ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬರೆದಂತೆಯೆ ಬದುಕಲಾಗುವದಿಲ್ಲ ನಮಗೆ
ಇರುವಂತೆಯೆ ಹೇಳಲಾಗುವದಿಲ್ಲ‌ ನಮಗೆ

ಯಾರ ಮನಸನೂ ಅರಿಯಲಾಗದು ಇಲ್ಲಿ
ಮುಚ್ಚಿದ ಮನ ತಿಳಿಯಲಾಗುವದಿಲ್ಲ‌ ನಮಗೆ

ನಾಟಕ ಕೃತ್ರಿಮತೆಗೆ ಮೊದಲ ಆದ್ಯತೆ ಸಾಕಷ್ಟಿದೆ
ಬಣ್ಣ ಹಚ್ಚಿದವರ ಗುರ್ತಿಸಲಾಗುವದಿಲ್ಲ ನಮಗೆ

ನ್ಯಾಯಾನ್ಯಾಯದ ಮಾತನ್ನು ಸಾಕಷ್ಟು ಆಡುತ್ತಾರೆ
ಹೃದಯವಂತರನು ಹುಡುಕಲಾಗುವದಿಲ್ಲ ನಮಗೆ

ಪಾತ್ರದ ಡೈಲಾಗು ಕೇಳಿ ಮೋಸ ಹೋಗದಿರು ಜೋಗಿ
ಸುಳ್ಳಿಗೆ ಸತ್ಯದ ವೇಷ ತಡೆಯಲಾಗುವದಿಲ್ಲ ನಮಗೆ


About The Author

1 thought on “ವೈ.ಎಂ.ಯಾಕೊಳ್ಳಿ ಅವರಹೊಸ ಗಜಲ್”

  1. ಡಾ. ಭಾಗ್ಯವತಿ ಅಮರೇಶ್ವರ

    ನುಡಿದಂತೆ ನಡೆದವರು ಶರಣರು….
    ಮನಸ್ಸಿಗೂ ನಾಲಿಗೆಯ ನಡುವೆ ಫಿಲ್ಟರ್ ಅಳವಡಿಸಿಕೊಂಡೇ ಮಾತಾಡುವವರು ಅಧಿಕ ಇಂದಿನ ಜಗದಲಿ.
    ಕೃತ್ರಿಮ ಬಣ್ಣಗಳಲಿ ನೈಜತೆ ಕಳೆದು ಹೋಗಿದೆ.

Leave a Reply

You cannot copy content of this page

Scroll to Top