ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರತಿಭೆ ಎನ್ನುವುದು ಪ್ರತಿಯೊಬ್ಬರಲ್ಲೂ ಅಡಕವಾಗಿರುತ್ತದೆ ಆದರೆ ಅದನ್ನು ಸಮರ್ಪಕವಾಗಿ ಸಮಯೋಚಿತವಾಗಿ ಸದ್ಬಳಕೆ ಮಾಡಿಕೊಳ್ಳುವ ಜಾಣ್ಮೆ ಇರಬೇಕು.
ಮೆದುಳಿಗೆ ಕೆಲಸ ಕೊಟ್ಟಷ್ಟು ಚುರುಕಾಗುತ್ತದೆ, ಸುಮ್ಮನೆ ಇದ್ದರೆ ತಿಕ್ಕದೆ ಇಟ್ಟ ಹೊಳಪು ಕಳೆದುಕೊಂಡ ತಾಮ್ರದ ಪಾತ್ರೆಯಂತಾಗುತ್ತೇವೆ.ಕೆಲವೊಮ್ಮೆ ವಯಸ್ಸಾಯಿತು ಮೊದಲಿನ ಬುದ್ದಿ,ಚುರುಕುತನ ಎಲ್ಲಿ ಉಳಿದೀತು ಎಂದು ಸುಮ್ಮನಾಗುವವರೇ ಅದು ನೀವು ಮಾಡಲಾರದೇ ಹೇಳುವ ಮಾತು.ವಯಸ್ಸೆಂಬುದು ದೇಹಕ್ಕೆ ಹೊರತು ಮನಸ್ಸಿಗಲ್ಲ ಸದಾ ನವೋಲ್ಲಾಸ, ಕ್ರಿಯಾಶೀಲ ಸೂಕ್ಷ್ಮ ಮನಸ್ಸು ಹದಿಹರೆಯದ ಹುಡುಗನಂತೆ.
ಪ್ರತಿಭೆಗೆ ಬೆಲೆ ಇದೆ ನಿಜ ಆದರೆ ಕೆಲವೊಮ್ಮೆ ನನಗೆ ಪ್ರತಿಭೆ ಇದೆ ಎಂದು ಸುಮ್ಮನೆ ಕುಳಿತರೆ ಹೇಗಾದಿತು ಇದಕ್ಕೆ ಉದಾಹರಣೆ ನೀಡುವುದಾದರೆ ಇತ್ತೀಚೆಗೆ ಅಂತರ್ಜಾಲ ತಾಣಗಳಲ್ಲಿ ಹರಿದಾಡಿದ ಕಥೆಯೊಂದು ಇದು..
ವಿದ್ಯಾಬಾಲನ್ ಹೇಳಿದ ಸುಂದರ ಕಥೆ
ಒಂದು ಊರಿನಲ್ಲಿ ವಯಸ್ಸಾದ ಅನುಭವಿ ದಜಿ೯ ಇದ್ದ.ಆ ಊರಿನ ಶ್ರೀಮಂತರ ಮನೆಯ ಮಂದಿಯ ಉಡುಪುಗಳನ್ನೆಲ್ಲ ದಜಿ೯ಯೇ ಹೊಲಿಯುತ್ತಿದ್ದ.ಅವರ ಮನೆಗೆ ಬಟ್ಟೆ ಹೊಲಿಯುವ ಬೇಕಾದ ಅಳತೆ ಪಡೆಯಲು ಹೋದಾಗ ಅವರು ಗಂಟೆಗಟ್ಟಲೆ ಕಾಯಿಸಿ ನಂತರ ಅಳತೆ ಕೊಟ್ಟರು ಕಾದು ಬೇಸರಿಸದೆ ಬರುತ್ತಿದ್ದ.
ಹೀಗಿರಲು ಆ ಊರಿಗೆ ತರುಣ ದಜಿ೯ಯೊಬ್ಬ ಬಂದು ನೆಲೆಯೂರುತ್ತಾನೆ.ಕೆಲವೇ ದಿನಗಳಲ್ಲಿ ಅವನೂ ಸಹ ಹೆಸರು ಗಳಿಸುತ್ತಾನೆ ನಾವೀನ್ಯತೆ ನಮೂನೆಯ ವಿನ್ಯಾಸದ ಬಟ್ಟೆಗಳ ಹೊಲೆಯುವುದರಲ್ಲಿ.
ಒಂದು ದಿನ ಶ್ರೀಮಂತರ ಮನೆಗೆ ಇಬ್ಬರು ಹೋಗುತ್ತಾರೆ ತರುಣ ದಜಿ೯ ನನಗೆ ಸಮಯವಿಲ್ಲ ಎಂದು ಅವಸರಿಸಿ ಅವರ ಅಳತೆ ಪಡೆದು, ಒಂದು ಕಪ್ ಚಹ ಬೇಕೆಂದು ಬೇಡಿಕೆ ಇಟ್ಟು ಕುಡಿದು ಅವನ ಕೌಶಲ್ಯಕ್ಕೆ ಅನುಗುಣವಾಗಿ ನಿಗದಿಪಡಿಸಿದ ಹಣ ಪಡೆದು ಅವನು ಹೊರಡುತ್ತಾನೆ .
ಇನ್ನು ಅಲ್ಲಿಯೇ ಕಾದು ಕುಳಿತೇ ಇದ್ದಾನೆ ಹಿರಿಯ ದಜಿ೯ ಆಗ ಅವನಿಗೆ ತನ್ನ ತಪ್ಪಿನ ಅರಿವಾಗುತ್ತದೆ.ಕೌಶಲ್ಯ, ವಿನಯವಂತಿಕೆ , ಒಳ್ಳೆಯತನ ನೋಡಿ ಜನ ನಮ್ಮನ್ನು ಗೌರವಿಸುತ್ತಾರೆ ಎಂದು ನಾವು ಅಂದುಕೊಳ್ಳತ್ತೇವೆ ಆದರೆ ಅದು ಪೂರಾ ನಿಜವಲ್ಲ . ಯಾರು ತಮ್ಮ ಮೌಲ್ಯವನ್ನು ಅರಿತು ಗೌರವಿಸಿಕೊಳ್ಳುತ್ತಾರೋ ಜಗತ್ತು ಅಂಥವರನ್ನು ಮೊದಲು ಗೌರವಿಸುತ್ತದೆ ಎಂದು ಹಾಗಾಗಿ ನಿಮ್ಮ ಬೆಲೆ ತಿಳಿದು ನಡೆದರೆ ಬದುಕಿಗೂ ನೆಲೆ.
ಹಣವಿಲ್ಲ,ಜನಬಲವಿಲ್ಲ, ಸಮಯವಿಲ್ಲ ಹೀಗೆ ಇಲ್ಲಸಲ್ಲದ ನೆಪಗಳ ಹೇಳಿ ದಿನದೂಡಬೇಡಿ ಏನಂದುಕೊಂಡಿರುವಿರೋ ಅದರ ಸಾಧನೆಗಾಗಿ ಕಂಕಣಬದ್ದರಾಗಿ ದಿನದಿನವೂ ಸ್ವಲ್ಪ ಸ್ವಲ್ಪವಾದರೂ ಪ್ರಗತಿ ಸಾಧಿಸಿ.ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.ಅವಕಾಶಗಳು ಸಿಕ್ಕಾಗ ನೀನೇ ಸಿದ್ದರಿಲ್ಲ ಎಂದರೆ ಅದು ನಿಮ್ಮ ತಪ್ಪು, ಹಾಗಾಗಿ ಕಲಿಯುತ್ತಲೇ ಇರಿ ಗೆದ್ದರೆ ಸಂತಸ, ಸೋತರೆ ಅನುಭವಮುಂದೆ ಅಡಿ ಇಡಲು ಎರಡರಲ್ಲೂ ಪಡೆಯುವುದೇ ಹೊರತು ಕಳೆದುಕೊಳ್ಳುವುದೇನೂ ಇಲ್ಲ.
ಬದುಕು ದೀರ್ಘವಾಗಿರದಿದ್ದರೂ ,ಬದುಕಿದ್ದಷ್ಟು ಸಮಯ ಸಾರ್ಥಕತೆ ಮೂಡಿಸುವಂತೆ ಬದುಕೋಣ ಏನಂತೀರಾ?


About The Author

3 thoughts on “ʼಪ್ರತಿಭೆಯ ಅನಾವರಣʼ ಒಂದು ಸ್ಫೂರ್ತಿದಾಯಕ ಟಿಪ್ಪಣಿ ಶಾರದಾಜೈರಾಂ ಬಿ”

Leave a Reply

You cannot copy content of this page

Scroll to Top