ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಮಯವೇ ಇರಲಿ , ಕಾಳಜಿಯೇ ಇರಲಿ
ಆದರವೇ ಇರಲಿ , ಅನುರಾಗವೇ ಇರಲಿ
ನೀ ಪಡೆದಷ್ಟೇ ಮರಳಿ ನೀಡು ,
ಹೆಚ್ಚಾದರೇ ಹುಚ್ಚು ಎನಿಸೀತು
ಕಮ್ಮಿಯಾದರೇ ಕಟುತ್ವ ಎನಿಸೀತು

ಮಾತುಗಳೇ ಇರಲಿ, ಮೌನವೇ ಇರಲಿ
ಸ್ನೇಹವೇ ಇರಲಿ , ನೇಹವೇ ಇರಲಿ
ನೀ ಪಡೆದಷ್ಟೇ ಮರಳಿ ನೀಡು ,
ಮಿತಿ ಮೀರಿದರೆ ನಶೆ ಎನಿಸೀತು
ಮಿತಿಯ ಕೆಳಗಿರೆ ಕಹಿ ಎನಿಸೀತು

ಅಂತರವೇ ಇರಲಿ, ಸಾಮಿಪ್ಯವೇ ಇರಲಿ
ಸಲಿಗೆಯೇ ಇರಲಿ , ಬಂಧುತ್ವವೇ ಇರಲಿ
ನೀ ಪಡೆದಷ್ಟೇ ಮರಳಿ ನೀಡು ,
ಅತಿಯಾದರೆ ಅಸಹ್ಯ ಎನಿಸೀತು
ಕಡಿಮೆಯಾದರೆ ಕಷ್ಟ ಎನಿಸೀತು

ಅವರಿವರ ಜರಿಯುವುದೂ ಬೇಡ
ಅಪೇಕ್ಷಿಸಿ ನೋಯುವುದೂ ಬೇಡ
ನೀ ಪಡೆದಷ್ಟೇ ಮರಳಿ ನೀಡುತ ಸಾಗು
ನಿನ್ನಭಿಮಾನವನು ಪ್ರೀತಿಸುತ ಸಾಗು

About The Author

4 thoughts on “ವಾಣಿ ಯಡಹಳ್ಳಿ ಮಠ ಅವರ ಕವಿತೆ-ʼಮರಳಿ ನೀಡುʼ”

  1. ಅತ್ತ್ಯುತ್ತಮ, ಮನಮುಟ್ಟುವ ಕವಿತೆ
    ಸಂಬಧಗಳ ನಿಜವಾದ ಅರ್ಥವಿದೆ.

Leave a Reply

You cannot copy content of this page

Scroll to Top