ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರೇಮಿಗಳ ಪಿಸು ಮಾತಿನಲ್ಲಿ
ಅಂಕುರಿಸುವ ಪ್ರೀತಿ ಛಾಯೆ
ಸೋತು ಸುಣ್ಣವಾಗಿ ಹೋಗುತ್ತಿದೆ
ಪ್ರೇಮಿಗಳ ಆತ್ಮಹತ್ಯೆ ಸಾಕ್ಷಿಯಾಗಿದೆ.

ಮನಸ್ಸುಗಳು ಅರ್ಥ ಮಾಡಿಕೊಳ್ಳುವಲ್ಲಿ
ವಿಫಲವಾದ ಕಾರಣಕ್ಕೆ ಮದುವೆಗಳು
ಮಧ್ಯಂತರದಲ್ಲಿ ಮುರಿದು ಬೀಳುತ್ತಿವೆ
ಪತಿ ಪತ್ನಿಯ ಸಂಬಂಧ ನೈಪೇತ್ಯವಾಗಿದೆ.

ಆಧುನಿಕತೆ ಭರಾಟೆ ಬೆಳವಣಿಗೆಯಲ್ಲಿ 

ಮಕ್ಕಳಲ್ಲಿ ಮಮತೆ ಮಾಯವಾಗಿ
ಹೆತ್ತವರಿಗೆ ಒಂಟಿ ಜೀವನ ಕಾದಿದೆ
ವೃದ್ಧಾಶ್ರಮದ ಬಾಗಿಲು ಕರೆಯುತ್ತಿದೆ.

ಕಾಮವು ಕೊಲೆ ಹಂತ ತಲುಪಿ
ಜೀವನವೇ ಭಯಾನಕವಾಗಿ
ಅಪನಂಬಿಕೆಗೆ ಜೀವಗಳು ಕಂಗಾಲಾಗಿವೆ
ಬಂಧ ಸಂಬಂಧಗಳು ಕುರುಡಾಗಿವೆ.

ಯಾವ ಹುತ್ತದಲ್ಲಿ ಯಾವ ಹಾವು
ಯಾರ ಮನದೊಳಗೆ ಯಾವ ಸೇಡು
ಕಾಣದಾಗಿದೆ ಈ ಕಲಿಯುಗದಲ್ಲಿ
ಮೂಕವಾದರೆ ಅವನತಿ ಮನುಕುಲಕ್ಕೆ.


About The Author

Leave a Reply

You cannot copy content of this page

Scroll to Top