ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 ಹೃದಯದಲೇನೋ ತಳಮಳವಾಗಿ
ಮನದ ತುಂಬ  ಕವಿದು ಮಂಕು
ಹೇಳಲಾರದ ಮಾಯಾವಿ ನೀನಾಗಿ
ಮರೆತೇ ಹೋಯ್ತು ಬೇಡ ಬೇಕು

ನಿದಿರೆ ತೊರೆದು ಮದಿರೆ ಮದವು
ಹಸಿವು ಇರದಂತ ಅನಪೇಕ್ಷದಿ
ಎಲ್ಲರೊಡನಿದ್ದರೂ ಒಂಟಿತನವು
ಸೌಖ್ಯವಿಹುದು ಸತ್ಯ ಸಾಂಗತ್ಯದಿ

ಕಣ್ಣ ನೋಟ ಬೆರೆತ ಮಧುರ ಕ್ಷಣದಂತೆ
ಆವರಿಸಿದೆ ಮನೆ ಮನದ ತುಂಬೆಲ್ಲ
ಮೊಗ್ಗೊಂದು ಹೂವಾಗಿ ಪಲ್ಲವಿಸಿದಂತೆ
ಆದಿ ಅಂತ್ಯಕು ನೀನಿರು ಜೊತೆ ನಲ್ಲ

ನಿನ್ನಿಂದಾಗಿದೆ ಬಾಳಿಂದು ಅರ್ಥಪೂರ್ಣ
ಸಹಸ್ರ ಮಿಂಚುಗಳು ಹೊಳಹುಗಳು
ಮೂಡಿದವದೆಂತೋ ನಾನರಿಯೆ ಕಾಣ
ಬದುಕಿನಾದಿಯಲಿ ಹಾಸಿವೆ ಸುಮಗಳು

ಮಣಭಾರ ಬದುಕಿoದು ಹಗುರಾಗಿದೆ
ಹೂವೆಸಳ ಎತ್ತಿರುವ ಅನುಭೂತಿಯು
ಜಿಜ್ಞಾಸೆ ದುಗುಡ ಎದೆಭಾರವ ತೊರೆದೆ
ನಿನ್ನಿರುವೆ ಜೀವನದಿ ಸುಖಸ್ವಪ್ನ ಸವಿಯು.

ಸಾಗೋಣ ಬಾ ಇನಿಯ ಜೊತೆಯಾಗಿಯೆ
ಸವಿಯೋಣ ಪ್ರೀತಿ ಜೇನು ನಲಿವಿಂದಲಿ
ಬೇಕಿಲ್ಲ ಬಡತನ ಸಿರಿತನದ ನಂಟೆಮಗೆಯೆ
ಜೀಕೋಣ ಉಯ್ಯಾಲೆ ಭರವಸೆಯಿಂದಲಿ

———————————————

About The Author

Leave a Reply

You cannot copy content of this page

Scroll to Top