ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

*ದೆವ್ವ ಬರೋದು ಅಮವಾಸ್ಯೆ ಮತ್ತು ಹುಣ್ಣಿಮೆಗಳಂದು ಮಾತ್ರ ಯಾಕೆ??*

ಮೊನ್ನೆ ಹುಣ್ಣಿಮೆಯ ದಿನ ಒಬ್ಬ ಹೆಸರಾಂತ ವೈದ್ಯೆ ಮತ್ತು ಮಗ ಪರಸ್ಪರ ಮನಸ್ತಾಪ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಇಡೀ ರಾಜ್ಯ ಬೆಚ್ಚಿ ಬೀಳಿಸಿತು. ಅದೇ ಹುಣ್ಣಿಮೆಯ  ರಾತ್ರಿ ಸ್ನೇಹಿತೆಯೋಬ್ಬಳು ಕರೆ ಮಾಡಿ, ಪಕ್ಕದ ಮನೆಯ ಮಧ್ಯ ವಯಸ್ಕ ಮಹಿಳೆಗೆ ಹುಣ್ಣಿಮೆ ಮತ್ತು ಅಮವಾಸ್ಯೆಯ ರಾತ್ರಿ ಮಾತ್ರ ದೆವ್ವ ಬರುತ್ತೆ ಅಂತಾ ಹೇಳಿದಳು.  ನಿನ್ನಿಂದ ಏನಾದರೂ ಸಾಧ್ಯವಿದ್ದರೇ ಒಂದು ಸಾರಿ ಬಂದು ಕೌನ್ಸಿಲಿಂಗ್ ಮಾಡಿ ಹೋಗಬಹುದಾ? ಅಂತಾ ಕೇಳಿಕೊಂಡಳು. ಜೊತೆಗೆ ಹುಣ್ಣಿಮೆ ಮತ್ತು ಅಮವಾಸ್ಯೆ ದಿನಗಳಂದು ಮಾತ್ರ ಮನುಷ್ಯರ ಮೈಮೇಲೆ ದೇವರು ಅಥವಾ ದೆವ್ವ ಬರೋದು? ಯಾಕೆ ಹೇಳೇ  ಅಂತಾನೂ ಕೇಳಿದಳು…..

ಆತ್ಮೀಯರೇ, ಮೇಲಿನ ಎರಡು ದೃಷ್ಟಾಂತಗಳನ್ನಿಟ್ಟುಕೊಂಡು ಅವಳ ಪ್ರಶ್ನೆಗೆ ಉತ್ತರ ಕೊಟ್ಟರೆ ಪ್ರಾಯಶಃ ಬಹುತೇಕರಿಗೆ ಹೆಲ್ಪ ಆಗಬಹುದು….ಅಥವಾ ದೆವ್ವ ಮತ್ತು ದೇವರ ಬಗ್ಗೆ ತಲೆ ಕೆಡಿಸಿಕೊಂಡವರಿಗೆ ಸತ್ಯ ಗೊತ್ತಾಗುತ್ತದೆ ಅಂತಾ ಈ ಲೇಖನ ಬರೆಯುತ್ತಿದ್ದೇನೆ……..ನಿಜವಾಗ್ಯೂ ಹೇಳೋದಾದ್ರೆ ದೆವ್ವನೂ ಇಲ್ಲ ಗಿವ್ವನೂ ಇಲ್ಲ…ಆದರೆ ಹುಣ್ಣಿಮೆ ಮತ್ತು ಅಮವಾಸ್ಯೆಗಳಂದು ನಮ್ಮ ಮನಸ್ಥಿತಿ ತುಂಬಾ ಡಿಸ್ಟರ್ಬ್ ಆಗೋದು ಮಾತ್ರ ಕಟು ಸತ್ಯ!!!. ಅದಕ್ಕೆ ಅವೇ ದಿನಗಳಂದು ಅಪಘಾತ, ಆತ್ಮಹತ್ಯೆ, ಜಗಳ, ಕೊಲೆಗಳು ಆಗೋದು ಸಾಮಾನ್ಯ. ಬೇಕಾದರೆ ನೀವು ಅಂಕಿ ಅಂಶ ಸ್ಟಡಿ ಮಾಡಿ… ಸುಮ್ಮನೆ ಒಂದು ಪೊಲೀಸ್‌ ಸ್ಟೇಷನ್ ನಲ್ಲಿ ಯಾವ ದಿನಗಳಂದು ಹೆಚ್ಚಿಗೆ ಎಫ್‌ಐಆರ್ ಗಳು ಆಗಿರುತ್ತವೆ ಎಂಬುದನ್ನು ಪರಿಶೀಲಿಸಿ. ಹಂಡ್ರೆಂಡ್ ಪರ್ಸೆಂಟ್ ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನಾ ಜಾಸ್ತಿ ಆಗಿರುತ್ತವೆ. ಇದಕ್ಕೆ ಕಾರಣವನ್ನು ಅತ್ಯಂತ ಸರಳವಾಗಿ ಹೇಳುವುದಾದರೆ, ನಮ್ಮ ದೇಹ 70%ರಷ್ಟು ನೀರಿನಿಂದ ಕೂಡಿರುತ್ತದೆಂದು ವೈಜ್ಞಾನಿಕವಾಗಿ ನಮಗೆಲ್ಲ ಗೊತ್ತು.. ಹಾಗಾಗಿ ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ಹೊಂದಿದ ಚಂದ್ರ ಹುಣ್ಣಿಮೆಯ ದಿನ, ಸೂರ್ಯನ ಗುರುತ್ವಾಕರ್ಷಣ ಶಕ್ತಿ ಹೊಂದಿದ ಭೂಮಿ ಅಮವಾಸ್ಯೆಯ ದಿನ ಹೆಚ್ಚಿನ ಉಬ್ಬರವಿಳಿತಗಳನ್ನ ಹೊಂದುವುದರಿಂದ ನಮ್ಮ ಇಡೀ ದೇಹ ಕಂಪನಕ್ಕೆ ಒಳಗಾಗುತ್ತದೆ(ಹುಣ್ಣಿಮೆಯ ದಿನ ಸಮುದ್ರದ ಉಬ್ಬರವಿಳಿತ ಹೆಚ್ಚಾಗುವ ಹಾಗೆ). ಹಾಗಾಗಿ ಅಂದು ನಾವು ಕೋಪ, ಸಂತೋಷ, ಹತಾಶೆ, ಕ್ರೋಧ, ನಿರೀಕ್ಷೆ, ಅಸಮಾಧಾನ, ಖಿನ್ನತೆ, ಅಭದ್ರತೆಯಂತಹ ಹೆಚ್ಚಿನ ಭಾವನೆಗಳನ್ನು ಅನುಭವಿಸುತ್ತೇವೆ, ಈ ಸಂದರ್ಭದಲ್ಲಿ ರಕ್ತದ ಹರಿವು ಹೆಚ್ಚಾಗಿರುತ್ತದೆ ಮತ್ತು ರಕ್ತಸ್ರಾವವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಅದಕ್ಕೆ ಅಮವಾಸ್ಯೆ ಅಥವಾ ಹುಣ್ಣಿಮೆಯ ಆಸುಪಾಸು ಋತುಚಕ್ರ ಹೊಂದುವ ನಮ್ಮ ಹೆಣ್ಣು ಮಕ್ಕಳು ಉಳಿದ ದಿನಗಳಿಗಿಂತ ಹೆಚ್ಚು ರಕ್ತಸ್ರಾವಕ್ಕೆ ಒಳಗಾಗುತ್ತಾರೆ. ಆದರೆ ಇದನ್ನು ಯಾವ ವೈದ್ಯರೂ ಹೇಳದೇ ಔಷಧ ಬರೆಯುವಲ್ಲಿ ಮಗ್ನರಾಗುತ್ತಾರೆ!!!. ಅಲ್ಲದೇ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳಂದು ಅಶಕ್ತ ಮನಸ್ಸಿನ ಜನರು ಬಹು ವಿಚಿತ್ರವಾಗಿ ವರ್ತಿಸುವದು, ಅತಿರೇಕತನ ಮಾಡೋದು, ಕೂಗಾಡುವುದು, ಕಿರುಚಾಡುವುದನ್ನು ಮಾಡುತ್ತಾರೆ. ಕೆಲವರು ತಮಗೆ ತಾವು ಇಲ್ಲವೇ ಮತ್ತೊಬ್ಬರಿಗೆ ತೊಂದರೆ ಮಾಡಿ ಜೋರಾಗಿ ನಗುತ್ತಾರೆ ಅಥವಾ ಅಳುತ್ತಾರೆ. ಇನ್ನೂ ಕೆಲವರು ಪರಹಿಂಸೆಗೆ ಮುಂದಾಗಿ ಕಳ್ಳತನ, ದರೋಡೆ, ಅತ್ಯಾಚಾರ, ಕೊಲೆ ಮಾಡುವುದುಂಟು. ಉದಾಹರಣೆಗೆ ನರಹಂತಕ ವೀರಪ್ಪನ್, ಚಾರ್ಲ್ಸ್ ಶೋಭರಾಜ್ ಅಮವಾಸ್ಯೆ ಮತ್ತು ಹುಣ್ಣಿಮೆಗಳಂದು ವಿಧ್ವಂಸಕ ಕೃತ್ಯಗಳಲ್ಲಿ ಹೆಚ್ಚಾಗಿ ತೊಡಗುತ್ತಿದ್ದರು.

ಅದು ಸರಿ!! ಈಗ ದೆವ್ವಗಳ ವಿಷಯಕ್ಕೆ ಬರೋಣ. ವೈಜ್ಞಾನಿಕವಾಗಿ ಹೇಳುವುದಾದರೆ, ನಮ್ಮ ದೇಹವು ನಮ್ಮ ವಿದ್ಯುತ್ಕಾಂತೀಯ ಸಂಕೇತಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ನಮ್ಮ ಆಲೋಚನೆಗಳು ಮತ್ತು ಭಾವನೆಗಳು ಸಹ ಪ್ರಕೃತಿಯಲ್ಲಿ ವಿದ್ಯುತ್ಕಾಂತೀಯವಾಗಿವೆ. ಸತ್ತಾಗ, ಮನುಷ್ಯನ ಆಲೋಚನೆಗಳು ಮತ್ತು ಭಾವನೆಗಳು ತೀವ್ರವಾಗಿದ್ದರೆ, ಆ ವಿದ್ಯುತ್ಕಾಂತೀಯ ಕ್ಷೇತ್ರವು ಸತ್ತ ದೇಹ ಬಿಟ್ಟು ತನ್ನ ಶಕ್ತಿಯನ್ನ ಬೇರೆ ಜೀವಂತ ಅಶಕ್ತ ದೇಹಕ್ಕೆ ಹೋಗಿ ಸೇರುತ್ತವೆ. ಆಮೇಲೆ ಸತ್ತ ಮಾನವನ ಭಾವನೆಗಳು ಇವರ ಬಾಯಲ್ಲಿ ಬರುತ್ತವೆ. ಇದನ್ನೇ ಪ್ರೇತ ಅಥವಾ ದೆವ್ವ ಅಥವಾ ದೇವರು ಎಂದು ಕರೆಯಲಾಗುತ್ತದೆ. ಇಲ್ಲಿ ವ್ಯಕ್ತಿಯು ತನ್ನ ಸಾಮಾನ್ಯ ಗುರುತನ್ನು ಕಳೆದುಕೊಂಡು, ಬೇರೊಂದು “ವ್ಯಕ್ತಿತ್ವ” ಅಥವಾ “ಶಕ್ತಿ” ತನ್ನನ್ನು ನಿಯಂತ್ರಿಸುತ್ತಿದೆ ಎಂದು ನಂಬುತ್ತಾನೆ. ಬಾಲ್ಯದ ಆಘಾತಗಳು (Trauma), ವಿಶೇಷವಾಗಿ ಲೈಂಗಿಕ ದೌರ್ಜನ್ಯದಂತಹ ಕೆಟ್ಟ ಘಟನೆಗಳು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಿ ಮುಂದೆ ದೆವ್ವದ ರೂಪದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಸೈಕಾಲಜಿಕಲಿ ಹೆಚ್ಚಿಗಿರುತ್ತದೆ. ಕೆಲವರಲ್ಲಿ ಅದರ ಸ್ವರೂಪ ಬೇರೆಯಾಗಿ ಡುಯಲ್ ಪರ್ಸನಾಲಿಟಿ ಅಥವಾ ಸ್ಪಿಟ್ ಪರ್ಸನಾಲಿಟಿಯಾಗಿ ಗೋಚರ ಆಗಬಲ್ಲದು. ಸ್ಕಿಜೋಫೋನಿಯಾ (schizophrenia), ಮತ್ತು ಶ್ರವಣ ಭ್ರಮೆಗಳಿಗೆ (delusions) (hallucinations) ವ್ಯಕ್ತಿ ಈಡಾಗಬಲ್ಲ, ಇದರಿಂದಾಗಿ ರೋಗಿಯು ತನ್ನನ್ನು ಯಾರೋ ನಿಯಂತ್ರಿಸುತ್ತಿದ್ದಾರೆ ಅಥವಾ ಬೇರೆ ಧ್ವನಿಗಳು ಕೇಳಿಸುತ್ತಿವೆ ಎಂದು ಭಾವಿಸಬಹುದು. ಉದಾಹರಣೆಗೆ ಕಳೆದ ತಿಂಗಳು ಬೆಂಗಳೂರಿನ ಪ್ರಸಿದ್ದ ಸೈಕಿಯಾಟ್ರಿಕ್ ಹಾಸ್ಪಿಟಲ್ ನಲ್ಲಿ ನಾನು ಒಬ್ಬ ಮಧ್ಯ ವಯಸ್ಕ ವಿವಾಹಿತ ಮಹಿಳೆಯ ಕೇಸ್ ಸ್ಟಡಿ ಮಾಡುವಾಗ ಅವಳು ಪ್ರತಿ ದಿನ ತನ್ನ ಗಂಡ ಹಾಸ್ಪಿಟಲ್ ಹೊರಗೆ ಬಂದು ತನ್ನ ನೋಡಿ ಹೋಗುತ್ತಾನೆ ಅಂತಾ ಹೇಳುತ್ತಿದ್ದಳು. ಆಮೇಲೆ ಅವಳ ಹೇಳಿಕೆಯನ್ನು ಪರೀಕ್ಷಿಸಲಾಗಿ she is under hallucination ಅನ್ನೋದು ಗೊತ್ತಾಯ್ತು. ಇದನ್ನೇ ಕೆಲವೊಮ್ಮೆ ದೆವ್ವದ ಹಿಡಿತ ಎಂದು ತಪ್ಪಾಗಿ ಅರ್ಥೈಸಬಹುದು!!!

ನುರಿತ ಸಮಾಲೋಚಕರಿಂದ ಇಲ್ಲವೇ ಮನೋವೈದ್ಯರಿಂದ ಇಂಥಹ ದುರ್ಬಲ ಮನಸ್ಥಿತಿಗೆ ಒಳಗಾದವರಿಗೆ ಸರಿಯಾದ ಚಿಕಿತ್ಸೆ ಕೊಡಿಸಬೇಕು. ಒಮ್ಮೊಮ್ಮೆ ಔಷಧೋಪಚಾರ ಕೂಡ ಅನಿವಾರ್ಯವಾಗಬಲ್ಲದು. ಅದು ಬಿಟ್ಟು ಮಾಟ, ಮಂತ್ರ ಅಂತಾ ಹೇಳುತ್ತಾ ವ್ಯಕ್ತಿಯ ಪರಿಸ್ಥಿತಿ ಹಾಳು ಮಾಡುವುದು ಬೇಡ!!! ಸರಿ… ನಮ್ಮ ಹಿರಿಯರು ಎಸ್ಟು ಜಾಣರು ನೋಡಿ!!!. ಪ್ರಾಯಶಃ ಇದೆಲ್ಲ ಗೊತ್ತಿದ್ದೇ ಅವರು ಅಮವಾಸ್ಯೆ ಅಥವಾ ಹುಣ್ಣಿಮೆಗಳಂದು ಮನೆದೇವರಿಗೆ ಹೋಗುವ ರೂಢಿ ಹಾಕಿರೋದು. ದೇವಸ್ಥಾನಗಳಿಗೆ ಹೋಗುವುದರಿಂದ ನಮ್ಮಲ್ಲಿ ಉಂಟಾಗಬಹುದಾದ ಆ ನೆಗೆಟಿವ್ ಎನರ್ಜಿಗಳನ್ನ ಕಂಟ್ರೋಲ್ ಮಾಡಬಹುದು. ಧ್ಯಾನ, ಅಭಿಷೇಕ, ಯಜ್ಞ, ಪೂಜೆ ಪುನಸ್ಕಾರಗಳಿಂದ ಮನಸ್ಸು ಶಾಂತ ಸ್ಥಿತಿಗೆ ಬರೋದು ಸಾಧ್ಯ….ಅಲ್ಲವೇ??


.

About The Author

Leave a Reply

You cannot copy content of this page

Scroll to Top