ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಅವರ ಗಜಲ್ ಇದ್ದದ್ದು ಇದ್ದ ಹಾಗೇ ಹೇಳುವವರೇ ಕಮ್ಮಿಬುದ್ಧಿ ಮಾತುಗಳನು ಕೇಳುವವರೇ ಕಮ್ಮಿ ಬೇವು-ಬೆಲ್ಲದಂತೆಯೇ ನಮ್ಮೆಲ್ಲರ ಬಾಳಿಲ್ಲಿಸಂಕಷ್ಟಗಳೆಲ್ಲ ಸಹಿಸಿ ತಾಳುವವರೇ ಕಮ್ಮಿ ಅನುಕರಣೆಯಂತು ಸುಲಭದ ಸರಕಾಯ್ತುಅನುಸರಿಸಿಕೊಂಡಿಲ್ಲಿ ಬಾಳುವವರೇ ಕಮ್ಮಿ ಅನ್ಯರ ಬಗ್ಗೆ ಎತ್ತಾಡದಿರೇ ತಿಂದನ್ನ ಅರಗದುಈ ಹಾಳು ಹರಟೆ ಬಿಟ್ಟು ಏಳುವವರೇ ಕಮ್ಮಿ ಕುಂಬಾರ ಸೋಲಿನಲ್ಲೂ ಸುಖವ ಕಂಡಿದ್ದಾನೆದಿನ ಸಾಯುವವರಿಗಿಲ್ಲಿ ಅಳುವವರೇ ಕಮ್ಮಿ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಇತರೆ

ದೆವ್ವ ಬರೋದು ಅಮವಾಸ್ಯೆ ಮತ್ತು ಹುಣ್ಣಿಮೆಗಳಂದು ಮಾತ್ರ ಯಾಕೆ?? ಪ್ರಭಾ ಹಿರೇಮಠ ಅವರ ವೈಚಾರಿಕ ಲೇಖನ

ವೈಚಾರಿಕ ಸಂಗಾತಿ ಪ್ರಭಾ ಹಿರೇಮಠ ದೆವ್ವ ಬರೋದು ಅಮವಾಸ್ಯೆ ಮತ್ತು ಹುಣ್ಣಿಮೆಗಳಂದು ಮಾತ್ರ ಯಾಕೆ?? *ದೆವ್ವ ಬರೋದು ಅಮವಾಸ್ಯೆ ಮತ್ತು ಹುಣ್ಣಿಮೆಗಳಂದು ಮಾತ್ರ ಯಾಕೆ??* ಮೊನ್ನೆ ಹುಣ್ಣಿಮೆಯ ದಿನ ಒಬ್ಬ ಹೆಸರಾಂತ ವೈದ್ಯೆ ಮತ್ತು ಮಗ ಪರಸ್ಪರ ಮನಸ್ತಾಪ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಇಡೀ ರಾಜ್ಯ ಬೆಚ್ಚಿ ಬೀಳಿಸಿತು. ಅದೇ ಹುಣ್ಣಿಮೆಯ  ರಾತ್ರಿ ಸ್ನೇಹಿತೆಯೋಬ್ಬಳು ಕರೆ ಮಾಡಿ, ಪಕ್ಕದ ಮನೆಯ ಮಧ್ಯ ವಯಸ್ಕ ಮಹಿಳೆಗೆ ಹುಣ್ಣಿಮೆ ಮತ್ತು ಅಮವಾಸ್ಯೆಯ ರಾತ್ರಿ ಮಾತ್ರ ದೆವ್ವ ಬರುತ್ತೆ ಅಂತಾ ಹೇಳಿದಳು.  ನಿನ್ನಿಂದ ಏನಾದರೂ ಸಾಧ್ಯವಿದ್ದರೇ ಒಂದು ಸಾರಿ ಬಂದು ಕೌನ್ಸಿಲಿಂಗ್ ಮಾಡಿ ಹೋಗಬಹುದಾ? ಅಂತಾ ಕೇಳಿಕೊಂಡಳು. ಜೊತೆಗೆ ಹುಣ್ಣಿಮೆ ಮತ್ತು ಅಮವಾಸ್ಯೆ ದಿನಗಳಂದು ಮಾತ್ರ ಮನುಷ್ಯರ ಮೈಮೇಲೆ ದೇವರು ಅಥವಾ ದೆವ್ವ ಬರೋದು? ಯಾಕೆ ಹೇಳೇ  ಅಂತಾನೂ ಕೇಳಿದಳು….. ಆತ್ಮೀಯರೇ, ಮೇಲಿನ ಎರಡು ದೃಷ್ಟಾಂತಗಳನ್ನಿಟ್ಟುಕೊಂಡು ಅವಳ ಪ್ರಶ್ನೆಗೆ ಉತ್ತರ ಕೊಟ್ಟರೆ ಪ್ರಾಯಶಃ ಬಹುತೇಕರಿಗೆ ಹೆಲ್ಪ ಆಗಬಹುದು….ಅಥವಾ ದೆವ್ವ ಮತ್ತು ದೇವರ ಬಗ್ಗೆ ತಲೆ ಕೆಡಿಸಿಕೊಂಡವರಿಗೆ ಸತ್ಯ ಗೊತ್ತಾಗುತ್ತದೆ ಅಂತಾ ಈ ಲೇಖನ ಬರೆಯುತ್ತಿದ್ದೇನೆ……..ನಿಜವಾಗ್ಯೂ ಹೇಳೋದಾದ್ರೆ ದೆವ್ವನೂ ಇಲ್ಲ ಗಿವ್ವನೂ ಇಲ್ಲ…ಆದರೆ ಹುಣ್ಣಿಮೆ ಮತ್ತು ಅಮವಾಸ್ಯೆಗಳಂದು ನಮ್ಮ ಮನಸ್ಥಿತಿ ತುಂಬಾ ಡಿಸ್ಟರ್ಬ್ ಆಗೋದು ಮಾತ್ರ ಕಟು ಸತ್ಯ!!!. ಅದಕ್ಕೆ ಅವೇ ದಿನಗಳಂದು ಅಪಘಾತ, ಆತ್ಮಹತ್ಯೆ, ಜಗಳ, ಕೊಲೆಗಳು ಆಗೋದು ಸಾಮಾನ್ಯ. ಬೇಕಾದರೆ ನೀವು ಅಂಕಿ ಅಂಶ ಸ್ಟಡಿ ಮಾಡಿ… ಸುಮ್ಮನೆ ಒಂದು ಪೊಲೀಸ್‌ ಸ್ಟೇಷನ್ ನಲ್ಲಿ ಯಾವ ದಿನಗಳಂದು ಹೆಚ್ಚಿಗೆ ಎಫ್‌ಐಆರ್ ಗಳು ಆಗಿರುತ್ತವೆ ಎಂಬುದನ್ನು ಪರಿಶೀಲಿಸಿ. ಹಂಡ್ರೆಂಡ್ ಪರ್ಸೆಂಟ್ ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನಾ ಜಾಸ್ತಿ ಆಗಿರುತ್ತವೆ. ಇದಕ್ಕೆ ಕಾರಣವನ್ನು ಅತ್ಯಂತ ಸರಳವಾಗಿ ಹೇಳುವುದಾದರೆ, ನಮ್ಮ ದೇಹ 70%ರಷ್ಟು ನೀರಿನಿಂದ ಕೂಡಿರುತ್ತದೆಂದು ವೈಜ್ಞಾನಿಕವಾಗಿ ನಮಗೆಲ್ಲ ಗೊತ್ತು.. ಹಾಗಾಗಿ ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ಹೊಂದಿದ ಚಂದ್ರ ಹುಣ್ಣಿಮೆಯ ದಿನ, ಸೂರ್ಯನ ಗುರುತ್ವಾಕರ್ಷಣ ಶಕ್ತಿ ಹೊಂದಿದ ಭೂಮಿ ಅಮವಾಸ್ಯೆಯ ದಿನ ಹೆಚ್ಚಿನ ಉಬ್ಬರವಿಳಿತಗಳನ್ನ ಹೊಂದುವುದರಿಂದ ನಮ್ಮ ಇಡೀ ದೇಹ ಕಂಪನಕ್ಕೆ ಒಳಗಾಗುತ್ತದೆ(ಹುಣ್ಣಿಮೆಯ ದಿನ ಸಮುದ್ರದ ಉಬ್ಬರವಿಳಿತ ಹೆಚ್ಚಾಗುವ ಹಾಗೆ). ಹಾಗಾಗಿ ಅಂದು ನಾವು ಕೋಪ, ಸಂತೋಷ, ಹತಾಶೆ, ಕ್ರೋಧ, ನಿರೀಕ್ಷೆ, ಅಸಮಾಧಾನ, ಖಿನ್ನತೆ, ಅಭದ್ರತೆಯಂತಹ ಹೆಚ್ಚಿನ ಭಾವನೆಗಳನ್ನು ಅನುಭವಿಸುತ್ತೇವೆ, ಈ ಸಂದರ್ಭದಲ್ಲಿ ರಕ್ತದ ಹರಿವು ಹೆಚ್ಚಾಗಿರುತ್ತದೆ ಮತ್ತು ರಕ್ತಸ್ರಾವವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಅದಕ್ಕೆ ಅಮವಾಸ್ಯೆ ಅಥವಾ ಹುಣ್ಣಿಮೆಯ ಆಸುಪಾಸು ಋತುಚಕ್ರ ಹೊಂದುವ ನಮ್ಮ ಹೆಣ್ಣು ಮಕ್ಕಳು ಉಳಿದ ದಿನಗಳಿಗಿಂತ ಹೆಚ್ಚು ರಕ್ತಸ್ರಾವಕ್ಕೆ ಒಳಗಾಗುತ್ತಾರೆ. ಆದರೆ ಇದನ್ನು ಯಾವ ವೈದ್ಯರೂ ಹೇಳದೇ ಔಷಧ ಬರೆಯುವಲ್ಲಿ ಮಗ್ನರಾಗುತ್ತಾರೆ!!!. ಅಲ್ಲದೇ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳಂದು ಅಶಕ್ತ ಮನಸ್ಸಿನ ಜನರು ಬಹು ವಿಚಿತ್ರವಾಗಿ ವರ್ತಿಸುವದು, ಅತಿರೇಕತನ ಮಾಡೋದು, ಕೂಗಾಡುವುದು, ಕಿರುಚಾಡುವುದನ್ನು ಮಾಡುತ್ತಾರೆ. ಕೆಲವರು ತಮಗೆ ತಾವು ಇಲ್ಲವೇ ಮತ್ತೊಬ್ಬರಿಗೆ ತೊಂದರೆ ಮಾಡಿ ಜೋರಾಗಿ ನಗುತ್ತಾರೆ ಅಥವಾ ಅಳುತ್ತಾರೆ. ಇನ್ನೂ ಕೆಲವರು ಪರಹಿಂಸೆಗೆ ಮುಂದಾಗಿ ಕಳ್ಳತನ, ದರೋಡೆ, ಅತ್ಯಾಚಾರ, ಕೊಲೆ ಮಾಡುವುದುಂಟು. ಉದಾಹರಣೆಗೆ ನರಹಂತಕ ವೀರಪ್ಪನ್, ಚಾರ್ಲ್ಸ್ ಶೋಭರಾಜ್ ಅಮವಾಸ್ಯೆ ಮತ್ತು ಹುಣ್ಣಿಮೆಗಳಂದು ವಿಧ್ವಂಸಕ ಕೃತ್ಯಗಳಲ್ಲಿ ಹೆಚ್ಚಾಗಿ ತೊಡಗುತ್ತಿದ್ದರು. ಅದು ಸರಿ!! ಈಗ ದೆವ್ವಗಳ ವಿಷಯಕ್ಕೆ ಬರೋಣ. ವೈಜ್ಞಾನಿಕವಾಗಿ ಹೇಳುವುದಾದರೆ, ನಮ್ಮ ದೇಹವು ನಮ್ಮ ವಿದ್ಯುತ್ಕಾಂತೀಯ ಸಂಕೇತಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ನಮ್ಮ ಆಲೋಚನೆಗಳು ಮತ್ತು ಭಾವನೆಗಳು ಸಹ ಪ್ರಕೃತಿಯಲ್ಲಿ ವಿದ್ಯುತ್ಕಾಂತೀಯವಾಗಿವೆ. ಸತ್ತಾಗ, ಮನುಷ್ಯನ ಆಲೋಚನೆಗಳು ಮತ್ತು ಭಾವನೆಗಳು ತೀವ್ರವಾಗಿದ್ದರೆ, ಆ ವಿದ್ಯುತ್ಕಾಂತೀಯ ಕ್ಷೇತ್ರವು ಸತ್ತ ದೇಹ ಬಿಟ್ಟು ತನ್ನ ಶಕ್ತಿಯನ್ನ ಬೇರೆ ಜೀವಂತ ಅಶಕ್ತ ದೇಹಕ್ಕೆ ಹೋಗಿ ಸೇರುತ್ತವೆ. ಆಮೇಲೆ ಸತ್ತ ಮಾನವನ ಭಾವನೆಗಳು ಇವರ ಬಾಯಲ್ಲಿ ಬರುತ್ತವೆ. ಇದನ್ನೇ ಪ್ರೇತ ಅಥವಾ ದೆವ್ವ ಅಥವಾ ದೇವರು ಎಂದು ಕರೆಯಲಾಗುತ್ತದೆ. ಇಲ್ಲಿ ವ್ಯಕ್ತಿಯು ತನ್ನ ಸಾಮಾನ್ಯ ಗುರುತನ್ನು ಕಳೆದುಕೊಂಡು, ಬೇರೊಂದು “ವ್ಯಕ್ತಿತ್ವ” ಅಥವಾ “ಶಕ್ತಿ” ತನ್ನನ್ನು ನಿಯಂತ್ರಿಸುತ್ತಿದೆ ಎಂದು ನಂಬುತ್ತಾನೆ. ಬಾಲ್ಯದ ಆಘಾತಗಳು (Trauma), ವಿಶೇಷವಾಗಿ ಲೈಂಗಿಕ ದೌರ್ಜನ್ಯದಂತಹ ಕೆಟ್ಟ ಘಟನೆಗಳು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಿ ಮುಂದೆ ದೆವ್ವದ ರೂಪದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಸೈಕಾಲಜಿಕಲಿ ಹೆಚ್ಚಿಗಿರುತ್ತದೆ. ಕೆಲವರಲ್ಲಿ ಅದರ ಸ್ವರೂಪ ಬೇರೆಯಾಗಿ ಡುಯಲ್ ಪರ್ಸನಾಲಿಟಿ ಅಥವಾ ಸ್ಪಿಟ್ ಪರ್ಸನಾಲಿಟಿಯಾಗಿ ಗೋಚರ ಆಗಬಲ್ಲದು. ಸ್ಕಿಜೋಫೋನಿಯಾ (schizophrenia), ಮತ್ತು ಶ್ರವಣ ಭ್ರಮೆಗಳಿಗೆ (delusions) (hallucinations) ವ್ಯಕ್ತಿ ಈಡಾಗಬಲ್ಲ, ಇದರಿಂದಾಗಿ ರೋಗಿಯು ತನ್ನನ್ನು ಯಾರೋ ನಿಯಂತ್ರಿಸುತ್ತಿದ್ದಾರೆ ಅಥವಾ ಬೇರೆ ಧ್ವನಿಗಳು ಕೇಳಿಸುತ್ತಿವೆ ಎಂದು ಭಾವಿಸಬಹುದು. ಉದಾಹರಣೆಗೆ ಕಳೆದ ತಿಂಗಳು ಬೆಂಗಳೂರಿನ ಪ್ರಸಿದ್ದ ಸೈಕಿಯಾಟ್ರಿಕ್ ಹಾಸ್ಪಿಟಲ್ ನಲ್ಲಿ ನಾನು ಒಬ್ಬ ಮಧ್ಯ ವಯಸ್ಕ ವಿವಾಹಿತ ಮಹಿಳೆಯ ಕೇಸ್ ಸ್ಟಡಿ ಮಾಡುವಾಗ ಅವಳು ಪ್ರತಿ ದಿನ ತನ್ನ ಗಂಡ ಹಾಸ್ಪಿಟಲ್ ಹೊರಗೆ ಬಂದು ತನ್ನ ನೋಡಿ ಹೋಗುತ್ತಾನೆ ಅಂತಾ ಹೇಳುತ್ತಿದ್ದಳು. ಆಮೇಲೆ ಅವಳ ಹೇಳಿಕೆಯನ್ನು ಪರೀಕ್ಷಿಸಲಾಗಿ she is under hallucination ಅನ್ನೋದು ಗೊತ್ತಾಯ್ತು. ಇದನ್ನೇ ಕೆಲವೊಮ್ಮೆ ದೆವ್ವದ ಹಿಡಿತ ಎಂದು ತಪ್ಪಾಗಿ ಅರ್ಥೈಸಬಹುದು!!! ನುರಿತ ಸಮಾಲೋಚಕರಿಂದ ಇಲ್ಲವೇ ಮನೋವೈದ್ಯರಿಂದ ಇಂಥಹ ದುರ್ಬಲ ಮನಸ್ಥಿತಿಗೆ ಒಳಗಾದವರಿಗೆ ಸರಿಯಾದ ಚಿಕಿತ್ಸೆ ಕೊಡಿಸಬೇಕು. ಒಮ್ಮೊಮ್ಮೆ ಔಷಧೋಪಚಾರ ಕೂಡ ಅನಿವಾರ್ಯವಾಗಬಲ್ಲದು. ಅದು ಬಿಟ್ಟು ಮಾಟ, ಮಂತ್ರ ಅಂತಾ ಹೇಳುತ್ತಾ ವ್ಯಕ್ತಿಯ ಪರಿಸ್ಥಿತಿ ಹಾಳು ಮಾಡುವುದು ಬೇಡ!!! ಸರಿ… ನಮ್ಮ ಹಿರಿಯರು ಎಸ್ಟು ಜಾಣರು ನೋಡಿ!!!. ಪ್ರಾಯಶಃ ಇದೆಲ್ಲ ಗೊತ್ತಿದ್ದೇ ಅವರು ಅಮವಾಸ್ಯೆ ಅಥವಾ ಹುಣ್ಣಿಮೆಗಳಂದು ಮನೆದೇವರಿಗೆ ಹೋಗುವ ರೂಢಿ ಹಾಕಿರೋದು. ದೇವಸ್ಥಾನಗಳಿಗೆ ಹೋಗುವುದರಿಂದ ನಮ್ಮಲ್ಲಿ ಉಂಟಾಗಬಹುದಾದ ಆ ನೆಗೆಟಿವ್ ಎನರ್ಜಿಗಳನ್ನ ಕಂಟ್ರೋಲ್ ಮಾಡಬಹುದು. ಧ್ಯಾನ, ಅಭಿಷೇಕ, ಯಜ್ಞ, ಪೂಜೆ ಪುನಸ್ಕಾರಗಳಿಂದ ಮನಸ್ಸು ಶಾಂತ ಸ್ಥಿತಿಗೆ ಬರೋದು ಸಾಧ್ಯ….ಅಲ್ಲವೇ?? . ಪ್ರಭಾ ಹಿರೇಮಠ

ದೆವ್ವ ಬರೋದು ಅಮವಾಸ್ಯೆ ಮತ್ತು ಹುಣ್ಣಿಮೆಗಳಂದು ಮಾತ್ರ ಯಾಕೆ?? ಪ್ರಭಾ ಹಿರೇಮಠ ಅವರ ವೈಚಾರಿಕ ಲೇಖನ Read Post »

ಕಾವ್ಯಯಾನ

ಲತಾ  ಎ ಆರ್ ಬಾಳೆಹೊನ್ನೂರುಅವರ ಕವಿತೆ-ಗೆಳೆಯ

ಕಾವ್ಯ ಸಂಗಾತಿ ಲತಾ  ಎ ಆರ್ ಬಾಳೆಹೊನ್ನೂರು ಗೆಳೆಯ ನನ್ನೆದೆಯ ಗೂಡಿನಲಿ ನೀನೇಗೆ ಬಂದೆನನ್ನ ಮನಸಿಗೆ ಕುರುಹು ನೀಡದೆಮೆಲುಧ್ವನಿಯಲಿ ಪ್ರೀತಿಯ ನುಡಿಯುತಿದೆನನಗೆ ಅದೇನೆಂದು ಅರಿವಿಲ್ಲದೆ ಹೋದ ಜನ್ಮದ ಋಣಾನುಭಂದನವೋಜೊತೆ ಸಾಗಿ ಸಂತೈಸಿದ ಹೃದಯವೋಕೈ ಹಿಡಿದು ಹಾರಾಡಿದ ಬಾನಂಗಳವೋನನ್ನೊಳಗೆ ಭರವಸೆ ತುಂಬಿದ ಒಲವೋ ಏನೆಂದು ಬರೆಯಲಿ ಬಿಳಿ ಹಾಳೆಯ ಮೇಲೆಹಾಕಲಾಗುವುದಿಲ್ಲ ಕೊರಳಿಗೆ ಮಾಲೆಹೊಸತನದ ಹರುಷ ತುಂಬಿದ ಸೆಲೆನವ ನವೀನತೆಯ ಪರಿಚಯಿಸುವ ಕಲೆ ಜೀವನ ಪಯಣದಲಿ ಇರು ಗೆಳೆಯನಾಗಿತಪ್ಪು ಒಪ್ಪುಗಳ ತಿಳಿಸುವ ಮನವಾಗಿಹರುಷ ತುಂಬುವ ಸುಮಧುರ ಪಯಣಿಗನಾಗಿನೀನಿರು ನಾ ಬರೆವ ಕವಿತೆಯಲಿ ಮೌನವಾಗಿ ಲತಾ  ಎ ಆರ್ ಬಾಳೆಹೊನ್ನೂರು

ಲತಾ  ಎ ಆರ್ ಬಾಳೆಹೊನ್ನೂರುಅವರ ಕವಿತೆ-ಗೆಳೆಯ Read Post »

ಅನುವಾದ

ತೆಲುಗು ಕವಿತೆ “ಬದುಕು ಮೂಟೆ”ಯ ಕನ್ನಡಾನುವಾದ ಕೋಡಿಹಳ್ಳಿ‌ ಮುರಳಿ ಮೋಹನ್

ಅನುವಾದ ಸಂಗಾತಿ ಬದುಕು ಮೂಟೆ ತೆಲುಗು ಮೂಲ: ಗಜ್ಜೆಲ ರಾಮಕೃಷ್ಣ ಕನ್ನಡಕ್ಕೆ: ಕೋಡಿಹಳ್ಳಿ ಮುರಳಿಮೋಹನ್ ಯಾವುದೋ ಜಾತ್ರೆ ಶುರುವಾದಂತೆ,ದೇವ್ರ ಆಭರಣ ಹೊತ್ತು ತಂದಂತೆ,ಬೀದಿಲಿ ಸುತ್ತೋ ಮೆರವಣಿಗೆ. ನೋಡೋಕೆ ಚಿಕ್ಕದೇ, ಆದ್ರೆಮೂಟೆ ಬಿಚ್ಚಿದ್ರೆ,ಮ್ಯಾಜಿಕ್ ಶೋ ನೋಡಿದಂಗೆ,ರಾಜ-ರಾಣಿ ಡ್ರೆಸ್‌ಗಳನ್ನೇನೋ ಪ್ರದರ್ಶನಕ್ಕಿಟ್ಟಂಗೆ.ಬಾಗಿಲ ತುಂಬಾ ಹರಡಿಕೊಳ್ಳೋ ಬಟ್ಟೆ ಅಂಗಡಿ. ” ಚಿನರಾಯುಡು ಪೆದರಾಯುಡು ಲುಂಗಿ” ಅಂದ್ಬಿಟ್ಟು,“ರಂಭಾ, ರಮ್ಯಾಕೃಷ್ಣ ಸೀರೆ” ಅಂತಾ ಹೇಳ್ತಾನಲ್ಲ,ಅವನೆಷ್ಟು ಕನಸುಗಳನ್ನ ಗಂಟಿಗ್ ತುಂಬ್ಕೊಂಡು ಬಂದಿರ್ತಾನೋ! ಒಂದು ರೇಟ್ ಹೇಳ್ತಾನೆ.ನಾವು ‘ಬೇಡ’ ಅಂತೀವಿ.ಅವನೊಂದು ಮಾತು ಹೇಳ್ತಾನೆ.ನಾವು ಇನ್ನೊಂದು ಮಾತು ಹೇಳ್ತೀವಿ.ಅವನೊಂದು ಸ್ಟೆಪ್ ಕೆಳಗಿಳಿದು,ಕೂಲಿ ಸಿಕ್ತು, ವ್ಯಾಪಾರ ಸೆಟ್ ಆಯ್ತು ಅಂದ್ಕೊಂಡು,ಕಣ್ಣಲ್ಲಿ ನಗ್ತಾನೆ. ಉದ್ರಿ (ಕಂತು)ಗೂ ಒಪ್ಕೋತಾನೆ.ಎಷ್ಟು ಹೊತ್ತು ಚೌಕಾಸಿ ಮಾಡಿದ್ರೂ,ನೆತ್ತಿ ಮೇಲೆ ಬೇಜಾರಿನ ಗೆರೆ ಮೂಡದಂತೆ ನೋಡ್ಕೋತಾನೆ. ಸೂರ್ಯಕಾಂತಿ ಹೂವಿನ ಹಾಗೆ,ಈ ಕೇರಿ ಆ ಕೇರಿ ತಿರುಗಿ ಸಾಯಂಕಾಲಕ್ಕೆ,ಮೂಟೆ ಕೊಡವಿ, ಜೇಬು ತುಂಬಿದ ಖುಷಿನಜೊತೆಗಿಟ್ಕೊಂಡು ಮನೆಗೆ ಹೋಗ್ತಾನೆ. ಕಾಲ ಸುಮ್ನೆ ಇರೋದಿಲ್ಲ ತಾನೇ?ಬಲಗೈಲಿ ತಳ್ಳಿದ್ದ ಗಾಳಿನಎಡಗೈಲಿ ವಾಪಸ್ ಕಳ್ಸ್ತಿದೆ. ಇವನ ಐಡಿಯಾನ ಕಾಪಿ ಮಾಡಿ,ಬೀದಿ ಮಧ್ಯೆ ತಲೆ ಎತ್ತಿದ ಶಾಪಿಂಗ್ ಮಾಲ್,ಅವನ ಹೊಟ್ಟೆಗೆ ಹೊಡೀತಾ,ಬದುಕಿನ ಮೇಲೆ ಪ್ರಳಯ ಡಾನ್ಸ್ ಮಾಡ್ತಿದೆ. ಆಲಿಕಲ್ಲಿಗೆ ಉದುರಿ ಹೋದ ಭತ್ತದ ಕಾಳಿನ ಹಾಗೆ,ಎಲ್ಲೋ…ಕುತ್ತಿಗೆ ಕಟ್ ಆಗ್ತಿದೆ

ತೆಲುಗು ಕವಿತೆ “ಬದುಕು ಮೂಟೆ”ಯ ಕನ್ನಡಾನುವಾದ ಕೋಡಿಹಳ್ಳಿ‌ ಮುರಳಿ ಮೋಹನ್ Read Post »

ಕಾವ್ಯಯಾನ

ರಾಜೇಶ್ವರಿ ಶೀಲವಂತ ಅವರ ಎರಡು ಕವಿತೆಗಳು

ಕಾವ್ಯಸಂಗಾತಿ ರಾಜೇಶ್ವರಿ ಶೀಲವಂತ ಅವರ ಎರಡು ಕವಿತೆಗಳು ಕವಿತೆ- ಒಂದು ಅವಳು ಕವಿಯೂ ಅಲ್ಲಸಾಹಿತಿಯೂ ಅಲ್ಲನಿಸ್ವಾರ್ಥ ಮನದ ಗೆಳತಿಮನಸ್ಥಿತಿಗೆ ತಕ್ಕಂತೆಕಾವ್ಯದಲ್ಲಿ  ಸಾಹಿತ್ಯದಲ್ಲಿ ಅವನ ಗೋಚರಅವನ ಮನಸ್ಥಿತಿಗಿಲ್ಲಅವಳ  ಭಾವಗಳ ವಿಚಾರಭಾವಗಳೇಸಾರೀ ಸಾರೀ ಹೇಳಿ ಸಾಹಿತಿಗಳಿಗೆಕೂಗಿ ಕೂಗಿ ಹೇಳಿ ಕವಿಗಳಿಗೆಅವಳದು ಪುಟ್ಟ ನೊಂದಭಾವುಕ ಹೃದಯಅದಕಿಲ್ಲ ಸಾಮರ್ಥ್ಯ          ಆ ನೋವ ಭರಿಸುವತಿಳಿಸಿರವರಿಗೆ ಭಾವನೆಗಳ ಸ್ಪಂದನವಅವಳ ಮನದಾಳದ ನೋವ. ***** ಕವಿತೆ-ಎರಡು ತಾಯಿ,ಅಬ್ಬೆ, ಅವ್ವಾ, ಅಮ್ಮಹಲವಾರುನಾಮಧೇಯ ನಿನಗೆನೀನು ಮಮತೆಜವಾಬ್ದಾರಿಯ ಸಾಕಾರನೀ ಹಂಚಿದೆ ಸಮ ಪ್ರೀತಿನಿನ್ನೆಲ್ಲ  ಮಕ್ಕಳಿಗೆನಿನ್ನೊಬ್ಬಳಿಗೆ ನೀಡಲಾರರುಆ ಪ್ರಬುದ್ಧ ಮಕ್ಕಳು  ಹಿಂತಿರುಗಿ ಆ ಪ್ರೀತಿಅವರಿಗಿಲ್ಲನಿನ್ನ ಸಲಹುವ ತವಕಅವರೆಲ್ಲತಮ್ಮ ಹೆಂಡತಿ ಮಕ್ಕಳಿಗೆ ಭಾವುಕನಿನಗೆ ಮಾತ್ರವೃದ್ಧಾಶ್ರಮದ  ಆಸರೆಅವ್ವಾ ಬೇಕಿತ್ತಾನಿನಗೆ ಇದೆಲ್ಲದರ ಹೊರೆಇನ್ನಾದರೂ  ನಿನ್ನಷ್ಟಕ್ಕೆ ನೀನೆ ಇರೆ. ರಾಜೇಶ್ವರಿ ಶೀಲವಂತ

ರಾಜೇಶ್ವರಿ ಶೀಲವಂತ ಅವರ ಎರಡು ಕವಿತೆಗಳು Read Post »

ಇತರೆ

“ಸ್ಥಾವರದೇವರಲ್ಲ, ಜಂಗಮಜಾತಿವಾಚಕವಲ್ಲ: ಅದರ ಕಂದಾಚಾರವೇ ಧರ್ಮದ್ರೋಹ”-ಡಾ. ಸತೀಶ ಕೆ. ಇಟಗಿ

ಶರಣ ಸಂಗಾತಿ “ಸ್ಥಾವರದೇವರಲ್ಲ, ಜಂಗಮಜಾತಿವಾಚಕವಲ್ಲ: ಅದರ ಕಂದಾಚಾರವೇ ಧರ್ಮದ್ರೋಹ”- ಡಾ. ಸತೀಶ ಕೆ. ಇಟಗಿ “ಜಂಗಮ” ಎಂಬ ಪದವು ಸಂಸ್ಕೃತ ಮೂಲದಾಗಿದ್ದು, ಕನ್ನಡದಲ್ಲಿ ಚಲಿಸುವ, ನಡುಗುವ ರ‍್ಥದಲ್ಲಿ ಬಳಕೆಯಾಗುತ್ತದೆ. ಶಿವ ಅಥವಾ ಚಲಿಸುವ ಶಿವಸ್ವರೂಪ ಎಂಬ ರ‍್ಥದಲ್ಲಿ ಉಲ್ಲೇಖವಾಗುತ್ತದೆ. ಜಂಗಮರು ಎಂದರೆ ಶಿವಭಕ್ತರಾದ ಸಾಧುಗಳು ಅಥವಾ ಲಿಂಗಾಯತ ಪಂಥದ ಧರ‍್ಮಿಕ ಗುರುಗಳು, ಅವರು ತಾವು ಧರಿಸುವ ಇಷ್ಟಲಿಂಗದ ಮೂಲಕ ಶಿವನನ್ನು ಪ್ರತಿಪಾದಿಸುತ್ತಾರೆ. ಜಂಗಮನು ಸಜೀವ ಶಿವನ ಪ್ರತೀಕ. ಬಸವಾದಿ ಪ್ರಮಥರ ಪ್ರಕಾರ, “ಜಂಗಮ ಪದದ ವಿಶೇಷ ವ್ಯಾಖ್ಯಾನವು ಬಹುಮಾನ್ಯವಾಗಿದೆ. ಈ ವ್ಯಾಖ್ಯಾನವು ವಿಶೇಷವಾಗಿ ವಚನ ಸಾಹಿತ್ಯ ಮತ್ತು ಶರಣ ಪರಂಪರೆಯೊಂದಿಗೆ ಸಂಬಂಧ ಹೊಂದಿದೆ,”ಗಮ” ಎಂದರೆ ಹೋಗು, ಚಲನೆ. “ಜಂಗಮ” ಎಂದರೆ ಚಲಿಸುವ, ಅಲೆದಾಡುವ, ಸ್ಥಿರವಲ್ಲದ. ಅಲ್ಲಲ್ಲಿ ಅಲೆದಾಡುತ್ತಾ, ಇಷ್ಟಲಿಂಗವನ್ನು ಧರಿಸಿ, ಶಿವದರ‍್ಶನವನ್ನು ಪಸರಿಸುವ ಶ್ರೇಷ್ಠ ವ್ಯಕ್ತಿ. ಇನ್ನು ಕೆಲ ಕಡೆ “ಜಂಗಮ” ಎಂಬ ಶಬ್ದವನ್ನು ಶಿವನ ಚರ ರೂಪಕ್ಕೂ ಉಪಯೋಗಿಸುತ್ತಾರೆ.ಮೂರು ಲಿಂಗಗಳು:೧ಇಷ್ಟಲಿಂಗ: ವ್ಯಕ್ತಿಯ ಹೃದಯದಲ್ಲಿ ಧ್ಯಾನಿಸುವ ದೇವರೂಪ.೨.ಪ್ರಾಣಲಿಂಗ: ಶ್ವಾಸ, ಜೀವನ ಶಕ್ತಿ.೩.ಜಂಗಮಲಿಂಗ: ಭಕ್ತಿಗೆ ಪಾಠ ಮಾಡುವ ಜೀವಂತ ಜಂಗಮ.ಜಂಗಮರು ಸಮಾಜದಲ್ಲಿ ಸನ್ಯಾಸಿಗಳಂತೆ ಭ್ರಮಣ ಮಾಡುತ್ತಿದ್ದರು. ತತ್ವ ಬೋಧನೆ, ಧರ‍್ಮ ಪ್ರಚಾರ, ದಾನ ಸ್ವೀಕಾರ ಮುಂತಾದ ಕರ‍್ಯಗಳಲ್ಲಿ ತೊಡಗಿದ್ದರು. ಇವರು ಆಚಾರ-ವಿಚಾರ, ಶುದ್ಧ ಜೀವನ, ಸಮಾನತೆಯ ತತ್ವಗಳಿಗೆ ಬದ್ಧರಾಗಿದ್ದರು. ಬಸವಣ್ಣ ಮತ್ತು ಇತರ ಶರಣರು “ಜಂಗಮ” ಎಂಬ ಪದಕ್ಕೆ ಆಧ್ಯಾತ್ಮಿಕ ಮತ್ತು ತಾತ್ವಿಕ ರ‍್ಥ ನೀಡುತ್ತಾರೆ. ಇದನ್ನು ಅವರು ದೈಹಿಕ ಚಲನೆಗಿಂತ ಹೆಚ್ಚಾಗಿ ಒಂದು ಧರ‍್ಮಿಕ ಹಾಗೂ ತತ್ತ್ವಜ್ಞಾನದ ದೃಷ್ಟಿಕೋನದಿಂದ ವಿವರಣೆ ಮಾಡುತ್ತಾರೆ. “ಜಂಗಮವು ಸ್ಥಾವರವಲ್ಲ, ಜಡವಲ್ಲ; ಜ್ಞಾನದಿಂದ ಜೀವನವಂತಾಗಿರುವ ಶಿವಸ್ವರೂಪ.”. ಇಷ್ಟಲಿಂಗವನ್ನು ಧರಿಸಿ, ತನ್ನ ಜೀವನವನ್ನು ಶಿವಭಕ್ತಿಗೆ ಮೀಸಲಿಟ್ಟ ವ್ಯಕ್ತಿ. ಜಂಗಮನು. ಅಹಂಕಾರವಿಲ್ಲದ, ವೈರಾಗ್ಯವಿರುವ, ಶುದ್ಧ ಚರಿತ್ರೆಯುಳ್ಳ, ಜನಸೇವೆಗೆ ತೊಡಗಿದ ಶರಣ. ಜಂಗಮ. ಸಮಾಜದಲ್ಲಿ ತಿರುಗಿ, ರ‍್ಮಬೋಧನೆ ಮಾಡುವ ಚಲಿಸುವ ದೇವರು. ಸ್ಥಾವರ ದೈವ ಅಲ್ಲ, ಜಂಗಮವೇ ದೈವ”, ಅಂದರೆ ಶಿವ ರ‍್ಭಗುಡಿ, ದೇವಸ್ಥಾನದಲ್ಲಿ ಇರದೆ, ಚಲಿಸುವ ವ್ಯಕ್ತಿಯಲ್ಲಿಯೇ ದೇವರ ತತ್ವವಿದೆ ಎಂಬ ಬಸವಣ್ಣನವರ ತತ್ತ್ವ.“ಸ್ಥಾವರವು ದೈವವಲ್ಲ, ಜಂಗಮವೇ ದೈವಸ್ಥಾವರ ಪೂಜಿಸಿ ಪಾಪ ಹರವುದೆ?ಜಂಗಮ ಸೇವಿಸಿ ಪಾವನರಾಗುವುದೆ?-ಕೂಡಲಸಂಗಮದೇವಾ”ಈ ವಚನದಲ್ಲಿ ಬಸವಣ್ಣನು ಸ್ಥಾವರ (ಸ್ಥಿರವಾದ ವಸ್ತುಗಳು) ಮತ್ತು ಜಂಗಮ (ಚಲಿಸುವ, ಜೀವಂತ) ಎಂಬ ಎರಡು ತತ್ತ್ವಗಳನ್ನು ಹೋಲಿಸಿ, ಶರಣ ರ‍್ಮದ ಅಂತರಂಗ ತತ್ತ್ವವನ್ನು ನಿರೂಪಿಸುತ್ತಾನೆ. “ಸ್ಥಾವರಕ್ಕು ದೈವವಲ್ಲ”, ದೇವರನ್ನು ಕಲ್ಲಿನಲ್ಲಿ, ಮರ‍್ತಿಯಲ್ಲಿ, ದೇವಾಲಯದ ಗೋಡೆಗಳಲ್ಲಿ ಹುಡುಕುವುದು ನಿಷ್ಪ್ರಯೋಜಕ. ಅಲ್ಲಿ ಜಡತೆಯಿದೆ, ಚೇತನವಿಲ್ಲ. ತತ್ತ್ವಜ್ಞಾನ, ಸತ್ಪ್ರವೃತ್ತಿ, ಸತ್ಯಾಚರಣೆ, ಭಕ್ತಿಶ್ರದ್ಧೆ ಇಷ್ಟಲಿಂಗ ಧರಿಸಿದ ವ್ಯಕ್ತಿ ಆತನೆ ಸಜೀವ ದೇವರು. ಅಂತಹ ವ್ಯಕ್ತಿಯ ಸೇವೆ, ಸತ್ಸಂಗ, ಅವರ ಮರ‍್ಗರ‍್ಶನ ಇವೇ ನಿಜವಾದ ದೇವಪೂಜೆ. “ಸ್ಥಾವರ ಪೂಜಿಸಿ ಪಾಪ ಹರವುದೆ?” -ಕಲ್ಲಿನ ಮರ‍್ತಿಗೆ ಪೂಜೆ ಮಾಡುವುದು ಪಾಪ ಪರಿಹಾರಕ್ಕೆ ಕಾರಣವಾಗದು, ಯಾಕಂದರೆ ಅದು ಚೈತನ್ಯವಿಲ್ಲದ ಜಡ ವಸ್ತು. “ಜಂಗಮ ಸೇವಿಸಿ ಪಾವನರಾಗುದೆ?” – ಜಂಗಮನ ಸೇವೆ (ಅಥವಾ ಜ್ಞಾನಿಗಳ ಜೊತೆಗಿನ ಸತ್ಸಂಗ, ಶ್ರದ್ಧಾ) ನಮಗೆ ಪವಿತ್ರತೆಯನ್ನು ನೀಡುತ್ತದೆ. ಆತ್ಮಶುದ್ಧಿಗೆ ದಾರಿ ಒದಗಿಸುತ್ತದೆ.ಜಂಗಮ ಜಾತಿ ವಾಚಕವೇ:ಮೂಲತಃ ಜಂಗಮ ಎನ್ನುವುದು ಜಾತಿವಾಚಕ ಅಲ್ಲ. ಜಂಗಮ ಎಂಬ ಪದವು ಮೊದಲು ಆಧ್ಯಾತ್ಮಿಕ ಸ್ಥಿತಿಯನ್ನು ಸೂಚಿಸುವ ತಾತ್ವಿಕ ಶಬ್ದವಾಗಿತ್ತು, ಜಾತಿಯನ್ನಲ್ಲ. ಆದರೆ… ಇತಿಹಾಸದಲ್ಲಿ ಕೆಲ ವಂಶಗಳು, ಮಠಗಳಿಗೆ ಮತ್ತು ರ‍್ಮಸೇವೆಗೆ ನಿರಂತರವಾಗಿ ಸಲ್ಲಿಸಿದವರ ವಂಶಾವಳಿಗೆ “ಜಂಗಮ” ಎಂಬ ಪದವು ಪರಂಪರೆಯ ಗುರುತ್ವದವಾಗಿ ಬಳಕೆಯಾಗತೊಡಗಿತು. ಈ ಕಾರಣದಿಂದ ಕೆಲವರು ಜಂಗಮರನ್ನು ಜಾತಿ/ರ‍್ಗ ಎಂದು ಪರಿಗಣಿಸುತ್ತಾರೆ. ಇದು ಸಾಂಸ್ಕೃತಿಕ, ಸಾಮಾಜಿಕ ಬಳಕೆ, ರ‍್ಮ ತಾತ್ವಿಕ ರ‍್ಥವಲ್ಲ. ಶರಣರ ನುಡಿಗಳ ಪ್ರಕಾರ “ಜಾತಿ ಇಲ್ಲ, ಭೇದ ಇಲ್ಲ, ಶುದ್ಧ ಭಕ್ತಿಯ”ಜಂಗಮ ಎಂದರೆ ಶಿವನ ದೂತ, ಎಲ್ಲರಿಗೂ ಸಮಾನ. ವಂಶಪಾರಂರ‍್ಯ ಜಂಗಮ, ಗುರು, ದೀಕ್ಷಿತ ವಂಶಪಾರಂರ‍್ಯ ಜಂಗಮ. ತಾವು ಆಧ್ಯಾತ್ಮಿಕ ಗುರುಕುಲದಿಂದ ಬಂದವರು ಎಂಬ ನಂಬಿಕೆಯುಳ್ಳ ಕುಟುಂಬಗಳು, ಜಂಗಮ ಜಾತಿವಾಚಕವಲ್ಲ. ಆದರೆ “ಜಂಗಮ” ಎಂಬುದು ವೈಯಕ್ತಿಕ ರ‍್ಹತೆ ಆಧಾರಿತ ಪದವಾಗಿದೆ. ಅಂದರೆ, ಜಂಗಮತ್ವವು ವ್ಯಕ್ತಿಯ ಔಪಚಾರಿಕ ಜಾತಿಯಿಂದ ಬರುವುದಿಲ್ಲ. ಅವನು ನರ‍್ಜಾತೀಯ, ಶುದ್ಧ ಚರಿತ್ರೆ, ಲಿಂಗಧಾರಿ, ಆತ್ಮಸಾಧನೆ ಮಾಡಿದವನೇ ಜಂಗಮ. “ಜಾತಿ ಬೇರೆ ಭಕ್ತಿ ಬೇರೆ ಎನಿಸಿದರೆ, ಅವನು ಶಿವನಲ್ಲ”, ಬಸವಣ್ಣ ಹೇಳುತ್ತಾರೆ, ಎಲ್ಲ ಶರಣರು ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳ ಮಾಚದೇವರು ವಿಭಿನ್ನ ಜಾತಿಗಳಿಂದ ಬಂದಿದ್ದರೂ, ಜಂಗಮತ್ವಕ್ಕೆ ರ‍್ಹರಾದರು. ಅವರಿಗೆ “ಜಂಗಮ” ಎಂಬ ಹುದ್ದೆ ಲಭಿಸಿದ್ದು, ಅವರ ಆತ್ಮಸಾಧನೆ, ಭಕ್ತಿ, ಲಿಂಗಪೂಜಾ ನಿಷ್ಠೆಯಿಂದ, ಜಾತಿಯಿಂದಲ್ಲ.ಐತಿಹಾಸಿಕ ಹಿನ್ನೆಲೆ:ಆಂಧ್ರಪ್ರದೇಶದಲ್ಲಿ ಮಲ್ಲಕಾರ್ಜುನ ಪಂಡಿತರಾಧ್ಯ ಎಂಬ ಶೈವ ಪಂಥದ ಪ್ರತಿಪಾದಕನಿದ್ದ. ಕಲ್ಯಾಣದ ವಚನ ಚಳುವಳಿ ಮತ್ತು ಶರಣ ತತ್ವದ ಬೆಳವಣಿಗೆ ಗಮನಿಸಿ, ಬೆರಗಾಗಿ ತನ್ನ ಶೈವ ತತ್ವ ಕೈಬಿಟ್ಟು, ಲಿಂಗಾಯತ ಜಂಗಮನಾದ. ಅದೇ ಸಂದರ್ಭದಲ್ಲಿ ಕಲ್ಯಾಣದಿಂದ ತೆಲುಗು ಭಾಷೆಯ ಪ್ರದೇಶದ ಕಡೆಗೆ ವಚನ ಪ್ರಚಾರ ಮತ್ತುಲಿಂಗಾಯತ ತತ್ವ ಪ್ರಸಾರಕ್ಕಾಗಿ ಸ್ವತಃ ಬಸವಣ್ಣನವರೆ ಕೆಲವು ಸಾದಕರನ್ನು ನೇಮಿಸಿದ್ದರು. ಅವರ ಕಾಲಿಗೆ ಜಂಗ್ (ಗೆಜ್ಜೆ) ಕಟ್ಟುತ್ತಿದ್ದರು. ಸದ್ದು ಮಾಡುತ್ತ ಮನೆಯಿಂದ ಮನೆಗೆ ಸಂಚರಿಸಿ ಭಕ್ತರು ಭಸ್ಮ ಧಾರಣೆ ಮತ್ತು ಲಿಂಗ ಧಾರಣೆ ಮಾಡಿದ್ದನ್ನು ಪರಿಕ್ಷೀಸುವುದು ಅವರ ಕಾಯಕವಾಗಿತ್ತು. ಅವರನ್ನೇ ಸಾರುವ ಐನಾರು, ಕಂಬಿ ಐನಾರು, ಜಂಗಿನ ಐನಾರು ಎಂದು ಕರೆಯಲಾಯ್ತು. ಕ್ರಮೇಣ ಅಂತಹ ಮನೆತನದವರನ್ನು ಓದುಸುಮಠ, ಭಿಕ್ಷÄಮಠ, ಸಾಲಿಮಠ, ಹಿರೇಮಠ ಎಂದೆಲ್ಲಾ ಪರಿವರ್ತಿಸಲಾಯಿತು. ಅವರುಗಳ ಮನೆಯಲ್ಲಿ ಬಸಯ್ಯ, ಮಡಿವಾಳಯ್ಯ, ಚನ್ನಯ್ಯ, ಶರಣಯ್ಯ, ಪ್ರಭಯ್ಯ, ಪ್ರಭುಸ್ವಾಮಿ, ಚನ್ನಬಸವಯ್ಯ, ಸಿದ್ದಯ್ಯ, ಸಿದ್ದಲಿಂಗಯ್ಯ, ಸಿದ್ರಾಮಯ್ಯ, ಮುಂತಾದ ಹೆಸರುಗಳ ನಾಮಕರಣ ಸಂಸ್ಕೃತಿ ಬೆಳೆಯಿತು. ಇಂದಿಗೂ ಬಹುತೇಕ ಜಂಗಮ ಕುಟುಂಬಗಳ ಮನೆ ದೇವರು (ಕುಲದೇವರು) ಉಳುವಿ, ಎಡೆಯೂರು, ಗುಡ್ಡಾಪುರ, ಸೊನ್ನಲಗಿ, ಮಲೈಮಹದೇಶ್ವರ ಎಂಬ ಪುಣ್ಯಕ್ಷೇತ್ರಗಳಾಗಿವೆ. ಅಂದರೆ ಕಲ್ಯಾಣ ಕ್ರಾಂತಿಯ ಬಳಿಕ ಬಹುತೇಕ ಜಂಗಮರು ಬಸವಾದಿ ಶರಣರನ್ನು ತಮ್ಮ ಕುಲದ ಗುರುಗಳನ್ನಾಗಿ ಸ್ವೀಕರಿಸಿ ಆರಾಧಿಸ ತೊಡಗಿದರು. ಅವರಲ್ಲಿ ಪ್ರಮುಖರೆಂದರೆ ಕಲ್ಬುರ್ಗಿ ಶರಣ ಬಸವೇಶ್ವರರು, ನಾಲತ್ವಾಡದ ವಿರೇಶ ಶರಣರು, ಅಥಣಿ ಶಿವಯೋಗಿಗಳು, ಧಾರವಾಡದ ಮೃತ್ಯಂಜಯ ಅಪ್ಪಗಳು, ಚಿತ್ತರಗಿ ವಿಜಯ ಮಹಾಂತೇಶ್ವರರು, ಕೊಲ್ಹಾಪುರದ ಕಾಡಸಿದ್ದೇಶ್ವರರು, ಗದಗ ತೋಂಟದಾರ್ಯರು, ಹುಬ್ಬಳ್ಳಿ ಮೂರುಸಾವಿರ ಮಠದ ಗುರು ಪರಂಪರೆ ಸೇರಿದಂತೆ ಬಹುತೇಕರು ಮೂಲತಃ ಜಂಗಮರಾಗಿದ್ದರೂ ಬಸವಾದಿ ಶರಣರ ತತ್ವವನ್ನು ಆರಾಧಿಸುವವರಾಗಿದ್ದಾರೆ.“ಬರಿಯ ಬೋಳುಗಳೆಲ್ಲಾ ಜಂಗಮವೆ?ಜಡಜೀವಿಗಳೆಲ್ಲಾ ಜಂಗಮವೆ?ವೇಷಧಾರಿಗಳೆಲ್ಲಾ ಜಂಗಮವೆ?ಇನ್ನಾವುದು ಜಂಗಮವೆದಡೆ;ನಿಸ್ಸೀಮನೆ ಜಂಗಮ,ನಿಜೈಕ್ಯನೆ ಜಂಗಮ,ಇAಥ ಜಂಗಮದ ಸುಳುಹ ಕಾಣದೆ,ಕೂಡಲ ಚನ್ನಸಂಗಮದೆವ ತಾನೆ ಜಂಗಮನಾದ”-ಅವಿರಳಜ್ಞಾನಿ, ಚನ್ನಬಸವಣ್ಣಜಂಗಮರು ಎಂಬವರು ಭಾರತೀಯ ಲಿಂಗಾಯತ ರ‍್ಮದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ತತ್ವ, ಜೀವನ ಶೈಲಿ, ಸಮಾಜ ಸೇವೆಯ ಮೂಲಕ ಅವರು ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ. ಜಂಗಮ ಪರಂಪರೆ ಲಕ್ಷಾಂತರ ರ‍್ಷಗಳ ಹಿಂದೆಯೇ ಆರಂಭವಾಯಿತು ಎಂಬ ನಂಬಿಕೆ ಇದೆ. ಲಿಂಗಾಯತ ರ‍್ಮದ ಪ್ರಕಾರ ಬಸವಣ್ಣ, ಅಕ್ಕ ಮಹಾದೇವಿ, ಚನ್ನಬಸವಣ್ಣ, ಇವರು ಜಂಗಮ ಪರಂಪರೆಯ ಮಹತ್ವವನ್ನು ಗಟ್ಟಿಯಾಗಿ ಸಾರಿದರು. ೧೨ನೇ ಶತಮಾನದಲ್ಲಿ ಬಸವಣ್ಣನೇ ಜಂಗಮ ಪರಂಪರೆಯ ಸಾರಥಿಯಾಗಿದ್ದು, ಜಂಗಮರ ಹೆಗ್ಗುರುತು ನೀಡಿದರು. ಅವರು ಜಂಗಮರನ್ನು ಶಿವನ ಜೀವಂತ ರೂಪವೆಂದು ಪರಿಗಣಿಸಿದರು. ದರ‍್ಬಲರಿಗೆ ರ‍್ಮೋಪದೇಶ ನೀಡುವ ಕರ‍್ಯ ಮಾಡಿದರು. ಸಮಾನತೆಯ ಸಂದೇಶ ಸಾರಿದರು. ಹಲವಾರು ಜಂಗಮ ಮಠಗಳು ರ‍್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಉತ್ತರ ಭಾರತದ ಭಾಗಗಳಲ್ಲಿ ಸ್ಥಾಪಿತವಾದವು. ಈ ಮಠಗಳು ಶಿಕ್ಷಣ, ಧರ‍್ಮಿಕ ಆಚರಣೆ ಮತ್ತು ಸಮಾಜ ಸೇವೆಯ ಕೇಂದ್ರಗಳಾಗಿದ್ದವು. ವಚನಕಾರರು ತಮ್ಮ ವಚನಗಳಲ್ಲಿ ಜಂಗಮರ ಮಹಿಮೆ, ಪಾತ್ರ, ಸಿದ್ಧಾಂತಗಳನ್ನು ಪ್ರಶಂಸಿಸಿದ್ದಾರೆ. ಜಂಗಮರನ್ನು ರ‍್ಶನ ಮಾಡಿದವನು ಶಿವನನ್ನು ಕಂಡವನಂತೆ ಎಂದು ಹಲವಾರು ವಚನಗಳು ನುಡಿದಿವೆ. ಜಂಗಮರು ಜಾತಿ ಭೇದ, ಲಿಂಗ ಭೇದ, ಶ್ರೇಣಿಭೇದಗಳ ವಿರೋಧ ಮಾಡಿ ಸಮಾನತೆಯ ಸಂದೇಶ ಸಾರಿದರು. ಅವರು ಯಾವುದೇ ಭಿನ್ನತೆ ಇಲ್ಲದೆ ಎಲ್ಲರ ಮನೆಗಳಿಗೆ ಹೋಗಿ ಶಿವತತ್ವ ಸಾರಿದವರು.ಉತ್ತರ ಕರ‍್ನಾಟಕ ಮತ್ತು ಆಂಧ್ರದ ಕೆಲವು ಪ್ರದೇಶಗಳಲ್ಲಿ “ಬಸಳ ಜಂಗಮ”ಎಂಬ ಶಾಖೆ ಇದೆ. ಇವರು ಮಠ ಸೇವೆಗೆ ಮತ್ತು ಧರ‍್ಮಿಕ ಕರ‍್ಯಗಳಿಗೆ ಬದ್ಧರಾಗಿರುತ್ತಾರೆ. ಪಂಚಮಸಾಲಿ ಸಮುದಾಯದಲ್ಲಿ ಕೆಲವರೆಗೆ ಜಂಗಮ ಸೇವೆಯ ಪರಂಪರೆಯ ಹಿನ್ನಲೆ ಇದೆ. ಕೆಲ ಭಾಗಗಳಲ್ಲಿ “ಬಂಟನಾಡು ಜಂಗಮರು” ಎಂಬ ಪ್ರತ್ಯೇಕ ಗುರುಕುಲ ಪ್ರಚಾರದಲ್ಲಿದೆ. ತೆಲಂಗಾಣ, ಆಂಧ್ರಪ್ರದೇಶದಲ್ಲಿ “ವೀರಶೈವ ಜಂಗಮರು” ತಮ್ಮನ್ನು ಪ್ರತ್ಯೇಕ ಗುಂಪಾಗಿ ಗುರುತಿಸಿಕೊಂಡಿದ್ದಾರೆ. ಇವರು ಪೂಜಾ, ಪಾಠ, ಲಿಂಗ ಧಾರಣೆ, ಹಾಗೂ ಗ್ರಾಮೋಪದೇಶಕಾರರಾಗಿರುತ್ತಾರೆ. ಈ ವಂಶಗಳು ಜಂಗಮ ಗುರುಗಳಿಗೆ ಸೇವೆ ಮಾಡಿದವರು ಅಥವಾ ಅವರ ವಂಶಜರು ತಮ್ಮನ್ನು “ಜಂಗಮ” ಎಂದು ಗುರುತಿಸಿಕೊಂಡಿದ್ದಾರೆ: ಸೋಲಾಪುರ, ನಾಂದೇಡ್, ಲಾತೂರ್ ಮುಂತಾದ ಕಡೆಗಳಲ್ಲಿ ವೀರಶೈವ ಜಂಗಮ ಎಂಬ ಪ್ರತ್ಯೇಕ ಗುಂಪು ಕಂಡುಬರುತ್ತದೆ. ಈ ವಂಶಗಳು “ಜಂಗಮ” ಎಂಬ ಪದವನ್ನು ತಮ್ಮ ಗುರುತಾಗಿ ಬಳಸಿದರೂ, ಜಾತಿ ಅಥವಾ ವಂಶ ಬದಲಾಗಿಸಿಕೊಂಡಿದ್ದಾರೆ.ಜಂಗಮ ಹೆಸರಿನಿಂದ ಕಂದಾಚಾರ:ಅಲ್ಲಮಪ್ರಭು, ಬಸವಣ್ಣ, ಚನ್ನಬಸವಣ್ಣ ಮತ್ತು ಇತರ ಶರಣರು ನಕಲಿ ಜಂಗಮರ ವಿರುದ್ಧ ತೀವ್ರ ಎಚ್ಚರಿಕೆ ನೀಡಿದ್ದಾರೆ. ಬಸವಣ್ಣ ಹೇಳುತ್ತಾರೆ, “ಜಂಗಮವೆಂಬ ಪೈಲಾಸಕ್ಕೆ ಹೊದಿದ ಬಡವನು, ಜಾತಿಯನು ಮರೆಯದೆ, ಪಾಡಿನಲ್ಲಿ ಉರುಳಿದನು,ಅವನನ್ನು ಭಕ್ತನೆಂಬುದು ದೋಷ.” ಈ ವಚನದ ತಾತ್ರ‍್ಯ: ಕೆಲವರು ಹೊರಗೆ ಜಂಗಮದ ವೇಷ ಧರಿಸಿ, ಒಳಗೆ ಅಹಂಕಾರ, ಕಾಮ, ಲೋಭ ಇತ್ಯಾದಿ ತೊಟ್ಟುಕೊಂಡಿರುವರು. ಅಂತಹವರು ಕಂದಾಚಾರ (ಅರ‍್ಮಾಚರಣೆ) ಮಾಡುತ್ತಿದ್ದರೆ, ಅವರಿಗೆ ‘ಜಂಗಮ’ ಪದ ಹಕ್ಕಾಗಿಲ್ಲ. ಕಂದಾಚಾರದಲ್ಲಿ ತೊಡಗಿರುವ ಜಂಗಮರು ಭಾವವಿಲ್ಲದ ಲಿಂಗಪೂಜೆ, ಹಣಕ್ಕೆ ರ‍್ಮ ಮಾರಾಟ, ಲೈಂಗಿಕ ದರ‍್ಬಳಕೆ, ದುರಾಚಾರ ಇವೆಲ್ಲ ಶರಣ ರ‍್ಮದಲ್ಲಿ ತೀವ್ರ ಅಪರಾಧ. ಶರಣ ತತ್ತ್ವದ ವಿರುದ್ಧ. ಶರಣ ಪರಂಪರೆ ಅವರಿಗೆ ಮಾನ್ಯತೆ ನೀಡುವುದಿಲ್ಲ. ಅಂತಹವರಿಂದ ದೂರವಿರಬೇಕು. “ಜಂಗಮ” ಎಂಬ ಹೆಸರಿನಲ್ಲಿ ಹಣ, ಶೋಷಣೆ ಮಾಡುತ್ತಿರುವ ಸ್ಥಿತಿಗಳು ಕಂಡುಬರುತ್ತಿವೆ. ಇದು ರ‍್ಮ ದ್ರೋಹವೇ ಸರಿ. ಜಂಗಮ ಎಂಬ ಪದವನ್ನು ದುರುಪಯೋಗಪಡಿಸಿಕೊಂಡು, ಕಂದಾಚಾರದ ಅಪರಾಧಗಳಲ್ಲಿ ತೊಡಗಿರುವವರು ಶರಣ ರ‍್ಮದ, ಬಸವ ತತ್ತ್ವದ, ಲಿಂಗಾಯತ ಪರಂಪರೆಯ ಶತ್ರುಗಳೇ ಆಗಿದ್ದಾರೆ. ಜಂಗಮ ಎಂದು ಹೇಳಿಕೊಂಡು ಪಾದಪೂಜೆ, ಪಲ್ಲಕ್ಕಿ ಉತ್ಸವ, ಹಣ ವಸೂಲಿಗಳು ಶರಣ ರ‍್ಮದ ತತ್ತ್ವಕ್ಕೆ ವಿರುದ್ಧ. ಜಂಗಮನು ಕಪಟ ವಿರಹಿತ, ಲೋಭ ರಹಿತ, ಭಕ್ತರ ಸೇವಕ. ಜಂಗಮ ಪದವನ್ನು ಹೇಳಿಕೊಂಡು ಗೌರವ ಕೇಳಿಕೊಳ್ಳುವುದು ಸರಿಯಲ್ಲ. ನಿಜವಾದ ಜಂಗಮನು ಸ್ವಂತ ಏಳಿಗೆಗೆ ಅಲ್ಲ, ಭಕ್ತರ ಮರ‍್ಗರ‍್ಶನಕ್ಕಾಗಿರಬೇಕು. ಜಂಗಮನು ಭಕ್ತನ ಮನೆಗೆ ಬಂದು ಇಷ್ಟಲಿಂಗಕ್ಕೆ ಅನುಭವ ಬೋಧಿಸಬೇಕು. ಭಕ್ತನು ಹಣ ನೀಡಿದರೆ ಅದನ್ನು ಸ್ವೀಕರಿಸದಿರಬೇಕು. ಇಂದು ಜಂಗಮ ಎಂಬ ಪವಿತ್ರ ಪದವನ್ನು ವ್ಯಾಪಾರದಂತೆ ಬಳಸುತ್ತಿದ್ದಾರೆ. ಪಾದಪೂಜೆಗೆ ಪಾವತಿಸಬೇಕು, ಪಲ್ಲಕ್ಕಿಗೆ ಹಣ ನೀಡಬೇಕು. ಬಸವ ತತ್ತ್ವ, ಶರಣ ಸಂಪ್ರದಾಯ ಮತ್ತು ವಚನ ಸಾಹಿತ್ಯದಲ್ಲಿ ಜಾತಿವಾದ, ಬಾಹ್ಯಾಚಾರ, ಮರ‍್ತಿ ಪೂಜೆ, ಪಾದಪೂಜೆ ಎಲ್ಲವನ್ನೂ ತಿರಸ್ಕರಿಸಲಾಗಿದೆ. — . -ಡಾ. ಸತೀಶ ಕೆ. ಇಟಗಿಪತ್ರಿಕೋದ್ಯಮ ಉಪನ್ಯಾಸಕಅಂಚೆ: ಕೋಳೂರು-೫೮೬೧೨೯ತಾ: ಮುದ್ದೇಬಿಹಾಳ, ಜಿ: ವಿಜಯಪುರ (ಕರ್ನಾಟಕ ರಾಜ್ಯ)ಮೊ: ೯೨೪೧೨೮೬೪೨೨Email: satshitagi10@gmail.com,

“ಸ್ಥಾವರದೇವರಲ್ಲ, ಜಂಗಮಜಾತಿವಾಚಕವಲ್ಲ: ಅದರ ಕಂದಾಚಾರವೇ ಧರ್ಮದ್ರೋಹ”-ಡಾ. ಸತೀಶ ಕೆ. ಇಟಗಿ Read Post »

ನಿಮ್ಮೊಂದಿಗೆ

“ಎಳ್ಳು ಅಮಾವಾಸ್ಯೆಯ ಸಡಗರ” ಡಾ. ಮೀನಾಕ್ಷಿ ಪಾಟೀಲ

ಸಂಸ್ಕೃತಿ ಸಂಗಾತಿ ಡಾ. ಮೀನಾಕ್ಷಿ ಪಾಟೀಲ “ಎಳ್ಳು ಅಮಾವಾಸ್ಯೆಯ ಸಡಗರ” “ಎಳ್ಳಮ್ಮಾಸೆ “ ಜನಪದರ ದೇಸಿ ಮಾತಿನಲ್ಲಿ ಕರೆಯಲ್ಪಡುವ ಎಳ್ಳು ಅಮವಾಸೆ ಉತ್ತರ ಕರ್ನಾಟಕದ ರೈತರ ಹಬ್ಬ. “ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು” ಎಂಬ ನುಡಿ ಕೃಷಿಯ ಮಹತ್ವವನ್ನು ಕುರಿತು ಹೇಳುತ್ತದೆ. ಕೃಷಿ ಪ್ರಧಾನವಾದ ಭಾರತ ದೇಶದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೀತಿಯ ರೈತರ ಹಬ್ಬಗಳನ್ನು ಆಚರಿಸಲಾಗುತ್ತದೆ. ವೈವಿಧ್ಯಮಯವಾಗಿ ವಿಭಿನ್ನ ರೀತಿಯಲ್ಲಿ ರೈತರು ಭೂತಾಯಿಯ ಹಬ್ಬವನ್ನು ಮಾಡುತ್ತಾರೆ. ಇದು ಜನಪದರ ಹಬ್ಬ. ಹಿಂದಿನಿಂದಲೂ ಹಿರಿಯರು ಆಚರಿಸಿಕೊಂಡು ಬರುತ್ತಿರುವ ಈ ಹಬ್ಬ ನಮ್ಮ ಪರಂಪರೆ,ಸಂಸ್ಕೃತಿ, ನೆಲ,ಜಲ ಈ ಎಲ್ಲವುಗಳ ಪ್ರಾತಿನಿಧಿಕ ಆಚರಣೆಯಾಗಿದೆ. ಮಾರ್ಗಶಿರ ಮಾಸದ ಅಂದರೆ ಚಳಿಗಾಲದಲ್ಲಿ ಬರುವ ಅಮಾವಾಸ್ಯೆ ಹೊತ್ತಿಗೆ ರೈತರು ಎಳ್ಳಿನ ಸುಗ್ಗಿ ಮಾಡಿರುತ್ತಾರೆ. ಒಕ್ಕಲು ಮಾಡಿದ ಹೊಸ ಎಳ್ಳಿನ ಪದಾರ್ಥವನ್ನು ಮೊದಲು ಭೂತಾಯಿಗೆ ನೈವೇದ್ಯ ಅರ್ಪಿಸುವುದು ವಾಡಿಕೆ.  ರೈತ ಕುಟುಂಬಗಳ ಒಂದು ದೈವ ನಂಬಿಕೆಯು ಆಗಿದೆ. ಆ ಕಾರಣದಿಂದಲೋ ಎನೊ ಈ ಅಮಾವಾಸ್ಯೆಗೆ ಎಳ್ಳುಅಮಾವಾಸ್ಯೆಯೆಂದು ಹೆಸರು ಬಂದಿರಬಹುದು. ನಾವು ಪ್ರಕೃತಿಯನ್ನು ಹೆಣ್ಣಿಗೆ ಹೋಲಿಸುತ್ತೇವೆ. ಹೆಣ್ಣು ಫಲವಂತಿಕೆಯ ಒಡಲು ಹೊತ್ತವಳು. ಹಾಗೆ ಪ್ರಕೃತಿ ಕೂಡ ತನ್ನ ಒಡಲಿನಲ್ಲಿ ಸೃಷ್ಟಿಯನ್ನೇ ಹೊತ್ತವಳು. ಭೂಮಿ ಮತ್ತು ಹೆಣ್ಣು ಸೃಷ್ಟಿಕ್ರಿಯೆಯಲ್ಲಿ ಸಮಾನರು. ಹೆಣ್ಣು ತನ್ನ ಗರ್ಭದಲ್ಲಿ ಮಗುವನ್ನು ಹೊತ್ತು ಹೆತ್ತು  ಪಾಲನೆ ಪೋಷಣೆ ಮಾಡಿ ಸಲಹುತ್ತಾಳೆ. ಹಾಗೆ ಭೂಮಿ ಕೂಡ ಈ ಪ್ರಕ್ರಿಯೆಗೆ ಹೊರತಲ್ಲ. ತನ್ನ ಒಡಲಿನಲ್ಲಿ ಅಗಾಧವಾದ  ಬೆಳೆಗಳನ್ನು ತುಂಬಿಕೊಂಡು ಜಗಕೆ ಅನ್ನ ನೀಡುತ್ತಾಳೆ. ಭೂತಾಯಿಯನ್ನು ಹೆಣ್ಣೆಂದು ಭಾವಿಸಿಕೊಂಡು ಗರ್ಭ ಧರಿಸಿದ ಹೆಣ್ಣು ಮಕ್ಕಳಿಗೆ ಸೀಮಂತ ಕಾರ್ಯವನ್ನು ನೆರವೇರಿಸುವ ಹಾಗೆ ಭೂತಾಯಿಗೆ ಕೂಡ ಮಡಿಲು ತುಂಬುವ ಕಾರ್ಯ ಮಾಡುತ್ತಾರೆ. ಮುಂಗಾರಿನಲ್ಲಿ ಸೀಗೆ ಹುಣ್ಣಿಮೆ ಹಿಂಗಾರಿನಲ್ಲಿ ಎಳ್ಳು ಅಮಾವಾಸ್ಯೆಯನ್ನು ಸಾಂಪ್ರದಾಯಿಕವಾಗಿ ಭೂತಾಯಿಯ  (ಸೀಮಂತ ಕಾರ್ಯ)ಶುಭ ಕಾರ್ಯವನ್ನು ಚರಗದ ಹೆಸರಿನಲ್ಲಿ ಮಾಡುತ್ತಾರೆ..ಹಿಂಗಾರು ಬೆಳೆ ಕಾಳು ಕಟ್ಟುವ ಸಮಯದಲ್ಲಿ ( ಜೋಳ ಕಡಲೆ ಇತರೆ ಬೆಳೆಗಳು) ಬರುವ ಎಳ್ಳು ಅಮಾವಾಸ್ಯೆ ರೈತರ ಪಾಲಿಗೆ ವೈಭವದ ಆಚರಣೆ. ಪ್ರಾದೇಶಿಕ ಸೊಗಡಿನಿಂದ ಕೂಡಿದ ವಿಶಿಷ್ಟ ಪೂರ್ಣವಾದ ಒಂದು ಪರ್ವ. ಹಲವು ನಂಬಿಕೆ ಆಶಯಗಳೊಂದಿಗೆ ರೈತರು ನಿಸರ್ಗದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತಾರೆ. ಪ್ರಕೃತಿ ಮತ್ತದರ ಸಂಗತಿಗಳನ್ನು ಅತ್ಯಂತ ಭಾವನಾತ್ಮಕ ಮನಸ್ಸಿನಿಂದ ನೋಡುತ್ತಾರೆ. ಒಕ್ಕಲು ಮಕ್ಕಳು ಪರಂಪರಾಗತವಾಗಿ ರೂಢಿಸಿಕೊಂಡು ಬಂದ ವೃತ್ತಿ ಜೀವನದ ಒಂದು ಕ್ರಮವೂ ಹೌದು. ಅನ್ನ ನೀಡುವ ಭೂತಾಯಿಗೆ ಅಪಾರ ಗೌರವ ಪ್ರೀತಿಯನ್ನು ತೋರಿಸುತ್ತಾರೆ. ಭೂತಾಯಿಯ ಸಾಂಗತ್ಯದಲ್ಲಿ ಹತ್ತು ಹಲವು ಬಗೆಯ ಪೂಜಾ ವಿಧಿಗಳನ್ನು ಮಾಡುತ್ತಾರೆ. ಬಿತ್ತುವ ಮುನ್ನ ಕೂರಿಗೆ ಪೂಜೆ ಸಲ್ಲಿಸುವುದಾಗಲಿ , ಬೆಳೆ ಬೆಳೆದು ನಿಂತಾಗ ಚರಗದ ವಿಧಿ, ಮೇಟಿ ಕಂಬಕ್ಕೆ ಹಂತಿ ಹೂಡುವುದಾಗಲಿ, ಕಣದ ಪೂಜೆ ಸಲ್ಲಿಸುವುದಾಗಲಿ, ರಾಶಿಯನ್ನು ಚೀಲಕ್ಕೆ ತುಂಬುವಾಗಿನ ಪೂಜೆಯಾಗಲಿ ಇವೆಲ್ಲವೂ  ಒಕ್ಕಲು ಸಮೃದ್ಧಿಗೆ ಭೂತಾಯಿಯನ್ನು ಬೇಡಿಕೊಳ್ಳುವ ಪರಿಗಳೇ ಆಗಿವೆ. ಇವೆಲ್ಲದರ ಮಧ್ಯೆ ಹಚ್ಚ ಹಸುರಿನ ಬೆಳಗಳ  ಚರಗದ ಸಂಭ್ರಮವಂತು ಮಹಾಪರ್ವದಂತೆ ಕಾಣಿಸುತ್ತದೆ. ಬೆಳೆ ಬೆಳೆದು ನಿಂತ ಹೊಲದಲ್ಲಿ ಭೂತಾಯಿ ಬಯಕೆ ತೀರಿಸಲು ವಿವಿಧ ರೀತಿಯ ಭಕ್ಷ ಭೋಜನಗಳನ್ನು ತಯಾರಿಸುತ್ತಾರೆ. ಅಮಾವಾಸ್ಯೆಯ ಹಿಂದಿನ ದಿನ ಹೆಣ್ಣು ಮಕ್ಕಳು ರಾತ್ರಿ ಇಡೀ ಅಡುಗೆ ತಯಾರಿಸುವಲ್ಲಿ ನಿರತರಾಗುತ್ತಾರೆ. ಅಕ್ಕಪಕ್ಕದ ಮನೆಯ ಗೆಳತಿಯರು ಕೈಗೂಡಿಸುತ್ತಾರೆ. ಎಳ್ಳು ಶೇಂಗಾ ಬೆಲ್ಲ ಸೇರಿಸಿ ಮಾಡುವ ಹೋಳಿಗೆಗೆ ಅಗ್ರಸ್ಥಾನ. ಎಳ್ಳು ಅಮಾವಾಸ್ಯೆಗೆ ಎಳ್ಳು ಹೋಳಿಗೆ ಅನ್ವರ್ಥಕವಾಗಿರುತ್ತಿತ್ತು. ಹೂರಣದ ಹೋಳಿಗೆ ಕರಿಗಡಬು, ನೀರುಗಿಯಲ್ಲಿ ಬೇಯಿಸಿದ ಜೋಳ ಇಲ್ಲವೆ ಸಜ್ಜೆ ಕಡಬು.ಮೊಸರುಬಾನ,ಅನ್ನ,ಬೇಳೆ ಕಟ್ಟಿನ ಸಾರು (ಹೋಳಿಗೆ ಸಾರು) ನವಣಕ್ಕಿ ಅನ್ನ , ಮ್ಯಾಣದಂತೆ ಮಗುಚಿದ   ಹುಳಿ ಪುಂಡಿ ಪಲ್ಯ ಕುಚ್ಚಿದ ಹಸಿಮೆಣಸಿನಕಾಯಿ ಪಲ್ಯ,  ಚವಳಿ ಕಾಯಿ ಪಲ್ಯ ಐದು ಬಗೆಯ ದ್ವಿದಳ ಧಾನ್ಯಗಳನ್ನು ಕೂಡಿಸಿ ಮಾಡಿದ ಉದುರು ಕಾಳು ಪಲ್ಯ, ತುಂಬು ಬದನೆಕಾಯಿ, ಕೆನೆ ಮೊಸರು, ಕಾರೆಳ್ಳು, ಅಗಸಿಯ ಕಮ್ಮನೆಯ ಹಿಂಡಿ, ಎಳ್ಳು ಹಚ್ಚಿದ ಸಜ್ಜಿ ರೊಟ್ಟಿ, ಜೇನಿನಂತ ಕಂಚಿಕಾಯಿ ಉಪ್ಪಿನಕಾಯಿ…. ಲೆಕ್ಕವಿಲ್ಲದಷ್ಟು, ಭೋಜನ ಸಂಗೀತವೆಲ್ಲ, ಚುಮು ಚುಮು ಬೆಳಗಾಗುವುದರೊಳಗೆ ಸಿದ್ಧವಾಗುತ್ತಿತ್ತು. ಅತ್ತ ಗಂಡಸರು ನಸುಕಿನಲ್ಲೇ ಎದ್ದು ಎತ್ತುಗಳ ಮೈ ತೊಳೆದು ಅವುಗಳ ಮೈಗೆ ಒಂದಿಷ್ಟು ಬಣ್ಣ ಬಳಿದು ಕೋಡುಗಳಿಗೆ ಝೂಲಾವನ್ನು ಮತ್ತು ಬಣ್ಣದ ರಿಬ್ಬನ್ನು ಕಟ್ಟಿ ಅಲಂಕಾರ ಮಾಡುತ್ತಾರೆ. ಬಂಡಿಯನ್ನು ಸ್ವಚ್ಛಗೊಳಿಸಿ ಎತ್ತು ಮತ್ತು ಬಂಡಿಗೆ ಪೂಜೆ ನೆರವೇರಿಸುತ್ತಾರೆ.ಇತ್ತ ಹೆಣ್ಣು ಮಕ್ಕಳು ಅಡುಗೆ ಕೆಲಸ ಮುಗಿಸಿ ವಿಶೇಷವಾಗಿ ದೇಸಿ ಉಡುಗೆ ತೊಟ್ಟು (ಇಲಕಲ್ ಸೀರೆ ಉಟ್ಟುಕೊಂಡು) ಸಿಂಗಾರವಾಗುತ್ತಾರೆ. ಮಾಡಿದ ಅಡುಗೆಯನ್ನು ಒಂದೂ ಮರೆಯದೆ ದೊಡ್ಡ ಬಿದಿರಿನ ಬುಟ್ಟಿಯಲ್ಲಿ ಇಟ್ಟು ಅಡುಗೆ ಬುಟ್ಟಿಯನ್ನು ಪೂಜಿಸಿ ನಂತರ ಬಿಳಿ ಧೋತರದ ಅರಿವೆಯಲ್ಲಿ ಬುಟ್ಟಿಯನ್ನು ಇಟ್ಟು ಗಟ್ಟಿಯಾಗಿ ಕಟ್ಟಿ ಜೋಪಾನವಾಗಿ ತಂದು ಬಂಡಿಯಲ್ಲಿಡುತ್ತಾರೆ. ಮನೆಯ ಎಲ್ಲಾ ಹೆಣ್ಣು ಮಕ್ಕಳು, ಬಂಧು ಬಾಂಧವರು, ಮಕ್ಕಳು ಬಂಡಿಯಲ್ಲಿ ಹೊರಡುತ್ತಾರೆ. ಗುಡ್ಡಗಳ ದಾರಿ ಹಿಡಿದು ಎರೆ ಹೊಲದ ಕಡೆಗೆ ಎತ್ತುಗಳು ದಾರಿ ತುಳಿಯುತ್ತಿದ್ದಂತೆ ದಿಬ್ಬಣದ ವೈಭವದಂತೆ ಕಾಣುತ್ತದೆ.ಹೊಲದಲ್ಲಿ ದಟ್ಟ ಜೋಳದ ಬೆಳೆಯ ಮಧ್ಯೆ ತೆನೆ ತುಂಬಿದ ಐದು ಜೋಳದ ದಂಟುಗಳನ್ನು ಸೇರಿಸಿ ಕಟ್ಟಿ ಬುಡದಲ್ಲಿ ಐದು ಕಲ್ಲು ಅಥವಾ ಮಣ್ಣಿನ ಹೆಂಟೆಯನ್ನು ಇಟ್ಟು ಪಾಂಡವರ ಪೂಜೆ ಮಾಡುವರು (ಇದು ವನವಾಸದಲ್ಲಿದ್ದ ಪಾಂಡವರು ಕಷ್ಟಪಟ್ಟು ಕೃಷಿಗೈದ ನೆನಪಂತೆ) ಪೂಜೆಯ ನಂತರ ಮಾಡಿದ ಅಡುಗೆಯ ನೈವೇದ್ಯವನ್ನು ಇಡೀ ಹೊಲದ ತುಂಬ ಚರಗ ಚೆಲ್ಲುವ ವಿಧಿಯಾಚರಣೆ ಹುಲ್ಲುಲ್ಲಿಗೋ ……. ಚಲ್ಲಾಂಬರಿಗೋ ಎನ್ನುತ್ತಾ ಎಲ್ಲ ಅಡುಗೆ ಪದಾರ್ಥಗಳನ್ನು ಇಷ್ಟಿಷ್ಟು ಹೊಲದ ತುಂಬ ಚೆಲ್ಲಾಡುತ್ತ ನೀರನ್ನು ಸಿಂಪಡಿಸುತ್ತ ಭೂತಾಯಿ ಬಯಕೆಯನ್ನು ತೀರಿಸುತ್ತಾರೆ . ನಂತರ ಬನ್ನಿ ಗಿಡದ ಬುಡದಲ್ಲಿ ಲಕ್ಷ್ಮಿ ಪೂಜೆ ಮತ್ತು ಬನ್ನಿ ಗಿಡದ ಪೂಜೆ ನಡೆಯುತ್ತದೆ. ಎಲ್ಲ ಪೂಜಾ ವಿಧಿಗಳು ಮುಗಿದ ನಂತರ ಎಲ್ಲರೂ ಊಟಕ್ಕೆ ಕುಳಿತುಕೊಳ್ಳುವರು. ಮಾಡಿದ ಅಡುಗೆಯ ಪದಾರ್ಥಗಳು ತಾಟಿನಲ್ಲಿ (ತಟ್ಟೆ) ಸಾಲಲಾರದಷ್ಟು ಏನೇನು ತಿನ್ನುವುದು ಎಂಬ ಗೊಂದಲವಾಗುತ್ತದೆ. ಊಟದ ನಡುವೆ ಬಾಡಿಸಿಕೊಳ್ಳಲು ಅಲ್ಲೇ ಹೊಲದಲ್ಲಿಯೇ ಇದ್ದ ಹಸಿ ಉಳ್ಳಾಗಡ್ಡಿ, ಮೆಂತ್ಯ ಪಲ್ಯ, ಹತ್ತರಕಿಯನ್ನು ತಂದು ಇಡುವರು. ಹೀಗೆ ಹಿರಿಯರು ಬಂದು ಬಾಂಧವರು ಸ್ನೇಹಿತರು, ಮಕ್ಕಳು ಹರಟುತ್ತ ಸುಖ ದುಃಖ ಮಾತನಾಡುತ್ತಾ ಪರಸ್ಪರರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಸಂತೋಷದಿಂದ ನಗುನಗುತ್ತ ಊಟ ಮಾಡುತ್ತಾರೆ. ಊಟದ ನಂತರ ಮಕ್ಕಳೆಲ್ಲ ಸುಲಗಾಯಿ ಎಂದರೆ ಹಸಿ ಕಡಲೆಯನ್ನು ತಿನ್ನಲು ಓಡುವರು. ಮನೆಯ ಹೆಣ್ಣು ಮಕ್ಕಳೆಲ್ಲ ಜೋಳದ ಬೆಳೆಯ ಮಧ್ಯೆ ಬೆಳೆದ ಪುಟ್ಟಿ ಹಣ್ಣನ್ನು (ಸೌತೆ ಹಣ್ಣು) ಹುಡುಕಾಡುವ ನೆಪದಲ್ಲಿ ಇಡೀ ಹೊಲವನ್ನೆಲ್ಲ ಸುತ್ತಾಡಿ ಸುಲಗಾಯಿ ಪುಟ್ಟಿ ಹಣ್ಣು ಕಡಗಾಯಿ(ಕಸುಕಾದ ದೊಡ್ಡ ಸೌತೆಕಾಯಿ ಇದನ್ನು ಉಪ್ಪಿನಕಾಯಿ ಹಾಕಲು ಬಳಸುತ್ತಾರೆ) ಇವನ್ನೆಲ್ಲ ಸಂಗ್ರಹಿಸಿಕೊಂಡು ಬರುತ್ತಾರೆ. ಅಷ್ಟೊತ್ತಿಗೆ ಇಳಿ ಹೊತ್ತು.ಹೊತ್ತು ಜಾರುತ್ತಿದ್ದಂತೆ ಎತ್ತಿನ ಕೊರಳು ಕಟ್ಟುತ್ತಿದ್ದ ಯಜಮಾನನನ್ನ ನೋಡಿ ಎಲ್ಲರೂ ಬಂದು ಬಂಡಿಯಲ್ಲಿ ಕುಳಿತುಕೊಳ್ಳುತ್ತಾರೆ. ಚರಗದ ಸಂಭ್ರಮವನ್ನು ಮೆಲುಕು ಹಾಕುತ್ತಾ ಬೆಳೆಯ ಸಮೃದ್ಧಿಯ ನಿರೀಕ್ಷೆಯಲ್ಲಿ ಮತ್ತೊಂದು ಎಳ್ಳು ಅಮಾವಾಸ್ಯೆಯನ್ನು ಎದುರು ನೋಡುತ್ತ ಮನೆ ಕಡೆಗೆ ಹೆಜ್ಜೆ ಹಾಕುತ್ತಾರೆ. ಡಾ. ಮೀನಾಕ್ಷಿ ಪಾಟೀಲ

“ಎಳ್ಳು ಅಮಾವಾಸ್ಯೆಯ ಸಡಗರ” ಡಾ. ಮೀನಾಕ್ಷಿ ಪಾಟೀಲ Read Post »

You cannot copy content of this page

Scroll to Top