ಕಾವ್ಯ ಸಂಗಾತಿ
ಪರವಿನ ಬಾನು ಯಲಿಗಾರ
“ನಾರಿ”


ನೀನೇಷ್ಟುಸಾಧಿಸಿದರೆನು ,
ತಪ್ಪುತ್ತಿಲ್ಲವಲ್ಲ ನಿನ್ನ ಮೇಲಿನ ದೌರ್ಜನ್ಯ .
ನೀನೇಷ್ಟು ಓದಿದರೆನು , ನಿನ್ನ ಪಾಲಿನ
ನ್ಯಾಯಕ್ಕಗಿ ನಿ ಹೋರಾಡುವುದು ತಪ್ಪಲಿಲ್ಲ.
ನೀನ್ಯಾವ ಅಧಿಕಾರ ಪಡೆದರೇನು ,
ನಿನಗೇ ರಕ್ಷಣೆ ಇನ್ನೂ ಸಿಕ್ಕಿಲ್ಲ .
ನೀನೆಷ್ಟು ಹಕ್ಕಿನ ಪಾಠ ಮಾಡಿದರೇನು ,
ನಿನ್ನ ಮನೆಯಲ್ಲೇ ನಿನ್ನ ಹಕ್ಕು ಗೌಣ .
ನಿನಗೆಷ್ಟು ಪದವಿ ಪುರಸ್ಕಾರ ದಕ್ಕಿದರೇನು ,
ನಿನಾಗಿರುವೆ ಮತ್ತೊಬ್ಬರ ಅಡಿಯಾಳು .
ನೀ ಛಾಪು ಮೂಡಿಸಿದರೆನು ,
ಅನ್ಯ ಗೃಹದಲ್ಲಿ ಕಾಲೂರಿ ,
ನಿನಗೇ ನೆಲೆ ಇಲ್ಲ , ನೀ ಇರುವಲ್ಲಿ .
ನೀನಾಗಿರುವೆ ಯಾವಾಗಲೂ ದ್ವಿತೀಯಳು ,
ಆದರೆ , ಆದ್ವಿತೀಯಳಾಗುವ ದಿನ ಬಂದೆ ಬರುವುದು , ಒಂದು ದಿನ …..
———————
ಪರವೀನ ಬಾನು ಯಲಿಗಾರ



