ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜಗಕೆ ನನ್ನ ತಂದು
ನನ್ನಿರುವಿಕೆಯ ಗುರುತು
ಮಾಡಿದಾಕೆ
ನನ್ನ ಅ(ಯ)ವ್ವ…..

ಅತ್ತಾಗ ಮುದ್ದಿಸಿ
ಹಸಿದಾಗ ಉಣಿಸಿ
ನಕ್ಕು-ನಲಿಸಿದಾಕೆ‌
ನನ್ನ ಅ(ಯ)ವ್ವ…..

ಕಷ್ಟಗಳ ತೋರಿಸದೆ
ನೋವುಗಳ ನುಂಗಿ
ಬಡತನವ ಗೆದ್ದವಳು
ನನ್ನ ಅ(ಯ)ವ್ವ…..

ಸಮಾಜದೆದುರು
ನನ್ನ ನಿಲ್ಲಿಸಿ
ನೀ ಅಗೋಚರವಾಗಿ
ನಿಂತವಳು
ನನ್ನ ಅ(ಯ)ವ್ವ……

ಮಮ್ಮಿ ,ಮಾಗಳಲ್ಲಿ
ಇಲ್ಲದ ಪ್ರೀತಿ
ಯವ್ವ ಅಂದಾಗಿನ ರೀತಿ
ಮನಸಿಗೆ ಸು:ಖದ ಅನುಭೂತಿ
ನನ್ನ ಅ(ಯ)ವ್ವ……..


About The Author

3 thoughts on “ಸುರೇಶ ತಂಗೋಡ ಅವರ ಕವಿತೆ-ಅ(ಯ)ವ್ವ”

Leave a Reply

You cannot copy content of this page

Scroll to Top