ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಸಹಿಸಲಾರೆವು ನಾವು,ದೇವನೇ…
ನೀನೇಕೆ ಮೌನಿಯಾಗಿರುವಿ ದೇವನೇ,!

    ರಕ್ತಸಿಕ್ತ ಮಕ್ಕಳ ಆ ದೇಹಗಳ…
    ಗಾಯ ನೋಡಲಾರೆವು,ಅವುಗಳ,!

ನಿತ್ಯ ಸ್ಪೋಟಿಸುವ ನಿರಂತರ…
ಬಂದೂಕು ಗುಂಡುಗಳ ಅವಾಂತರ,!

    ಗಾಝಾ ಮಣ್ಣಿಗೆ ಮುಕ್ತಿ ಇಲ್ಲವೆ…?
    ಕಣ್ಣೀರು ಆ ಮಕ್ಕಳ ಕಾಣಿಸುತ್ತಿಲ್ಲವೇ,!

ಬೇಟೆ ನಿರತ ದುಷ್ಟ ತೋಳಗಳೇ…
ಕರುಣೆಯ ಕಣ್ಣಿಲ್ಲದ ನೀಚ ಕುಲಗಳೇ,!

    ದುರಾಂಕಾರವು ಶಾಶ್ವತವಲ್ಲ…
    ಮನುಷ್ಯತ್ವಕ್ಕೆ ನಿಮ್ಮಲ್ಲಿ ಬೆಲೆಯಿಲ್ಲ,!?

ಇತಿಹಾಸದ ಮಣ್ಣದು ಜಾಗ್ರತೆ…
ಇಸ್ರೇಲ್ ಕ್ರೂರಕ್ಕೆ ಅಲ್ಲಿಲ್ಲ ಅರ್ಹತೆ,!

    ನರ ಮಾನವ ಬೇಟೆ ನಿಲ್ಲಿಸಲಿ …
    ನರಭಕ್ಷಕ ತೋಳಗಳ ಅಟ್ಟಾಡಿಸಲಿ,!

ಲೋಕ ರಾಷ್ಟ್ರಗಳೆಲ್ಲವು ಎದ್ದೇಳಲಿ…
ಕ್ರೂರಿಗಳ ಅಟ್ಟಹಾಸವನು ತೊಲಗಿಸಲಿ.!


About The Author

Leave a Reply

You cannot copy content of this page

Scroll to Top