ಕಾವ್ಯ ಸಂಗಾತಿ
ಲತಾ ಎ ಆರ್ ಬಾಳೆಹೊನ್ನೂರು
ಗೆಳೆಯ


ನನ್ನೆದೆಯ ಗೂಡಿನಲಿ ನೀನೇಗೆ ಬಂದೆ
ನನ್ನ ಮನಸಿಗೆ ಕುರುಹು ನೀಡದೆ
ಮೆಲುಧ್ವನಿಯಲಿ ಪ್ರೀತಿಯ ನುಡಿಯುತಿದೆ
ನನಗೆ ಅದೇನೆಂದು ಅರಿವಿಲ್ಲದೆ
ಹೋದ ಜನ್ಮದ ಋಣಾನುಭಂದನವೋ
ಜೊತೆ ಸಾಗಿ ಸಂತೈಸಿದ ಹೃದಯವೋ
ಕೈ ಹಿಡಿದು ಹಾರಾಡಿದ ಬಾನಂಗಳವೋ
ನನ್ನೊಳಗೆ ಭರವಸೆ ತುಂಬಿದ ಒಲವೋ
ಏನೆಂದು ಬರೆಯಲಿ ಬಿಳಿ ಹಾಳೆಯ ಮೇಲೆ
ಹಾಕಲಾಗುವುದಿಲ್ಲ ಕೊರಳಿಗೆ ಮಾಲೆ
ಹೊಸತನದ ಹರುಷ ತುಂಬಿದ ಸೆಲೆ
ನವ ನವೀನತೆಯ ಪರಿಚಯಿಸುವ ಕಲೆ
ಜೀವನ ಪಯಣದಲಿ ಇರು ಗೆಳೆಯನಾಗಿ
ತಪ್ಪು ಒಪ್ಪುಗಳ ತಿಳಿಸುವ ಮನವಾಗಿ
ಹರುಷ ತುಂಬುವ ಸುಮಧುರ ಪಯಣಿಗನಾಗಿ
ನೀನಿರು ನಾ ಬರೆವ ಕವಿತೆಯಲಿ ಮೌನವಾಗಿ
ಲತಾ ಎ ಆರ್ ಬಾಳೆಹೊನ್ನೂರು




