ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹರಿಯ ಹಿಂದೆ ಹರಿಯಲಿಲ್ಲ
ಹರನ ಶಿರವ ಮುಟ್ಟಲಿಲ್ಲ
ಬ್ರಹ್ಮ ವಿಷ್ಣು ರುದ್ರ  
ತೆತ್ತಿಸ ಕೋಟಿ ದೇವರ ನೆನೆಯಲ್ಲಿಲ್ಲ
ಸತ್ಯ ಸಮತೆ ಲಿಂಗವಿಡಿದು
ಹಾಸಿ ದುಡಿದು ಹಂಚಿ ತಿಂದರು
ಸುಳ್ಳುತನ ಹೇಳಲಿಲ್ಲ
ಕಳ್ಳತನ. ಮಾಡಲಿಲ್ಲ
ಪಶು ಪಕ್ಷಿಗಳನ್ನು
ಹಿಂಸೆ ಮಾಡಿ ಕೊಲ್ಲಲಿಲ್ಲ
ಅರಸು ಅಗಸ ಒಮ್ಮೆ ಮಾಡಿ
ನಿತ್ಯ ವಚನ ಹಾಡಿ ಪಾಡಿ
ಪ್ರೀತಿ ಶಾಂತಿ ಮಂತ್ರ ಜಪಿಸಿ
ಧರೆಗೆ ದೊರೆ ಎನಿಸಿತು
ನನ್ನ ದಿಟ್ಟ ಶರಣರು


——————————————————————————————————

About The Author

7 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ʼಧರೆಗೆ ದೊರೆʼ”

  1. ಧರೆಗೆ ದೊರೆ….ನನ್ನ ದಿಟ್ಟ ಶರಣರು ಎನ್ನುವ ಅಭಿಮಾನ ಮತ್ತು ನಿಜವಾದ ಕಳಕಳಿಯಿಂದ ಮೂಡಿಬಂದ ಕವನ… ಸ್ವಲ್ಪದರಲ್ಲಿಯೇ ಶರಣರ ಬಗೆಗೆ ಎಲ್ಲವನ್ನೂ ಅರಹುವಂತಹ ಒಂದು ಅದ್ಭುತ ಕವನ

    ಸುಧಾ ಶಿವಾನಂದ
    ( ಸುಶಿ )

  2. ಗೀತಾ ಜಿ ಎಸ್

    ಶರಣರ ದಿವ್ಯ ಪ್ರಸಾದದ ಅನುಭಾವ ಆಯ್ತು ಸರ್

  3. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಶರಣರ ದಿವ್ಯ ಸಂದೇಶವನ್ನು ಸಾರುವ ಕವನ

  4. ಪ್ರೊ ಶಾರದಾಮ್ಮ ಪಾಟೀಲ ಬಾದಾಮಿ

    ಅತ್ತ್ಯುತ್ತಮ ಕವನ ಸರ್

Leave a Reply

You cannot copy content of this page

Scroll to Top