ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ನಗಬೇಕು”

image created by: chatgpt
ನಗಬೇಕು ಅಳುವ ಮರೆತು
ಮುಂದೆ ಕಾದಿದೆ ಜೀವನ
ಕಷ್ಟ ನಷ್ಟ ಸಾವು ನೋವು
ದೈವ ವಿಧಿಸಿದ ಬಂಧನ
ಅತ್ತು ಅತ್ತು ಬಿಕ್ಕಬೇಡ
ಚಿಮ್ಮಲೊಮ್ಮೆ ಚಿಲುಮೆ
ಎಲೆ ಉದುರಿದ ಕಾಂಡದಿ
ಹಸಿರು ಚಿಗುರು ಚೇತನ
ನಕ್ಕುಬಿಡು ದುಃಖ ಮರೆತು
ಸೊಗಸು ಸಂತಸ ಸವಿ ಮನ
ದುಗುಡ ದೂರವಾಗಿ ತೊಲಗಲಿ
ಶಾಂತಿ ಪ್ರೀತಿ ಪಾವನ
ಕಿಟಕಿಯಾಚೆ ರವಿಯ ಬೆಳಕು
ಸಂಜೆ ಚಂದ್ರನ ಸ್ಪಂದನ
ನಗೆಯು ಮುಖದಿ ಮಾಸದಿರಲಿ
ಬಾಳು ನಿತ್ಯ ನೂತನ
ಡಾ ಶಶಿಕಾಂತ ಪಟ್ಟಣ ರಾಮದುರ್ಗ





ಅರ್ಥ ಪೂರ್ಣ ಕವನ ಸರ್
ಏನೇ ಬರಲಿ…ದುಃಖ ಮರೆತು ನಗಬೇಕು ಈ ಜೀವನದಿ ಎನ್ನುವ ತತ್ವವನ್ನು ಹೊಂದಿದ ಕವನ
ಎಲ್ಲರೂ ತಿಳಿದುಕೊಂಡು ಅಳವಡಿಸಿಕೊಳ್ಳು ವಂತಹುದು
ಸುತೇಜ
ಎಷ್ಟು ಚಂದ ಕವನಗಳನ್ನು ಬರಿತೀರಾ, ನಿಮ್ಮ ಸಾಹಿತ್ಯಜ್ಞಾನ ದೊಡ್ಡದು ಮತ್ತೆ ನೀವು ನಮಗೆ ಕಾವ್ಯ ಕೂಟದಲ್ಲಿ ಬರೆಯಲು ಸ್ಪೂರ್ತಿ
ಜೀವನದಲ್ಲಿ ಏನೇ ಬರಲಿ ಎದುರಿಸಿ, ನಗುತಾ ಗೆಲುವು ಪಡೆಯಬೇಕು .ಎಂಬ ಆಶಾ ಭಾವನೆ ಮೂಡುವದು. ಎಲ್ಲರಿಗೂ ಸ್ಫೂರ್ತಿ.
ನಗಬೇಕು…..
ಅತ್ಯದ್ಭುತ ಕವನ
ನಿಮ್ಮ ಕವನವೇ ಸ್ಪೂರ್ತಿ
ಸರ್ವರಿಗೂ……….
ಅಕ್ಕಮಹಾದೇವಿ
ಸುಂದರ ಕವಿತೆ sir