ್ದಾರೆ. ಈ ವಚನಗಾರ್ತಿಯರು ಸಾಮಾಜಿಕ ಸಮಾನತೆ, ಕಾಯಕನಿಷ್ಠೆ ಮತ್ತು ವೈಚಾರಿಕ ಚಿಂತನೆಗಳನ್ನು ತಮ್ಮ ವಚನಗಳ ಮೂಲಕ ವ್ಯಕ್ತಪಡಿಸಿದ್ದಾರೆ.
_________________

About The Author

Leave a Reply

You cannot copy content of this page

Scroll to Top