ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ ನೋಟ–17 ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಮೊದಲೇ ಹೇಳಿದಂತೆ ಅಕ್ಟೋಬರ್ ಒಂದು 1990 ಸೋಮವಾರ ಮಂಡ್ಯ ಶಾಖೆಯಿಂದ ರಿಲೀವ್ ಆದೆ. ಅಕ್ಟೋಬರ್ 2 ಗಾಂಧಿ ಜಯಂತಿ ರಜೆ .ಬುಧವಾರದ ದಿನ ಅಕ್ಟೋಬರ್ ಮೂರರಂದು ನಂಜನಗೂಡಿಗೆ ಹೊರಟೆವು ನಮ್ಮ ಮನೆಗೆ ರೈಲ್ವೆ ನಿಲ್ದಾಣ ಹತ್ತಿರ ಇದ್ದುದರಿಂದ ನಾನು ಮತ್ತು ರವೀಶ್ ರೈಲಿನಲ್ಲಿಯೇ ಹೊರಟೆವು. ಆಗ ಇನ್ನು ನಂಜನಗೂಡು ಶಾಖೆಗೆ ಸ್ವಂತ ಕಟ್ಟಡ ಇರಲಿಲ್ಲ. ಬಜಾರು ರಸ್ತೆ ಅಂದರೆ ರೈಲ್ವೆ ನಿಲ್ದಾಣದಿಂದ ದೇವಸ್ಥಾನಕ್ಕೆ ಹೋಗುವ ಜನನಿಬಿಡ ದಾರಿಯಲ್ಲಿ ಎಡಗಡೆಯ ಪಕ್ಕದ ಒಂದು ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು . ಮೊದಲಿಗೆ ಶಾಖೆಗೆ ಹೋದಾಗ ಅಲ್ಲಿನ ಶಾಖಾಧಿಕಾರಿ ಅಶ್ವತ್ಥ ನಾರಾಯಣ ರಾವ್ ಅವರು ಮೊದಲು ದೇವಸ್ಥಾನಕ್ಕೆ ಹೋಗಿ ಬಂದು ನಂತರ ರಿಪೋರ್ಟ್ ಮಾಡಿಕೊಳ್ಳಿ ಎಂದರು. ಅಂತೆಯೇ ಅಲ್ಲಿಂದ ಹತ್ತಿರದಲ್ಲೇ ಇದ್ದ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು 11 ಗಂಟೆಯ ವೇಳೆಗೆ ಶಾಖೆಗೆ ವಾಪಸಾದೆವು. ಮೊದಲಿನಂತೆಯೇ ಒಂದು ಕೈಯಲ್ಲಿ ರಿಪೋರ್ಟ್ ಆಗುವ ಲೆಟರ್ ಮತ್ತೊಂದು ಕೈಯಲ್ಲಿ ಮೈಸೂರಿಗೆ ವರ್ಗಾವಣೆ ಕೋರಿ ಬರೆದ ಅರ್ಜಿ. ಎರಡನ್ನು ಕೊಟ್ಟು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ಆಯಿತು. ಇಲ್ಲಿ ನನಗೆ ಕೊಟ್ಟಿದ್ದು ಹೊಸ ವ್ಯವಹಾರಗಳ ವಿಭಾಗ. ನನ್ನನ್ನು ರಿಪೋರ್ಟ್ ಮಾಡಿಸಿ ರವೀಶ್ ವಾಪಸ್ಸು ಹೋದರು. ಊಟದ ಡಬ್ಬಿ ತಂದಿದ್ದರಿಂದ ಯೋಚನೆ ಇರಲಿಲ್ಲ. ನಿಗಮದ ಪದ್ಧತಿಯಂತೆ ಶಾಖಾ ಪ್ರಬಂಧಕರ ಕೋಣೆಯಲ್ಲಿ ಕಾಫಿ ಬಿಸ್ಕೆಟ್ ಆತಿಥ್ಯ ಮುಗಿದಿತ್ತು. ಹಾಗಾಗಿ ಅಂದು ಬೆಳಿಗ್ಗೆ ಕಾಫಿಗೆ ಹೋಗುವ ಪ್ರಮೇಯ ಬರಲಿಲ್ಲ. ಪಕ್ಕದಲ್ಲಿಯೇ ಒಂದು ಸುಮಾರಾದ ಹೋಟೆಲ್ ಇದ್ದು ಮೂರು ಅಥವಾ ನಾಲ್ಕು ಜನ ಗುಂಪು ಮಾಡಿಕೊಂಡು ಹತ್ತು ನಿಮಿಷಗಳ ಕಾಲ ಕಾಫಿಗೆ ಹೋಗಿ ಬರುವ ವಾಡಿಕೆ ಇತ್ತು ಅಲ್ಲಿ. ಆಗ ಅಲ್ಲಿನ ಉಪ ಆಡಳಿತ ಅಧಿಕಾರಿಯಾಗಿ ರಾಜೇಗೌಡ ಸರ್ ಅವರು ಇದ್ದರು. ನನ್ನ ಪತಿ ರವೀಶ್ ಅವರ ಊರಿನ ಸಮೀಪದ ಹಳ್ಳಿ ಮೈಸೂರು ಅವರ ಊರು. ಹಾಗಾಗಿ ರವೀಶ್ ಅವರ ಜೊತೆ ತುಂಬಾ ಕಾಲ ಮಾತನಾಡುತ್ತಿದ್ದರು. ರಾಜಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಅವರ ಹೇರ್ ಸ್ಟೈಲ್ ಉಡುಗೆ ತೊಡುಗೆಗಳು ರಾಜಕುಮಾರ ಅವರನ್ನೇ ಅನುಸರಿಸುತ್ತಿದ್ದವು ಎಂದು ಗಮನಿಸಿದ್ದೆ. ತುಂಬಾ ಸ್ನೇಹಜೀವಿ ನಗುಮುಖದ ಅವರು ಕೆಲಸದ ವಿಷಯದಲ್ಲಿ ತುಂಬಾ ಕಟ್ಟುನಿಟ್ಟು ಸಹ . ಅವರು ಸಹ ಮೈಸೂರಿನಿಂದಲೇ ಓಡಾಡುತ್ತಿದ್ದರು. ಮುಂದೆ ತುಂಬಾ ಉನ್ನತ ದರ್ಜೆಗೆ ಪದೋನ್ನತಿ ಹೊಂದಿದ ಅವರು ಅಂದಿನ ಅದೇ ಸ್ನೇಹ ವಿಶ್ವಾಸವನ್ನು ಎಂದಿಗೂ ತೋರಿಸುವುದು ಅವರ ನಿಗರ್ವಿ ವ್ಯಕ್ತಿತ್ವಕ್ಕೆ ನಿದರ್ಶನವಾಗಿದೆ. ನನಗೆ ವಹಿಸಿದ ಹೊಸ ವ್ಯವಹಾರಗಳ ವಿಭಾಗಕ್ಕೆ ರಾಜೇಗೌಡ ಅವರು ಅಧಿಕಾರಿ ಕೆ ಎಸ್ ಜಗದೀಶ್ ಎನ್ನುವವರು ಉನ್ನತ ದರ್ಜೆ ಸಹಾಯಕರು ನಾನು ಮತ್ತು ಕೃಪ ಅಲ್ಲಿನ ಸಹಾಯಕರು. ತುಂಬಾ ಒಳ್ಳೆಯ ವಾತಾವರಣ ಇತ್ತು. ಜಗದೀಶ್ ಅವರು ಸಹ ಪದೋನ್ನತಿ ಹೊಂದಿ ತುಂಬಾ ಎತ್ತರದ ದರ್ಜೆಗೆ ಏರಿದವರು ಆದರೂ ಈಗಲೂ ಸಹ ಅದೇ ನಗುಮುಖದ ಸ್ನೇಹಮಯಿ ವ್ಯಕ್ತಿ. ಆಗಾಗ ಸಮಾರಂಭಗಳಲ್ಲಿ ಭೇಟಿಯಾದಾಗಲೂ ಆತ್ಮೀಯತೆಯಿಂದ ಮಾತನಾಡುತ್ತಾರೆ. ಅಲ್ಲದೆ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿಯೂ ಸದಾ ಸಂಪರ್ಕದಲ್ಲಿ ಇದ್ದಾರೆ. ಕೃಪಾ ಸಹ ಅಷ್ಟೇ ಮದುವೆಯಾದ ನಂತರ ಈಗ ಹುಬ್ಬಳ್ಳಿಯಲ್ಲಿ ನೆಲೆಸಿದ್ದರೂ ಮಧ್ಯೆ ಫೋನ್ ಸಂಪರ್ಕವಿಲ್ಲದೆ ಬಿಟ್ಟು ಹೋಗಿದ್ದ ಸ್ನೇಹ ಮೊಬೈಲ್ ಬಂದ ನಂತರ ಮತ್ತೆ ಚಿಗುರಿದೆ. ಇತ್ತೀಚೆಗೆ ಅವಳ ಮಗನ ಮದುವೆಗೂ ಸಹ ಆಹ್ವಾನ ಇತ್ತು .ಆದರೆ ಗುಜರಾತ್ ಪ್ರವಾಸಕ್ಕೆ ಹೊರಟಿದ್ದರಿಂದ ಮದುವೆಗೆ ಹೋಗಲಾಗಲಿಲ್ಲ. ಅವಳ ನಿಶ್ಚಿತಾರ್ಥ ಮತ್ತು ಮದುವೆ ಸಮಯದಲ್ಲಿ ನಾವೆಲ್ಲ ತುಂಬಾ ಎಂಜಾಯ್ ಮಾಡಿದ್ದು ಇನ್ನು ನೆನಪಿನಲ್ಲಿ ಇದೆ. ಹೊಸ ವ್ಯವಹಾರಗಳ ವಿಭಾಗ ಎಂದರೆ ಪಾಲಿಸಿಗಾಗಿ ಬಂದ ಪ್ರೊಪೋಸಲ್ ಅರ್ಜಿಗಳನ್ನು ಪರಿಶೀಲಿಸಿ ಅವು ವಿಮೆ ಸೌಲಭ್ಯಕ್ಕೆ ಅರ್ಹವೇ, ಯಾವುದೇ ಒಂದು ಸಂಶಯಾಸ್ಪದ ಸಂಗತಿಗಳು ಇಲ್ಲವೇ ಎಂಬುದನ್ನು ಪರಿಶೀಲಿಸಿ ನಂತರ ಅವು ಯೋಗ್ಯ ಎನಿಸಿದಾಗ ಮೊದಲ ಕಂತಿನ ಪ್ರೀಮಿಯಂ ಅನ್ನು ಸ್ವೀಕರಿಸಬೇಕು. ಆ ರೀತಿಯ ನಗದು ವಿಭಾಗದಿಂದ ಸ್ವೀಕರಿಸಿದ ರಶೀದಿಗಳನ್ನು B O C ಎಂದು ಕರೆಯುತ್ತಾರೆ ಹಾಗೂ ಅವುಗಳಿಗೆ ಒಂದು ಕ್ರಮ ಸಂಖ್ಯೆ ಇರುತ್ತದೆ. ವಿಮೆಗೆ ಯೋಗ್ಯವೇ ಎಂದು ಪರಿಗಣಿಸುವ ಪ್ರಕ್ರಿಯೆಗೆ underwriting ಎಂದು ಹೆಸರು. ಆ ಕೆಲಸ ತುಂಬಾ ಪ್ರಾಮುಖ್ಯವಾದದ್ದು ಎಂದು ಪರಿಗಣಿಸಿದ್ದು ಅಧಿಕಾರಿ ಅಥವಾ ಉನ್ನತ ದರ್ಜೆ ಸಹಾಯಕರು ಆ ರೀತಿ ಅಂಡರ್ ರೈಟಿಂಗ್ ಮಾಡಿ ಕೊಟ್ಟ ಪ್ರಪೋಸಲ್ ಗಳಿಗೆ ಬಿ ಓ ಸಿ ಗಳನ್ನು ಸೇರಿಸಿ ಅವುಗಳಿಗೆ ಪಾಲಿಸಿ ಸಂಖ್ಯೆಗಳನ್ನು ಕೊಡಬೇಕು .ಹೀಗೆ ಪಾಲಿಸಿ ಸಂಖ್ಯೆಯನ್ನು EAL ಎಂಬ ದೊಡ್ಡ ಆಕಾರದ ಶೀಟ್ಗಳಲ್ಲಿ ಮೂರು ಕಾಪಿ ಮಾಡಿ ಬರೆಯಬೇಕಿತ್ತು. ಲೆಡ್ಜರಿನ ಹಾಗೆ ಅದರಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಎರಡು ಭಾಗಗಳು ಇರುತ್ತಿದ್ದವು ಪಾಲಿಸಿ ಸಂಖ್ಯೆ ಪ್ರಪೋಸಲ್ನ ಸಂಖ್ಯೆ ಪಾಲಿಸಿದಾರರ ಹೆಸರು ಬಿ ಓ ಸಿ ಸಂಖ್ಯೆ ಈ ಎಲ್ಲಾ ಅಂಶಗಳನ್ನು ಬರೆದ ನಂತರ ಡೆಬಿಟ್ ಸೈಡ್ ನಲ್ಲಿ ಅದನ್ನು ಹೇಗೆ ಸ್ವೀಕರಿಸಿದವು ಎಂಬ ವಿವರ. ಮೊದಲ ಪ್ರೀಮಿಯಂ ಮೊದಲ ವರ್ಷದ ಪ್ರೀಮಿಯಂ ಬಡ್ಡಿ ಏನಾದರೂ ಇದ್ದರೆ ಅದು ಇವೆಲ್ಲ ವಿವರಗಳು ಇರುತ್ತಿದ್ದು ಕ್ರೆಡಿಟ್ ಸೈಡ್ ನಲ್ಲಿ ಬಿ ಓ ಸಿ ಯ ಮೊತ್ತ ಇರುತ್ತಿತ್ತು ಹೀಗೆ ಎರಡು ಸೈಡ್ ನ ಮೊತ್ತಗಳು ತಾಳೆ ಆಗಬೇಕಿತ್ತು. ಹೀಗೆ ಒಂದು ಶೀಟ್ ನಲ್ಲಿ ಏಳು ಪಾಲಿಸಿ ನಂಬರ್ ಗಳನ್ನು ಬರೆಯಬಹುದಿತ್ತು ನಂತರ ಹಿಂದಿನ ಪುಟದ ಮೊತ್ತವನ್ನು ಬರೆದುಕೊಂಡು ಎರಡರ ಮೊತ್ತವನ್ನು ಕಡೆಯ ಕಾಲಂನಲ್ಲಿ ಹಾಕಬೇಕಿತ್ತು. ಆ ಮೊತ್ತ ಮುಂದಿನ ಪುಟಕ್ಕೆ ಕ್ಯಾರಿ ಫಾರ್ವರ್ಡ್ ಆಗುತ್ತಿತ್ತು. ಒಂದು ರೀತಿ ಆಸಕ್ತಿದಾಯಕ ಕೆಲಸವೇ ಹೀಗೆ ಇ ಎ ಎಲ್ ಬರೆಯುವುದರ ಜೊತೆಗೆ ಬಿ ಓ ಸಿ ಗಳ ರಿಜಿಸ್ಟರ್ ನಲ್ಲಿ ಸಹ ಅದನ್ನು ಬರೆದು ಪ್ರತಿ ತಿಂಗಳು ಈ ರೀತಿಯ ಉಳಿದ ಡೆಪಾಸಿಟ್ಗಳ ಷೆಡ್ಯೂಲ್ ತಯಾರಿಸಬೇಕಿತ್ತು. ಆಗ ಎಲ್ಲವೂ ನಾವೇ ಮ್ಯಾನುಯೆಲ್ ಆಗಿ ಮಾಡಬೇಕಿದ್ದು ಒಂದು ರೀತಿಯ ಖುಷಿ ಇರುತ್ತಿತ್ತು. ಇದರ ಜೊತೆಗೆ ಹೊಸ ವ್ಯವಹಾರ ವಿಭಾಗದಲ್ಲಿ ಬಾಂಡ್ ಗಳ ಪ್ರಿಂಟ್ ಆದ ನಂತರ ಅದರಲ್ಲಿನ ಮೊದಲ ಪ್ರೀಮಿಯಂ ರಶೀದಿಯನ್ನು ಸೇಲ್ಸ್ ವಿಭಾಗಕ್ಕೆ ಕಳಿಸಬೇಕಿತ್ತು ಈ ಮೊದಲೇ ಹೇಳಿದಂತೆ ಕಮಿಷನ್ ವಿಭಾಗದಲ್ಲಿ ಇವುಗಳ ಆಧಾರದ ಮೇಲೆ ಏಜೆಂಟ್ಸ್ ಗಳ ಕಮಿಷನ್ ಬಿಲ್ ತಯಾರಿಸಲಾಗುತ್ತಿತ್ತು. ಸಂಬಳ ಉಳಿತಾಯ ವಿಭಾಗದ ಪಾಲಿಸಿಗಳ ಆದರೆ ಅವುಗಳ ಪ್ರೀಮಿಯಂ ಅನ್ನು ಸಂಬಳದಲ್ಲಿ ಹಿಡಿದುಕೊಳ್ಳುವಂತೆ ಪೇಯಿಂಗ್ ಅಥಾರಿಟಿಗಳಿಗೆ ಆದೇಶ ಕೊಡುವ ಲೆಟರ್ ಸಹ ಇಲ್ಲಿಯೇ ತಯಾರಾಗುತ್ತಿದ್ದುದು. ಇದಕ್ಕೆ ಆಥರೈಸೇಷನ್ ಲೆಟರ್ ಎಂದು ಹೆಸರು. ಇವುಗಳನ್ನು ಸರಿಯಾಗಿ ಸರಿಯಾದ ಸಂಸ್ಥೆಗೆ ಕಳಿಸಿದರೆ ಮಾತ್ರ ಸಂಬಳದಲ್ಲಿ ಪ್ರೀಮಿಯಂ ನ ರಿಕವರಿ ಆಆರಂಭವಾಗುತ್ತಿದ್ದುದು. ಬಾಂಡ್ ಗಳ ತಯಾರಿ ಆಗ ಅಡೆರಿಮ ಮೆಷಿನ್ ನಲ್ಲಿ ಆಗುತ್ತಿದ್ದು ಅವುಗಳನ್ನು ಪಾಲಿಸಿ ದಾರರಿಗೆ ಕಳುಹಿಸಬೇಕಿದ್ದು ಹೊಸ ವಿಭಾಗದವರ ಕೆಲಸವೇ. ಹಾಗೆ ಏನಾದರೂ ಬಟವಾಡೆ ಆಗದೆ ಹಿಂದಿರುಗಿದ ಬಾಂಡುಗಳನ್ನು ಮತ್ತೊಂದು ರಿಜಿಸ್ಟರ್ ನಲ್ಲಿ ಬರೆದು ಅವುಗಳನ್ನು ಜೋಪಾನವಾಗಿ ಎತ್ತಿಡಬೇಕಿತ್ತು. ಕೆಲವೊಮ್ಮೆ ಬಿ ಓ ಸಿ ಮೊತ್ತಗಳು ಬೇಕಾದ ಮೊತ್ತಕ್ಕಿಂತ ಹೆಚ್ಚು ಇರುತ್ತಿದ್ದು ಉಳಿದ ಮೊತ್ತವನ್ನು ಪಾಲಿಸಿದಾರೆರಿಗೆ ವಾಪಸ್ಸು ಮಾಡಬೇಕಿತ್ತು ಅದನ್ನು ಮನಿ ಆರ್ಡರ್ ಮೂಲಕ ವಾಪಸ್ಸು ಮಾಡಲಾಗುತ್ತಿತ್ತು ಆಗ. ನಂಜನಗೂಡಿನಲ್ಲಿ ಇದ್ದ ಸಹೋದ್ಯೋಗಿಗಳೆಲ್ಲ ಮನೆಗೆ ಊಟಕ್ಕೆ ಹೋಗುತ್ತಿದ್ದರು. ಮೈಸೂರಿನಿಂದ ಓಡಾಡುತ್ತಿದ್ದ ನಾವೆಲ್ಲ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದೆವು. ಅಂದು ಮಧ್ಯಾಹ್ನದ ಕಾಫಿಗೆ ಪಕ್ಕದ ಹೋಟೆಲಿಗೆ ಕೃಪಾ ಹಾಗೂ ಇನ್ನಿಬ್ಬರು ಗೆಳತಿಯರೊಂದಿಗೆ ಹೋಗಿಬಂದೆವು. ವಾಪಸ್ಸು ಬರಲು ರೈಲು ೫_೫೫ ಕ್ಕೆ ಇದ್ದದ್ದು . ಹಾಗಾಗಿ ಸಂಜೆ ವಾಪಸ್ಸು ಹೋಗುವಾಗ ನಮ್ಮ ಹೂವು ಹಣ್ಣು ತರಕಾರಿಗಳ ಖರೀದಿ ನಡೆಯುತ್ತಿತ್ತು. ಅಲ್ಲಿ ತುಂಬಾ ತಾಜಾ ಆಗಿ ಎಲ್ಲವೂ ಸಿಕ್ಕುತ್ತಿದ್ದುದರಿಂದ ಬೇಕೆನಿಸಿದ್ದನ್ನು ಖರೀದಿಸಿ ರೈಲು ನಿಲ್ದಾಣಕ್ಕೆ ಬರುತ್ತಿದ್ದೆವು .ಆದರೆ ಆ ರೈಲು ಆಗ ಚಾಮರಾಜನಗರದಿಂದ ಬರುತ್ತಿದ್ದು ಸಾಮಾನ್ಯ ನಮಗೆ ಸೀಟ್ ಸಿಗುತ್ತಿರಲಿಲ್ಲ. ನ್ಯೂಸ್ ಪೇಪರ್ ಗಳನ್ನು ಬ್ಯಾಗಿನಲ್ಲಿ ಇಟ್ಟುಕೊಂಡಿದ್ದು ಬಾಗಿಲಿನ ಬಳಿ ಹಾಕಿಕೊಂಡು ಕಾಲು ಇಳಿಬಿಟ್ಟು ಕುಳಿತುಕೊಳ್ಳುತ್ತಿದ್ದೆವು. ಆದರೆ ಹಾಗೆ ಕುಳಿತ ಒಬ್ಬರಿಗೆ ರೈಲ್ವೆ ನಿಲ್ದಾಣದ ಕಟ್ಟೆ ತಗಲಿ ಕಾಲೇ ಹೋದ ವಿಷಯ ನಂತರದಲ್ಲಿ ತಿಳಿದು ಆ ಕೆಟ್ಟ ಅಭ್ಯಾಸವನ್ನು ಬಿಟ್ಟುಬಿಟ್ಟೆವು. ನಿಂತರೂ ಪರವಾಗಿಲ್ಲ ಅಪಾಯ ಬೇಡ ಅಂತ. ಬೆಳಿಗ್ಗೆ 9:15ಕ್ಕೆ ಅಶೋಕ ಪುರಂ ನಿಂದ ರೈಲು ಇದ್ದದ್ದು ಅರ್ಧ ಗಂಟೆ ನಡೆಯಲು ಬೇಕೇ ಬೇಕಿತ್ತು .ಹಾಗಾಗಿ 8:15 8:20ಕ್ಕೆ ಮನೆ ಬಿಡುತ್ತಿದ್ದು ಅಲ್ಲಿಂದ ನಡೆದು ಅಶೋಕಪುರಂ ನಿಲ್ದಾಣಕ್ಕೆ ಬಂದರೆ ಕ್ರಾಸಿಂಗ್ ಅಲ್ಲಿ ಆರಾಮವಾಗಿ ರೈಲು ಸಿಗುತ್ತಿತ್ತು .ರವೀಶ್ ಏನಾದರೂ ಡ್ರಾಪ್ ಕೊಡುತ್ತೇನೆ ಎಂದರೆ ಚಾಮರಾಜಪುರಂ ರೈಲ್ವೆ ನಿಲ್ದಾಣಕ್ಕೆ ಹೋಗಿ ಹತ್ತುತ್ತಿದ್ದುದು. ಬರುವಾಗ ಮಾತ್ರ ಚಾಮರಾಜಪುರಂ ನಿಲ್ದಾಣದಲ್ಲಿ ಇಳಿಯುತ್ತಿದ್ದು. ಅಶೋಕಪುರಂ ನಿಲ್ದಾಣದಿಂದ ಕುವೆಂಪು ನಗರಕ್ಕೆ ಬರುವ ಹಾದಿ ಆಗ ಕೆರೆಯ ಏರಿ ಮತ್ತು ಕಾಡು ಇದ್ದ ಹಾಗೆ ಇತ್ತು. ಬೆಳಗಿನ ಹೊತ್ತು ನಡೆದು ಹೋಗಬಹುದಿತ್ತು ಆದರೆ ಸಂಜೆ ಕತ್ತಲಾದ ಮೇಲೆ ಓಡಾಡಲು ಆಗುತ್ತಿರಲಿಲ್ಲ ಹಾಗಾಗಿ ಚಾಮರಾಜಪುರಂ ನಿಲ್ದಾಣದಲ್ಲಿ ಇಳಿದು ನಾನು ಕೃಪ ಜೊತೆಗೆ ಬರುತ್ತಿದ್ದೆವು. ನಂತರ ಅವಳು ನೇರ ಹೋದರೆ ನಾನು ಆದಿಚುಂಚನಗಿರಿ ರಸ್ತೆಗೆ ತಿರುಗಿ ನಡೆದು ಬರುತ್ತಿದೆ ಅದು ಮುಖ್ಯರಸ್ತೆ ಆದ್ದರಿಂದ ಹೆದರಿಕೆ ಇರಲಿಲ್ಲ ಈಗ ಯೋಚಿಸಿದರೆ ಎಷ್ಟು ದೂರ ನಡೆಯುತ್ತಿದ್ದೆವಲ್ಲ ಹಾಗಾಗಿಯೇ ಆಗ ಅರೋಗ್ಯ ಚೆನ್ನಾಗಿತ್ತು ಎನಿಸುತ್ತದೆ ಬಸ್ ಸೌಲಭ್ಯವು ಅಷ್ಟೇನೂ ಚೆನ್ನಾಗಿರಲಿಲ್ಲವಾದ್ದರಿಂದ ಆಗ ನಡಿಗೆಯನ್ನೇ ಆಶ್ರಯಿಸುತ್ತಿದ್ದದು. ತೀರಾ ಕಾಲು ನೋವು ಅಥವಾ ಮೈ ಸರಿ ಇಲ್ಲದಿದ್ದಾಗ ಮಾತ್ರ ಆಟೋ ಬಳಸುತ್ತಿದ್ದುದು. ತುಂಬಾ ನೆನಪಿನಲ್ಲಿ ಇರುವ ಒಂದು ಸ್ವಾರಸ್ಯಕರ ಘಟನೆ ಹೇಳುತ್ತೇನೆ. ಮೊದಲ ಎರಡು ದಿನ ಟಿಕೆಟ್ ತೆಗೆದುಕೊಂಡೇ ಪ್ರಯಾಣಿಸಿದ ನಾನು ಮೂರನೆಯ ದಿನ ಮೂರು ತಿಂಗಳ ಪಾಸ್ ಮಾಡಿಸಿದೆ. ಆಗ ಮೂರು ತಿಂಗಳ ಪಾಸ್ಗೆ 45 ರೂಪಾಯಿ ಮಾತ್ರ ತಿಂಗಳ ಪಾಸಾದರೆ 20 ರೂಪಾಯಿ ಅನಿಸುತ್ತೆ. ಇಳಿಯುತ್ತಿದ್ದು ಚಾಮರಾಜಪುರಂನಲ್ಲೆ ಆದ್ದರಿಂದ ಚಾಮರಾಜಪುರಂನಿಂದ ನಂಜನಗೂಡಿಗೆ ಪಾಸ್ ಮಾಡಿಸಬೇಕಿತ್ತು. ಹಾಗಾಗಿ ಅಂದು ಸ್ವಲ್ಪ ಬೇಗ ಹೋಗಿ ಚಾಮರಾಜಪುರಂ ಸ್ಟೇಷನ್ ನಲ್ಲಿ ಮೂರು ತಿಂಗಳ ಪಾಸ್ ತೆಗೆದುಕೊಂಡ ತಕ್ಷಣವೇ ರೈಲು ಬಂತು ದಡಬಡ ಎಂದು ಹತ್ತಿ ಇನ್ನೂ ಕುಳಿತುಕೊಂಡಿಲ್ಲ ಆಗಲೇ ಚೆಕಿಂಗ್ ನವರು ಬಂದರು. ಪಾಸ್ ನ ಹಿಂದೆ ನನ್ನ ಸಹಿ ಮಾಡಬೇಕಿತ್ತು ಆದರೆ ಆ ಗಡಿಬಿಡಿಯಲ್ಲಿ ಇನ್ನು ಮಾಡಲು ಆಗಿರಲಿಲ್ಲ ಮಾಡುವಷ್ಟರಲ್ಲಿ ಅದನ್ನು ತೆಗೆದುಕೊಂಡು ಫೈನ್ ಹಾಕಿಯೇ ಬಿಟ್ಟರು. ನೂರು ರೂಪಾಯಿ. ಫೈನ್ ಅಲ್ಲದೆ ಎಜುಕೇಟೆಡ್ ಆಗಿ ನೀವು ಹೀಗೆ ಮಾಡುವುದ ಅನ್ನೋ ಮಾತು ಬೇರೆ. ಈಗ ತಾನೇ ತೆಗೆದುಕೊಂಡು ಹತ್ತಿದೆ ಎಂದರು ಅವರು ಕೇಳಲು ರೆಡಿ ಇರಲಿಲ್ಲ. ಆರು ತಿಂಗಳ ಪಾಸ್ ಗೆ ಆಗುವಷ್ಟು ದುಡ್ಡನ್ನು ದಂಡ ಕಟ್ಟಿ ಐದು ದಿನಗಳ ಕಾಲ ಕೊರಗಿದೆ ಅನ್ನಿ. ಆಗಿನ ಕಾಲದಲ್ಲಿ ನೂರು ರೂಪಾಯಿಗೆ ತುಂಬಾ