ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಲೋಕದ ಆಡಂಬರವ ಅರಿತವಳಲ್ಲ
ಕಷ್ಟ ಸುಖವ ಅರಿತು ಬಾಳಿದವಳು
ದುಃಖ ದುಮ್ಮಾನಗಳ ಮೆಟ್ಟಿ ನಿಂತವಳು
ಜೀವನದಿ ಸಫಲತೆಗೆ ಹೋರಾಡಿದವಳು

ಬೈಗುಳಗಳನ್ನೇ ಪಾಠವಾಗಿ ಪಡೆದವಳು
ತಪ್ಪು ಒಪ್ಪುಗಳ ಅರಿತು ಜೀವನ ಮಾಡಿದವಳು
ನನ್ನಮ್ಮ ಎಲ್ಲರಂತೆ ಅಲ್ಲದಿದ್ದರೂ ಸದ್ಗುಣವಂತಳು
ಮನೆಯ ಏಳಿಗೆಗಾಗಿ ತನ್ನ ತಾನು ತ್ಯಾಗಮಾಡಿಕೊಂಡವಳು

ತನಗೆ ಬೇಕಾದದ್ದನ್ನೆಲ್ಲ ಪಡೆಯದೆ ಬಾಡಿದವಳು
ಅವಿಭಕ್ತ ಕುಟುಂಬವ ಸಮಾಲಿಸಿದವಳು
ಕೆಲವೊಮ್ಮೆ ಕಣ್ಣೀರು, ಸಂತೋಷವ ಪಡೆದವಳು
ಆಕಸ್ಮಿಕ ಕೆಟ್ಟ ಘಟನೆಗಳನು ಸಹ ಎದರಿಸಿದವಳು….

ವಿದ್ಯಾವಂತಳಾದರೂ ಅವಿದ್ಯಾವಂತಳಂತೆ ಬಾಳಿದವಳು
ಹೊರ ಜಗತ್ತಿನ ಅರಿವೇ ಇಲ್ಲದಂತೆ ಮನೆಯೊಳಗೆ ಇದ್ದವಳು
ಬಾಳಿನ, ಬದುಕಿನ ಅರ್ಥವ ಅರಿಯುತ ಸಾಗಿದವಳು
ಮಕ್ಕಳಿಗೆ ನೀತಿ ಪಾಠಗಳ ಕಲಿಸುತ್ತಾ ನಡೆದವಳು

ಸಾಧನೆಯ ದಾರಿ ಸುಗಮವಲ್ಲ ಎಂಬುದ ತಿಳಿಸಿದವಳು
ಜೀವನದಿ ಬರುವ ಕಷ್ಟಗಳ ಎದುರಿಸುವುದ ಕಲಿಸಿದವಳು
ತಗ್ಗಿ ಬಗ್ಗಿ ನಡೆಯುವುದ ತಿಳಿಸುತ್ತಾ ಸಾಗಿದವಳು
ಬಾಳು ಮೂರೇ ದಿನ ಅದರಲ್ಲಿ ಒಳಿತಿನ ಕಾರ್ಯ ಮಾಡೆಂದವಳು…..

ಭೂತಾಯಿಯ ಜೊತೆಗೆ ಅಡೆದವ್ವ ನನ್ನಮ್ಮ ನನ್ನವಳು
ಇವಳಿಗಿಂತ ತ್ಯಾಗಮಹಿಯ ಕಾಣಬೇಕೇನು ನಾನು
ಯಾವ ಜನ್ಮದಿ ನಿನ್ನ ಋಣ ವಾ ತೀರಿಸುವೆನು ನಾ ತಿಳಿಯೇನು?
ನನ್ನಮ್ಮನ ಹಾಗೆ ಯಾರು ಇಲ್ಲ ಎಂಬ ಭಾವದಿ ಕೊನೆ ಉಸಿರೇಳೆಯುವೆನು……


About The Author

Leave a Reply

You cannot copy content of this page

Scroll to Top