ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜೀವನದ ನಿಲ್ದಾಣದಲ್ಲಿ ಬಂದು ಹೋಗುವವರೆಷ್ಟೋ?
ಪರಿಚಿತರಾಗುವವರೆಷ್ಟೋ?
ಹಾಗೆ ಹೋಗುವವರೆಷ್ಟೋ?
ಸ್ನೇಹಿತರಾಗಿ ಉಳಿಯುವವರೆಷ್ಟೋ?
ನನ್ನದು ನೆಕ್ಸ್ಟ್ ಸ್ಟಾಪ್.

ಇಲ್ಲಿ ಜೀವನದಲ್ಲಿ ಸೋತವರು ಬಂದಿರುತ್ತಾರೆ.
ಗೆದ್ದವರು ಬಂದಿರುತ್ತಾರೆ.
ಗೆಲುವಿನ ಹಾದಿಗಾಗಿ ತವಕಿಸುವವರು ಪಯಣಿಸುತ್ತಾರೆ.
ಎಲ್ಲರೂ ಜೊತೆಗಾರರಾದರೂ
ಅವರವರ ನಿಲ್ದಾಣ ಬಂದಾಗ
ಇಳಿಯಲೇಬೇಕು.

ರಾತ್ರಿಯೆಲ್ಲಾ ನಿದ್ದೆಗೆಟ್ಟರೇ
ಮುಂದಿನ ಕೆಲಸದ ಹೊರೆ.
ನಿದ್ರೆಗೆ ಜಾರಿದರೆ
ನಮ್ಮ ನಿಲ್ದಾಣ ದಾಟಿ ಹೋಗುವ ಭಯ.
ಅವರವರ ಎಚ್ಚರ ಅವರಿಗಿರಬೇಕು.

ಇಲ್ಲಿ ಎಚ್ಚರಿಸುವವರು ಇರುತ್ತಾರೆ.
ಸುಮ್ಮನಾಗಿ ಬಿಡುವವರು ಇರುತ್ತಾರೆ.
ಗಾಢ ನಿದ್ರೆ ಒಳ್ಳೆಯದಲ್ಲ
ಅರೆ ಗಳಿಗೆ ನಿದ್ರಿಸಿ
ಏಳುವವನೇ ಇಲ್ಲಿ ಜಾಣ.

ಇಲ್ಲಿ ವಾಚಾಳಿಗಳಿಗಿರುವ ಬೆಲೆ
ಮೌನಿಗಳಿಗಿಲ್ಲ.
ಆದರೂ ಇಲ್ಲಿ ಜೀವನದ ಸತ್ಯಗಳನ್ನು
ಹೇಳುವವರು ಸಿಗುತ್ತಾರೆ.
ಸತ್ಯ, ನಿಷ್ಠೆ, ಪ್ರಾಮಾಣಿಕತೆಯ ಬಗ್ಗೆ
ಸಾಕಷ್ಟು ಉಚಿತ ಬೋಧನೆಗಳು ಸಿಗುತ್ತವೆ.
ಕೇಳುವ ತಾಳ್ಮೆ ನಮಗಿರಬೇಕು.

ಹಾಸ್ಯಕ್ಕೇನು ಕೊರತೆ ಇಲ್ಲ,
ನಗುವ ಮನಸ್ಸಿರಬೇಕು.
ನಗಲಾರದಷ್ಟು ದುಃಖ ಇದ್ದವನು
ಇಲ್ಲಿ ನಕ್ಕು ಹಗುರಾಗಿ,
ನನ್ನದು ನೆಕ್ಸ್ಟ್ ಟಾಪ್ ಎಂದು
ಇಳಿದು ಹೋಗುತ್ತಾನೆ.

ಇಷ್ಟೇ ಜೀವನ
ಎಲ್ಲಾ ಅನುಭವಗಳನ್ನು ಪಡೆದು
ಸೋಲಿಗೆ ಎದೆಗುಂದದೆ
ನಕ್ಕು ಹಗುರಾಗಿ
ನಿಮ್ಮ ನಿಲ್ದಾಣ ಬಂದಾಗ ಇಳಿಯಿರಿ.


About The Author

1 thought on “ಕಂಚುಗಾರನಹಳ್ಳಿ ಸತೀಶ್ ಅವರ ಕವಿತೆ “ನೆಕ್ಸ್ಟ್ ಸ್ಟಾಪ್””

  1. ಬಹಳ ಉತ್ತಮವಾದ ಕವನವವಿದೆ ಸರ್ ಈ ನಸ್ಟ್ಕ ಸ್ಟಾಪ್

Leave a Reply

You cannot copy content of this page

Scroll to Top