ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನನ್ನವಳು ಸ್ವಚ್ಛವಾದ ಹೃದಯದವಳು
ಆಗಸದ ಹಾಲಿನಂತ ಹೊಳಪಿನವಳು!
ರಾತ್ರಿಯ ಬೆಳದಿಂಗಳಂತ ನಗುವಿನವಳು
ನನ್ನ ಅಂತರಂಗದ ದೇವತೆಯು ಇವಳು!!

ಸಂತಸದ ಬೆಳಕನು ಚೆಲ್ಲುತ್ತ ಬರುವಳು
ಕಷ್ಟ ಸುಖದಲ್ಲಿ ಆಸರೆಯಾಗಿ ನಿಲ್ಲುವಳು!
ತನ್ನೇ ಮರೆತು ನಿತ್ಯ ಕಾಯಕದ ಪಾಲುದಾರಳು
ತನ್ನ ದುಡಿಮೆಯಲ್ಲಿ ದೇವರನ್ನೇ ಕಾಣುವಳು!!

ಅರಿಶಿನ ಕುಂಕುಮವಿಟ್ಟ ಲಕ್ಷ್ಮೀ ರೂಪದವಳು
ನೀಳ ಜಡೆಯಲ್ಲಿ ನಾಚುವ ಸುಂದರಿಯವಳು!
ಹರಿಯುವ ಕೃಷ್ಣ ಕಾವೇರಿಯಷ್ಟೇ ಪವಿತ್ರಳು
ಶ್ರೀಗಂಧ ಸುಗಂಧದಷ್ಟೇ ಪರಿಮಳದವಳು!!

ನಿತ್ಯ ಹರಿದ್ವರ್ಣದಷ್ಟೇ ಹಸಿರ ಸಿರಿಯವಳು
ನಕ್ಷತ್ರಗಳಂತೆ ಮಿನುಗುವ ತಾರೆಯವಳು!
ಕಾಲ್ಗೆಜ್ಜೆ ಸದ್ದಲಿ ಗಂಡನನ್ನೇ ಮೆಚ್ಚಿಸುವಳು
ಕನ್ನಡಿ ಮುಂದೆ ನಿಂತು ನಾಚಿ ನೀರಾಗುವಳು!!


About The Author

2 thoughts on “ಕೆ.ಎಂ. ಕಾವ್ಯ ಪ್ರಸಾದ್ ಅವರ ಕವಿತೆ-ʼನನ್ನ ಅಂತರಂಗದ ದೇವತೆʼ”

  1. Channakrishna

    ನಿಮ್ಮ ಸಾಹಿತ್ಯ ದ ನಡೆ ನುಡಿ ಸಾಧನೆ ಯ ಹಾದಿ ಅನೇಕರಿಗೆ ಸ್ಫೂರ್ತಿ ಮತ್ತು ಮಾದರಿ ಅಂದರೆ ತಪ್ಪಾಗಲಾರದು ನಿಮಗೆ ಸದಾ ಒಳಿತಾಗಲಿ ಸದಾ ಶುಭವಾಗಲಿ ,,,, ಧನ್ಯವಾದಗಳೊಂದಿಗೆ ಕವಿ ಮಿತ್ರ ದೇವರ ಮಳ್ಳೂ ರು ಚನ್ನ ಕೃಷ್ಣ 9740384411

Leave a Reply

You cannot copy content of this page

Scroll to Top