ಕಾವ್ಯ ಸಂಗಾತಿ
ಸುಧಾ ಪಾಟೀಲ ಅವರ ಕವಿತೆ,
ಹೇಗೆ ಹೇಳಲಿ?

image̲ chatgpt
ಒಡಲ ಹೊತ್ತಿ ಉರಿಯುವುದ ನಿನಗೆ ಹೇಗೆ ಹೇಳಲಿ
ಹೃದಯದ ಮಾಸದ ಗಾಯವ
ಸಾವರಿಸಿಕೊಳ್ಳುವುದ ನಿನಗೆ ಹೇಗೆ ಹೇಳಲಿ
ಮನದ ಇಂಗಿತವ ತೆರೆದಿಟ್ಟು ಫಲವೇನು
ಭಯದ ವಿಹ್ವಲತೆಯ ತುಣುಕುಗಳ ಸುಧಾರಿಸಿಕೊಳ್ಳು ವುದ ನಿನಗೆ ಹೇಗೆ ಹೇಳಲಿ
ಬರಿದೇ ಜರಿಯುವ ಜನರ ಮಧ್ಯದಲಿ ನಾ ಕಳೆದುಹೋದೆ
ಆತಂಕದ ಕ್ಷಣಗಳ ಮುಚ್ಚಿಡುವುದ ನಿನಗೆ ಹೇಗೆ ಹೇಳಲಿ
ಬೇಡವೆಂದರೂ ಬಿಡದು ಈ ಮಾಯಾಜಗವು
ಹನಿ ಹನಿ ಕಣ್ಣೀರ ಒಸರುವುದ
ನಿನಗೆ ಹೇಗೆ ಹೇಳಲಿ
ಬಯಸಿದ್ದೆಲ್ಲ ಸಿಗದು ಈ ಜಗದಿ ನೋಡು
ಅಮೃತವ ಹಂಚುವೆನೆಂದರೂ ನಿರಾಕರಿಸುವುದ ನಿನಗೆ ಹೇಗೆ ಹೇಳಲಿ
ಸುಧಾ ಪಾಟೀಲ




