ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನನ್ನೊಳಗೆ ಇತ್ತು
ನಿನೋಲವ ಚಿತ್ತು
ಹೊರಬರಲು ಎಷ್ಟೋ
ವರುಷಗಳು ಕಾಯ್ದಿತ್ತು
ಕುಡಿ ಬಿಟ್ಟ ಕಾಯಿ
ಮಾಗಿ ಹಣ್ಣಾಗಿತ್ತು
ಎದೆಯೊಳಗಿನ ಭಾವ
ರಸ ರುಚಿಯ ಸವಿಯು
ಅಕ್ಷರದ ರೂಪದಲ್ಲಿ
ಕಾವ್ಯವಾಗಿತ್ತು
ಸುರಿವ ಗುಡುಗು ಸಿಡಿಲಿನ
ಅಬ್ಬರದ ಜಡಿ ಮಳೆ
ಬಿರುಕು ನೆಲದಲಿ
ತೃಪ್ತಿ ಹಾಡಗಿತ್ತು
ಬಿತ್ತುವ ಕಾಲ
ಬೆಳೆವ ಸ್ನೇಹದ ಪೈರು
ಹುಯ್ಯೆನ್ನುವ ಸಂಭ್ರಮ
ಸುಗ್ಗಿಯಾಗಿತ್ತು
ರಾಶಿಯ ಕಣದಲ್ಲಿ
ನಿನ್ನ ನನ್ನಯ ಜೋಡಿ
ಹಂತಿ ಹೊಡೆದೆವು ಕೂಡಿ
ಬಾಳು ತೆನೆಗಾಳು ತಿಂದಿತ್ತು
ಬಣ್ಣ ಬಣ್ಣದ ಬದುಕು
ಕಾಮನ ಬಿಲ್ಲು ತುಂತುರು ಹನಿ
ಕರಗುವ ಮೋಡಿ
ಜೀವ ಸೆಲೆ ಸಾರ್ಥಕವಾಗಿತ್ತು


About The Author

8 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ‌ ಅವರ ಕವಿತೆ ʼಜೀವಸೆಲೆʼ”

  1. ಜೀವಸೆಲೆಯ ಸಾರ್ಥಕತೆಯ ಮಧುರತೆ
    ಕವನದ ತುಂಬೆಲ್ಲ ಹರಡಿದೆ

    ಸುಧಾ ಶಿವಾನಂದ ಪಾಟೀಲ

    1. ಜೀವನ ಸೆಲೆಯ ಸಾರ್ಥಕತೆ ಬಗ್ಗೆ ಅದ್ಭುತವಾಗಿ ಮೂಡಿಬಂದಿದೆ.
      ಸೂಪರ

  2. ಜೇಡ ತನ್ನೊಳಗಿನ ರಸಭಾವದಿಂದ ಬಲೆ ಕಟ್ಟಿ, ಬದುಕಿ ಜೀವ ಸೆಲೆಗಳನ್ನು ಉಕ್ಕಿಸಿದಂತೆ, ಎಲ್ಲೋ ಗುಪ್ತವಾಗಿ ಅಡಗಿರುವ ಭಾವವನ್ನು ಶಬ್ದಜಾಲದಿಂದ ಕಾಮನ ಬಿಲ್ಲಿನಂತೆ ಸಪ್ತ ರಂಗುಗಳನ್ನು ಹೊತ್ತು ಕಾವ್ಯವಾಗಿ ನೇಯ್ದ ಪರಿ ಇಲ್ಲಿದೆ. ಇಲ್ಲಿ ಸುಪ್ತ ಮನದಲ್ಲಿ ಅಡಗಿ ಕುಳಿತ ಒಲವಿದೆ, ಸಂತೃಪ್ತಿ ಇದೆ. ರಾಗಾನುರಾಗಗಳ ಸಂಚಾರವಿದೆ. ಬಂಧುರ ಕಾವ್ಯಬಂಧವಿದೆ. ನವೋದಯದ ಕವಿಗೆ ಅಭಿನಂದನೆಗಳು.

  3. ಅದ್ಬುತ್ ಕವಿತೆ
    ಜೀವನ ಸೆಲೆ
    ನಿರಂತರ ಇರಲಿ

    ಅಕ್ಕಮಹಾದೇವಿ

Leave a Reply

You cannot copy content of this page

Scroll to Top