ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ಎಂತು ಹುಡುಕಲಿ

ಹಾಳುಬಿದ್ದ ಊರಲ್ಲಿ
ವಿಳಾಸವೆಂತು ಹುಡುಕಲಿ
ಬಿಟ್ಟುಹೋದವರಲ್ಲಿ
ಬಿಂಬವೆಂತು ಹುಡುಕಲಿ
ಕಳೆದು ಹೋದ ಅಂತರಾಳದಲಿ
ಚಿತ್ರವೆಂತು ಹುಡುಕಲಿ
ದೂರಾಗದ ದುಗುಡಗಳಲಿ
ಸುಖವನೆಂತು ಹುಡುಕಲಿ
ಕಣ್ಣುಗಳ ಒರತೆಯಲಿ
ಕಣ್ಣೀರನೆಂತು ಹುಡುಕಲಿ
ಮಲಗಿದಂತೆ ನಟಿಸುವವರಲಿ
ಮುಗ್ಧತೆಯನೆಂತು ಹುಡುಕಲಿ
ಹೇಳದೇ ಉಳಿದ ಮಾತುಗಳಲಿ
ಮೌನವನೆಂತು ಹುಡುಕಲಿ
ಕೊಡುವದನೇ ಕಲಿಯದವರಲಿ
ನಾನೇನು ಬೇಡಲಿ
ಇಮಾಮ್ ಮದ್ಗಾರ




1 thought on “ಇಮಾಮ್ ಮದ್ಗಾರ ಅವರಕವಿತೆ-ಎಂತು ಹುಡುಕಲಿ”