ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸ್ವತಂತ್ರ ಭಾರತದ ಮೊದಲ ಮಹಿಳಾ ಮುಖ್ಯ ಮಂತ್ರಿ ಸುಚೇತಾ ಕೃಪಲಾನಿ. ಇವರು ಬ್ರಿಟಿಷ ಭಾರತದ ಪಂಜಾಬಿನ ಅಂಬಾಲದ(ಇಂಅದಿನ ಹರಿಯಾಣ) ಬಂಗಾಳಿ ಬ್ರಾಹ್ಮಣ ಕುಟುಂಬದಲ್ಲಿ ೨೫ ಜೂನ ೧೯೦೮ರಲ್ಲಿ ಜನಿಸಿದರು. ಇವರ ತಂದೆ ಸುರೇಂದ್ರನಾಥ ಮಜುಂದಾರ. ತಾಯಿ ಮನೆಯ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದರು. ಇವರ ತಂದೆ ಸುರೇಂದ್ರ ವೈದ್ಯಾಧಿಕಾರಿಗಳಾಗಿದ್ದರಿಂದ ಇವರಿಗೆ ಪದೇ ಪದೇ ವರ್ಗಾವಣೆಯಾಗುತ್ತಿತ್ತು. ಹಾಗಾಗಿ ಸುಚೇತಾರವರು ಬೇರೆ ಬೇರೆ ಶಾಲೆಗಳಲ್ಲಿ ಓದಿದರು. ಇವರು ಇಂದ್ರಪ್ರಸ್ಥ ಕಾಲೇಜು ಮತ್ತು ಸ್ಟೆಂಟ್ ಸ್ಟಿಫನ್ಸ್ ಕಾಲೇಜು ದೇಹಲಿಯಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಪಡೆದರು.
ಇವರು ತಮ್ಮ ಶಿಕ್ಷಣ ಮುಗಿಸಿದ ನಂತರ ೧೯೩೯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಕಾನ್‌ಸ್ಟುಷನ್ ಹಿಸ್ಟಿç ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಅದೇ ಸಮಯದಲ್ಲಿ ೧೯೩೬ರಲ್ಲಿ ಆಚಾರ್ಯ ಕೃಪಲಾನಿಯವರೊಂದಿಗೆ ವಿವಾಹವಾದರು. ಆಚಾರ್ಯ ಮತ್ತು ಸುಚೇತಾರ ನಡುವೆ ತುಂಬಾ ವಯಸ್ಸಿನ ಅಂತರವಿರುವುದನ್ನು ಕುಟುಂಬದವರು ಮತ್ತು ಗಾಂಧಿಜೀಯವರ ವಿರೋಧಿಸಿದರು. ವಿರೋಧದ ನಡುವೆಯು ವಿವಾಹವಾದರು. ಆಚಾರ್ಯ ಕೃಪಲಾನಿಯವರು ಕಾಂಗ್ರೆಸ್ ಪಾರ್ಟಿಯ ಸದಸ್ಯರು ಮತ್ತು ಸ್ವತಂತ್ರö್ಯ ಹೋರಾಟಗಾರರಾಗಿದ್ದರು.
ಸುಚೇತಾರವರ ಮನೆಯಲ್ಲಿ ತಂದೆ ತಾಯಿ ದೇಶ ಭಕ್ತರಾಗಿದ್ದರಿಂದ, ಅವರ ಪ್ರಭಾವ ಸುಚೇತಾರ ಮೇಲೆಯು ಬೀರಿತು. ಹಾಗಾಗಿ ಇವರು ೪೦ರ ದಶಕದಲ್ಲಿ ಸ್ವಾತಂತ್ರö್ಯ ಹೋರಾಟ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಇವರು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ತೊಡಗಿದಾಗ ಮೊದಲು ಬಂಧನದಿAದ ತಪ್ಪಿಸಿಕೊಂಡಿದ್ದರು. ಆದರೆ ೧೯೪೨ರಲ್ಲಿ ಒಂದು ವರ್ಷಗಳ ಕಾಲ ಬಂಧನಕ್ಕೆ ಒಳಗಾದರು. ಸುಚೇತಾರವರು ಗಾಂಧಿಜಿಯವರೊAದಿಗೆ ಸ್ವಾತಂತ್ರö್ಯ ಚಳುವಳಿಯಲ್ಲಿ ಸಕ್ರಿಯಾಗಿ ತೊಡಗಿಸಿಕೊಂಡಿದ್ದರ ಜೊತೆಗೆ ದೇಶ ವಿಭಜನೆಯಾದಾಗ ಗಾಂಧಿಜಿಯವರೊAದಿಗೆ ೧೯೪೬ರಲ್ಲಿ ನೊಯಾಕಾಲಿಗೆ ಹೋದರು.

ಸ್ವತಂತ್ರದ ಹೋರಾಟದ ನಂತರ ಇವರು ರಾಜಕೀಯ ಮತ್ತು ಸಂವಿಧಾನ ರಚನಾ ಸಮಿತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಸಂವಿಧಾನ ರಚನಾ ಸಮಿತಿಯಲ್ಲಿ ಸಾಕಷ್ಟು ಕೆಲಸವನ್ನು ಮಾಡಿದರು. ಇವರು ೧೯೪೭ರಲ್ಲಿ ಅಧಿವೇಶನದಲ್ಲಿ ರಾಷ್ಟçಗೀತೆಯಾದ ‘ವಂದೇ ಮಾತರಂ’ ಅನ್ನು ಹಾಡಿದರು. ಹಾಗೇಯೆ ಧ್ವಜ ಪ್ರಸ್ತುತಿ ಸಮಿತಿಯ ಸದಸ್ಯರಾಗಿದ್ದರು. ಸಂವಿಧಾನ ಸಭೆಯ ಮುಂದೆ ಮೊದಲ ಬಾರಿಗೆ ಭಾರತೀಯ ಧ್ವಜವನ್ನು ಪ್ರಸ್ತುತ ಪಡಿಸಿದರು.
ಸುಚೇತಾರವರು ಉತ್ತರ ಪ್ರದೇಶದ ಮೊದಲ ಮಹಿಳಾ ಮುಖ್ಯಮಂತ್ರಿಯಾಗುವುದರ ಜೊತೆಗೆ ಭಾರತ ದೇಶದ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರು ಅಕ್ಟೋಬರ್ ೨, ೧೯೬೩ ರಿಂದ ೧೩ ಮಾರ್ಚ್ ೧೯೬೭ರ ವರೆಗೆ ಅಧಿಕಾರದಲ್ಲಿ ಇದ್ದರು. ಇವರು ೧೯೫೨ರಲ್ಲಿ ಮೊದಲ ಲೋಕಸಭಾ ಚುಣಾವಣೆಗೆ ತಮ್ಮ ಪತಿ ಸ್ಥಾಪಿಸಿದ ಕೆಎಂಪಿಪಿ ನಿಂದ ಟಿಕೇಟ್ ಪಡೆದು ನವದೆಹಲಿಯಿಂದ ಸ್ಪರ್ದಿಸಿ ವಿಜೇತರಾದರು. ಆ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮನಮೋಹಿನಿ ಸೆಹಗಲ್ ಅವರನ್ನು ಸೋಲಿಸಿದರು. ನಂತರ ಸುಚೇತಾರವರೆ ಐದು ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷದಿಂದ ಮರು ಆಯ್ಕೆಯಾದರು. ಇವರು ಕೊನೆಯ ಬಾರಿಗೆ ೧೯೬೭ರಲ್ಲಿ ಉತ್ತರ ಪ್ರದೇಶದ ಗೊಂಡಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಈ ಮಧ್ಯ ೧೯೬೦ ರಿಂದ ೧೯೬೩ರ ವರೆಗೆ ಉತ್ತರ ಪ್ರದೇಶದ ವಿಧಾನ ಸಭೆಯ ಸದಸ್ಯರು ಆಗಿದ್ದರು. ಇವರು ಯುಪಿ ಸರ್ಕಾರದಲ್ಲಿ ಕಾರ್ಮಿಕ ಸಮುದಾಯ ಅಭಿವೃದ್ಧಿ ಮತ್ತು ಕೈಗಾರಿಕಾ ಸಚಿವರಾಗಿ ಸೇವೆಸಲ್ಲಿಸಿದರು. ಹೀಗೆ ಸುಚೇತಾರವರು ಹಲವು ಕ್ಷೇತ್ರದಲ್ಲಿ ಕೆಲಸ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ. ಇವರು ೧೯೭೪ರಲ್ಲಿ ತಮ್ಮ ಕೊನೆ ಉಸಿರೆಳೆದರು.


About The Author

1 thought on “”

Leave a Reply

You cannot copy content of this page

Scroll to Top