ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

.

ಅದೊಂದು ಕಾಲವಿತ್ತು ಡಾಕ್ಟರ್ ಎಂಬ ಪದಕ್ಕೆ ಅದರದೇ ಆದ ಘನತೆ ಗಾಂಭೀರ್ಯವಿತ್ತು. ಎಂ ಬಿ ಬಿ ಎಸ್ ಮಾಡಿದ ಮಹನೀಯರಿಗೆ ಕೊಡುವ ಗೌರವ ಪದವಿಯಾಗಿತ್ತು. ಅದೊಂದು ಹೆಮ್ಮೆಯ ಪ್ರತೀಕ ವಾಗಿತ್ತು. ಹಾಗೆಯೇ ಎಲ್ಲಾ ಕ್ಷೇತ್ರ ದಲ್ಲಿ ಗಣನೀಯ ಸೇವೆ ಸಲ್ಲಿಸಿ ಸಾಧನೆ ಮಾಡಿದವರಿಗೆ ನೀಡುವ ಗೌರವ ಡಾಕ್ಟರೇಟ್ ಅಮೋಘವಾದದ್ದು. ಪಿ ಹೆಚ್. ಡಿ ಮಾಡಿ ಸಾಧನೆ ತೋರಿಗೌರವ ಡಾಕ್ಟರೇಟ್ ಪಡೆದವರಿಗೆ ಅದರದೇ ಆದ ಸ್ಥಾನ ಮಾನವಿತ್ತು. ಗೌರವ ಸ್ಥಾನ ವಿತ್ತು ಹೀಗೆ ಡಾಕ್ಟರೇಟ್ ಪಡೆದವರಿಗೆ ಹೃದಯದ ವಂದನೆಗಳು.
       ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಸಂಘ ಸಂಸ್ಥೆಗಳು ಹಾಗೂ ವೇದಿಕೆಗಳು ನೀಡುತ್ತಿರುವ ಗೌರವ ಡಾಕ್ಟರೇಟ್ ಅಕ್ಷಮ್ಯ ಅಪರಾಧವಾಗಿದೆ. ಏಕೆಂದರೆ ಗೌರವ ಡಾಕ್ಟರೇಟ್ ಮಾರಾಟಕ್ಕಿದೆ. ದುಡ್ಡಿಗಾಗಿ ಮಾರಾಟ ಹಾಗೂ ಹೆಸರಿನ ಮುಂದೆ ಡಾ. ಎಂದು ಹಾಕಿಸಿಕೊಳ್ಳುವ ಹುಚ್ಚು ಕೆಲವರ ತಲೆಗೇರಿದೆ 10.000.12000.ಕ್ಕೆ ಗೌರವ ಡಾಕ್ಟರೇಟ್ ಪಡೆಯುವ ಅಚ್ಚುಕಟ್ಟಾದ ಷಡ್ಯಂತ್ರ ನಡೆದು ಮಾರಾಟವಾಗುತ್ತಿದೆ. ಹೂವು ಮಾರುವವರು ಹಣ್ಣು ಮಾರುವವರು ಕಡಲೆ ಕಾಯಿ ಮಾರುವವರು ಇವರೆಲ್ಲ ಹಣ ನೀಡಿ ಡಾಕ್ಟರೇಟ್ ಪಡೆಯಲು ಹಲವು ವೇದಿಕೆಗಳು ತಯಾರಾಗಿವೆ ಸಾಧನೆ ಇಲ್ಲದವರೆಲ್ಲ ವೇದಿಕೆ ಅಲಂಕರಿಸುತ್ತಿದ್ದಾರೆ ಹಣದಾಹದಲ್ಲಿ ಅನರ್ಹರಿಗೆ ಈ ರೀತಿಯ ಸನ್ಮಾನ ಅವಶ್ಯಕತೆ ಇದೆಯೇ? ಕೊಡುವವರಿಗೆ ಹಣದ ದಾಹ ತೆಗೆದುಕೊಳ್ಳುವವರಿಗೆ ಮರ್ಯಾದೆ ಇಲ್ಲ. ಮೂರು ಬಿಟ್ಟವರು ಊರಿಗೆ ದೊಡ್ಡವರು ಗಾದೆ ಮಾತು ಸುಳ್ಳಲ್ಲ. ಈ ರೀತಿಯ ನಾಚಿಕೆಗೇಡಿನ ಸನ್ಮಾನ ಅವಶ್ಯಕತೆ ಇದೆಯೇ? ಕೇವಲ ಒಂದು 50,100 ಕವನವಿರುವ ಕವನ ಸಂಕಲನ ಬಿಡುಗಡೆ ಮಾಡಿ ಹಲವಾರು ಜನರಿಗೆ ಬಕೆಟ್ ಹಿಡಿದು ಸನ್ಮಾನ. ಡಾಕ್ಟರೇಟ್ ಪಡೆಯುವ ಕೀಳು ಮನಸ್ಸಿನ ಸ್ವಾಭಿಮಾನವಿಲ್ಲದ ಆತ್ಮಸಾಕ್ಷಿ ವಿರೋಧಿಗಳಿಗೆ ಧಿಕ್ಕಾರವಿರಲಿ. ಹೆಸರಿನ ಮುಂದೆ ಡಾ. ಬರೆಸಿಕೊಳ್ಳುವ ಹುಚ್ಚು ತೊಲಗಲಿ. ಜನ ಮರುಳೋ ಜಾತ್ರೆ ಮರುಳೋ ತಿಳಿಯುತ್ತಿಲ್ಲ. ನಿಜವಾದ ಡಾಕ್ಟರ್ ಯಾರು ಎಂದು ಕಂಡು ಹಿಡಿಯುವುದೇ ಕಷ್ಟಕರವಾಗಿದೆ. ಮುಂದೊಂದು ದಿನ ಮೆಡಿಕಲ್ ನಲ್ಲಿ ಜ್ವರ ತಲೆನೋವಿನ ಮಾತ್ರೆ ಖರೀದಿಸಿ ಡಾ. ಎಂಬ ಬೋರ್ಡ್ ಹಾಕಿಕೊಂಡು ಕ್ಲಿನಿಕ್ ತೆರೆದುಕೊಳ್ಳುವರೇನೋ ತಿಳಿದಿಲ್ಲ ಹುಚ್ಚರ ಸಂತೇಲಿ ಡಾ ಪಡೆದವನೇ ಮಹನೀಯ ಆಗಬಾರದು. ಡಾಕ್ಟರೇಟ್ ಪಡೆಯಲು ಅದರದೇ ಆದ ಅರ್ಹತೆ ಇರುವವರಿಗೆ ನೀಡಬೇಕು. ಈ ರೀತಿಯ ಅನ್ಯಾಯದ ವಿರುದ್ಧ ಸಂಭಂದ ಪಟ್ಟವರು ಗಮನಹರಿಸಲಿ


About The Author

1 thought on ““ಗೌರವ ಡಾಕ್ಟರೇಟ್ ಮಾರಾಟಕ್ಕಿದೆ” ಲತಾ ಎ ಆರ್‌ ಬಾಳೆಹೊನ್ನೂರು”

  1. ಡಾಕ್ಟರೇಟ್ ಪದವಿ ಮಾರಾಟಕ್ಕಿದೆ ಎಂಬುದನ್ನು ಕೇಳಿ ಬಹಳ ಖೇದವೆನಿಸುತ್ತದೆ.ನಿಮ್ಮ ನೇರವಾಗಿ ಬರೆದಿರುವಿರಿ.

Leave a Reply

You cannot copy content of this page

Scroll to Top