ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೂಡುಗೆಂಪಿನಛಾಯೆ ಮೊಗದಲ್ಲಿ ಮೂಡಿರಲು
ಅರುಣರಾಗದಪ್ರಭೆಯುಪ್ರತಿಫಲಿಸಿನಗಲು
ನಾಚಿಹಳುತರಳೆತಾ ನೇಸರನಚುಂಬನಕೆ
ಮೊಗತಿರುವಿ ಚಂದದಲಿಹುಸಿನಗೆಯನೋಟಕೆ..

 ಬಿಡಿಸಿದೆನಳಿಬೆರಳು ಎಸಳುರಂಗೋಲಿ
ಮನದಭಾವನೆಗಳ ನವಿರುಸ್ಪರ್ಷದಲಿ
ಧ್ಯಾನಿಸಿ ಹೃದಯವದು ಇನಿಯನೆಚ್ಚರದ ಉಲಿ
ಕಳೆದ ರಾತ್ರಿಯಸಂತಸದ ಅಮಲಿನಲಿ…

ಮಾಣಿಕ್ಯಗೆಂಪು ಸೀರೆ ಮೈ ಆವರಿಸಿ
ಕೆಂಪು ಬಳೆಗಳನಾದ ಕೈಲಿರಿಂಗಣಿಸಿ
ಹಣೆತಿಲಕ ಬೈತಲೆಯಸಿಂಧೂರ ಹೊಳೆದಿದೆ
ಮುಡಿದಮಲ್ಲಿಗೆವೇಣಿ ಸೌಗಂಧಬೀರಿದೆ…

ಒಲವಸೂಸಿವೆ ಎರಳೆಗಂಗಳು ಮಿನುಗಿ
ಕಂಪಿಸಿವೆ ಮೃದುಅಧರಗಳು ರಂಗೇರಿ
  ಹೊಸ ಬಾಳ ಹೊಸತಿಲಲಿ ಮುಂಬೆಳಗು ಇಂದು
ಹರಸುತಿದೆ ನೆಮ್ಮದಿಯಭವಿಷ್ಯತ್ತಿಗೆಂದು..!

———————

About The Author

5 thoughts on “ಹಮೀದಾಬೇಗಂ ದೇಸಾಯಿ ಅವರ ಕವಿತೆ ಹೊಸ ಬಾಳ ಹೊಸ್ತಿಲಿನಲಿ”

  1. ನಿಮ್ಮ ಕವಿತೆ *ಹೊಸಬಾಳ ಹೊಸ್ತಿಲಲಿ*
    ಚೆನ್ನಾಗಿದೆ ಮೇಡಂ ಶುಭವಾಗಲಿ ವಂದನೆಗಳು ಮೇಡಂ

    1. ಸ್ಪಂದಿಸಿ, ಮೆಚ್ಚಿದ ತಮಗೆ ಧನ್ಯವಾದ ಮೇಡಂ..

      ಹಮೀದಾಬೇಗಂ ದೇಸಾಯಿ.

  2. ಹೊಸ ಬಾಳ ಹೊಸ್ತಿಲಿನಲಿ ಗರಿಗೆದರಿದ ಕನಸುಗಳ ಭಾವ ಸೊಗಸಾಗಿ ಮೂಡಿಬಂದಿದೆ.

    1. ಮೆಚ್ಚುಗೆಯ ನುಡಿಗಳಿಗೆ ಧನ್ಯವಾದ ತಮಗೆ

      ಹಮೀದಾಬೇಗಂ ದೇಸಾಯಿ.

Leave a Reply

You cannot copy content of this page

Scroll to Top