ಕಾವ್ಯ ಸಂಗಾತಿ
ಸವಿತಾ ಇನಾಮದಾರ್
ವರುಣನ ಚುಂಬನ…

ವರುಣನ ಆಗಮನದಿಂದ
ಇಳೆಯ ಬಾಡಿದ ಮೊಗವರಳಿತು
ಮಣ್ಣಿನ ಘಮಲಿನಲ್ಲಿ ಮಿಂದು
ಎನ್ನ ಹೃದಯ ಹಾಡಿತು
ಇಂದೇ ಪ್ರಥಮ ಸಿಂಚನ.
ಭುವಿಗೆ ವರುಣನ ಚುಂಬನ.
ನನ್ನವನ ಸ್ಪರ್ಷದಿಂದ ಮಿಂಚೊಂದು ಮಿಂಚಿತು
ಅನರ್ಘ್ಯವಾದ ಮುತ್ತೊಂದು ಚಿಪ್ಪಿನಲ್ಲಿ ಅಡಗಿತು…
ಇಂದೇ ಪ್ರಥಮ ಸಿಂಚನ.
ಭುವಿಗೆ ವರುಣನ ಚುಂಬನ.
ಪ್ರೇಮದಾ ಮೊಳಕೆಯೊಡೆದು ಹೊಸ ಚಿಗುರು ಬೆಳೆಯಿತು
ಹೊಸ ಭಾವನೆಯ ಬಳ್ಳಿ ಎಲ್ಲೆಡೆಗೂ ಹಬ್ಬಿತು….
ಇಂದೇ ಪ್ರಥಮ ಸಿಂಚನ.
ಭುವಿಗೆ ವರುಣನ ಚುಂಬನ.
ಸವಿತಾ ಇನಾಮದಾರ್.




Nice
ಧನ್ಯವಾದಗಳು
ಸುಂದರವಾದ ಕವನ..ಅಭಿನಂದನೆಗಳು
ನಿಮ್ಮ ಮೆಚ್ಚುಗೆಯ ಸವಿ ನುಡಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
Sundaravada kavana
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಸುಂದರ ಕವಿತೆ ಸವಿತಾಜಿ. ಹೊಸ ಹೊಸ ಕವಿತೆ ಕವನಗಳು ಹೊರಬರಲಿ ಎಂದು ಹಾರೈಸುವೆ. ಹೃತ್ಪೂರ್ವಕ್ ಶುಭಾಶಯಗಳು
ನಿಮ್ಮ ಮೆಚ್ಚುಗೆಯ ನುಡಿಗಳು ಹಾಗೂ ಶುಭ ಹಾರೈಕೆಗಳಿಗೆ ಹೃತ್ಪೂರ್ವಕ ಧನ್ಯವಾದಗಳು.