ಗಜಲ್ ಸಂಗಾತಿ
ಸರ್ವಮಂಗಳ ಜಯರಾಂ
ಗಜಲ್

ಮೂಢನಂಬಿಕೆಯ ಕಂದಕದಲ್ಲಿ ಮೀಯುತ್ತ ಎತ್ತ ಸಾಗಿದೆ ಈ ಜಗ /
ಪೈಶಾಚಿಕತೆಯ ಕಾರಿರುಳಿನಲ್ಲಿ ಮುಳುಗುತ್ತ ಎತ್ತ ಸಾಗಿದೆ ಈ ಜಗ /
ಅನಕ್ಷರತೆಯ ಕೂಪದಲ್ಲಿ ನರಳುತಿಹರು ಸೌಲಭ್ಯ ವಂಚಿತರು /
ಸ್ವಾತಂತ್ರ್ಯದ ಹೆಸರಿನಲ್ಲಿ ಕುಣಿಯುತ್ತಾ ಎತ್ತ ಸಾಗಿದೆ ಈ ಜಗ /
ತುತ್ತು ಅನ್ನಕ್ಕೂ ಗತಿ ಇಲ್ಲದೆ ಅಲೆಯುತಿಹರು ಬಡಪಾಯಿಗಳು /
ಅಮಾಯಕರ ನೆತ್ತಿಯಲ್ಲಿ ಕಾಲಿಡುತ್ತ ಎತ್ತ ಸಾಗಿದೆ ಈ ಜಗ /
ನಿರ್ಗತಿಕರ ಸಮಾಧಿಯ ಮೇಲೆ ಭವ್ಯ ಬಂಗಲೆ ನಿರ್ಮಿಸುತಿಹರು /
ಆಧುನಿಕತೆಯ ವ್ಯಾಮೋಹದಲ್ಲಿ ತೇಲುತ್ತಾ ಎತ್ತ ಸಾಗಿದೆ ಈ ಜಗ /
ಅವ್ಯವಸ್ಥೆಯ ಆಗರವ ಕಂಡು ತಲ್ಲಣಗೊಂಡಿದೆ ಮಾಧುರಿಯ ಮನ /
ಬೈಗುಳ, ಅವಮಾನ,ನಿಂದೆಗಳಲ್ಲಿ ಕಾಲೆಳೆಯುತ್ತಾ ಎತ್ತ ಸಾಗಿದೆ ಈ ಜಗ /
———————————————————————————————–
ಸರ್ವಮಂಗಳ ಜಯರಾಂ.




