ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇದ್ದದ್ದು ಇದ್ದ ಹಾಗೇ ಹೇಳುವವರೇ ಕಮ್ಮಿ
ಬುದ್ಧಿ ಮಾತುಗಳನು ಕೇಳುವವರೇ ಕಮ್ಮಿ

ಬೇವು-ಬೆಲ್ಲದಂತೆಯೇ ನಮ್ಮೆಲ್ಲರ ಬಾಳಿಲ್ಲಿ
ಸಂಕಷ್ಟಗಳೆಲ್ಲ ಸಹಿಸಿ ತಾಳುವವರೇ ಕಮ್ಮಿ

ಅನುಕರಣೆಯಂತು ಸುಲಭದ ಸರಕಾಯ್ತು
ಅನುಸರಿಸಿಕೊಂಡಿಲ್ಲಿ ಬಾಳುವವರೇ ಕಮ್ಮಿ

ಅನ್ಯರ ಬಗ್ಗೆ ಎತ್ತಾಡದಿರೇ ತಿಂದನ್ನ ಅರಗದು
ಈ ಹಾಳು ಹರಟೆ ಬಿಟ್ಟು ಏಳುವವರೇ ಕಮ್ಮಿ

ಕುಂಬಾರ ಸೋಲಿನಲ್ಲೂ ಸುಖವ ಕಂಡಿದ್ದಾನೆ
ದಿನ ಸಾಯುವವರಿಗಿಲ್ಲಿ ಅಳುವವರೇ ಕಮ್ಮಿ


About The Author

Leave a Reply

You cannot copy content of this page

Scroll to Top