ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

*ಬಾಗಿಲು ಬಡಿವ ಜನಗಳ* ತೊರೆದಿರೇತಕೆ?
*ಪರಿವೃತ್ತ* ವ ದಾಟಿ ನೀವು ನಡೆದಿರೇತಕೆ?

ಉಲಿಯುತಿರಲು *ನೂರು ಮರ ನೂರು ಸ್ವರ*
*ಮರೆತ ಸಾಲುಗಳ* ಲಿ ಮತ್ತೆ ಬರೆದಿರೇತಕೆ?

ಉದುರಿ ಉರುಳಿವೆ *ಎಲೆಗಳು ನೂರಾರು*
*ಒಣ ಮರದ ಗಿಳಿಗಳ* ಕೂಗಿ ಕರೆದಿರೇತಕೆ?

*ಮೇಘದೂತ* ನ  ಕರೆದಳಂತೆ *ಇಂದುಮುಖಿ*
*ಆಕಾಶದ ಹಕ್ಕು* ಬಿಡದೇ ಪಡೆದಿರೇತಕೆ?

*ಕತ್ತಲೆಗೆ ಎಷ್ಟು ಮುಖ* ಅದೆಷ್ಟು *ಹೆಜ್ಜೆಗಳು*
*ಎಷ್ಟೊಂದು ಮುಖಗಳ* ಮರೆತಿದಿರೇತಕೆ?

*ಉರಿವ ಉಯ್ಯಾಲೆ* ಯಲ್ಲಿ *ಹಕ್ಕಿ ಸಾಲು*
ಬದ್ಧರಾಗಿ *ಬುದ್ಧಚರಣ* ವ ಹಿಡಿದಿರೇತಕೆ?

*ಹೂವಿನ ಶಾಲೆ* ಯಲ್ಲೀಗ *ಋತುವಿಲಾಸ*
*ಭಾವಭೃಂಗ* ವಾಗಿ ದೂರ ಹಾರಿದಿರೇತಕೆ?

*ತೂಗು ಮಂಚ* ತೂಗು ಮರೆತು ನಿಂತಿದೆ
*ಮೂವತ್ತು ಮಳೆಗಾಲ* ಕೆ ನಿಲ್ಲಿಸಿದಿರೇತಕೆ?

*ಎಚ್ಚೆಸ್ವಿ ಅನಾತ್ಮ ಕಥನ* ಯಶಸ್ವಿಯಾಯಿತೇ?
ಕುಂಬಾರನ *ತಾಪಿ* ಮಾಡಿ ಹೊರಟಿರೇತಕೆ?


About The Author

1 thought on “ಎಮ್ಮಾರ್ಕೆ ಅವರ ಹೊಸ ಗಜಲ್”

  1. ಎಚ್ಚೆಸ್ಚಿ ನುಡಿನಮನದ ಗಜಲ್ ಅದ್ಬುತ ಸರ್

    …….ಶುಭಲಕ್ಷ್ಮಿ ನಾಯಕ್

Leave a Reply

You cannot copy content of this page

Scroll to Top