ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ರಾಜು ಪವಾರ್ ಅವರ ಹನಿಗಳು

ಕಾವ್ಯ ಸಂಗಾತಿ ರಾಜು ಪವಾರ್ ಹನಿಗಳು ಗಾಂಧಿ ಬಟ್ಟೆ ಕಳಚಿಕೈಯಲ್ಲೊಂದು ಕೋಲು ಹಿಡಿದರೆ ಸಾಕು ಗಾಂಧಿಯಾಗುತ್ತೆವೆಂದರು !ಬಟ್ಟೆ ಕಳಚಿದಷ್ಟು ಸುಲಭವಲ್ಲ ಗಾಂಧಿಯಾಗುವುದು,ಗಾಂಧಿಯಾಗಹೊರಟವರುಜಗತ್ತಿನ ಮುಂದೆ ಬೆತ್ತಲಾದರು !!            ಕಿಂಡಿಯಲ್ಲಿ…. ಸರ್ವರಿಗೂ ಬೆಳಕ ನೀಡುವವಗೆಕಟ್ಟು ಪಾಡುಗಳಲ್ಲಿ ಕಟ್ಟಿಗರ್ಭಗುಡಿಯ ಕತ್ತಲೆಯಲ್ಲಿಟ್ಟುದೀಪ ಬೆಳಗಿಸಿ ನೋಡುವವರಿಗೆಕೃಷ್ಣ ಕಾಣಲಿಲ್ಲ !ಕನಕನ ಕರೆಗೆ ಓಗೊಟ್ಟುಮೌಢ್ಯದ ಗೋಡೆ ಕೆಡವಿಹೊಸ ಬೆಳಕಿನೊಂದಿಗೆ ಹಿಂತಿರುಗಿಕಿಂಡಿಯಲ್ಲಿ ಕನಕನಿಗೆ ಕಂಡನಲ್ಲ !!             ಕನ್ನಡಿಯ ನಗು ಕನ್ನಡಿ ಮುಂದೊಷ್ಟು ಹೊತ್ತು ನಿಂತುಮುಖಕ್ಕೆ ಮುದ್ದು ಮಾಡಿಕಣ್ಣಗಲಿಸಿ ಹುಬ್ಬು ತೀಡಿತುಟಿ ಸವರಿ ಬಣ್ಣ ನೀಡಿಎಡ-ಬಲಕ್ಕೆ ಕೂದಲನ್ನು ತಿದ್ದಿ ತೀಡಿಸುಂದರ ವದನವನ್ನಾಗಿಸುವ ಪರಿಗೆಕನ್ನಡಿ ನೋಡಿ ನಗುತ್ತಿತ್ತುಮನಸ್ಸಿನ ಮಲಿನ ಕನ್ನಡಿಗೆ ಕಂಡಿತ್ತು !!                ಚಪ್ಪಲಿಯ ಅಳಲು ಕಲ್ಲು, ಮಣ್ಣು,ಕೆಸರೆನ್ನದೆದಿನವೆಲ್ಲ ಹೊತ್ತು ತಿರುಗಿದ ಎನ್ನಮೈ ಮಲಿನವಾಗಿದೆ ಎಂದುಬಾಗಿಲ ಹೊರಗೆ ಬಿಟ್ಟರು,ಮಲಿನ ಮನಸ್ಸು ಹೊತ್ತುಒಳ ಹೋದರು !!             ಬರೀ ಕೆಂಪು ಧರ್ಮಜಾತಿ,ನೀತಿ,ಅನೀತಿಬಣ್ಣಗಳ ಒಣ ಬಡಿವಾರದ ಹೆಸರಲ್ಲಿಹರಿಸಿದ ರಕ್ತದ ಬಣ್ಣ ರಾಜು ಪವಾರ್                    

ರಾಜು ಪವಾರ್ ಅವರ ಹನಿಗಳು Read Post »

ಇತರೆ

“ಜೀವನವನ್ನು ರೂಪಿಸುವ ನಿರ್ಧಾರಗಳ ಆಯ್ಕೆಗಳು ನಮ್ಮ ಕೈಯಲ್ಲಿಯೇ ಇವೆ” ಪೃಥ್ವಿ ಬಸವರಾಜ್

ಜೀವನ ಸಂಗಾತಿ ಪೃಥ್ವಿ ಬಸವರಾಜ್ “ಜೀವನವನ್ನು ರೂಪಿಸುವ ನಿರ್ಧಾರಗಳ ಆಯ್ಕೆಗಳು ನಮ್ಮ ಕೈಯಲ್ಲಿಯೇ ಇವೆ” ಜೀವನವನ್ನು ರೂಪಿಸುವುದು ನಮ್ಮ ನಿರ್ಧಾರಗಳುಮಾನವ ಜೀವನವು ಒಂದು ಅದ್ಭುತ ಪ್ರಯಾಣ. ಜನ್ಮದಿಂದ ಸಾವುತನಕ ನಾವೆಂದೂ ಒಂದೊಂದು ಆಯ್ಕೆಯನ್ನು ಮಾಡುತ್ತಲೇ ಬದುಕುತ್ತೇವೆ. ಯಾವ ದಾರಿಯಲ್ಲಿ ನಡೆಯಬೇಕು, ಯಾರೊಡನೆ ಮಿಶ್ರವಾಗಿ ಬದುಕಬೇಕು, ಯಾವ ಕೆಲಸವನ್ನು ಮಾಡಬೇಕು, ಯಾವುದನ್ನು ಬಿಡಬೇಕು — ಇವೆಲ್ಲವೂ ನಮ್ಮದೇ ಕೈಯಲ್ಲಿರುವ ನಿರ್ಧಾರಗಳು. ಆದರೆ, ಅನೇಕರಿಗೆ ಒಂದು ತಪ್ಪು ಕಲ್ಪನೆ ಇರುತ್ತದೆ: “ಜೀವನ ನನ್ನನ್ನು ಎಲ್ಲಿ ಕೊಂಡೊಯ್ದರೂ ಹೋಗಬೇಕು” ಎಂದು. ಆದರೆ ನಿಜಕ್ಕೆ ಬಂದರೆ ನಾವು ಜೀವಿಸುವ ದಾರಿ, ಬದುಕುವ ರೀತಿಯಲ್ಲಿರುವ ಬದಲಾವಣೆ, ನಮ್ಮ ಜೀವನದ ಗುಣಮಟ್ಟ—ಇವೆಲ್ಲವೂ ನಮ್ಮ ಆಯ್ಕೆಯ ಮೇಲೆ ನಿಂತಿರುತ್ತವೆ. ಜೀವನದಲ್ಲಿ ಒಳ್ಳೆಯದನ್ನು ಆರಿಸಿಕೊಳ್ಳುವುದೇ ಮುಖ್ಯ. ಆದರೆ ಈ ಆರಿಸುವ ಕಾರ್ಯ ಸುಲಭವಲ್ಲ. ಯಾಕೆಂದರೆ ನಮ್ಮ ಮುಂದಿರುವ ಪ್ರತಿಯೊಂದು ಆಯ್ಕೆಯೂ ಆಕರ್ಷಕವಾಗಿ ಕಾಣಬಹುದು, ಯಾವುದು ಲಾಭ, ಯಾವುದು ನಷ್ಟ ಎಂಬುದನ್ನು ಕೆಲವೊಮ್ಮೆ ತಿಳಿದುಕೊಳ್ಳಲು ಕಷ್ಟವಾಗಬಹುದು. ಆದರೂ, “ಯೋಗ್ಯವಾದ ಆಯ್ಕೆ” ಮಾಡುವ ಕೌಶಲ್ಯವನ್ನು ರೂಢಿಸಿಕೊಂಡರೆ ಜೀವನ ಹೆಚ್ಚು ಸುಂದರವಾಗುತ್ತದೆ. ಆಯ್ಕೆಗಳು — ನಮ್ಮ ಜೀವನದ ಹಾದಿಯನ್ನು ನಿರ್ಧರಿಸುವ ಶಕ್ತಿ ನಾವೆಲ್ಲರೂ ಬೆಳಿಗ್ಗೆ ಎದ್ದ ಕ್ಷಣದಿಂದಲೇ ಆಯ್ಕೆಗಳು ಆರಂಭವಾಗುತ್ತವೆ:ಬೇಗ ಎದ್ದು ದಿನವನ್ನು ಉತ್ತಮವಾಗಿ ಪ್ರಾರಂಭಿಸಬೇಕೋ,ಅಥವಾಇನ್ನೂ ಸ್ವಲ್ಪ ಮಲಗಬೇಕೋ?ಆರೋಗ್ಯಕರ ಆಹಾರ ತಿನಬೇಕೋ,junk food ತಿನಬೇಕೋ?ವ್ಯರ್ಥವಾಗಿ ಫೋನ್ ನಲ್ಲಿ ಸಮಯ ಕಳೆಯಬೇಕೋ,ಅಥವಾ ಉಪಯುಕ್ತವಾದ ಪುಸ್ತಕ ಓದಬೇಕೋ? ಈ ಉದಾಹರಣೆಗಳು ಸರಳ, ಆದರೆ ದಿನನಿತ್ಯ ನಮ್ಮನ್ನು ನಾವು ಹೇಗೆ ರೂಪಿಸಿಕೊಳ್ಳುತ್ತೇವೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಸಣ್ಣ ಆಯ್ಕೆಗಳಿಂದಲೇ ದೊಡ್ಡ ಫಲಿತಾಂಶಗಳು ಹುಟ್ಟುತ್ತವೆ. ಒಳ್ಳೆಯ ಅಭ್ಯಾಸ ಮತ್ತು ಕೆಟ್ಟ ಅಭ್ಯಾಸ – ಆಯ್ಕೆ ನಮ್ಮದೇಮಕ್ಕಳು ಇರಲಿಲ್ಲವ ಮನೆಯಲ್ಲಿಯೇ ತಂದೆ-ತಾಯಿಗಳು ಹೇಳುವಂತೆ,“ಮಗು ಏನನ್ನೇ ನೋಡುತ್ತದೋ ಅದನ್ನೇ ಕಲಿಯುತ್ತದೆ.” ಆದರೆ ವಯಸ್ಸಾದ ನಂತರ ನಾವು ಯಾರನ್ನೂ ಹೊಣೆ ಮಾಡಲಾರೆ.ಒಳ್ಳೆಯ ಅಭ್ಯಾಸ ರೂಢಿಸಿಕೊಳ್ಳುವುದೂ, ಕೆಟ್ಟ ಅಭ್ಯಾಸಗಳನ್ನು ಬೆಳೆಸುವುದೂ ನಮ್ಮದೇ ಆಯ್ಕೆ.ಬಹಳ ಜನರು ಸಲಹೆ ನೀಡುತ್ತಾರೆ: ದಿನನಿತ್ಯ ವ್ಯಾಯಾಮ ಮಾಡಿಸದಾಚಾರವನ್ನು ರೂಢಿಸಿಕೊಳ್ಳಿಸುಳ್ಳು ಹೇಳಬೇಡಿಒಳ್ಳೆಯ ಸ್ನೇಹಿತರ ಜೊತೆಯಲ್ಲಿರಿಸಮಯ ವ್ಯಯ ಮಾಡಬೇಡಿಕೋಪ, ಅಸೂಯೆ ಇವುಗಳಿಂದ ದೂರವಿರಿ ಆದರೆ ಅವರು ಹೇಳುವುದರಿಂದ ಏನೂ ಆಗುವುದಿಲ್ಲ.ಅದರಲ್ಲಿರುವ ಯೋಗ್ಯ ಎದ್ದುಕೊಳ್ಳುವುದು ನಮ್ಮ ಹೊಣೆ.ಯಾಕೆಂದರೆ ಜೀವನವನ್ನು ನಾವು ಬದುಕುತ್ತೇವೆ, ಸಲಹೆ ನೀಡುವವರು ಅಲ್ಲ. ಒಂದು ಸ್ಪಷ್ಟ ಕಥೆ: ಇಬ್ಬರು ಸಹೋದರರ ಜೀವನದ ದಾರಿಇದನ್ನು ಒಂದು ನಿಜವಾದ ಜೀವನಪ್ರೇರಿತ ಕಥೆಯ ಮೂಲಕ ಅರ್ಥಮಾಡಿಕೊಳ್ಳಬಹುದು. ಒಂದು ಊರಿನಲ್ಲಿ ಇಬ್ಬರು ಸಹೋದರರು ಇದ್ದರು — ಅಜಯ್ ಮತ್ತು ವಿಜಯ್.ಇವರಿಬ್ಬರಿಗೂ ಒಂದೇ ಮನೆ, ಒಂದೇ ತಂದೆ-ತಾಯಿ, ಒಂದೇ ಪರಿಸರ.ಶಾಲೆ ಕೂಡ ಒಂದೇ.ಆದರೆ ಇವರಿಬ್ಬರ ಜೀವನ ಸಂಪೂರ್ಣವಾಗಿ ವಿಭಿನ್ನ ಮಾರ್ಗಗಳತ್ತ ನಡೆದು ಹೋಯಿತು. ಅಜಯ್‌ನ ಆಯ್ಕೆಗಳುಬೆಳಿಗ್ಗೆ ಬೇಗ ಎದ್ದರೆ ಆರೋಗ್ಯ ಚೆನ್ನಾಗಿರುತ್ತದೆ ಎಂದು ತಿಳಿದಿದ್ದರೂ,ಅವನು ಯಾವಾಗಲೂ ತಡವಾಗಿ ಎದ್ದ.ಸ್ನೇಹಿತರ ಜೊತೆ ಆಟಗಳಾಡುವುದನ್ನು ಅವನು ಮುಖ್ಯವಾಗಿ ಇಟ್ಟ.ಅಧ್ಯಯನಕ್ಕೆ ಸಮಯ ನೀಡಲಿಲ್ಲ.“ಇನ್ನು ಮುಂದೆ ಓದುತ್ತೇನೆ” ಎಂಬ ಮುಂಗಾರು ಮಾತುಗಳಷ್ಟೇ.Social media ಯಲ್ಲಿ ಗಂಟೆಗಳ ಕಾಲ ಕಾಲಹರಣ.ಪರೀಕ್ಷೆಗೆ ಹೊತ್ತಿಗೆ ಸರಿ ಓದದೆ, ಕೊನೆಯ ಕ್ಷಣದಲ್ಲಿ ಕಲಿಯುವ ಪ್ರಯತ್ನ.ಕೆಲವು ತಪ್ಪು ಸ್ನೇಹಿತರ ಒತ್ತಡಕ್ಕೆ ಒಳಗಾಗಿ ಸಿಗರೇಟ್, ನಶೆಯಿಂದ ದೂರ ಉಳಿಯಲಿಲ್ಲ.ಮತ್ತು ಅಂತಿಮವಾಗಿಅವನ ವಿದ್ಯಾಭ್ಯಾಸ ಕುಸಿಯಿತು.ಕುಟುಂಬದವರ ವಿಶ್ವಾಸ ಕಳೆದುಕೊಂಡ.ಆರೋಗ್ಯವೂ ಹದಗೆಟ್ಟಿತು.ಉದ್ಯೋಗ ಹುಡುಕುವಾಗ ಎಲ್ಲೆಡೆ ತಿರಸ್ಕಾರ.ಅವನು ಮಾಡಿದ ಆಯ್ಕೆಗಳಿಂದ ಅವನ ಬದುಕು ಬಿರುಕು ಬೀಳಿತು. ವಿಜಯ್‌ನ ಆಯ್ಕೆಗಳುಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಂಡ.ದಿನಕ್ಕೆ ಕನಿಷ್ಠ ಎರಡು ಗಂಟೆ ಓದುವ ಗುರಿ ಇಟ್ಟುಕೊಂಡ.ಕೆಟ್ಟ ಸ್ನೇಹ, ಕೆಟ್ಟ ಅಭ್ಯಾಸ—ಇವೆಲ್ಲದರ ಬಗ್ಗೆ ಜಾಗರೂಕ.ಉದ್ದೇಶಪೂರ್ಣ ಜೀವನ ನಡೆಸಲು ಮುಂದಾಗಿದ್ದ.Social media ಗೆ ಸಮಯವನ್ನು ನಿಗದಿಪಡಿಸಿದ್ದ.ಯಾರಿಗೆ ಬೇಕಾದರೂ ಸಹಾಯ ಮಾಡುವ ಒಳ್ಳೆಯ ಗುಣ.ಫಲಅವನು ಕಾಲೇಜು ಮೊದಲನೇ ಸ್ಥಾನ.ಶಿಕ್ಷಕರ ಮೆಚ್ಚುಗೆ, ಕುಟುಂಬದ ಹೆಮ್ಮೆ.ಒಳ್ಳೆಯ ಉದ್ಯೋಗದಿಂದ ಉತ್ತಮ ಆದಾಯ.ದೇಹ, ಮನಸೂ ಆರೋಗ್ಯಕರ.ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿ. ಗಮನಿಸಿಇಬ್ಬರಿಗೂ ಒಂದೇ ಪರಿಸರ, ಒಂದೇ ಕುಟುಂಬ, ಒಂದೇ ಅವಕಾಶ.ಪರಿಣಾಮ ಮಾತ್ರ ವಿಭಿನ್ನ.ಏಕೆ? ಆಯ್ಕೆಗಳು ವಿಭಿನ್ನವಾದ್ದರಿಂದ.ಅಜಯ್‌ನ ಆಯ್ಕೆಗಳು ಅವನನ್ನು ನಾಶದ ಕಡೆಗೆ ಕರೆದರೆ,ವಿಜಯ್‌ನ ಆಯ್ಕೆಗಳು ಅವನನ್ನು ಯಶಸ್ಸಿನ ದಿಕ್ಕಿಗೆ ಕರೆದೊಯ್ದವು. ಜೀವನದಲ್ಲಿ ಆಯ್ಕೆಯ ಮಹತ್ವ ಏಕೆ ಇಷ್ಟು ದೊಡ್ಡದು?1. ಆಯ್ಕೆ ನಮ್ಮ ಸ್ವಭಾವವನ್ನು ರೂಪಿಸುತ್ತದೆನಾವು ಯಾವ ದಾರಿಯನ್ನು ಆರಿಸುತ್ತೇವೋ, ನಮ್ಮ ಜೀವನಶೈಲಿ ಕೂಡ ಅದೇ ದಾರಿಯಲ್ಲಿ ಸಾಗುತ್ತದೆ.2. ಆಯ್ಕೆ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆಇಂದಿನ ನಿರ್ಧಾರಗಳು ನಾಳೆಯ ಫಲಿತಾಂಶ.ಇಂದೇ ಮಾಡಿದ ತಪ್ಪು ಆಯ್ಕೆಗಳ ಪಶ್ಚಾತ್ತಾಪ ಜೀವನಪೂರ್ತಿ ಕಾಡಬಹುದು.3. ಆಯ್ಕೆ ನಮ್ಮ ಸಂಬಂಧಗಳನ್ನು ಕಟ್ಟುತ್ತದೆ ಅಥವಾ ಧ್ವಂಸಮಾಡುತ್ತದೆಯಾರ ಜೊತೆಯಲ್ಲಿ ಇರಬೇಕು ಎಂಬುದು ತುಂಬಾ ದೊಡ್ಡ ನಿರ್ಧಾರ.ಒಳ್ಳೆಯವರೊಂದಿಗೆ ಹೋದರೆ ಜೀವನ ಸುಂದರವಾಗುತ್ತದೆ;ತಪ್ಪು ಸ್ನೇಹಿತರ ಜೊತೆ ಹೋದರೆ ಸಂಕಷ್ಟ ಅನಿವಾರ್ಯ.4. ಆಯ್ಕೆ ನಮ್ಮ ಆರೋಗ್ಯಕ್ಕೂ ಪರಿಣಾಮಕಾರಿಯೇಅನಾರೋಗ್ಯಕರ ಆಹಾರ, ನಿದ್ರೆಕಾರಕ, ನಶೆ—ಇವು ಆಯ್ಕೆಯೇ.ಆರೋಗ್ಯ ಕಾಪಾಡುವುದು ಕೂಡ ಆಯ್ಕೆಯೇ.5. ಆಯ್ಕೆ ನಮ್ಮ ಮಾನಸಿಕ ಶಾಂತಿಯನ್ನು ನಿರ್ಧರಿಸುತ್ತದೆಚಿಕ್ಕ ಚಿಕ್ಕ ವಿಷಯಕ್ಕೆ ಕೋಪಗೊಳ್ಳುವುದೂ,ಕ್ಷಮಿಸುವುದೂ—ಎಲ್ಲವೂ ನಮ್ಮ ಆಯ್ಕೆ. ನಮ್ಮ ಆಯ್ಕೆಯನ್ನು ಉತ್ತಮಗೊಳಿಸಲು 5 ಸರಳ ವಿಧಾನಗಳು 1. ಆಯ್ಕೆ ಮಾಡುವ ಮುನ್ನ ಯೋಚನೆ ಮಾಡಿಒಂದು ಕ್ಷಣ ತಡೆದು,“ಈ ಆಯ್ಕೆ ನನ್ನ ಭವಿಷ್ಯಕ್ಕೆ ಯೋಗ್ಯವೇ?” ಎಂದು ಕೇಳಿಕೊಳ್ಳಿ.2. ಒಳ್ಳೆಯವರ ಸಲಹೆ ಕೇಳಿತಂದೆ-ತಾಯಿ, ಶಿಕ್ಷಕರು, ತಿಳಿದವರು ನೀಡುವ ಸಲಹೆಗಳಲ್ಲಿ ಜ್ಞಾನ ಇದೆ.ಆದರೆ ಅಂತಿಮವಾಗಿ ಆಯ್ಕೆ ನಮ್ಮದೇ.3. ಗುರಿ ಇಟ್ಟು ಬದುಕಿಗುರಿಯಿಲ್ಲದವನು ಎಲ್ಲ ದಾರಿಯಲ್ಲೂ ಹೋಗಿ ತಪ್ಪಿ ಹೋಗುತ್ತಾನೆ.ಗುರಿಯಿರುವವನು ಯಾವ ದಾರಿಯನ್ನು ಆರಿಸಿಕೊಳ್ಳಬೇಕೆಂಬುದು ತಿಳಿದಿರುತ್ತಾನೆ.4. ಕೆಟ್ಟ ಅಭ್ಯಾಸಗಳನ್ನು ಹಂತ ಹಂತವಾಗಿ ಬಿಡಿಒಮ್ಮೆಲ್ಲಾ ಬಿಟ್ಟೇ ಬಿಡಲು ಸಾಧ್ಯವಿಲ್ಲ.ಪ್ರತಿದಿನ ಸ್ವಲ್ಪ.ಆದರೆ ಬಿಟ್ಟೇ ಬಿಡಿ — ಅದು ನಿಮ್ಮ ಉತ್ತಮ ಆಯ್ಕೆ.5. ಒಳ್ಳೆಯವನಾಗಲು ಪ್ರಯತ್ನಿಸಿಪ್ರತಿ ದಿನ,ಪ್ರತಿ ಕ್ಷಣ,ತನ್ನ ಹಳೆಯತನಕ್ಕಿಂತ ಒಳ್ಳೆಯವನಾಗಲು ಪ್ರಯತ್ನಿಸುವವನುಸರಿ ಆಯ್ಕೆಗಳು ಮಾಡುವವನಾಗುತ್ತಾನೆ. ಜೀವನ ಯಾವಾಗಲೂ ನಮ್ಮ ಕೈಯಲ್ಲಿಲ್ಲ, ಆದರೆ ಆಯ್ಕೆ ಯಾವಾಗಲೂ ನಮ್ಮ ಕೈಯಲ್ಲೇಜೀವನದಲ್ಲಿ ಬರುವ ಕೆಲವು ವಿಷಯಗಳು ನಮ್ಮ ನಿಯಂತ್ರಣಕ್ಕೆ ಹೊರತಾಗಿರುತ್ತವೆ:ಜನನಸಾವುಇತರರ ವರ್ತನೆಪರಿಸ್ಥಿತಿಗಳ ಬದಲಾವಣೆ ಇವುಗಳಲ್ಲಿ ನಮ್ಮ ಕೈಯಲ್ಲಿರುವುದೇನೂ ಇಲ್ಲ. ಆದರೆ…ಈ ಎಲ್ಲ ಪರಿಸ್ಥಿತಿಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು ಎಂಬುದು 100% ನಮ್ಮ ಆಯ್ಕೆ.ಅದೇ ನಮ್ಮನ್ನು ಬೆಳೆಸುತ್ತದೆ, ಬಲಗೊಳಿಸುತ್ತದೆ. ಪೃಥ್ವಿ ಬಸವರಾಜ್

“ಜೀವನವನ್ನು ರೂಪಿಸುವ ನಿರ್ಧಾರಗಳ ಆಯ್ಕೆಗಳು ನಮ್ಮ ಕೈಯಲ್ಲಿಯೇ ಇವೆ” ಪೃಥ್ವಿ ಬಸವರಾಜ್ Read Post »

ಕಾವ್ಯಯಾನ

ರಾಹುಲ್ ಸರೋದೆ “ಕಾಲ ಬದಲಾಯಿತು”

ಕಾವ್ಯ ಸಂಗಾತಿ ರಾಹುಲ್‌ ಸರೋದೆ ಕಾಲ ಬದಲಾಯಿತು ಚಿಕ್ಕವರಿದ್ದಾಗ ಅಪ್ಪ ಜಾತ್ರ್ಯಾಗಹೆಗಲು ಮೇಲೆ ಕೂಡಿಸಿಕೊಂಡುಊರು ಸುತ್ತುತ್ತಿದ್ದರು, ಮಗಕೇಳಿದಾಕ್ಷಣ ಬೇಕಾದ್ದು ಕೊಡಿಸುತ್ತಿದ್ದರುಕಾಲ ಬದಲಾಯಿತು. ಈಗ ಮಗ ದೂರದ ಊರಾಗಕೆಲಸಕ್ಕೆಂದು ಊರು ಬಿಟ್ಟಾನ,ಕಾಲಕ್ಕೆ ತಕ್ಕಂತೆ ಅಪಡೇಟ್ ಆಗ್ಯಾನಕೈಬೆರಳಲ್ಲಿ ಆಟೋ ಗಾಡಿ ಬುಕ್ ಮಾಡ್ತಾನಕಾಲ ಬದಲಾಯಿತು. ಬಾಳ ದಿನದ ಮೇಲೆ ನೋಡಾಕಹೋದ್ರಾ ಸ್ವಿಗಿ, ಜೋಮ್ಯಾಟೋದಾಗಬೇಕಾದ ಊಟ ಆರ್ಡರ್ ಮಾಡ್ತಾನಊರಿಗೆ ಬಂದ ತಂದೆಯನ್ನು ಬಿಟ್ಟುಕಾಲ್ ಮೇಲೆ ಕಾಲ್ ಮಾತಾಡ್ತಾ ಬಹಳ ಬ್ಯೂಸಿ ಆಗ್ಯಾನಕಾಲ ಬದಲಾಯಿತು. ನಮಗಾಗಿ ಸಮಯ ಕೊಟ್ಟವರಿಗೆನಾವೇನು ಕೊಟ್ಟೆವೂ ಕೆಲಸ, ಫೋನ್ ಕಾಲು,ಮೀಟಿಂಗು, ಡೇಟಿಂಗು, ಎಲ್ಲಾ ಬರ್ತಾವುನಮ್ಮನ್ನು ಹೆತ್ತು ಹೊತ್ತು ಸಲುಹಿದವರಿಗೆಎರಡೊತ್ತು ಮಾತು, ಒಂಚೂರು ಪ್ರೀತಿನೀಡುವುದಕ್ಕಾಗುವಲ್ದು ————- ರಾಹುಲ್ ಸರೋದೆ

ರಾಹುಲ್ ಸರೋದೆ “ಕಾಲ ಬದಲಾಯಿತು” Read Post »

ಕಾವ್ಯಯಾನ

ನಿಶ್ಚಿತ ಎಸ್ ಅವರ ಕವಿತೆ-ಅವನೆಂದರೆ “ನಿನಗೇನು”

ಕಾವ್ಯ ಸಂಗಾತಿ ನಿಶ್ಚಿತ ಎಸ್ “ನಿನಗೇನು“ ಬಂದಾಕೆ ಕೇಳಿದಳು ನನ್ನ…ಅವನೆಂದರೆ ನಿನಗೇನು…? ಕೋಪಗೊಂಡಾಗ ಕಂಗೊಳಿಸುವ ಮುಂಜಾನೆಯ ಸೂರ್ಯನು ಅವನೇ…ತಾಳ್ಮೆಯಿಂದ ನನ್ನ ಸಂತೈಸುವ ಮುಸ್ಸಂಜೆಯ ಚಂದ್ರನು ಅವನೇ…ತಂಪಾದ ಮಾತುಗಳನ್ನಾಡಿ ತಣ್ಣನೆ ಬೀಸುವ ಗಾಳಿಯು ಅವನೇ…. ಜಗಳವಾದಾಗ ಪಟಪಟನೆ ಬಯ್ಯುವ ಮಳೆಹನಿಯೂ ಅವನೇ…ಒಮ್ಮೊಮ್ಮೆ ಗುಡುಗು ಸಿಡಿಲಿನಂತೆ ಅಬ್ಬರಿಸುವ ಕೋಪಿಷ್ಟನು ಅವನೇ…ಪ್ರೀತಿಯ ಚಿಲುಮೆಯಲಿ ನನ್ನ ತೇಲಿಸುವ ಅಲೆಯು ಅವನೇ… ಹೂವಿಗೆ ದುಂಬಿ ಹೇಗೋ ಹಾಗೆ ನನ್ನ ಪೀಡಿಸುವ ಗೆಳೆಯನು ಅವನೇ…ಸದಾ ನನ್ನ ಕಾಡಿಸುವ ನನ್ನ ಹೃದಯ ಕದ್ದ ಚೋರನು ಅವನೇ…ನನ್ನೆಲ್ಲ ನಗು ಅಳುವಿನ ಒಡೆಯನುಅವನೇ… ಪ್ರತಿದಿನ ನನ್ನನ್ನು ಜೋಪಾನಿಸುವ ತಾಯಿಯು ಅವನೇ…ಬೇಕು ಬೇಡವಾದದ್ದನ್ನು ಕೊಡಿಸುವ ಜವಾಬ್ದಾರಿಯುತ ತಂದೆಯು ಅವನೇ…ನನ್ನೆಲ್ಲ ತುಂಟಾಟಗಳಿಗೆ ಆಸರೆಯಾಗಿರುವ ಮಗುವು ಅವನೇ… ಒಟ್ಟಾರೆಯಾಗಿ ಈ ಬದುಕಿನ ಭರವಸೆಯೂ ಅವನೇ..ಹುರುಪು ಅವನೇ…ಗೆಲುವು ಅವನೇ..ನಂಬಿಕೆಯು ಅವನೇ..ನನ್ನೆಲ್ಲ ನಾಳೆಗಳು ಅವನೇ… ಈಗ ನನ್ನಲ್ಲಿ ಮೂಡಿಬಂದ ಪ್ರಶ್ನೆ ಅವನಿಗೇನು ನಾನು….? ನಿಶ್ಚಿತ ಎಸ್

ನಿಶ್ಚಿತ ಎಸ್ ಅವರ ಕವಿತೆ-ಅವನೆಂದರೆ “ನಿನಗೇನು” Read Post »

ಪುಸ್ತಕ ಸಂಗಾತಿ

ವಿಜಯನಾಗ್‌ ಜಿ.ಅವರ ಕೃತಿ “ಜಪಾನಿನ ಸಾಹಿತ್ಯ ಚರಿತ್ರೆ” ಕುರಿತು ವಿಮರ್ಶಕರಾದ ಆರ್. ದಿಲೀಪ್ ಕುಮಾರ್ ಬರಹ

ಪುಸ್ತಕ ಸಂಗಾತಿ ವಿಜಯನಾಗ್‌ ಜಿ. “ಜಪಾನಿನ ಸಾಹಿತ್ಯ ಚರಿತ್ರೆ” ಆರ್. ದಿಲೀಪ್ ಕುಮಾರ್ ಪ್ರಿಯ ವಿಜಯ್ ನೀವು ಶ್ರದ್ಧೆ ಶ್ರಮಗಳಿಂದ ಅಧ್ಯಯನ ನಡೆಸಿ ರಚಿಸಿರುವ ‘ಜಪಾನಿನ ಸಾಹಿತ್ಯ ಚರಿತ್ರೆ’ ಕೃತಿಯನ್ನು ಓದಿದೆ. ಯಾವುದೇ ಭಾಷೆಯ ಸಾಹಿತ್ಯ ಚರಿತ್ರೆಯನ್ನು ದಾಖಲಿಸುವಾಗ ನೆಲ, ಭಾಷೆ, ಸಾಹಿತ್ಯ ಕೃತಿಗಳ ಬಗೆಗೆ ಅಭಿಮಾನದಷ್ಟೇ, ಒಂದು ಅಂತರವನ್ನು ಕಾಯ್ದುಕೊಂಡು ರಚಿಸಬೇಕೆನ್ನುವ ಪರಂಪರೆಯನ್ನು ಒಪ್ಪುವವರು ಮಾತ್ರ ಹೀಗೆ ಬರೆಯಲು ಸಾಧ್ಯ. ಒಂದು ಅಂತರವನ್ನು ಕಾಯ್ದುಕೊಳ್ಳದೆ ಚರಿತ್ರೆಯನ್ನು ದಾಖಲಿಸುವ ಕೆಲಸವು ಸದ್ಯದಲ್ಲಿ ಕೆಡುಕಿನ ಬೀಜಗಳನ್ನು ಬಿತ್ತುತ್ತದೆ. ಅಂತರ ಕಾಯ್ದಕೊಳ್ಳದ ಚರಿತ್ರೆಯ ದಾಖಲೀಕರಣ ಪ್ರಕ್ರಿಯೆಯು ಅಕ್ಷರವಂತರು ಬದುಕುತ್ತಿರುವ ಸಮಾಜಕ್ಕೆ ಕೊಡುವ ಕೆಟ್ಟ ಕೊಡುಗೆಯಾಗುತ್ತದೆ. ಎಂದು ಬಲವಾಗಿ ನಂಬಿರುವ ನಿಮ್ಮಂತಹವರು ಸಾಹಿತ್ಯ ಚರಿತ್ರೆಯನ್ನು, ಅದು ನಿರ್ಮಾಣವಾಗಲು ಬುನಾದಿಯಾದ ಭೌಗೋಳಿಕ, ರಾಜಕೀಯ, ಭಾಷಿಕ ಪರಿಸರಗಳನ್ನು ಹೀಗೆ ಕಟ್ಟಿಕೊಟ್ಟಿರುವುದು ಯಥೋಚಿತವಾಗಿದೆ. ಬುದ್ಧ ಗುರುವಿನ ಆದಿಯಾಗಿ ಮನುಜಕುಲದೊಳಗಿನ ಕೆಡುಕಿನ ಬೇರನ್ನು ಕತ್ತರಿಸುವ, ಕತ್ತರಿಸಿ‌ ಆ ಬೇರನ್ನು ಸೂರ್ಯನ ಬಿಸಿಲಿಗೆ ಎತ್ತಿ ಹಿಡಿದು ಮತ್ತೆಂದೂ ಚಿಗುರದಂತೆ ಮಾಡುವ ಕೆಲಸವನ್ನು ಮಾಡಿದ್ದಾರೆಂದು ಹೇಳುವ ನಾವು, ಬದಲಾಗುತ್ತಿಲ್ಲವೆಂಬುದಕ್ಕೆ ಸದ್ಯದಲ್ಲಿ ಸಾಕ್ಷಿಯಾಗಿ ನಡೆ, ನುಡಿಗಳ ಹೆಜ್ಜೆಗುರುತುಗಳನ್ನು ಬಿಡುತ್ತಲೇ ಇದ್ದೇವೆ. ಆ ಕಾರಣದಿಂದ ಸದ್ಯದ ನಮ್ಮ ಬದುಕು ‘ನರನ ದುರಿತಾಂಕುರದ ಬೇರಿನ ಬೇಗೆ’ ಎಂದು ಕುಮಾರವ್ಯಾಸ ಹೇಳುತ್ತಾನಲ್ಲ, ಆ ಬೇಗೆಯನ್ನು ಸಂತಸವಾಗಿಟ್ಟುಕೊಂಡು ನಡೆಸುತ್ತಿರುವ ‘ಅನುದಿನದ ದಂದುಗ’ ಅನಿಸುತ್ತಿದೆ. ಇದು ಬದಲಾಗಬೇಕೆಂದರೆ ಚರಿತ್ರೆಯನ್ನು ಮಮಕಾರವಿಲ್ಲದೆ ಓದುವ, ಅರ್ಥೈಸಿಕೊಳ್ಳುವ ಮತ್ತೆಂದೂ ಅಂತಹ ಘಟನೆಗಳು ನಡೆಯದಂತೆ ಎಚ್ಚರಿಕೆಯ ಹೆಜ್ಜೆಗಳನು ಇಡುವ ಕೆಲಸವನ್ನು ಮಾಡಬೇಕೆಂದು ಈ ಕೃತಿಯನ್ನು ಓದಿದೊಡನೆಯೆ ಮನಸ್ಸಿಗೆ ಬಂತು. ಜಪಾನಿನ ನೆಲ ಕೆಡುಕಿನ ಫಲವನ್ನು ಉಂಡಿರುವ ಚರಿತ್ರೆಯನ್ನು ಓದಿದರೆ ಮನುಷ್ಯ ಕುಲ ತಲೆ ತಗ್ಗಿಸುವಂತೆ ಆಗುತ್ತದೆ. ಅಲ್ಲಿನ ನೆಲ, ಜಲ, ಭಾಷೆ, ಸಂಸ್ಕೃತಿ, ಸಾಹಿತ್ಯಗಳ ಬಗೆಗೆ ಅಧ್ಯಯನದಿಂದ ಅಪಾರವಾದ ಪ್ರೀತಿ ಗೌರವಗಳನ್ನು ಬೆಳೆಸಿಕೊಂಡಿರುವ ನಿಮ್ಮಂತಹವರು ಮಾತ್ರ ಸಿಟ್ಟು, ಸೆಡವುಗಳಿಗೆ ಅವಕಾಶವನ್ನು ಕೊಡದೆ, “ಹಿಂದೆ ನಡೆದ ಘಟನೆಯಿದು, ನೋಡಿ” ಎಂದು ದಾಖಲಿಸುವಾಗ ನಿಲ್ಲುವ ನಿರ್ಮಮಕಾರದ ಸ್ಥಿತಿಯನ್ನು ಕಂಡರೆ ಬೆರಗಾಗುತ್ತದೆ. ಜಪಾನಿನ ನೆಲದಲಿ ಕೆಡುಕಿನ ಕಲೆಗಳನು ಬರೆದವರು ಇಂದು ಜಾಗತಿಕ ಮಟ್ಟದಲ್ಲಿ ಬಲು ಎತ್ತರದಲ್ಲಿ ನಿಂತು ಸಬಲರೆಂದು ಬೀಗಬಹುದು, ಆದರೆ ಚರಿತ್ರೆಯ ಅಧ್ಯಯನ ಅವರು ಬಿದ್ದಿರುವ ಪಾತಾಳವನ್ನು ಕಾಣಿಸುತ್ತಿದೆ. ಆ ದಿನ ಒಂದಷ್ಟು ಕ್ಷಣಗಳು ಕೆಡುಕನ್ನು ಹಿಡಿದು ತಡೆದು ನಿಲ್ಲಿಸಿದ್ದಿದ್ದರೆ ಕಾಲಕ್ಕೊಂದು ಘನತೆ – ಗೌರವಗಳು ಇರುತ್ತಿತ್ತೆಂದು ಅನಿಸುತ್ತದೆ. ಚಿಟ್ಟೆಯೊಂದು ಥಟ್ಟನೆ ಹಾರಿದಷ್ಟು ಕ್ಷಣದಲ್ಲಿ ಎಲ್ಲವೂ ನಡೆದು ಹೋಗಿದೆ. ಅದರ ಚಹರೆಗಳು ಇಂದಿಗೂ ಅಲ್ಲಿ ಉಳಿದಿದೆ. ಯಾವ ಫಲಾಪೇಕ್ಷೆಯನ್ನೂ ಇಟ್ಟುಕೊಳ್ಳದೆ ನೀವು ಮಾಡುತ್ತಿರುವ ಕೆಲಸ ನನ್ನಂತಹ ನೂರಾರು ಜನರಿಗೆ ಸಂತಸವನ್ನು ತಂದಿದೆ. ಭಾರತೀಯ ಮತ್ತು ಭಾರತದಿಂದ ಹೊರಗಿನ ಭಾಷೆಗಳ ಅಧ್ಯಯನ ನಡೆಸುವ, ಅನುವಾದವನ್ನೂ ಮಾಡುವ ನಿಮ್ಮನ್ನು ಕಂಡರೆ ವ್ರತ ಹಿಡಿದವರ ಹಾಗೆ ಕಾಣಿಸುತ್ತೀರಿ. ಸೃಜನಶೀಲ ಕೃತಿಗಳನ್ನು ವೇಗವಾಗಿ ನೀವು ಕನ್ನಡಕ್ಕೆ ತರುತ್ತಿರುವುದನ್ನು ಕಂಡರೆ ಸಂತಸದ ಜೊತೆಗೆ ಅಸೂಯೆ ಹುಟ್ಟುತ್ತದೆ. ನನ್ನಿಂದ ಅನುವಾದ ಮಾಡಲಾಗುತ್ತಿಲ್ಲವಲ್ಲ ಎಂದು. ನಿಮ್ಮ ಅನುವಾದದ ಕೆಲಸ ಭರದಿಂದ ಸಾಗಲಿ ಎಂದು ಹಾರೈಸುವೆ. ಸಸ್ನೇಹಪೂರ್ವಕವಾಗಿ ಆರ್. ದಿಲೀಪ್ ಕುಮಾರ್

ವಿಜಯನಾಗ್‌ ಜಿ.ಅವರ ಕೃತಿ “ಜಪಾನಿನ ಸಾಹಿತ್ಯ ಚರಿತ್ರೆ” ಕುರಿತು ವಿಮರ್ಶಕರಾದ ಆರ್. ದಿಲೀಪ್ ಕುಮಾರ್ ಬರಹ Read Post »

You cannot copy content of this page

Scroll to Top