“ಶರಣ ಸಂಸ್ಕೃತಿಯಲ್ಲಿ ಸ್ತ್ರೀ ಸಂವೇದನೆ”ವೀಣಾ ಹೇಮಂತ್ ಗೌಡ ಪಾಟೀಲ್
ಮಹಿಳಾ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್ “ಶರಣ ಸಂಸ್ಕೃತಿಯಲ್ಲಿ ಸ್ತ್ರೀ ಸಂವೇದನೆ” ಶರಣ ಸಂಸ್ಕೃತಿಯಲ್ಲಿ ಸ್ತ್ರೀ ಸಂವೇದನೆ ಶರಣ ಸಂಸ್ಕೃತಿಯಲ್ಲಿ ಸ್ತ್ರೀ ಸಂವೇದನೆ ಎಂಬ ವಿಷಯದ ಕುರಿತು ಮಾತನಾಡುವ ಮುನ್ನ ಸ್ತ್ರೀ ಸಂವೇದನೆ ಎಂಬ ಪದದ ಅರ್ಥವನ್ನು ನೋಡೋಣ. ಸ್ತ್ರೀಯರ ತಮ್ಮ ಬದುಕಿನಲ್ಲಿ ಎದುರಿಸುವ ಅನುಭವಗಳು, ಸವಾಲುಗಳು ಮತ್ತು ಆಶಯಗಳಿಗೆ ಸಂಬಂಧಿಸಿದ ಸಾಮಾಜಿಕ ರಾಜಕೀಯ ಮತ್ತು ಸಾಂಸ್ಕೃತಿಕ ಅರಿವನ್ನು ಸಂವೇದನೆ ಎಂದು ಹೇಳಬಹುದು. ಸ್ತ್ರೀಪರ ಸಂವೇದನೆ ಎಂದ ಕೂಡಲೇ ಅದನ್ನು ಪುರುಷದ್ವೇಷ ಎಂದು ಅರ್ಥೈಸಿಕೊಳ್ಳುವ ಬದಲು ಮಹಿಳೆಯರ ದೃಷ್ಟಿಕೋನ, ಭಾವನೆಗಳು ಹಾಗೂ ಪ್ರತಿರೋಧಗಳನ್ನು ಕುರಿತ ಭಾವಗಳು ಎಂದು ತಿಳಿಯಬೇಕು. ಜಾತಿ, ವರ್ಗ, ಲಿಂಗ ತಾರತಮ್ಯ, ಶೋಷಣೆ ಮತ್ತು ಸಾಂಪ್ರದಾಯಿಕ ಪಾತ್ರಗಳ ಮಿತಿಗಳನ್ನು ಪ್ರಶ್ನಿಸುವುದನ್ನು ಕೂಡ ಸ್ತ್ರೀ ಸಂವೇದನೆಯು ಒಳಗೊಂಡಿರುತ್ತದೆ. ತನ್ನ ನಿಲುಕಿನಲ್ಲಿ ಬರುವ ಸಾಮಾಜಿಕ ಅರಿವು, ವ್ಯಕ್ತಪಡಿಸುವಿಕೆ, ಸಾಮಾಜಿಕ ಗೌರವ ಮತ್ತು ಸಮಾನತೆ, ಸಾಮಾಜಿಕ ಸ್ವಾವಲಂಬನೆ ಮತ್ತು ಸಬಲೀಕರಣ ಇವುಗಳ ಕುರಿತು ಮಹಿಳೆ ಹೊಂದಿರುವ ತನ್ನದೇ ಆದ ವೈಯುಕ್ತಿಕ ಅಭಿಪ್ರಾಯವೂ ಆಯಾ ಕಾಲದ ಸಾಮಾಜಿಕ ವಾಸ್ತವಗಳಿಗೆ ಮುಖಾಮುಖಿಯಾಗುತ್ತದೆ ಎಂಬುದು ಕುತೂಹಲದ ಸಂಗತಿ ಆದರೂ ಕೂಡ ಆಯಾ ಕಾಲ ಘಟ್ಟದ ಒತ್ತಡಗಳಿಗೆ ಪ್ರತಿ ಸ್ಪಂದಿಸುವ, ಒಪ್ಪಿಕೊಳ್ಳುವ ಅಪ್ಪಿಕೊಳ್ಳುವ ಇಲ್ಲವೇ ವಿರೋಧಿಸುವ, ಕೆಲ ನಿಯಮಗಳನ್ನು ಮುರಿಯುವ ಮತ್ತೆ ಕೆಲ ನಿಯಮಗಳನ್ನು ಮುರಿದು ಕಟ್ಟುವ ಅಂತಿಮವಾಗಿ ಮೌಲ್ಯಗಳನ್ನು ಪ್ರತಿಪಾದಿಸುವ ಸಂವೇದನೆಗಳನ್ನು ಸ್ತ್ರೀ ಸಂವೇದನೆ ಎಂದು ನಾವು ಕರೆಯಬಹುದು. ಸಮಾಜದಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಸಾಮಾಜಿಕ ಅರಿವಿನ ಸಂವೇದನೆಯಾದರೆ ಇದರಲ್ಲಿ ಮಹಿಳೆಯರು ತಮ್ಮ ಮನೆಯಲ್ಲಿ ಅನುಭವಿಸುವ ಸವಾಲುಗಳು ದೈಹಿಕ ಶ್ರಮ,ಕೌಟುಂಬಿಕ ಸಂಬಂಧಗಳು ಹಾಗೂ ಅವುಗಳಲ್ಲಿ ಮಾಡಿಕೊಳ್ಳಬೇಕಾದ ಹೊಂದಾಣಿಕೆಗಳನ್ನು ನಾವು ನೋಡಬಹುದು.ತಮ್ಮ ಭಾವನೆಗಳನ್ನು ಯೋಚನೆಗಳನ್ನು ಯಾವುದೇ ನಿರ್ಬಂಧವಿಲ್ಲದೆ ತಮ್ಮದೇ ಆದ ಶೈಲಿಯಲ್ಲಿ ವ್ಯಕ್ತಪಡಿಸಲು ಇರುವ ಅವಕಾಶಗಳು ಮಹಿಳೆಗೆ ಸಾಕಷ್ಟು ಇದ್ದು ಆಕೆ ಸಾಹಿತ್ಯ ಕಲೆ ರಾಜಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ಭಾಗವಹಿಸುವ ಮೂಲಕ ಈ ವ್ಯಕ್ತಪಡಿಸುವಿಕೆಯನ್ನು ಕಾಣಬಹುದು. ಲಿಂಗ ಸಮಾನತೆ ಹಾಗೂ ಪುರುಷ ಸಮಾನ ಹಕ್ಕುಗಳನ್ನು ಮಹಿಳೆಯರು ಬಯಸುವುದು ಸ್ತ್ರೀ ಸಂವೇದನೆಯ ಮೂಲ ಉದ್ದೇಶವಾಗಿದೆ. ಇನ್ನು ಮುಖ್ಯವಾಗಿ ಶರಣ ಸಂಸ್ಕೃತಿಯಲ್ಲಿ ಸ್ತ್ರೀ ಸಂವೇದನೆಯನ್ನು ಹೇಳುವುದಾದರೆ ನಾವು ಅದರ ಹಿಂದಿನ ಯುಗಗಳ ಕುರಿತ ಹಿನ್ನೋಟವನ್ನು ಅರಿಯಲೇಬೇಕು. ಬಸವಾದಿ ಶರಣರ ಶರಣ ಸಂಸ್ಕೃತಿಯ ಕಾಲ ಘಟಕ ಮುನ್ನ ಆದಿಯುಗದಲ್ಲಿ ಮಹಿಳೆಯ ಸರ್ವತಂತ್ರ ಸ್ವತಂತ್ರಳಾಗಿದ್ದಳು. ವೇದ, ಆಗಮ, ಉಪನಿಷತ್ತು ಪುರಾಣ ಹೀಗೆ ಎಲ್ಲ 64 ವಿದ್ಯೆಗಳನ್ನು ಕಲಿಯುವ ಅವಕಾಶ ಆಕೆಗಿತ್ತು. ಖುದ್ದು ಆಕೆಯ ಪಾಲಕರಿಗೂ ಕೂಡ ಆಕೆಯನ್ನು ನಿಯಂತ್ರಿಸುತ್ತಿರಲಿಲ್ಲ. ತನ್ನ ಬದುಕಿನ ಯಾವುದೇ ನಿರ್ಣಯಗಳಿಗೆ ಆಕೆ ಬಾಧ್ಯಳಾಗಿದ್ದಳು. ಇದಕ್ಕೆ ಸಾಕ್ಷಿಯಾಗಿ ನಾವು ಅಂದಿನ ಕಾಲದ ಹೆಣ್ಣು ಮಕ್ಕಳು ಶಾಸ್ತ್ರಾರ್ಥಗಳಲ್ಲಿ, ನಿರ್ಣಾಯಕ ಪಾತ್ರ ವಹಿಸಿದ ಲೋಪ ಮುದ್ರಾ, ಅಪಾಲ, ಗಾರ್ಗಿ, ಮೈತ್ರೇಯಿ, ವಿಶ್ವವರರಂತಹ ರಿಷಿಕುಮಾರಿಯರನ್ನು ನೋಡಬಹುದು. ಭಗವಾನ್ ಶಂಕರ ಮತ್ತು ಮಂಡನ ಮಿಶ್ರರ ನಡುವೆ ನಡೆದ ಶಾಸ್ತ್ರಾರ್ಥದಲ್ಲಿ ಮಂಡನ ಮಿಶ್ರ ಪತ್ನಿ ಉಭಯ ಭಾರತಿ ದೇವಿ ನಿರ್ಣಾಯಕಿಯಾಗಿ ಕಾರ್ಯನಿರ್ವಹಿಸಿರು ವುದನ್ನು ಕೂಡ ನಾವು ಕೇಳಿದ್ದೇವೆ. ಈ ಕಾಲಘಟ್ಟದಲ್ಲಿ ಕೆಲ ಮಹಿಳೆಯರು ತಮಗೆ ಇದ್ದ ಸ್ವಾತಂತ್ರ್ಯವನ್ನು ಬಹುಮಟ್ಟಿಗೆ ದುರುಪಯೋಗ ಪಡಿಸಿಕೊಂಡರು ಎಂಬ ಕಾರಣಕ್ಕಾಗಿ ಮಧ್ಯಯುಗದಲ್ಲಿ ಇವರ ಮೇಲೆ ಕೆಲ ನಿರ್ಬಂಧಗಳನ್ನು ಹೇರಲಾಯಿತು. ಅದೇ ಸಮಯದಲ್ಲಿ ಭಾರತ ದೇಶಕ್ಕೆ ವಿದೇಶಿ ಆಕ್ರಮಣಕಾರರು ದಂಡೆತ್ತಿ ಬಂದ ಕಾರಣ ಈ ನಿರ್ಬಂಧಗಳು ಹೆಣ್ಣು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸರಿ ಎಂಬ ಭಾವ ಜನರಲ್ಲಿ ತಲೆದೋರಿತು.. ಪರಿಣಾಮವಾಗಿ ಹೆಣ್ಣು ಮಕ್ಕಳು ಸಾಮಾಜಿಕ ಸಂಕೋಲೆಗಳಲ್ಲಿ ಬಂದಿಯಾಗಬೇಕಾಯಿತು. ಕುಟುಂಬದ ಧಾರ್ಮಿಕ ವಿಧಿ ವಿಧಾನಗಳಲ್ಲಿ ಆಕೆ ತನ್ನ ಪತಿಯ ಜೊತೆಗೆ ಪಾಲ್ಗೊಳ್ಳಬಹುದಾದರೂ ಶಿಕ್ಷಣ, ಅಧ್ಯಯನ, ಬದುಕು, ಸಂಗಾತಿಯನ್ನು ಆಯ್ದುಕೊಳ್ಳುವ ಆಕೆಯ ಹಕ್ಕುಗಳಿಗೆ ಚ್ಯುತಿ ಉಂಟಾಯಿತು. ಮುಖ್ಯವಾಗಿ ಪುರುಷನ ಆಧೀನದಲ್ಲಿ ಹೆಣ್ಣು ದಾಸ್ಯದ ಬದುಕನ್ನು ಅಪ್ಪಿಕೊಳ್ಳಬೇಕಾಯಿತು. ತನ್ನ ಎದುರಿಗಿರುವ ವ್ಯಕ್ತಿಯನ್ನು ಯಜಮಾನ ಎಂದು ಒಪ್ಪಿಕೊಳ್ಳಬೇಕಾದರೆ ಆಕೆ ಆತನ ಸೇವಕಿ ಎಂಬುದು ಅನಿವಾರ್ಯದ ಒಪ್ಪಿಗೆಯಾಯಿತು. ಪುರುಷಸ್ವಾಮ್ಯದ ಮುಂದೆ ಸ್ತ್ರೀತ್ವದ ಪರಿಭಾಷೆ ಮಂಡಿಯೂರಿ ಅಡಿಯಾಳಾಯಿತು ಎಂದರೆ ತಪ್ಪಿಲ್ಲ. ನಂತರ ಬಂದದ್ದೇ ಶರಣ ಸಂಸ್ಕೃತಿಯ ಸುವರ್ಣ ಯುಗಶರಣರ ಕಾಲ 12ನೇ ಶತಮಾನ. ಈ ಸಮಯದಲ್ಲಿ ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಬಹುದೊಡ್ಡ ಬದಲಾವಣೆಗಳನ್ನು ವಿಶ್ವಗುರು, ಜಗಜ್ಯೋತಿ, ಎಂದೆಲ್ಲಾ ಹೆಸರಾದ ಕ್ರಾಂತಿಯೋಗಿ ಅಣ್ಣ ಬಸವಣ್ಣನವರ ನೇತೃತ್ವದಲ್ಲಿ ಶರಣ ಸಂಕುಲವು ಅನುಭವ ಮಂಟಪದಲ್ಲಿಯಾವುದೇ ರೀತಿಯ ಜಾತಿ, ಲಿಂಗ, ಮತಗಳ ಭೇದವಿಲ್ಲದೆ ‘ಮಾನವ ಜಾತಿ ತಾನೊಂದೇ ವಲಂ’ ಎಂಬ ವಿಶ್ವ ಬಂಧುತ್ವದ, ವಿಶ್ವ ಭ್ರಾತೃತ್ವದ ಭಾವದ ಅಡಿಯಲ್ಲಿ ಕಾಯಕ, ದಾಸೋಹ, ಲಿಂಗ ನಿಷ್ಠೆಗಳನ್ನು ಬದುಕಿನ ಮೂಲ ಧ್ಯೇಯಗಳನ್ನಾಗಿ ಬದುಕಿದರು. ಈ ಸಮಯದಲ್ಲಿ ಅದುವರೆಗೂ ಪುರುಷದಾಸ್ಯದ ಸಂಕೋಲೆಯಲ್ಲಿ ತಮ್ಮೆಲ್ಲ ಮನದ ಭಾವನೆಗಳನ್ನು ಬರಡಾಗಿಸಿಕೊಂಡ ಮಹಿಳೆಯರು ಸ್ವಾತಂತ್ರ್ಯದ ತಿಳಿ ಗಾಳಿಯನ್ನು ಸವಿದರು. ಕಲ್ಲರಳಿ ಹೂವಾದ ಸುಣ್ಣದ ಕಲ್ಲಿನಂತೆ ತಮ್ಮೆಲ್ಲ ಮನದ ಭಾವಗಳನ್ನು ಬಿಚ್ಚಿ ವಚನಗಳ ಮೂಲಕ ಪ್ರಸ್ತುತ ಪಡಿಸಿದರು. ವೀರ ವಿರಾಗಿಣಿಯಾದ ಅಕ್ಕಮಹಾದೇವಿ ತಾಯಿ, ಅಕ್ಕನಾಗಮ್ಮ, ಗಂಗಾಂಬಿಕೆ, ನೀಲಾಂಬಿಕೆ, ಆಯ್ದಕ್ಕಿ ಲಕ್ಕಮ್ಮ ಕದಿರ ರೆಮ್ಮವ್ವೆ ಕನ್ನಡಿ ಕಾಯಕದ ರೆಮ್ಮವ್ವೆ, ಕೇತಲದೇವಿ, ಗೊಗ್ಗವ್ವೆ ಬಂತಾದೇವಿ ದುಗ್ಗಳೆ ಮುಂತಾದ 33ಕ್ಕೂ ಹೆಚ್ಚು ವಚನಕಾರ್ತಿಯರು ಅತ್ಯಂತ ನಿರ್ಭಿಡೆಯಿಂದ ಆದರೆ ಅಷ್ಟೇ ಸರಳ ಹಾಗೂ ಮುಕ್ತ ಮನದಿಂದ ವಚನಗಳನ್ನು ರಚಿಸಿದರು. ಅವರ ವಚನಗಳಲ್ಲಿ ಹೆಚ್ಚು ಧೈರ್ಯ ಚಲ ನಿಷ್ಠುರತೆ ಆಧ್ಯಾತ್ಮ ಅಭಿಮಾನ ವಿಡಂಬನೆ ಹಾಗೂ ಕಟು ಟೀಕೆಗಳು ಮುಕ್ತವಾಗಿ ಮೂಡಿಬಂದಿವೆ. ಶರಣ ಸಂಸ್ಕೃತಿಯ ಹೆಣ್ಣು ಮಕ್ಕಳು ಸ್ತ್ರೀ ಸಹಜ ಮಾತೃತ್ವ, ಮಮತೆ, ದಯಾಪರತೆಯ ಜೊತೆ ಜೊತೆಗೆ ನೇರ ನಿಷ್ಠುರವಾದ ನುಡಿಗಳಿಗೂ ಹೆಸರಾಗಿದ್ದರು. ಅಮೆರಿಕಾದ ಖ್ಯಾತ ಸಮಾಜಶಾಸ್ತ್ರಜ್ಞೆ ಶೋ ವಾಲ್ತರ್ ಹೇಳುವ ಪ್ರಕಾರ 19ನೇ ಶತಮಾನದಲ್ಲಿ ಇಡೀ ಜಗತ್ತಿನ ಮಹಿಳಾ ಸಂಕುಲದಲ್ಲಿ ಫೆಮಿನೈನ್, ಫೆಮಿನಿಸ್ಟ್ ಹಾಗೂ ಫೆಮಿನಾ ಎಂಬ ಮೂರು ಬಗೆಯ ಸ್ತ್ರೀಯರ ಗುಂಪುಗಳನ್ನು ಕಾಣಬಹುದಾಗಿತ್ತು. 1840 ರಿಂದ 1880ರ ಕಾಲಘಟ್ಟದಲ್ಲಿ ಫೆಮಿನೈನ್ ಎಂದು ಕರೆಯಲ್ಪಡುವ ಸ್ತ್ರೀಯರು ಪುರುಷರನ್ನು ಅನುಕರಿಸುತ್ತಿದ್ದರು. ಪುರುಷರ ನಾಮಧೇಯಗಳನ್ನು ಇಟ್ಟುಕೊಂಡು ಬರೆಯುವ, ಚಿತ್ರಗಳನ್ನು ರಚಿಸುವ ಪುರುಷರ ವಸ್ತ್ರಗಳನ್ನು ಧರಿಸುವ ಮೂಲಕ ಅವರನ್ನು ಅನುಕರಿಸುವ ರೀತಿಯಲ್ಲಿ ಬದುಕುತ್ತಿದ್ದರು. 1880 ರಿಂದ 1920ರ ಕಾಲ ಘಟ್ಟದಲ್ಲಿ ಹೆಣ್ಣು ಮಕ್ಕಳು ಸಾಮಾನ್ಯವಾಗಿ ಪುರುಷರದ್ದು ಎಂದು ಕರೆಯಲ್ಪಡುವ ಎಲ್ಲ ರೀತಿಯ ಪುರುಷ ಮಾನದಂಡಗಳನ್ನು ತಿರಸ್ಕರಿಸಿ ತಮ್ಮದೇ ಆದ ಅಸ್ಮಿತೆಯನ್ನು ತೋರ್ಪಡಿಸುವ ರೀತಿಯಲ್ಲಿ ಬದುಕಲು ಆರಂಭಿಸಿದರು. ಇವರನ್ನು ಸಮಾಜ ಫೆಮಿನಿಸ್ಟ್ ಎಂದು ಕರೆಯುತು. ಮುಂದೆ 1920 ರಿಂದ ಮುಂದೆ 1960 ರವರೆಗೆ ಹೊಸ ರೀತಿಯ ಫೆಮಿನ ಎಂಬ ಸ್ತ್ರೀ ಸಮುದಾಯ ಹುಟ್ಟಿಕೊಂಡಿತು. ಸ್ತ್ರೀತ್ವದ ಮಹತ್ವಕ್ಕೆ ಹೊಸ ಭಾಷೆಯನ್ನು ಬರೆದ ಈ ಸಮುದಾಯವು ಹೆಣ್ಣು ಮಕ್ಕಳು ಪುರುಷರ ಮೇಲೆ ಹೊಂದಿದ್ದ ಎಲ್ಲ ರೀತಿಯ ಪರಾವಲಂಬನವನ್ನು ಮೀರಿ ಬೆಳೆಯುವ ನಿಟ್ಟಿನಲ್ಲಿ ತಮ್ಮದೇ ಆದ ರೀತಿಯ ಬದುಕನ್ನು ಕಂಡುಕೊಂಡರು. ಇವರು ಪುರುಷ ದ್ವೇಷಿಗಳಾಗದೆ, ಆದರೆ ಅದೇ ಸಮಯದಲ್ಲಿ ಪುರುಷರೊಂದಿಗೆ ಹೊಂದಾಣಿಕೆಯ ಬದುಕನ್ನು ನಡೆಸುತ್ತಾ ತಮ್ಮ ವೈಯುಕ್ತಿಕ ನಿಲುವುಗಳಿಗೆ ಬದ್ಧರಾಗಿ ನಿಂತರು. 19ನೇ ಶತಮಾನದಲ್ಲಿ ಸ್ತ್ರೀ ಸಮುದಾಯದಲ್ಲಿ ಆದ ಈ ಬದಲಾವಣೆಯನ್ನು ಸುಮಾರು ಎಂಟು ಶತಮಾನಗಳ ಹಿಂದೆಯೇ ನಾವು ಅಣ್ಣ ಬಸವಣ್ಣನವರ ಶರಣ ಸಂಸ್ಕೃತಿಯ ಕಾಲಘಟ್ಟದಲ್ಲಿ ನೋಡಬಹುದಾಗಿತ್ತು ಎಂದು ಓರ್ವ ಪಾಶ್ಚಾತ್ಯ ಸಮಾಜ ಶಾಸ್ತ್ರಜ್ಞ ಶೋ ವಾಲ್ತರ್ ಅಭಿಪ್ರಾಯ ಪಡುತ್ತಾಳೆ ಎಂದರೆ ಶರಣ ಸಂಸ್ಕೃತಿಯ ಕಾಲದ ಸ್ತ್ರೀಶಕ್ತಿಯ ಉಚ್ಛ್ರಾಯ ಸ್ಥಿತಿಯನ್ನು ನಾವು ಅರಿತುಕೊಳ್ಳಬಹುದು ಅಲ್ಲವೇ. ಮೊಲೆ ಮುಡಿ ಬಂದರೆ ಹೆಣ್ಣೆಂಬರುಗಡ್ಡ ಮೀಸೆ ಬಂದರೆ ಗಂಡೆಂಬರುನಡುವೆ ಸುಳಿವ ಆತ್ಮಹೆಣ್ಣುಾ ಅಲ್ಲ ಗಂಡೂ ಅಲ್ಲಕಾಣಾ ರಾಮನಾಥ ಎಂಬ ಜೇಡರ ದಾಸಿಮಯ್ಯನವರ ವಚನವು ದೇಹದ ಲಕ್ಷಣಗಳ ಮೇಲೆ ಆಧಾರಿತ ಲಿಂಗ ತಾರತಮ್ಯವನ್ನು ಪ್ರಶ್ನಿಸುತ್ತದೆ. ಶರಣರು ಪುರುಷರಷ್ಟೇ ಮಹಿಳೆಯರು ಸಬಲರು ಎಂದು ಸ್ತ್ರೀ ಪುರುಷ ಸಮಾನತೆಯನ್ನು ಸಾರಿದರು. ಶರಣ ಸಂಸ್ಕೃತಿಯಲ್ಲಿ ದಾಂಪತ್ಯ ಎಂಬುದು ಸಹಬಾಳ್ವೆಯ ಕುರುಹಾಗಿದ್ದು ದಂಪತಿಗಳು ಸಮಾನ ಸ್ಥಾಯಿ ಭಾವವನ್ನು ಹೊಂದಿದ್ದರು ಎಂಬುದಕ್ಕೆ ತನ್ನ ಪತಿ ಶರಣ ಆಯ್ದಕ್ಕಿ ಮಾರಯ್ಯನವರು ತಂದ ಹೆಚ್ಚಿನ ಅಕ್ಕಿಯನ್ನು ಕಂಡು ಆಸೆಯೆಂಬುದು ಅರಸಂಗಲ್ಲದೇ ಶಿವ ಭಕ್ತರಿಗುಂಟೆ ಅಯ್ಯಾ? ಈಸಕ್ಕಿಯಾಸೆ ನಿಮಗೇಕೆ?ಇದನ್ನು ಈಶ್ವರನು ಒಪ್ಪ ಎಂದು ಪತಿಗೆ ತಿಳಿ ಹೇಳಿ ದಿಟ್ಟತನವನ್ನು ಮೆರೆದ ಆಯ್ದಕ್ಕಿ ಲಕ್ಕಮ್ಮ ಆ ಅಕ್ಕಿಯನ್ನು ಮರಳಿಸಲು ಪತಿಗೆ ಹೇಳುತ್ತಾಳೆ. ಆಗ ತುಸು ಹಿಂಜರಿದ ತನ್ನ ಪತಿಗೆ ‘ಕಾಯಕ ನಿಂದಿತ್ತು ಹೋಗಯ್ಯ ಎನ್ನಾಳ್ದನೇ’ ಎಂದು ಹೇಳುವ ದಾಷ್ಟಿಕತೆಯನ್ನು ತೋರುತ್ತಾಳೆ. ಇದು ಶರಣ ಸಂಸ್ಕೃತಿಯಲ್ಲಿರುವ ದಾಂಪತ್ಯದಲ್ಲಿ ಪತಿ-ಪತ್ನಿಯರ ಸಮಾನತೆಯ ಲಕ್ಷಣವಾಗಿತ್ತು. ಇನ್ನು ನೂಲುವ ಕಾಯಕದ ಕದಿರ ರೆಮ್ಮವ್ವೆ ನಾ ತಿರುಗುವ ರಾಟೆಯ ಕುಲ ಜಾತಿ ಕೇಳಿರಣ್ಣ ಅಡಿಯ ಹಲಗೆ ಬ್ರಹ್ಮ ತೋರಣ ವಿಷ್ಣು ನಿಂದ ಬೊಂಬೆ ಮಹಾರುದ್ರ ರುದ್ರನ ಬೆಂಬಳಿಯವೆರಡು ಸೂತ್ರ ಕರ್ಣ ಅರಿವೆಂಬ ಕದಿರು ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿಸುತ್ತಿತ್ತು ನೂಲು ಕದಿರು ತುಂಬಿತ್ತು ರಾಟೆಯ ತಿರುವಲಾರೆ ನನ್ನ ಗಂಡ ಕೊಟ್ಟಿಹ ಇನ್ನೇವೇ ಕದಿರ ರೆಮ್ಮಿಯೊಡೆಯ ಗುಮ್ಮೇಶ್ವರ ಎಂದು ತನ್ನ ಕಾಯಕದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರನ್ನು ಸಮನ್ವಯಗೊಳಿಸಿ ಆಧ್ಯಾತ್ಮ ಬೆರೆಸಿದ ಬೆಡಗಿನ ವಚನಗಳನ್ನು ರಚಿಸಿದ್ದು ಕುಲ ಜಾತಿಯ ಕುರಿತು ಪ್ರಶ್ನಿಸುವವರ ಮುಖದ ಮೇಲಿನ ನೀರನ್ನು ಇಳಿಸಿದ್ದಾಳೆ. ಬಸವಕಲ್ಯಾಣವನ್ನು ತೊರೆದು ಕಪ್ಪಡಿ ಸಂಗಮದಲ್ಲಿ ನೆಲೆಸಿದ್ದ ಬಸವಣ್ಣನವರ ಆಶಯದಂತೆ ಅವರೊಂದಿಗೆ ಸಂಗಮಕ್ಕೆ ಬಂದು ನೆಲೆಸಲು ನೀಲಾಂಬಿಕೆ ತಾಯಿಯನ್ನು ಹಡಪದ ಅಪ್ಪಣ್ಣನವರು ಕೇಳಿಕೊಂಡಾಗ ತಾಯಿ ನೀಲಾಂಬಿಕೆ ನೋಡು ನೋಡು ನೋಡು ನೋಡು ಲಿಂಗವೇನೋಡು ಬಸವಯ್ಯನವರು ಮಾಡಿದಾಟುವ ಅಲ್ಲಿಗೆ ನಮ್ಮನ್ನು ಬರಲು ಹೇಳಿದರಂತೆಅಲ್ಲಿರ್ಪ ಸಂಗಯ್ಯ ಇಲ್ಲಿಲ್ಲವೇ ಅಲ್ಲಿ ಇಲ್ಲಿ ಎಂಬ ಉಭಯ ಸಂದೇಹವೇಕೆ ? ಬಲ್ಲಿದ ಶರಣರಿಗೆ ಇದು ತರವೇ ಎಂದು ತಮ್ಮ ಎದೆಯ ಮೇಲಿನ ಲಿಂಗವನ್ನು ತೋರಿ ಹೇಳುವ ದಾಷ್ಟಿಕತೆ ಅಂದಿನ ಸ್ತ್ರೀಯರಿಗೆ ಇತ್ತು ಎಂಬುದಕ್ಕೆ ಇದಕ್ಕಿಂತ ಏನು ಹೇಳಬೇಕು. ಅಂದಿನ ಕಾಲದ ಶಿವಶರಣೆಯರು ತಮ್ಮ ಕೊರಳಲ್ಲಿರುವ ಲಿಂಗವನ್ನು ಶರಣಪತಿ ಎಂದು ಒಪ್ಪಿಕೊಂಡವರು. ಇಹದ ಗಂಡರನ್ನು ಒಯ್ದು ಒಲೆಯಲಿ ಇಕ್ಕು ಎಂದು ಹೇಳಿದ್ದು ವೀರ ವಿರಾಗಿಣಿ ಅಕ್ಕಮಹಾದೇವಿ ತಾಯಿ. ಅಂದಿನ ಸಾಮಾಜಿಕ ಕಟ್ಟಳೆಗಳನ್ನು ಮೀರಿ ತನ್ನ ಬದುಕಿನ ಧ್ಯೇಯ ಚನ್ನ ಮಲ್ಲಿಕಾರ್ಜುನನನ್ನು ಒಂದಾಗುವ ಆಶ್ರಯವನ್ನು ಪೂರೈಸಿಕೊಂಡ, ಇಡೀ ಜಗತ್ತಿಗೆ ಅಕ್ಕನಾಗಿ ಸ್ತ್ರೀ ಕುಲದ ಉದ್ಧಾರವನ್ನು ಮಾಡಿದ ಹೆಣ್ಣು ಮಗಳು ಅಕ್ಕಮಹಾದೇವಿ ತಾಯಿ. ಆಧ್ಯಾತ್ಮದ ಔನ್ನತ್ಯ ಶಿಖರವನ್ನೇರಿದ ಕದಳಿಯ ಕರ್ಪೂರ ವೈರಾಗ್ಯನಿಧಿ ಅಕ್ಕಶರಣ ಸಂಸ್ಕೃತಿಯ ಸ್ತ್ರೀಪರ ಸಂವೇದನೆಗಳ ಅದ್ಭುತ ವಚನಗಳ ಕರ್ತೃ. ಇನ್ನು ಈ ಸಾಲಿನಲ್ಲಿ ಶರಣ ಸಂಸ್ಕೃತಿಯ ಗಂಗಮ್ಮ ಆವ ಕಾಯಕ ಮಾಡಿದರು ಒಂದೇ ಕಾಯಕ ಎಂದು ಹೇಳಿದರೆ, ಬತ್ತವನ್ನು ಕುಟ್ಟುವ ಕಾಯಕದ ಕೊಟ್ಟಣದ ಸೋಮವ್ವ ಹದ ತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿ ಇಲ್ಲ ವ್ರತ ಹೀನನ ಬೆರೆಯ ನರಕವಲ್ಲದೆ ಮುಕ್ತಿ ಇಲ್ಲ ಎಂದು ಕಾಯಕದ ದೃಷ್ಟಾಂತವನ್ನು ಹೇಳಿದ್ದಾರೆ. ಓರ್ವ ಪ್ರಾಮಾಣಿಕ ಸತ್ಯಸಾಧಕಿಯಾಗಿದ್ದ ಶರಣಿ ಸತ್ಯಕ್ಕ ಅರ್ಚನೆ ಪೂಜೆ ನೇಮವಲ್ಲ ಮಂತ್ರ ತಂತ್ರ ನಿಯಮವಲ್ಲ ಧೂಪ ದೀಪ ಆರತಿ ನೇಮವಲ್ಲ ಪರಸ್ತ್ರೀಪರ ದೈವಂಗಳಿಗೆರೆಗ ಲೇಕೆದಿಪ್ಪುದೆ ನೇಮಶಂಬುಜಕ್ಕೇಶ್ವರನಲ್ಲಿ ಇವನು ಕಾಣೆರನ್ನ ಇವೆ ನಿತ್ಯ ನಿಯಮ ಎಂದು ಡಾಂಭಿಕ ಭಕ್ತಿಯನ್ನು ತೋರುವ ಭಕ್ತರಿಗೆ ನೇರವಾಗಿ ಉತ್ತರಿಸಿದ್ದಾಳೆ. ಹೀಗೆ
“ಶರಣ ಸಂಸ್ಕೃತಿಯಲ್ಲಿ ಸ್ತ್ರೀ ಸಂವೇದನೆ”ವೀಣಾ ಹೇಮಂತ್ ಗೌಡ ಪಾಟೀಲ್ Read Post »




