“ಇದ್ದಂಗ ಇರಬೇಕು”ನಾಗಪ್ಪ ಸಿ. ಬಡ್ಡಿ ಅವರ ಲೇಖನ

ಮನುಷ್ಯರಾದ ನಾವು ಒಂದು ವ್ಯವಸ್ಥೆಯೊಳಗೆ ನಮ್ಮ ನಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಕಾರ್ಯನಿರ್ವಹಿಸಿ ಜೀವನ ಮಾಡಬೇಕು. ಅಂದಾಗ ಅದು ಸಾರ್ಥಕ ಜೀವನ ಅನಿಸಿಕೊಳ್ಳುತ್ತದೆ. ಆದರೆ ಯಾಕೊ ಸಮಾಜದ ಕೆಲವೊಂದು ಕಡೆಗಳಲ್ಲಿ ಇದಕ್ಕೆ ವಿರುದ್ಧವಾದ ಸನ್ನಿವೇಶಗಳಿರುವುದನ್ನು ದಿನಪತ್ರಿಕೆಗಳಲಿ, ಟಿವಿ ಮಾಧ್ಯಮಗಳಲ್ಲಿ ಹಾಗೂ ನಮ್ಮ ಸುತ್ತಮುತ್ತ ನೋಡತಾ ಇದ್ದೇವೆ. ಅಂದರೆ ಏನು ಮಾಡಬೇಕಾಗಿತ್ತೊ ಅದನ್ನು ಮಾಡದೇ ಎಲ್ಲಾ ನನಗೆ ಗೊತ್ತು, ಎಲ್ಲಾ ನಾನೇ ಮಾಡಿದ್ದು, ನನ್ನಿಂದಲೇ ಎಲ್ಲಾ ನಾನಿಲ್ಲ ಅಂದರೆ ಇವರ ಕಡೆಯಿಂದ ಏನು ಮಾಡಲು ಸಾಧ್ಯವಿಲ್ಲ ಎಂಬ ಅಹಂ ಭಾವನೆಯಿಂದ ವರ್ತಿಸುವುದನ್ನು ಕಾಣುತ್ತೇವೆ. ಆದರೆ ಇಂತ ನಡುವಳಿಕೆಯಿಂದ ನಮ್ಮ ವ್ಯಕ್ತಿತ್ವಕ್ಕೆ ನಾವೇ ಕೊಳ್ಳೆ ಇಟ್ಟಂತಾಗುವುದಲ್ಲವೇ?
“ಅಕ್ಕ ಸತ್ತರೆ ಅಮವಾಸೆ ನಿಲ್ಲುವುದೆ?” ಇಲ್ಲಾ ತಾನೆ? ಹಾಗೆನೇ ನಾವು ಇಲ್ಲ ಅಂದರೂ ಕೆಲಸ ನಡೆಯುತ್ತೆ ಇದ್ದರೂ ನಡೆಯುತ್ತೆ ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಏನೇ ಸಮಸ್ಯಗಳಿದ್ದರೂ “ಕಾಯಕವೇ ಕೈಲಾಸ”ವೆಂದು ಕಾರ್ಯ ನಿರ್ವಹಿಸಿದಾಗ ಯಾರಾದರೂ ನಮಗೆ ಸಹಾಯ ಮಾಡೇ ಮಾಡುತ್ತಾರೆ ಅನ್ನೋದನ್ನು ತಿಳಕೊಬೇಕು. ನಾವು ಒಬ್ಬರಿಗೆ ಮೋಸ, ಅಪಪ್ರಚಾರ, ಸುಳ್ಳು ಹೇಳುವುದನ್ನು ಮಾಡಿದರೆ ಮುಂದೊಂದು ದಿನ ಅದರ ಪರಿಣಮವನ್ನು ನಾವು ಎದುರಿಸಬೇಕಾಗುತ್ತದೆ. ನಮಗೂ ಸಹ ಆ ಪರಿಸ್ಥಿತಿ ಬರಬಹುದು. ನಮನ್ನು ಯಾರಾದರೂ ಮೋಸ, ವಂಚನೆ, ಸುಳ್ಳುಗಳಿಂದ ಯಾಮಾರಿಸಬಹುದು. ಕಾರಣ ನಮ್ಮ ಸ್ವಾರ್ಥಕ್ಕಾಗಿ ಇತರರನ್ನು ಹೋಗಳುವುದು, ತೆಗಳುವುದನ್ನು ಮಾಡುವುದು ಎಷ್ಟು ಸರಿ?
ಹಾಗಾಗಿ ನಮ್ಮ ಸ್ವಾರ್ಥ, ಅಹಂ, ಸಿಟ್ಟು, ಕೋಪ, ಹೊಟ್ಟೆಕಿಚ್ಚು ಎಲ್ಲವನ್ನು ಬಿಟ್ಟು ಇದ್ದಂಗ ಇರಬೇಕು. ಮುಂದೆ ಒಂದು ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕು. ಇದನ್ನೇ ಬಸವಣ್ಣನವರು ತಮ್ಮ ವಚನವೊಂದರಲಿ ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಹಳಿಯಲುಬೇಡ ಇದೆ ಅಂತರಂಗ ಶುದ್ಧಿ, ಇದೆ ಬಹಿರಂಗ ಶುದ್ಧಿ ಎಂದು ಹೇಳುವ ಮೂಲಕ ಮನುಷ್ಯನನ್ನು ಸರಿ ದಾರಿಗೆ ತರುವ ಕೆಲಸ ಮಾಡಿದ್ದಾರೆ.
ಭೂಮಿ ಮೇಲೆ ಬಂದಿದ್ದೇವೆ ಎಂದ ಮೇಲೆ ಎಲ್ಲರೂ ಪರಿಪೂರ್ಣರಲ್ಲ. ಹಾಗಾಗಿ ಒಂದು ಮಾತು ಹೆಚ್ಚು ಕಮ್ಮಿ ಆಗಿರಬಹುದು. ಅದನ್ನು ದೊಡ್ಡದು ಮಾಡದೇ ನಮ್ಮ ತಪ್ಪನ್ನು ತಿದ್ದಿಕೊಂಡು ಮುನ್ನಡೆದಾಗ ಬದುಕು ಸುಂದರವಾಗುವದರಲ್ಲಿ ಎರಡು ಮಾತಿಲ್ಲ. ಬೇಂದ್ರೆ ಅವರು ಹೇಳುವ ಹಾಗೆ;
“ಹುಸಿ ನಗುತ ಬಂದೇವ,
ನಸು ನಗುತಾ ಬಾಳೋಣ,
ತುಸು ನಗುತ ತೆರಳೋಣ,
ಬಡನೂರು ವರುಷಾನ ಹರುಷಾದಿ ಕಳೆಯೋಣ
ಯಾಕಾರ ಕೇರಳೊಣ”

ಎಂಬಂತೆ ಬದುಕು ಕಟ್ಟಿಕೊಂಡು ಬಾಳಿದರೆ ನಮ್ಮ ಬಾಳು ಸುಂದರವಾಗುವುದರಲ್ಲಿ ಸಂಶಯವೇ ಇಲ್ಲಾ ಅಲ್ವ


About The Author


Comments

5 responses to ““ಇದ್ದಂಗ ಇರಬೇಕು”ನಾಗಪ್ಪ ಸಿ. ಬಡ್ಡಿ ಅವರ ಲೇಖನ”

  1.  Avatar
    Anonymous

    ಸುಪರ್ ಲೇಖನ ಸರ್. ಲೇಖನದ ಮೂಲಕ
    ಸಮಾಜಕ್ಕೆ ಒಳ್ಳೆಯ ಸಂದೇಶ ಹೇಳಿದ್ದೀರಿ ಸರ್.

    1.  Avatar
      Anonymous

      ಗೆಳೆಯ ಉತ್ತಮ ಲೇಖನ

    2.  Avatar
      Anonymous

      ಬಡ್ಡಿ ಸರ್ ಸೂಪರ್ ತುಂಬಾ ಅರ್ಥಗರ್ಭಿತವಾದ ಬದುಕನ್ನು ಕಟ್ಟಿಕೊಳ್ಳುವ ಒಂದು ಲೇಖನ ಇದು ಈಗಿನ ಯುವಕರಿಗೆ ಸ್ಪೂರ್ತಿದಾಯಕವಾಗಿದ್ದು ಇನ್ನೂ ಅನೇಕ ಲೇಖನಗಳನ್ನು ಬರೆಯಿರಿ ಈಗಿನ ಯುವ ಪೀಳಿಗೆಗೆ ಶಕ್ತಿ ತುಂಬುವ ಸಂದೇಶವನ್ನು ಕೊಡುವ ಶಕ್ತಿ ಆ ದೇವರು ನಿಮಗೆ ಕೊಡಲಿ ಎಂದು ದೇವರಲ್ಲಿ ಆಶಿಸುತ್ತೇನೆ

  2.  Avatar
    Anonymous

    ತುಂಬಾ ಅರ್ಥಗರ್ಭಿತವಾದ ಲೇಖನವನ್ನು ತಾವು ಬರೆದಿದ್ದೀರಿ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಅಂಕುಡೊಂಕುಗಳ ಕುರಿತು ಬಸವಣ್ಣನವರ ವಚನದೊಂದಿಗೆ ಬೇಂದ್ರೆಯವರ ಕವನ ಸಂಕಲನದೊಂದಿಗೆ ಸಮಾಜಕ್ಕೆ ತಮ್ಮದೇ ಆದಂತಹ ಒಂದು ವಿಚಾರದೊಂದಿಗೆ ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ ಧನ್ಯವಾದಗಳು ತಮ್ಮ ವಿಚಾರವಂತಿಕೆ ಕವನ ಸಂಕಲನಗಳು ಹೀಗೆ ಮೂಡಿಬರಲಿ ಮುಂದುವರೆಯಲಿ ಎಂದು ಆಶಿಸುತ್ತೇನೆ.

  3.  Avatar
    Anonymous

    ಈ ಲೋಕಕ್ಕೆ ನಾವು ಏನನ್ನೂ ಸಾಧಿಸಬೇಕು ಎಂದು ಬಂದಿಲ್ಲ…. ಹೀಗೆ ಅಂದುಕೊಂಡಾಗ ಮಾತ್ರ ಸರಳ ಮತ್ತು ನೈಸರ್ಗಿಕವಾಗಿ ಬದಕಲು ಸಾಧ್ಯ… ತುಂಬಾ ಚೆನ್ನಾಗಿದೆ ಸರ್

Leave a Reply

You cannot copy content of this page