ಕಾವ್ಯ ಸಂಗಾತಿ
ಅನ್ನಪೂರ್ಣ ಸಕ್ರೋಜಿ ಪುಣೆ
ʼಗಣೇಶನ ಜಗಳ ಟಿಳಕರ ಜತೆʼ

ಮನೆಯಲಿ ಹಾಯಾಗಿದ್ದವನನ್ನು
ರಸ್ತೆಯಲಿ ತಂದು ಕೂಡಿಸಿದೆ
ದೇಶಾಭಿಮಾನದ ಹೋರಾಟಕೆ
ಸ್ವಾತಂತ್ರ್ಯಕ್ಕಾಗಿ ಎಂದು
ಸಹಯೋಗ ನೀಡಿದೆ
ಸುಮ್ಮನಾದೆ//
ಹೋರಾಟದ ಭಾಷಣ ಕೇಳಿದೆ
ನನ್ನ ಸ್ತುತಿಗೆ ಮಂದಹಾಸ ಬೀರಿದೆ
ಪರಿಶುದ್ಧ ಭಕ್ತಿಗೆ ಮರುಳಾದೆ
ಧೂಪ ದೀಪ ನೈವೇದ್ಯಕೆ
ಶಾಂತ ಮಂಗಳಾರತಿಗೆ
ಆಶೀರ್ವದಿಸಿದೆ//
ಟಿಳಕಾ ಅಂದು ಮಣ್ಣಿನಲಿ ಮಾಡಿ
ಮನೆ ಮನೆಯಲಿ ಸ್ಥಾಪಿಸಿ
ಮನ ಮಂದಿರದಲಿ ಪೂಜಿಸಿ
ಗೋಜು ಗದ್ದಲಗಳಿಲ್ಲದೆ
ಪವಿತ್ರ ಗಂಗೆಯ ಮಡಿಲಲಿ
ಮಲಗಿಸುತ್ತಿದ್ದಿರಿ//
ಇಂದು ನನ್ನನು ಚಾಕ್ಲೇಟಿನಿಂದ
ಪ್ಲಾಸ್ಟರ, ರುದ್ರಾಕ್ಷಿಯಿಂದ
ಮಾಡಿ ವಿಚಿತ್ರ ಅರಿವೆ ತೊಡಿಸಿ
ಉಸಿರುಗಟ್ಟಿಸುವ ಹೌದು
ಬಕೆಟ್ಟುಗಳ ನೀರಿನಲಿ
ಮುಳುಗಿಸುತ್ತಿದ್ದೀರಿ//
ಆದರೆ ಇಂದು ಡಿಜೆ ಡಾಲ್ಬಿಅಬ್ಬರಕೆ
ಡೊಳ್ಳು ನಗಾರಿಯ ಶಬ್ದಕೆ
ಸಿನೇಮಾ ಹಾಡಿನ ಕುಣಿತಕೆ
ಪಠಾಕಿಗಳ ಸಿಡಿಮದ್ದಿಗೆ
ಕಂಪನವಾಗುತಿದೆ ಮೈ
ಬೆವರಿಳಿಯುತಿದೆ//
ದೊಡ್ಡ ದೊಡ್ಡ ಪೆಂಡಾಲ್ ಹಾಕಿ
ಮಕ್ಕಳು ಮುದುಕರೆಲ್ಲ
ಮೋಬೈಲದಲ್ಲಿ ಮುಳುಗಿ
ನನ್ನ ಇರುವನ್ನೇ ಮರೆತು
ಬಿಟ್ಟು ಅಸಭ್ಯಹಾಡು
ಕೇಳುವದಾಗಿದೆ//
ಯಾಕೊ ಟಿಳಕಾ ಹೀಗೆ ಮಾಡಿದೆ
ನೇತಾ ಅಭಿನೇತಾರಿಗೆ ಬೇರೆ
ಸಾಮಾನ್ಯರಿಗೆ ಬೇರೆ ದರ್ಶನ
ಬಂಗಾರ ಬೆಳ್ಳಿಯೊಡವೆ
ಕೋಟಿಗಟ್ಟಲೆ ಹಣ
ಸುರಿಸುತ್ತಿದ್ದಾರೆ//
ನೀನು ಮಾಡಿದ್ದು ಒಳ್ಳೆಯದಕ್ಕೆ
ಇಂದು ಎಲ್ಲೆಡೆ ರಾಜಕೀಯ
ಅರಾಜಕತೆಯ ತಾಂಡವ
ಡಾಂಭಿಕ ತೋರಿಕೆಯ ಭಕ್ತಿ
ಈ ಹಾವಳಿಯಿಂದ ನಾನು
ಓಡಿಹೋಗುವೆ//
ಅನ್ನಪೂರ್ಣ ಸಕ್ರೋಜಿ ಪುಣೆ




