ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಪ್ಪನಾಗುವ ತನಕ ತಂದೆಯರಿವಿಲ್ಲ
ಅಮ್ಮಮರೆಯಾದಾಗ ತಾಯಿಬೆಲೆ ಎಲ್ಲ
ಕಣ್ಣೀರ ಧಾರೆ ಹರಿಸಿದರೂ ಮಾತಾಡಲಿಲ್ಲ
ಕಡಿದ ಮರ ಅಂತ್ಯ ಕ್ರಿಯೆಯಲಿ ಭಸ್ಮವೆಲ್ಲ

ಕೂಡಿಟ್ಟ ಸಂಪತ್ತೆಲ್ಲ ತುಲಾಭಾರ ಮಾಡಿದರು
ಅಪ್ಪ ಮರಳಿ ಬರಲಿಲ್ಲ ಅಮ್ಮ ಮತ್ತೆ ಸಿಗಲಿಲ್ಲ
ಜಗುಳಿಯ ಗೋಡೆಗೆ ತೂಗಾಕಿದ ಭಾವ ಚಿತ್ರ
ನೋಡಿನೆನಪಾಗಿ ಚಿತ್ತ ವಿಚಲಿತ ಮನಸು ಛಿದ್ರ

ಹೊಸ ಕಾರು ಟ್ರಾಫಿಕಿನಲ್ಲಿ ನಿಂತಾಗ ಕನ್ನಡಿಯಲ್ಲಿ 

ಕಾಣುವ ಅಪ್ಪ ಕಾಲ್ನಡಿಗೆ ತಲೆ ಮೇಲೆ ಸಾಮಾನು
ವಸ್ತ್ರದಂಗಡಿಗೆ ಹೋದಾಗ ಕಪಾಟು ಮೂಲೆಯಲ್ಲಿ ಇಣುಕಿ
ನೋಡುವ ಮಡಿಚಿಟ್ಟ  ಅಮ್ಮನ ಹಳೆಯ ಸೀರೆ

ಪಿತ್ರಾರ್ಜಿತ ಆಸ್ತಿ  ಬೆವರಿಳಿಸಿ ಬೆಳೆಸಿದ ತೋಟ  
ಇನ್ನಿಲ್ಲ ಗತಿ ಬರಡಾಗಿ ನಿಂತ ತೆಂಗು ಹೊಲ ಗದ್ದೆ
ಕೊಟ್ಟಿಗೆ ತುಂಬ ದನಕರುಗಳ ಗದ್ದಲ 

ಅಮ್ಮನ ಮೌನ ತಾಳಲಾರದೇ ಖಾಲಿ ಬೆಳೆದಿದೆ ಗೆಜ್ಜಲ

ಅವರು ಬಚ್ಚಿಟ್ಟ  ನೋವು  ಕಾಣಲೇ ಇಲ್ಲ
ಅಂಗಳದಲ್ಲಿ  ನಗುನಗುತ್ತಾ ಬೆಳೆದ ಮಕ್ಕಳಿಗೆಲ್ಲ
ಅಣ್ಣ ತಂಗಿ ಅಕ್ಕ ತಮ್ಮ ದಾಯದಿಗಳೆಲ್ಲ
ಪಿತ್ರಾರ್ಜಿತದಲ್ಲಿ ಸಮಪಾಲು ಬೇಕು
ಅನ್ನುವರೆಲ್ಲ.


ಎಸ್ ವಿ ಹೆಗಡೆ

About The Author

6 thoughts on “ಎಸ್ ವಿ ಹೆಗಡೆ ಅವರ ಕವಿತೆ-ಪಿತ್ರಾರ್ಜಿತ”

  1. ಬಹಳ ಉತ್ತಮವಾದ ಕವನ ಓದಿದರೆ ಓದುತ್ತಲೆ ಇರಬೇಕು ಅನಿಸುವಷ್ಟು ಉತ್ತಮವಾದ ಕವನ

  2. ಮನಮುಟ್ಟಿತು. ತಲೆಮಾರುಗಳ ನಡುವಿನ ತಂತು ಸಡಿಲಾಗುತ್ತಿದೆ.

Leave a Reply

You cannot copy content of this page

Scroll to Top