ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ನಿರಾಳ

ಬಾಳ ಪಯಣದಿ ಜೊತೆಯಾಗಿ ನೀನಿರಲು
ಎಲ್ಲ ನೋವುಗಳಲ್ಲಿ ಗೆಲುವಾಗಿ ನೀ ಬರಲು
ದಣಿವು ನಲಿವುಗಳಲ್ಲಿ ನನ್ನ ಮನಸ್ಸು ನಿರಾಳ
ಧಗಧಗಿಸೋ ಬೆಂಕಿಯಲಿ ಬೀಸೋ ಬಿರುಗಾಳಿಯಲಿ
ನಡುಗಿಸೋ ಚಳಿಯಲ್ಲಿ ಸುರಿಯುವ ಮಳೆಯಲ್ಲಿ
ಸಂಗಡಿಗ ನೀನಿರಲು ನಾನಾಗುವೆ ನಿರಾಳ
ಸಂಬಂಧ ಬಂಧನಗಳ ನಿಲುವುಗಳ ಕಟ್ಟುಗಳ
ಹಂಗಿಲ್ಲ ಋಣವಿಲ್ಲ ನಿಲುವಿಲ್ಲ ಪರಿವೆಯಿಲ್ಲ
ಎಲ್ಲ ನೀನಾಗುವ ಭರವಸೆಯಲಿ ನಾ ನಿರಾಳ
ಭಾವ ಬಂಧನದೊಳಗೆ ನೀ ತುಂಬಿರೆ
ಮನಸೆಂಬ ಗುಡಿಯೊಳಗೆ ನೀನು ನಿಂತಿರೆ
ಭಾವ ಪರವಶವಾಗಿ ನನ್ನ ಈ ಬದುಕು ನಿರಾಳ
ಶಾಲಿನಿ ಕೆಮ್ಮಣ್ಣು




