ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ “ಅಕ್ಕ ,ನೀನು ಮಹಾದೇವಿ”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಅಕ್ಕ ,ನೀನು ಮಹಾದೇವಿ” 12ರ ಶತಮಾನದಲ್ಲಿ ಉದಯಿಸಿಹೆಣ್ಣು ಕುಲಕ್ಕೆ ಮಾದರಿಯಾಗಿಹತ್ತು ಹಲವು ಕಷ್ಟಗಳನ್ನು ಸರಿಸಿದಿಟ್ಟ ಹೆಜ್ಜೆ ಇಟ್ಟು ಮುನ್ನಡೆದಿ ಅಕ್ಕ// ಯಾರ ಮಾತಿಗೂ ಕಿವಿಗೊಡದೆಯಾರ ಹಂಗಿಗೂ ಒಳಗಾಗದೆಯಾರ ಆಸರೆಯನ್ನು ಬಯಸದೆಚನ್ನಮಲ್ಲಿಕಾರ್ಜುನನ್ನು ಅರಸಿದೆ ಅಕ್ಕ// ಅರಮನೆ ಅರಸನನ್ನು ಬದಿಗಿರಿಸಿಲೌಕಿಕಸುಖ ಸಂಪತ್ತನ್ನು ಧಿಕ್ಕರಿಸಿಜಗದ ಜಂಜಾಟವ ಹಿಂಗಳಿಸಿಅರಸುತ್ತ ನಡೆದೆ ಅಕ್ಕ// ಅಲ್ಲಮನ ಅಧ್ಯಕ್ಷತೆಯಲ್ಲಿಬಸವಣ್ಣನ ಅನುಭವತೆಯಲ್ಲಿನೀ ಅರಸಿ ಶರಣರ ಸಂಗಡದಲ್ಲಿಕಲ್ಯಾಣದ ಕಾಶಿಗೆ ತೆರಳಿದೆ ಅಕ್ಕ// ಆಶೆ ಆಕಾಂಕ್ಷೆಯನ್ನು ಬದಿಗಿಟ್ಟುಸುಖ ಸುಪ್ಪತ್ತಿಗೆಯನ್ನು ಸರಿಸಿಟ್ಟುಚೆನ್ನಮಲ್ಲಿಕಾರ್ಜುನನ್ನು ಅರಸುತ್ತಾಕದಳಿವನ ಕಾಲಿಟ್ಟು ಲಿಂಗೈಕ್ಯಾದೆ ಅಕ್ಕ// ವಿಜಯಲಕ್ಷ್ಮಿ ಹಂಗರಗಿ

ವಿಜಯಲಕ್ಷ್ಮಿ ಹಂಗರಗಿ “ಅಕ್ಕ ,ನೀನು ಮಹಾದೇವಿ” Read Post »

ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ನಿನ್ನೊಡನಾಟದ ಕಡಲ ಹಾಯ್ ದೋಣಿಯಲಿ ವಿಹರಿಸುವಾಸೆಸರಸ ಸಲ್ಲಾಪ ಸಖ್ಯ ಸವಿಯ ತೋಳ ಸೆರೆಯಲಿ ಮೈಮರೆವಾಸೆ ಬಾಹುಬಂಧನದಿ ಬಂಧಿಯಾಗಿ ಬಯಕೆ ತೊಟ್ಟಿಲಲಿ ತೂಗುವಾಸೆಓಡೋ ಮೋಡ ಮೆದ್ದೆ ಮೇಲಿಹ ಸ್ವರ್ಗ ಪಥದಲಿ ಪಯಣದಾಸೆ ಚುಕ್ಕಿತಾರೆ ಚಂದ್ರನೂರಿಗೆ ಇಂದ್ರನ ಬೆಳ್ಳಿ ರಥದಲಿ ಹೋಗುವಾಸೆಹೃದಯದ ಅರಮನೆಯ ಪುಟ್ಟ ಗರ್ಭ ಗುಡಿಯಲಿ ನಿದ್ರಿಸುವಾಸೆ ಪಚ್ಚೆ ಮಲ್ಲಿಯ ಹಚ್ಚಹಸುರಿನ ನಿನ್ನೆದೆ ಬನದಲಿ ಹೂವಾಗುವಾಸೆಶುಭ್ರ ಹೊಳಪಿನ ಹಂಸವಾಗಿ ಕಣ್ಣ ಕೊಳದಲಿ ಈಜಾಡುವಾಸೆ ಮೇಘಮಂದಾರದ ನಾದತರಂಗ  ವೀಣೆಯಲಿ ಹಾಡಾಗುವಾಸೆಭೃಂಗದೊಲವಿನ ಮಕರಂದದ ಸಿಹಿ ಜೇನಿನಲಿ ಜಿನುಗುವಾಸೆ ಹೊನ್ನಾಸೆ ಚಿತ್ತಾರದ ಬಣ್ಣ ಬಣ್ಣದೊಕುಳಿ ಬೆಡಗಲಿ ಮಿನುಗುವಾಸೆಪ್ರಣಯ ಪಕ್ಷಿಗಳಂತೆ ಬಾನಂಗಳದ ಬಯಲಲಿ ಹಾರಾಡುವಾಸೆ ಅನುಳ ಜನುಮದ ಗೆಳೆಯನೇ ತನುವ ತುಡಿತದಲಿ ಬಚ್ಚಿಡುವಾಸೆಮಂಪರಿನ ಪ್ರೇಮಾಮೃತದ ಹೊನ್ನ ಗಿಂಡಿಯಲಿ ನಶೆಯಾಗುವಾಸೆ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

ಕಥಾಗುಚ್ಛ

“ಏ ಭೇಟಾ ಸಬ್ಜಿ ಲೇ”ಡಾ. ರೇಣುಕಾ ಹಾಗರಗುಂಡಗಿ ಅವರ ಕಥೆ

ಕಥಾ ಸಂಗಾತಿ ಡಾ. ರೇಣುಕಾ ಹಾಗರಗುಂಡಗಿ “ಏ ಭೇಟಾ ಸಬ್ಜಿ ಲೇ” ಬೆಗಳಾಗುತ್ತಲೆ ಹೊರಗಡೆ “ಬೇಟಾ ಸಬ್ಜಿ ಲೇ” ಅಂತ ಕರೆಯುವ ಕೂಗಿನ ಧ್ವನಿಯ ಒಡತಿ ಹೀರಾ ನಿಜವಾಗಿಯೂ ಸೌಂದರ್ಯದ ಖಣಿಯೇ ಸರಿ.  ಸುಕ್ಕುಗಟ್ಟಿದ ಆಕೆಯ  ಚರ್ಮ,ಮುಖದ ತುಂಬೆಲ್ಲ ನೆರಿಗೆಗಳಿದ್ದರೂ ಚಿಕ್ಕಚಿಕ್ಕ ಕಣ್ಣುಗಳು ಮೀಟುಕಿಸುತ್ತ ಆ ಲಂಬಾಣಿಯ ಶ್ರೀಮಂತದ ಉಡುಪು ಅಲ್ಲಲ್ಲಿ ಸ್ವಲ್ಪ ತೇಪೆಹಚ್ಚಿದ್ದರು ನಾನಿಯ ಚೆಲುವಿನ ಮುಂದೆ ಯಾವದೂ ಲೆಕ್ಕಕ್ಕಿಲ್ಲ. ಅಂಥ ಸೌಂದರ್ಯವತಿ ಹೀರಾ ನಾನಿ.                ಇಳೆ ವಯಸ್ಸಿನಲ್ಲಿರುವ ಈ ತಾಯಿಗೆ ದುಡ್ಡಿನ ಅವಶ್ಯಕತೆಯಾದರೂ ಯಾಕೆ  ಅಂತ ನಾನು ಹಾಗೆ ತೆಲೆಕೆಡಿಸಿಕೊಳ್ಳುತ್ತಲೆ ಇರುವಾಗ  ನನ್ನ ಪಕ್ಕದ ಮನೆಯ ಮಗು ಹೇಳ್ತು ಆಂಟಿ ಈ ಅಜ್ಜಿನ ನೀವು ಯಾರಂತ ಭಾವಿಸಿರುವಿರಿ, ಅವರು ರೋಹಿತ್ ಅಣ್ಣನ ನಾನಿ ಅಂತ, ಅದಕ್ಕೆ ನಾನು ಮತ್ತೆ ಯಾಕೆ ಇವರು ಹೀಗೆ ಬರ್ತಾರೆ ಅಂತ ಥಟ್ಟನೆ ಕೇಳಿದ ನನ್ನ ಪ್ರಶ್ನೆಗೆ ಮಗು ಹೇಳ್ತು ಆ ಅಜ್ಜಿ ರೋಹಿತ್ ಅಣ್ಣನ ಮಮ್ಮಿ ಅವರ ಮಮ್ಮಿ. ಅವರ ಮಕ್ಕಳು ಅವರಿಗೆ ಮನೆಯಿಂದ ಹೊರ ದೂಡಿದ್ದಾರೆ ಅದಕ್ಕೆ ಅಜ್ಜಿ ಈಗ ಮಗಳ ಮನೆಯಲ್ಲಿದ್ದಾರೆ. ಹಾಗೆ ಯಾಕೆ ಬಿಟ್ಟಿಕೂಳ ತಿನ್ನೋದು ಅಂತ ಸಬ್ಜಿ ಮಾರ್ತಾರೆ ಎಂದು ಮಗು ಹೇಳ್ತಾ ಓಡಿಹೋಯಿತು.                ನನಗಂತೂ ತುಂಬಾ ಬೇಸರವಾಯಿತು. ಮಕ್ಕಳನ್ನ ಬೆಳೆಸೋದರಲ್ಲಿ  ಪಾಲಕರು ಎಲ್ಲಿ ಎಡವುತ್ತಿದ್ದಾರೆ ಅಂತ ಯೋಚಿಸುತ್ತಲೇ ಹಾಗೆ ಫ್ಲ್ಯಾಶ್ ಬ್ಯಾಕ್ ಹೋದೆ. ಇದು ಈ ಒಂದು ಮನೆಯ ಹೀರಾ ನಾನಿಯ ಕಥೆ ಅಲ್ಲ.ಹಿಂಥ ಅನೇಕ ಹೀರಾ ನಾನಿಯರು ಶ್ರೀಮಂತ, ಬಡವರೆನ್ನದೆ ಎಲ್ಲಡೆಯು   ಮೂಲೆಗುಂಪಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಕಾರಣವಾದರೂ ಏನು? ಅಂತ ಯೋಚಿಸುತ್ತಲೇ ಇರುವಾಗ ನೆನಪಾದದ್ದು ನಾನು ಕಂಡ ಒಂದು ಮಧ್ಯಮ ವರ್ಗದ ಕುಟುಂಬ. ಅಲ್ಲಿ ಆ ದಂಪತಿಗಳು ಮಕ್ಕಳಿಲ್ಲದೆ ಹರಕೆಯನ್ನ ಹೊತ್ತು ಹೆತ್ತ ಮಕ್ಕಳೆ ತಮ್ಮ ತಂದೆತಾಯಿಗೆ ಇಳೆ ವಯಸ್ಸಲ್ಲಿ ಕೊಟ್ಟ ಕಷ್ಟ ಅಷ್ಟಿಷ್ಟಲ್ಲ. ಸ್ವಾರ್ಥದ ಮದ, ಬಯಕೆಯ ಹುಚ್ಚಾಟ,ತಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತಿರುವುದನ್ನ ಮನಗಂಡು ಇಡೀ ಕುಟುಂಬವನ್ನೆ ಬಿರುಗಾಳಿಗೆ ಸಿಲುಕಿಸಿ  ಆಸ್ತಿ, ಅಂತಸ್ತು ಅಂತ ಮನೆ ಒಡೆಯುವ ಕಾರ್ಯಕ್ಕೆ ಮುಂದಾಗುತ್ತಾರೆ.   ತಮಗೆ ಬೇಕಾದ ಮಕ್ಕಳ ಪರವಹಿಸಿ ದಂಪತಿಗಳಿರ್ವರೂ  ಬೇರೆಯಾಗುತ್ತಾರೆ.ಆಸ್ತಿಗಾಗಿ ಮಕ್ಕಳ ಕಿರಿಕಿರಿ ಅನುಭವಿಸುತ್ತಲೇ ಯಜಮಾನ ತೀರಿಹೋಗುತ್ತಾರೆ. ಮತ್ತೊಬ್ಬ ಮಗ ತಾಯಿಯನ್ನು ತಿನ್ನುವ ಎಣ್ಣೆ ಕೈತಪ್ಪಿ ಚಲ್ಲಿದ್ದಕ್ಕೆ ಮುಖಕ್ಕೆ ಉಗಿದು ಈಗ ಅಡುಗೆ ಹೇಗೆ ಮಾಡೋದು ಅಂತ ಅವಾಚ್ಯ ಮಾತುಗಳನ್ನೆಲ್ಲ ಅಂದು ರೇಲ್ವೆ ಹಳಿಯ ಮೇಲೆ ಬಿದ್ದು ಸಾಯಿ ಅಂತ ಮಗ ಕಿರುಚಾಡಿದರು ಆ ತಾಯಿ ಮಗನಿಗೆ  ಹಿಂದಿರುಗಿಸಿ ಒಂದು ಮಾತನಾಡದೆ ದುಃಖವನ್ನ ನುಂಗಿದಳು. ಇವಳೂ ಮತ್ತೊಬ್ಬ ಹೀರಾ ನಾನಿಯೇ..ಸರಿ ..ಹಿಂತಹ ಅನೇಕ ಅವಮಾನಗಳು ಸಹಿಸುತ್ತ ಮಗನ ಮೇಲಿರುವ ಮಮಕಾರಕ್ಕೆ ಮೂಕವಿಸ್ಮಿತಳಾಗಿ ಎಲ್ಲವೂ ಸಹಿಸುತ್ತ ಕುಗ್ಗಿಹೋದರು ಮಕ್ಕಳ ಬಗ್ಗೆ ಒಂದು ದಿನವು ಮತ್ತೊಬ್ಬರಲ್ಲಿ ದೂರ ಹೇಳಲಿಲ್ಲ.               ಮಕ್ಕಳ ಭವಿಷ್ಯಕ್ಕಾಗಿ ತಂದೆತಾಯಿಗಳು ತಾವು ಅರೆಹೊಟ್ಟೆ ತಿಂದು ನಾಳೆ ಮಕ್ಕಳಿಗೆ ಏನಾದರೂ ಸಹಾಯ ಆಗಬಹುದು ಅಂತ ಎಲ್ಲವನ್ನು ಕೂಡಿಟ್ಟು ತಮ್ಮ ಆಸೆ,ಆಕಾಂಕ್ಷೆಗಳನ್ನೆಲ್ಲ ತ್ಯಾಗಮಾಡಿ ತಮ್ಮ ಇಡೀ ಜೀವನವನ್ನೆ ಮಕ್ಕಳಿಗಾಗಿ ಮೂಡುಪಾಗಿಡುತ್ತಾರೆ . ಮಕ್ಕಳು ಸಹ ಹೆತ್ತವರ  ಪರಿಶ್ರಮವನ್ನು ಅರಿಯಬೇಕು. ಹಿರಿಯರನ್ನು ಕಡೆಗಾಣಿಸದೇ ಅವರನ್ನು ಪ್ರೀತಿಯಿಂದ ಅಪ್ಪಿಕೊಳ್ಳಬೇಕಿದೆ.ನಮಗಾಗಿ ತಮ್ಮದೆಲ್ಲವನ್ನು ಧಾರೆಯೆರೆದ ದೇವತೆಗಳನ್ನು ನಮ್ಮ ಕಣ್ಣುರೆಪ್ಪೆಯಂತೆ ಕಾಪಾಡಿಕೊಳ್ಳಬೇಕಿದೆ. ಅವರಿಂದಲೇ ನಾವು ಎಂಬುದು ಮನಗಾಣಬೇಕಿದೆ. ನಮ್ಮದೆಲ್ಲವನ್ನು ಅವರಿಗಾಗಿ ಸಮರ್ಪಿಸಬೇಕೆಂದೇನಿಲ್ಲ, ಅದು ಅವರ ಬಯಕೆಯೂ ಅಲ್ಲ. ಅವರಿಗೆ ಬೇಕಾದದ್ದು ನಮ್ಮ ಪ್ರೀತಿ,ಕಾಳಜಿ,ನಮ್ಮ ಮಕ್ಕಳ ಪ್ರೀತಿ ಅಷ್ಟು ಕೊಟ್ಟರೆ ಅವರಿಗೆ ಅದೇ ಸ್ವರ್ಗ ಅಲ್ಲವೇ? ಮನುಷ್ಯರಾಗಿ ಹುಟ್ಟಿದ ಮೇಲೆ ಮನುಷ್ಯರಂತೆ ಬಾಳಬೇಕಲ್ಲವೇ? ಈ ಮೂಲಕವಾದರೂ ಅಲ್ಲಲ್ಲಿ ಕಂಡು ಬರುವ ಹೀರಾ ನಾನಿಯರನ್ನು  ಕಾಣದ ಹಾಗೆ ಮಾಡುತ್ತ ನಮ್ಮ ಜೀವನ ಸಾರ್ಥಕಗೊಳಿಸೋಣ ಅಂತ.. ಡಾ. ರೇಣುಕಾ ಹಾಗರಗುಂಡಗಿ

“ಏ ಭೇಟಾ ಸಬ್ಜಿ ಲೇ”ಡಾ. ರೇಣುಕಾ ಹಾಗರಗುಂಡಗಿ ಅವರ ಕಥೆ Read Post »

ಕಾವ್ಯಯಾನ

ಪಂದ್ಯ0ಡ ರೇಣುಕಾ ಸೋಮಯ್ಯ ಕವಿತೆ, ನೆನಪಿನ ಬುತ್ತಿ

ಕಾವ್ಯ ಸಂಗಾತಿ ಪಂದ್ಯ0ಡ ರೇಣುಕಾ ಸೋಮಯ್ಯ ನೆನಪಿನ ಬುತ್ತಿ ನೂರರು ನೆನಪಿನ ಬುತ್ತಿಗಳು ಬಿಚ್ಚುತಿವೆಇಂದಿನ ಮಕ್ಕಳ ನೋಡುತಲಿlಹಾರುತ ಓಡುತ ಕುಣಿಯುತಲಿದ್ದೆವು ಅಂದುಮನದೊಳು ಸಂತಸ ಚಿಮ್ಮುತಲಿll೧ll ಇರಲಿಲ್ಲವೆ ಅಂದು ಮೊಬೈಲು ಕೈಯ್ಯಲಿಇದ್ದುದು ಚಿಲುಕಿ-ಬುಗುರಿ ಲಗ್ಗೋರಿ lಮರಕೋತಿ ಆಟದಿ ಸಿಗುತಿದ್ದ ಸಂತಸವಇಂದು ಎಲ್ಲಿ ಹುಡುಕಲಿl೨l ಮಾವು ಕಿತ್ತಳೆ ಹಣ್ಣನು ಕೀಳುತತಿನ್ನುತಲಿದ್ದೆವು ಒ0ದಾಗಿlಕಾವಲುಗಾರನ ಕಣ್ಣನು ತಪ್ಪಿಸಿಓಡುತಲಿದ್ದೆವು ಬಿರುಸಾಗಿll೩ll ಕೆಸರುಗದ್ದೆಯ ಮೇಲೆಏಳು-ಬೀಳುತಲಿದ್ದೆವುಬಿತ್ತನೆ ಮಾಡುವಸಮಯದಲ್ಲಿlಹಸಿವಿನ ಚಿಂತೆಯು ಸುಳಿಯಲೇ ಇಲ್ಲತು0ಟಾಟವಾಡುವ ಭರ ದಲ್ಲಿll೪ll ಕಾಗದ ದೋಣಿಯ ತೇಲಿಸಿ ನೀರಲಿನೋಡುತಲಿದ್ದೆವು ಬದಿಯಲ್ಲಿlಸಾಗುತಲಿದ್ದ ದೋಣಿಯು ಮಗುಚಲುಮಾಂಕಾಯಿತು ಮೊಗವು ಕ್ಷಣದಲ್ಲಿll೫ll ಮರೆಯಲಿ ಹೇಗೆ ಅಂದಿನಆ ದಿನಕೋಟಿ ಕೊಟ್ಟರು ಸಿಗಕಿಲ್ಲlಸರಿಯಿತು ಕಾಲವು ಎಷ್ಟು ಬೇಗನೆವಯಸ್ಸು ಮಾಸಿದ್ದು ತಿಳಿಯಲೇಯಿಲ್ಲll೬llಆದಿ ಹಾಗೂ ಅಂತ್ಯ ಪ್ರಾಸದಲ್ಲಿ ಪಂದ್ಯ0ಡ ರೇಣುಕಾ ಸೋಮಯ್ಯ ಹೊಸೂರ್ ಅಮ್ಮತ್ತಿ ಕೊಡಗು

ಪಂದ್ಯ0ಡ ರೇಣುಕಾ ಸೋಮಯ್ಯ ಕವಿತೆ, ನೆನಪಿನ ಬುತ್ತಿ Read Post »

ಕಾವ್ಯಯಾನ

ಡಾ.ಸೌಮ್ಯಾ ಕೆ. ಅವರ ಕವಿತೆ “ಒಲವಿನ ಡಿಸೆಂಬರ್”

ಕಾವ್ಯ ಸಂಗಾತಿ ಡಾ.ಸೌಮ್ಯಾ ಕೆ. “ಒಲವಿನ ಡಿಸೆಂಬರ್” ಈ ಡಿಸೆಂಬರನೇತಕೆ ನನ್ನಾತ್ಮಕೆ ಹತ್ತಿರ!ಮುಂಜಾನೆ ಮರಬಳ್ಳಿಗಳು ಮತ್ತಿನಲಿ ತೊನೆದಂತೆಕನಸುಗಳು ಮೃದುವಾಗಿ ಅಂಗಳಕೆ ಹರಿದಂತೆಓಹ್ ಈಗ ಸೂರ್ಯನೂ ಅದೆಷ್ಟು ದಯಾಮಯಿ!ರಾತ್ರಿಯಾಕಾಶವೂ ಕವಿತೆಯಾಗಿ ಮಿಂಚುತಿದೆ.. ಈ ಡಿಸೆಂಬರನೇತಕೆ ನನ್ನಾತ್ಮಕೆ ಹತ್ತಿರ!ತಂಗಾಳಿ ನಯವಾಗಿ ಮುಂಗುರುಳ ನೇವರಿಸಿದಂತೆಕಾಡಿನ ನಡುವೆ ಕಾಡುವ ಸಾಲೊಂದ  ಗುನುಗಿದಂತೆಜಗವೇ ತುಸು ತಡೆತಡೆದುನಿರಾಳವಾಗಿ ಉಸಿರಾಡುತಿದೆ.. ಈ ಡಿಸೆಂಬರನೇತಕೆ ನನ್ನಾತ್ಮಕೆ ಹತ್ತಿರ!ವರುಷವಿಡೀ ಕಾದಿದ್ದ ಬೆರಗು ಬಿಚ್ಚಿಟ್ಟಂತೆಗಡಿಬಿಡಿಯ ದೌಡನು ಬೆಳದಿಂಗಳು ಬರಸೆಳೆದಂತೆಹೃದಯ ಉಕ್ಕೇರಿ ಬಯಸಿದ ಮಧುಶಾಲೆಯಿದುಎಲ್ಲ ನೋವುಗಳ ಪೊರೆ ಕಳಚಿ ಹೊಸತಿನದೇ ಪ್ರತೀಕ್ಷೆ… ಈ ಡಿಸೆಂಬರನೇತಕೆ ನನ್ನಾತ್ಮಕೆ ಹತ್ತಿರ!ದೀರ್ಘ ರಾತ್ರಿಗಳಲಿ ಗಜಲೊಂದು ಕೆಂದುಟಿಗಳ ನಡುವೆ ಅರಳಿದಂತೆಸ್ವರ್ಗವೇ ಮೆಲ್ಲಡಿಯಿಟ್ಟು ಸನಿಹ ಬಂದಿರುವಂತೆನಿನ್ನೆಗಳ ನಾಳೆಗಳ ಹಂಗಿಲ್ಲ ಇಲ್ಲೀಗ ಆತ್ಮಕೆಈ ಡಿಸೆಂಬರನದಕೇ ನನ್ನಾತ್ಮಕೆ ಹತ್ತಿರ – ಹತ್ತಿರ.. ಡಾ. ಸೌಮ್ಯಾ ಕೆ.ವಿ.

ಡಾ.ಸೌಮ್ಯಾ ಕೆ. ಅವರ ಕವಿತೆ “ಒಲವಿನ ಡಿಸೆಂಬರ್” Read Post »

You cannot copy content of this page

Scroll to Top