ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬದುಕಿದ್ದಾಗ ಗೆಯ್ದಿದ್ದು
ನಲಿದಿದ್ದಾಗ ಗೆದ್ದಿದ್ದು
ನನಗೆ – ಮತ್ತವನಿಗೆ
ನೋವಿದ್ದಾಗ ಮಿಡಿದಿದ್ದು
ಮರೆತು

ಈಗ ಹೋಗುವ ಮೊದಲು
ಜೀವಿಸಿದ್ದೇನೆ
ಒಳಗಿದ್ದ ಪುಟ್ಟ ಪುಟ್ಟ ಆಸೆಗಳ ಹಳ್ಳ
ತುಂಬಲು ಆರಂಭಿಸಿದ್ದೇನೆ

ಅಜ್ಞಾತನಾಗಿ ಫುಟ್ ಪಾತಿನ ಮೇಲೆ
ಸಂವತ್ಸರಗಳ ನಂತರ
ನಡೆಯಲಾರಂಭಿಸಿದ್ದೇನೆ

ಹಸಿದಾಗ ಬೇಕರಿಯ ಪಾವ್ ಭಾಜಿ, ಬಾಯಾರಿಸಿದಾಗ ಘೋಟಾ ಮಾಸ್ಟರನ ಕಟಿಂಗ್ ಚಾಯ್!
ಸವಿಯಲಾರಂಭಿಸಿದ್ದೇನೆ

ಅಮೃತ ಹರ್ಷಿಣಿ!!

ಅನನ್ಯಾನುಭೂತಿ ಬಂಧು
ನನ್ನಾಕೆಯ ಕಣ್ತಪ್ಪಿಸಿ  ಪಾನಿ ಪುರಿ ತಿಂದಾಗ,
ರಸ್ತೆ ಬದಿ ಐಸ್ ಕ್ರೀಂ ಚೀಪಿದಾಗ
ಅದೆಂಥ ದಿವ್ಯಾನುಭೂತಿ ಅಂತೀ!

ಅನುಭವಿಸಿ ಬಿಡು ಸಣ್ಣ ಸಣ್ಣ ಆಸೆ
ಪೂರೈಸಿ ಬಿಡು
ಕೈ ಕಾಲು ತಲೆಯಲ್ಲಿರುವ ಮಿದುಳು ನಿನ್ನ ಕೈಯಲ್ಲೇ ಇರುವ ತನಕ

ತೃಪ್ತಿಯ ಪರಾಕಾಷ್ಠೆ ತಲುಪು
ಜೀವಂತವಾಗಿರುವ
ತನಕ!

ಜೀವನದ ಕ್ರಿಕೆಟ್ ಆಟದಲ್ಲಿ ಕಡೆಯ ದಾಂಡಿಗನಾಗಿ ಬಾರಿಸಿ ಬಿಡು ಶತಕ ಜೊತೆಗಾರ ಜೊತೆಯಾಗೆ ಇರುವ ತನಕ

ಇದ್ದರೆ ಮ್ಯಾನ್ ಆಫ್ ಲೈಫ್
ಇಲ್ಲದೆ ಇದ್ದರೆ
ಗಾನ್ ಫ್ರಮ್ ಲೈಫ್
-last man standing-

ಎಂದೇ ಪುಟ್ಟ ಪುಟ್ಟ ಲೈಫ್
ಸಣ್ಣ ಸಣ್ಣ ಆಸೆ
ಪೂರ ಜೀವಿಸಿ ಬಿಡು
ಜೈಸಿ ಬಿಡು!!
ಇರುವ ತನಕ

About The Author

1 thought on “ಡಾ ಡೋ ನಾ ವೆಂಕಟೇಶ ಅವರ ಕವಿತೆ”ಸಣ್ಣ ಸಣ್ಣ ಆಸೆ-ಪುಟ್ಟ ಪುಟ್ಟ ಲೈಫ್””

Leave a Reply

You cannot copy content of this page

Scroll to Top