ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನನ್ನೆದೆಯ ನೆಲಕೆಲ್ಲ
ಡಾಂಬರು ಬಳಿದು
ಬರಡಾಗಿಸಿರುವೆ ಗೆಳೆಯ.!

ಅದೆಷ್ಟೇ ಒಲವಧಾರೆ
ಸುರಿದರೂ ಎದೆಯ
ಆಳಕಿಳಿಯದಂತೆ.!

ಮತ್ತೆಂದೂ ಹೃದಯ
ಹಸಿರಾಗದಂತೆ…
ಭಾವ ಬಸಿರಾಗದಂತೆ.!

ಸುರಿವ ಪ್ರೇಮಧಾರೆ
ಆವಿಯಾಗಿ ನಿಟ್ಟುಸಿರಾಗಿ
ಹೊರಬರಬೇಕಷ್ಟೆ.!!


About The Author

Leave a Reply

You cannot copy content of this page

Scroll to Top