ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಭಾರತ ಇತಿಹಾಸದಲ್ಲಿ ರಾಮದುರ್ಗ ಸಂಸ್ಥಾನ ವಿಮೋಚನೆ ನಡೆದ ರಕ್ತ ಸಿಕ್ತ ಹೋರಾಟ  ರಾಮದುರ್ಗ ದುರಂತ ಇದರ ಕ್ಯಾಪ್ಟನ್ ಶತಾಯುಷಿ ಸ್ವತಂತ್ರ ಸೇನಾನಿ  ಮಾಜಿ ಶಾಸಕ ಡಾ ಮಹದೇವಪ್ಪ ಶಿ ಪಟ್ಟಣ ಅವರ 114 ನೇ ಹುಟ್ಟು ಹಬ್ಬ ಇಂದು ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದಲ್ಲಿ 1911 ಸೆಪ್ಟೆಂಬರ್ 26 ರಂದು  ಶ್ರೀ ಶಿವ ಬಸಪ್ಪ ಸೌ ಸಾವಂತರೆಮ್ಮ ಅವರ ಮಗನಾಗಿ ಜನ್ಮ ತಾಳಿದ ಡಾ ಮಹದೇವಪ್ಪ ಶಿ ಪಟ್ಟಣ ಅವರು ಹುಟ್ಟು ಹೋರಾಟಗಾರರು.
ರಾಮದುರ್ಗ ಸಂಸ್ಥಾನದ ರಾಜ ಭಾವೆ ಮನೆತನದವರ ನಿರಂತರ ಉಪಟಳ ಶೋಷಣೆ ,ರೈತ ಕಾರ್ಮಿಕರ ನೇಕಾರರ ಸಮಸ್ಯೆಗಳಿಗೆ ಸ್ಪಂದಿಸಿ
ರಾಜನ ವಿರುದ್ಧ ಮತ್ತು ಬ್ರಿಟಿಷರ ಅರಸೊತ್ತಿಗೆ ವಿರುದ್ಧ ಹೋರಾಟನಡೆಸಿ , 1939 ರಲ್ಲಿಯೇ ಭಾರತ ಗಣರಾಜ್ಯದಲ್ಲಿ ರಾಮದುರ್ಗ ಸಂಸ್ಥೆಯನ್ನು ವಿಲೀನೀಕರಿಸಿದ ಅಪೂರ್ವ ಕ್ರಾಂತಿಯ ಕಿಡಿ ಶತಾಯುಷಿ ಸ್ವತಂತ್ರ ಸೇನಾನಿ  ಮಾಜಿ ಶಾಸಕ ಡಾ ಮಹದೇವಪ್ಪ ಶಿ ಪಟ್ಟಣ.

ಬಳ್ಳಾರಿ   ಮರ್ಜರ್ ಮೂವ್ಮೆಂಟ್ ವಿರುದ್ಧ ಹೋರಾಟ
ಚಲೇ ಜಾವ ಚಳುವಳಿ ,
ರಾಮದುರ್ಗ ಸಂಸ್ಥಾನ ವಿಮೋಚನೆ
ಕರ್ನಾಟಕ ಏಕೀಕರಣ
ಸ್ವಾತಂತ್ರ ಹೋರಾಟ
ಹೀಗೆ ಆಳರಸರ ಮತ್ತು ಬ್ರಿಟಿಷರ ಕೋಪಕ್ಕೆ ಗುರಿಯಾಗಿ ಅಂದಿನ ಆಡಳಿತ ವ್ಯವಸ್ಥೆಯಿಂದ ಗಲ್ಲು ಶಿಕ್ಷೆಗೆ ಗುರಿಯಾಗಿ
ಮತ್ತೆ ತಪ್ಪಿಸಿ ಕೊಂಡು ಭೂಗತ ಚಳುವಳಿ ಮಾಡಿ ಸ್ವತಂತ್ರ ಸಿಗುವವವರೆಗೆ ನಿರಂತರ ಸಮರ ಸಾರಿದ ಶ್ರೇಷ್ಠ ಜನನಾಯಕ ರಾಮದುರ್ಗ ಸಂಸ್ಥಾನ ವಿಮೋಚನೆ
ಇವರ ಮೇಲೆ ಅಂದೇ ಲಾವಣಿ ಗೀಗಿ ಪದಗಳು ರಚಿತಗೊಂಡಿವೆ.
ಇವರು 1956 ರಿಂದ 1962 ರವರೆಗೆ ವಿಧಾನಸಭೆಯ ಸದಸ್ಯರಾಗಿದ್ದರು.
ಇವರ ಧರ್ಮ ಪತ್ನಿ ಶ್ರೀ ಮತಿ ಶಾರದಮ್ಮ   ಪಟ್ಟಣ ಅವರು 1967 ರಿಂದ 1972 ರವರೆಗೆ ವಿಧಾನಸಭೆಯ ಸದಸ್ಯರಾಗಿದ್ದರು.
ಇವರ ದ್ವಿತೀಯ ಮಗ ಶ್ರೀ ಅಶೋಕ್ ಪಟ್ಟಣ ಇವರು ಕರ್ನಾಟಕ ಸರಕಾರದ ಮುಖ್ಯ ಸಚೇತಕರು ಈಗ ಮೂರನೇಯ ಅವಧಿಗೆ ಶಾಸಕರಾಗಿ ಜನಾನುರಾಗಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
5 ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು
ಇವರನ್ನು ಪೋಷಿಸುತ್ತಿರುವ ಯುವ ಮುಖಂಡ ಶ್ರೀ ಪ್ರದೀಪ ಪಟ್ಟಣ ಮತ್ತು ಶರಣೆ  ಜಮುನಕ್ಕ ಆಧುನಿಕ ಶ್ರಾವಣ ಕುಮಾರ ಎಂದೇ ಹೇಳಬಹುದು
ಪ್ರದೀಪ ಪಟ್ಟಣ ಶರಣೆ  ಜಮುನಕ್ಕ ಮತ್ತು ಅವರು ನಮ್ಮ ಗುಂಪಿನ ಸಕ್ರಿಯ ಸದಸ್ಯರು.
ಪಟ್ಟಣ ಮನೆತನ ಮೊದಲಿನಿಂದಲೂ ಅಪ್ಪಟ ಬಸವ ತತ್ವದಲ್ಲಿ ನಂಬಿಕೆ ಇಟ್ಟವರು
————————————————————————

About The Author

2 thoughts on “ಶತಾಯುಷಿ ಸ್ವತಂತ್ರ ಸೇನಾನಿ ಮಾಜಿ ಶಾಸಕ ಡಾ ಮಹದೇವಪ್ಪ ಶಿ ಪಟ್ಟಣ ಅವರ 114 ನೇ ಹುಟ್ಟು ಹಬ್ಬದ ಪ್ರಯುಕ್ತವಿಶೇಷಬರಹ.ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ”

  1. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಪಟ್ಟಣ ಮನೆತನ ಮೊದಲಿನಿಂದಲೂ ಹುಟ್ಟು ಹೋರಾಟಗಾರರಾಗಿ ಗುರುತಿಸಿಕೊಂಡವರು ಮತ್ತು ಬಸವಾನುಯಾಯಿಗಳಾಗಿ ಜನರ ಸೇವೆಯಲ್ಲಿ ಮುಂದುವರೆದವರು, ಇಂಥಹ ಧೀಮಂತ ನಾಯಕರ ಕುರಿತು ತಮ್ಮ ಲೇಖನ ಅತ್ಯಂತ ಮಾಹಿತಿ ಪೂರ್ಣವಾಗಿತ್ತು ಧನ್ಯವಾದಗಳು ಸರ್

  2. ಪಟ್ಟಣ ಮನೆತನದ ಘನತೆ ಗೌರವದ ಪ್ರತೀಕವಾಗಿರುವ .. ಸ್ವಾತಂತ್ರ ಹೋರಾಟಗಾರರಾದ ಡಾ. ಮಹದೇವಪ್ಪ ಪಟ್ಟಣ ಅವರ ಕುರಿತಾಗಿ ಬರೆದ ವಿಶೇಷ ಬರಹ ನಿಜಕ್ಕೂ ಅಭಿಮಾನದ ಸಂಗತಿ. ಜನಪರ ಸೇವೆಗೆ ಕಂಕಣಬದ್ಧರಾಗಿರುವ ಪಟ್ಟಣ ಮನೆತನ ಇಂದಿಗೂ ಜನಮಾನಸದಲ್ಲಿ ಹೆಸರುವಾಸಿ ಮುಂದಿನ ಪೀಳಿಗೆಯೂ ಮನೆತನದ ಹೆಗ್ಗುರುತನ್ನು ಉಳಿಸಿಕೊಂಡು ಹೋಗುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಸರ್

    ಸುಧಾ ಪಾಟೀಲ ( ಸುತೇಜ )
    ಬೆಳಗಾವಿ

Leave a Reply

You cannot copy content of this page

Scroll to Top