ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರತಿ ವರ್ಷ ಜೂನ್ 30ನೇ ತಾರೀಖು ನಾವು”” ವಿಶ್ವ ಸಾಮಾಜಿಕ ಮಾಧ್ಯಮ ದಿನ”” ಆಚರಿಸುತ್ತಿದ್ದೇವೆ.
ಈಗಿನ ಯುಗವನ್ನು ಸಾಮಾಜಿಕ. ಜಾಲತಾಣಗಳ ಯುಗವೆಂದು ಹೇಳ ಬಹುದು.ಆದರೆ ಈ ಸಾಮಾಜಿಕ ಮಾಧ್ಯಮಗಳ ಒಂದು ಭಾಗವೆಂದರೆ ಅದು ಲೈಕುಗಳೂ ಮತ್ತು ಕಮೆಂಟುಗಳು.
ಇತ್ತೀಚೆಗೆ ಪತ್ರಿಕೆಗಳಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ಅದೇನೆಂದರೆ ಇನ್ಸ್ಟ್ರಾಗ್ರಾಂನಲ್ಲಿ ಲೈಕು ಗಳು ಮತ್ತು ಫಾಲೋವರ್ಸ್ ಕಡಿಮೆಯಾಗಿದ್ದಕ್ಕೆ ಒಬ್ಬ ಯುವತಿ  ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಪ್ರಕಟವಾಗಿತ್ತು.ಅಷ್ಟರ ಮಟ್ಟಿಗೆ ನಮ್ಮ ಜೀವನವನ್ನು ಈ ಸಾಮಾಜಿಕ ಮಾಧ್ಯಮ ಗಳು ಆವರಿಸಿವೆ.
ಪ್ರತಿ ಸಾಮಾಜಿಕ ಮಾಧ್ಯಮಗಳ ಬಳಕೆದಾರ ಲೈಕುಗಳನ್ನು ಮತ್ತು ಕಾಮೆಂಟುಗಳನ್ನು  ಗಮನಿಸಿ ಇರುತ್ತಾನೆ. ಲೈಕೂ ಗಳು ಬಂದಾಗ ಹಿಗ್ಗುವುದು , ಬಾರದಿದ್ದಾಗ ಕುಗ್ಗುವುದು. ,ಕಮೆಂಟುಗಳು ಬಗ್ಗೆ ವಿಪರೀತ ತಲೆ ಕೆಡಿಸಿ ಕೊಳ್ಳುವುದು.
ಕೆಲವೊಂದು ಅಸಭ್ಯ ಕಮೆಂಟುಗಳು ಬಂದಾಗ ಖಿನ್ನತೆಗೆ ಒಳಗಾಗುವುದು ಸಾಮಾನ್ಯ ಸಂಗತಿ ಆಗಿದೆ.
ಸಾಮಾಜಿಕ ಮಾಧ್ಯಮಗಳು  ನಮ್ಮ ಜೀವನವನ್ನು ಅತಿಯಾಗಿ ಆಕ್ರಮಿಸಿ ಕೊಂಡಿವೆ.
ಲೈಕ್ ಗಳ ಬೆನ್ನು ಹತ್ತಿ  reels ಬೆನ್ನು ಹತ್ತಿ ನದಿಯ ದಂಡೆಯ ಮೇಲೆ ನಿಂತು ನೀರಿನಲ್ಲಿ ಮುಳುಗಿದ ಸುದ್ದಿ ಪ್ರಕಟವಾಗಿತ್ತು. ಎಷ್ಟೋ. ವಿದ್ಯಾರ್ಥಿಗಳು ಓದುವುದನ್ನು ಬಿಟ್ಟು ಬರೀ reels ನೋಡಿ ಸಮಯ ಹಾಳು. ಮಾಡು ತ್ತಿದ್ದಾರೆ.
ಇನ್ಸ್ತಾಗ್ರಂನಲ್ಲಿ ಫಾಲೋವರ್ಸ್ ಹೆಚ್ಚಾಗಲೆಂದು ಅಸಭ್ಯ ಫೋಟೋ ಅಪ್ಲೋಡ್.  ಮಾಡಿ ಆಮೇಲೆ  ಪರದಾಡುವವರ ಸಂಖ್ಯೆ ಏನು ಕಡಿಮೆ ಇಲ್ಲ.
ನಮಗೆ ಅಷ್ಟು ಜನ ಫೇಸ್ಬುಕ್ ಫ್ರೆಂಡ್ಸ್  ಇದ್ದಾರೆಂದು ಜಂಭ ಕೊಚ್ಚಿ ಕೊಳ್ಳುವ ನಾವು ಪಕ್ಕದ್ಮನೆ  ಮುಂದೆ ಹಾದು ಹೋದರೂ  ನಮಗೆ ಯಾರು ಕ್ಯಾರೆ ಅನ್ನುವುದಿಲ್ಲ.
ಫೇಸ್ಬುಕ್ನಲ್ಲಿ ನಮ್ಮ ಖಾಸಗಿ ಜೀವನಗಳ ಬಗ್ಗೆ ಶೇರ್ ಮಾಡಿಕೊಳ್ಳಲು ಓಡಾಡುವ ನಾವು ಕೆಲವೊಂದು ಸಾರಿ ಅಸೂಯೆಗಳ  ಕೆಟ್ಟ ದೃಷ್ಟಿಗೆ ಬಿದ್ದಿದ್ದು ಗೊತ್ತಾಗುವುದು ಇಲ್ಲ.
ಇನ್ನು ಮೇಲಾದರೂ. ಸಾಮಾಜಿಕ  ಮಾಧ್ಯಮಗಳ ಬಗ್ಗೆ ಹುಷಾರಾಗಿ  ಸರಿಯಾಗಿ ಉಪಯೋಗಿಸಿ ಕೊಳ್ಳೋಣ.


About The Author

1 thought on “́ಲೈಕುಗಳು ಮತ್ತು ಕಾಮೆಂಟುಗಳುʼ ವಿಶ್ವ ಸಾಮಾಜಿಕ ಮಾಧ್ಯಮ.ದಿನದ ಸಾಂದರ್ಭಿಕ ಲೇಖನ ಗಾಯತ್ರಿ ಸುಂಕದ”

  1. ಚೆನ್ನಾಗಿದೆ. ಇನ್ನೂ ಬರೆಯಬಹುದಿತ್ತು.
    ಥ್ಯಾಂಕ್ಯೂ ಮೇಡಂ.

Leave a Reply

You cannot copy content of this page

Scroll to Top