ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎನು ಹುಡುಕುತ್ತಿದ್ದಿರಿ ನೀವು !
ನನ್ನ ವ್ಯಾನಿಟಿ ಬ್ಯಾಗಿನಲ್ಲಿ ?

ನಾಲ್ಕಾರು ಜೇಬುಗಳಿವೆ ಅದಕೆ. ಚಿಕ್ಕದೊಂದು ದೊಡ್ಡದೊಂದು ಕಾಣಲಾರದಂತೆರಡು.

ಅದರಲ್ಲೇನಿರುತ್ತೆ ?
ಅದೇ ಬಾಚಣಿಕೆ ಕುಂಕುಮ
ಟಿಕ್ಕುಳಿ.ಪೆನ್ಸಿಲ್ಲು.ಪೆನ್ನು. ಪೌಡರು.ಇರಬಹುದೇನೋ ಪ್ಯಾರ ಅ್ಯಂಡಲವ್ಲಿ ?

ನೀವೇಕೆ ಹುಡುಕುವಿರಿ
ಅದರಾಳವನು ? ಅದರರಾಳ ಅರಿಯುವದು
ಸುಲಭವಲ್ಲ ಗೆಳೆಯಾ !!

ಕನ್ನಡಿ ಇರಬಹುದು
ಅದರಲ್ಲಿಯ ಬಿಂಬ ನನ್ನದಲ್ಲದೇ ಇರಬಹುದು
ನಿನ್ನದೂ !!!
ಹುಡುಕಬೇಡ ವ್ಯಾನಿಟಿ ಬ್ಯಾಗಿನ ಆಳವ

ಪುಠಾಣಿ.ಕಡ್ಲೆಬೀಜ.
ವಿಮಲ್ಲು.೬ ಎಂಡಿ
ಅಥವಾ..ಮೆಲ್ಲಗೆ ಮೆಲ್ಲಲು
ಹಲೋ ಅಡಿಕೆಯೂ ಇರಬಹುದು.

ಯಾರೋ ಕೊಟ್ಟ ನವಿಲುಗರಿ ಮರಿ ಹಾಕಿರಲೂ ಬಹುದು.
ಅಕ್ಷರ ಮಸುಕಾಗಿರುವ ಪತ್ರ ಸಿಕ್ಕರೂ ಸಿಗಬಹುದು
ಅತ್ತತ್ತು ಸೋರಿದ ಮೂಗಿನ ನೀರಿನೊಂದಿಗೆ
ಕಣ್ಣೀರೂ ಹೆಪ್ಪುಗಟ್ಟಿದ
ಕರವಸ್ತ್ರ ಸಿಕ್ಕರೂ ಸಿಗಬಹುದು.

ಇರಬಹುದೇನೋ ?
ಬೆನ್ನಷ್ಟೇ ಕಾಣುವ ಭಾವಚಿತ್ರ
ವಿಳಾಸವಿಲ್ಲದ ಪತ್ರ
ಅಮ್ಮನ ಕನವರಿಕೆ ಅಪ್ಪನ
ಬೇಸರಿಕೆ !

ಮರೆಯಲಾರದ ನೆನಪು
ಮರೆತರೂ ಕಾಡುವ ಕಸುಪು
ಗಂಟಲಲ್ಲೇ ಉಳಿದು ಉಸಿರತಿತ್ತಿಯಲಿ
ಬೆರೆತ ಹೆಸರೇ ಇಲ್ಲದ ಉಸಿರಬಹುದು ಅದರಲ್ಲಿ !!

ಅದು ನನ್ನ ವ್ಯಾನಿಟಿ ಬ್ಯಾಗು
ಅರ್ಥವೇ ಇಲ್ಲದ ಅನರ್ಥವೂ ಅಲ್ಲದ ನೆನಪೂಗಳೂ ಇರಬಹುದು ? ನೀವೇಕೆ ಇಣುಕುವಿರಿ ಅದರಲ್ಲಿ ?
ನೀರಿನ ನೆಲೆ.ಕುದುರೆಯ ನೆಲೆ
ಹೆಣ್ಣಿನಾ ನೆಲೆ.ಬಲ್ಲವರಾರಯ್ಯ ಜಗದೊಳಗೆ !!!?

” ” ಇಣುಕಲೆತ್ನಿಸಬೇಡಿ
ಹೆಣ್ಣಿನ ಮನಸ
ಅದು ಸಮುದ್ರ ಅಲೆಗಳಬ್ಬರಕೆ
ಸೋತು ಸುಣ್ಣವಾದೀರಿ
ಓಶೋ ವಚನ ” “

ಹಾಗೇ… ವ್ಯಾನಿಟಿ ಬ್ಯಾಗೂ ”’


About The Author

Leave a Reply

You cannot copy content of this page

Scroll to Top