ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

Abstract colorful paint splash tree.

ಮೌನದ ಪ್ರೀತಿ ಮಾತೆ ನಿನ್ನೊಲವಿನ ಗೀತೆ
ನಾ ಬರೆದೆ ನಿನಗಾಗಿ ಒಂದು ಸುಂದರ ಕವಿತೆ
ನೀ ಸ್ಪೂರ್ತಿಯ ಸೆಲೆಯಾದ ದೇವತೆ ನೀನೇ ನನ್ನ ಬಾಳಿನಲ್ಲಿ ಎಂದು ಬ ತ್ತದ ಒರತೆ

ನೋಟಕ್ಕೆ ಬರಗಾಗಿ ನಾ ಅಲ್ಲೇ ನಿಂತೆ
ಕಾಯ ಕಾಯುತ್ತಿದ್ದರೂ ಆತ್ಮ ನಿನ್ನ ಹಿಂದೆ ಹೊರಟಿದೆತೇ ಅರಸಿ
ಅರಸಿ ಮರಳು ಹೋದ ಮರೆತೆ
ನೀ ಬಂದು ಒಮ್ಮೆ ನೋಡಬಾರದಿತೇ

ಋತುಗಳು ಉರುಳಿ ಅರಳಿತು ಒಲವು
ನಯನಗಳು ಕೂಡಿ ಹೃದಯದಲ್ಲರಳಿ ಪ್ರೇಮವು
ಮನದಲ್ಲಿಂದೆಕೊ ಒಂದು ಬಗೆಯ ಹೊಸತನವು
ನೀ ನನ್ನವಳು ಎನ್ನುವುದೇ ಗೆಲುವು

ಮೌನ ಮುರಿದು ಬಂದೆ ನೀ ಹೃದಯಕ್ಕೆ
ನಾ ಕುಣಿಯುವೆ ನಿನ್ನಯ ಹೃದಯದ ತಾಳಕೆ
ಹಾಡಾಗಲಿ ಒಲವಿನ ಗೂಡಾಗಲಿ ಜೀವಕ್ಕೆ
ನೀವಿದ್ದರೆ ಜೀವ ಬರುವುದು ಈ ಜೀವನಕ್ಕೆ


About The Author

Leave a Reply

You cannot copy content of this page

Scroll to Top