ಧಾರಾವಾಹಿ-ಅಧ್ಯಾಯ –38
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ತಾಯಿಯಾಗುವ ಸಂಭ್ರಮದಲ್ಲಿ ಸುಮತಿ
ಸುಮತಿ ಎಲೆ ಅಡಿಕೆ ಸುಣ್ಣವನ್ನು ಅಡುಗೆ ಮನೆಯಿಂದ ತೆಗೆದುಕೊಂಡು ಮಲಗುವ ಕೋಣೆಗೆ ಬಂದಳು. ಪತಿಯು ಸುಮ್ಮನೇ ಕಣ್ಣು ಮುಚ್ಚಿ ಮಲಗಿದ್ದನ್ನು ಕಂಡು ಅಡುಗೆ ಮನೆ ಕಡೆ ಹೊರಟಳು. ಬಾಗಿಲು ದಾಟಿ ಹೋಗಲು ಹೊರಟ ಪತ್ನಿಯನ್ನು ತಡೆದು ಕೈ ಹಿಡಿದು ಹತ್ತಿರ ಬರುವಂತೆ ಸನ್ನೆ ಮಾಡಿದರು.









