ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಫಾಲ್ಗುಣ ಮಾಸದ ಶುಕ್ಲ ಹುಣ್ಣಿಮೆಯು
ಪವಿತ್ರ ಹೋಳಿ ಹಬ್ಬದ ಆಚರಣೆಯು
ರಂಗು ರಂಗಿನ ಸುಂದರ ಹೋಳಿಯು
ಮಂಗಳ ವರ್ಣಗಳ ಮಿಲನದ ಓಕುಳಿಯು//೧//

ಆಸುರಿ ಗುಣಗಳ ನಾಶದ ಸಂಕೇತವು
ಪರಮ ಪವಿತ್ರತೆಯ ದ್ಯೋತಕವು
ಜಗವೊಂದು ಬಣ್ಣಗಳ ಲೋಕವು
ಹಸಿರು ಹಳದಿ ಕೆಂಪು ಬಿಳಿ ನೀಲಿಯನಾಕವು//೨//

ಬಣ್ಣದಲಿ ಬೆಸೆದಿದೆ ಬದುಕ ಭಾವನೆ
ವರ್ಣದಲಿ ತುಂಬಿದೆ ಧನ ಋಣದ ಚಿಂತನೆ
ಕಾಮವಳಿಸಿ ಪ್ರೇಮವುಳಿಸುವ ಚಿತ್ತಾರ
ಬೇಧವಳಿಸಿ ಏಕತೆಯುಳಿಸುವ ಸಾಕ್ಷಾತ್ಕಾರ//೩//

ಬಣ್ಣಬಣ್ಣಗಳ ಒಂದಾಗಿಸುವ ಹಬ್ಬ ಹೋಳಿ
ಬಣ್ಣದಲಿ ಬದುಕ ಬೆರೆಸುವ ಚೆಂದದೋಕುಳಿ
ನೂರು ಮತಗಳ ತೂರಿ ಒಂದಾಗಿಸುವ ಹೋಳಿ
ಸರ್ವಸಮತೆಯ ಸಾರುವ ರಂಗಿನೋಕುಳಿ//೪//

ಚದುರಿದ ಸಂಬಂಧಗಳ ಕರೆದು ಒಗ್ಗೂಡಿಸಲಿ
ದುರಿತಗಳ ಕರಗಿಸಿ ಖುಷಿಯ ರಂಗು ಚೆಲ್ಲಲಿ
ಕೃತಕತೆಯು ಅಳಿದು ನೈಸರ್ಗಿಕತೆ ಬೆಳೆಯಲಿ
ಮಿಥ್ಯವಳಿದು ಎಲ್ಲೆಡೆ ಸತ್ಯವನು ತುಂಬಲಿ//೫//


About The Author

3 thoughts on “ಶುಭಲಕ್ಷ್ಮಿ ಆರ್ ನಾಯಕ್ ಅವರ ಕವಿತೆ-ರಂಗಿನೋಕುಳಿ”

  1. ಬಣ್ಣಗಳೆಂದರೆ ಬದುಕಿನ ಖುಷಿ. ಖುಷಿಯ ಜೊತೆಗಿನ ಜೀವಂತಿಕೆ. ಜನರ ಬದುಕಿನ ನಡುವೆ ಇಂತಹ ಹಬ್ಬಗಳು ಸಂತಸ ತರುತ್ತದೆ…….ಈ ಕವಿತೆಯೂ ಹಬ್ಬದ ಸಂಭ್ರಮವ ಅನುರೂಪವಾಗಿಸಿದೆ. ಕವಿತೆ ಸುಂದರವಾಗಿದೆ.

Leave a Reply

You cannot copy content of this page

Scroll to Top