ಕಾವ್ಯ ಸಂಗಾತಿ
ಅಕ್ಕಮಹಾದೇವಿ ತೆಗ್ಗಿ
ʼರೆಪ್ಪೆಯೊಳಗಿನ ಕನಸುʼ

ಕಿತ್ತು ತಿನ್ನುವ ಬಡತನ
ತುತ್ತು ಕೊಳಿಗಾಗಿ ದುಡಿದು
ತರಕಾರಿ ಮಾರಿ, ಬಂದ
ಹಣದಲ್ಲಿ ಹೊಟ್ಟೆಗೆ ‘ಇದ್ದರೆ,
ಬಟ್ಟೆಗೆಇಲ್ಲ……
ಅಪ್ಪ ಇಲ್ಲ’ ಅವ್ವ ಕೂಲಿಗೆ,
ನಾನು ಶಾಲೆ ಬಿಟ್ಟು
ತರಕಾರಿ ಮಾರುವೆ.
ತುಂಬಾ ಹಣ ಗಳಿಸುವೆ’
ಆದರೆ ಬೇಸಿಗೆ ಬಿಸಿಲು
ಯಾರು ಬಂದಿಲ್ಲಾ ಕೊಳ್ಳಲು,
ಹಸಿವಿನಿಂದ ಬಳಲಿ, ಕಣ್ಣು
ಮುಚ್ಚುತ್ತಿವೆ.
ಶಾಲೆ ಇಲ್ಲಾ ಊಟಾ ಇಲ್ಲಾ
ನಾನಾ ಚಿಂತೆ ಕಾಡುತಿವೆ.,
ನಾನು ಓದಿ ಸಂಪಾದಿಸಬೇಕು
ಅವ್ವನನ್ನು ಸಾಕಬೇಕು
ಶ್ರೀಮಂತ ನಾಗಬೇಕು
ತಿಂಗಳು ಸಂಬಳ ಪಡೆಯಬೇಕು.
ಹೊಟ್ಟೆ ತುಂಬ ಉಣ್ಣಬೇಕು. ಹೀಗೆ
ಅನೇಕ … ಕನಸು ರೆಪ್ಪೆಯೊಳಗೆ
ತುಂಬಿವೆ,
ಆದರೆ ಆ ರೆಪ್ಪೆಯೊಳಗಿನ ಕನಸು
ಯಾವಾಗ ಆದಿತು ನನಸು
ದೇವರೇ ಮಾಡಬೇಕು ಮನಸು
ಅಕ್ಕಮಹಾದೇವಿ ತೆಗ್ಗಿ




