ಕಾವ್ಯ ಸಂಗಾತಿ
ವ್ಯಾಸ ಜೋಶಿ ಅವರ
ತನಗಗಳು

ಮುಂದಿನ ಪೀಳಿಗೆ
ಮನೆ ಕಟ್ಟಿಸೋವಾಗ
ಅಡುಗೆ ಮನೆ ವರ್ಜ್ಯ
ಸ್ವಿಗ್ಗೀ, ಝುಮಾಟೋ ರಾಜ್ಯ.
ಸ್ನೇಹ ಸಂಬಂಧಗಳ
ಸಂತೋಷಪಡಿಸಲು
ತ್ಯಾಗವೇನು ಬೇಕಿಲ್ಲ
ಸವಿ ಮಾತು ಸಾಕಲ್ಲ!.
ಅರಮನೆ ಇದ್ದರೂ
ನೆರೆ ಮನೆಯು ಬೇಕು,
ಸುಖ ದುಃಖ ಹಂಚಲು
ಕಿರು ನಗೆಯು ಸಾಕು.
ಮನವೆಂಬ ಬೆರಳು
ನರಗಳೇ ತಂತಿಯು
ಉದರ ತಳದಿಂದ
ಹೊಮ್ಮುತ್ತಿದೆ ರಾಗವು.
ನಾಭಿಯ ‘ಬಾತೆ’ ಮಾಡಿ
ಹೊರಡಿಸಿದ ಗಾಳಿ
ನಾಲಿಗೆ, ಕಂಠದಲ್ಲಿ
ಸಪ್ತಸ್ವರ ಹಾಡಿತು.
ಪಾಲಕರ ನೆರಳು
ಗಂಧದ ಮರದಂತೆ
ಸುಗಂಧ ಅರಿಯೋದು
ತೀರಿ ಹೋದಮೇಲಂತೆ.
ವ್ಯಸನಕ್ಕೆ ದೇಹದಿ
ಕೊಡಬೇಡ ಜಾಗವ,
ಆಮೇಲೆ ಅವುಗಳು
ಬಿಡಲು ತಕರಾರು.
ವ್ಯಾಸ ಜೋಶಿ




