ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬುದ್ಧ ಬಸವ ಮಾರ್ಕ್ಸ್
ಪುಲೆ ಶಾಹು ಚಿಂತನ
ಬರಿಗಾಲಿನ ಪಯಣ
ಕಿತ್ತು ತಿನ್ನುವ ಬಡತನ

ಶೃದ್ಧೆ ಶ್ರಮದ ಗೆಳೆತನ
ಕೊಲಂಬಿಯಾ ಶಿಕ್ಷಣ
ನೂರು ಪದವಿಯ ಜಾಣ
ಸತ್ಯ ಸಮತೆಯ ಬಾಣ .

ಹಗಲಿರುಳು ಕಠಿಣ ಕಾರ್ಯ
ಬರೆದಿಟ್ಟರು ಲಿಖಿತ ಘಟನಾ  ,
ಭಾರತ ದೇಶದ ಮಾನ ಸಮ್ಮಾನ
ಡಾ ಅಂಬೇಡ್ಕರರ ದಿವ್ಯ ಜ್ಞಾನ .

ನ್ಯಾಯಕ್ಕಾಗಿ ಘೋಷಣಾ
ಇಲ್ಲವಾಯಿತು ಶೋಷಣಾ
ಬನ್ನಿ   ಭಾರತೀಯರೇ
ಉಳಿಸುವ ನಮ್ಮ ಸಂವಿಧಾನ.

ಕೆಂಪು ಸೂರ್ಯ ಮುಳಗಲಾರ
ಸಮಾನತೆಯ ಹರಿಕಾರ .
ಬಾಬಾ ಸಾಹೇಬ ಅಮರ ರಹೇ
ಬುದ್ಧ ಬಸವ ಜಿಂದಾಬಾದ
————————————————–

About The Author

3 thoughts on “ಡಾ ಶಶಿಕಾಂತ ಪಟ್ಟಣ -ಪೂನಾ ಅವರಕವಿತೆ-ಕೆಂಪು ಸೂರ್ಯ”

  1. ಸಮಾನತೆಯ ಹರಿಕಾರ ಅಂಬೇಡ್ಕರ್
    ಅವರ ಜನ್ಮ ದಿನದಂದು ಮೂಡಿ
    ಬಂದ ಒಂದು ಅದ್ಭುತ ಕವನ ಸರ್ “ಕೆಂಪು ಸೂರ್ಯ ಮುಳುಗಲಾರ ”

    ಸುಧಾ ಪಾಟೀಲ
    ಬೆಳಗಾವಿ

  2. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ದಲಿತರ ನೋವಿನ ಧ್ವನಿ ಅಂಬೇಡ್ಕರ್ ಕವನ ಚೆನ್ನಾಗಿ ಮೂಡಿ ಬಂದಿದೆ ಸರ್

Leave a Reply

You cannot copy content of this page

Scroll to Top