ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೀರಿನ ಕೊಳಗಳಂತೆ ಕಾಣುವ
ನಿನ್ನ ಕಣ್ಣುಗಳಲ್ಲಿ ಬಿಂಬವಾಗಿ
ಸದಾ ನಾನು ಸ್ಥಿರವಾಗುವಾಸೆ

ನಿನ್ನ ದೇಹವೆಂಬ ದೇಗುಲದಲ್ಲಿ
ಹೃದಯವೆಂಬ ಗುಡಿಯಲ್ಲಿ ನಾ
ಶಿಲೆಯಂತೆ ನೆಲೆಯಾಗುವಾಸೆ

ಸಮುದ್ರ ತಳದಲ್ಲಿನ ಚಿಪ್ಪಿನೊಳ
ಮುತ್ತಿನಂತೆ ನಿನ್ನ ಮನದೊಳಗೆ
ಸದಾ ನಾನು ಹುದುಗಿರುವಾಸೆ

ಹಕ್ಕಿಗಳು ತಮ್ಮ ರೆಕ್ಕೆಗಳಿಂದಲೇ
ಮರಿಗಳನ್ನು ಜೋಪಾನವಾಗಿ
ಪ್ರೀತಿಯಿಂದ ಪೋಷಿಸುವಂತೆ

ನಾನು ಸದಾ ನಿಮ್ಮ ಪ್ರೀತಿಯಾ
ಬಾಹುಗಳಲ್ಲಿಯೆ ಖೈದಿಯಂತೆ
ಪ್ರೀತಿಲೀ ಬಂಧಿಯಾಗುವಾಸೆ

ಮುಂಜಾನೆಯಲಿ ಮಂಜು
ಸೂರ್ಯನ ಕಿರಣಗಳಿಗೆ
ಇಬ್ಬನಿಯಾಗಿ ಕರಗುವಂತೆ

ಹಾಗೆಯೇ ನಾನು ನಿಮ್ಮದೆಯ
ಬಿಸಿ ಉಸಿರಿನ ಪ್ರೀತಿಯಲ್ಲೇ
ಸದಾ ಬೆಚ್ಚಗಾಗಿ ಕರಗುವಾಸೆ

ಬಾಳಾ ಪಯಣದಲಿ ನಿಮ್ಮ
ಜೊತೆಯಲ್ಲೇ ರಥದ ಎರಡು
ಚಕ್ರಗಳಂತೆ ಉಳಿಯುವಾಸೆ

ಸದಾ ಬದುಕಿನಲೀ ನಿಮ್ಮದೇ
ಪ್ರೀತಿ ನೆನಪುಗಳೊಂದಿಗೆ ನನ್ನಾ
ಬಾಳೆಂಬ ಪಯಣ ಮುಗಿಸು…

—————-

About The Author

2 thoughts on “ಗೀತಾ ಆರ್.‌ ಅವರ ಕವಿತೆ-ಪ್ರೀತಿಯ ಪಯಣ”

Leave a Reply

You cannot copy content of this page

Scroll to Top