ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೀ,
ದಿನವಿಡಿ
ಹೀಗೆಯೇ
ಬಿಕ್ಕಿ ಬಿಕ್ಕಿ
ದುಃಖಿಸದೆ
ಅತ್ತು
ಹಗುರಾಗಿ-
ಬಿಡೆ
ಗೆಳತಿ..,

ತಡೆ-
ತಡೆದುದು
ಸಾಕಿನ್ನು
ಕಡಲಾಗಿ
ಉಕ್ಕಿ-
ಎಲ್ಲವನು
ಹುರಿದು
ಮುಕ್ಕಿ-
ಬಿಡೆ
ಗೆಳತಿ..,

ನಿನ್ನೆಡೆಗೆ
ಕಾಮುಕ
ದೃಷ್ಟಿಬಿರುವ
ಕಣ್ಗಳನ್ನು
ರಣ-
ಹದ್ದಿನಂತೆ
ಕುಕ್ಕಿ-
ಬಿಡೆ
ಗೆಳತಿ..,

ಜಗದ
ನಿಂದೆ,
ಕೊಂಕು
ನುಡಿಗಳಿಗೆ
ಕಿವಿ-
ಗೊಡದೆ
ಸುಮ್ಮನೆ
ಹಾಗೇ
ಒಂದ್ಸಲ
ನಕ್ಕು-
ಬಿಡೆ
ಗೆಳತಿ..,

ಬದುಕಿಗೆ
ಬೆನ್ನು
ತೋರಿಸದೆ
ಛಲದಿ
ಮುಂದಡಿಯಿಡೆ
ಗೆಳತಿ..,


About The Author

1 thought on “ಡಾ. ಯಲ್ಲಮ್ಮ ಕೆ ಅವರ ಕವಿತೆ-ಗೆಳತಿಗೆ”

Leave a Reply

You cannot copy content of this page

Scroll to Top